‘ಕಂಗನಾ ಫೈಟರ್’: ನಟಿಯನ್ನು ಹಾಡಿ ಹೊಗಳಿದ ಬಾಲಿವುಡ್ ನಾಯಕಿ

Kangana Ranaut: ಹಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಸಂಬಂಧಿ ಮೀರಾ ಚೋಪ್ರಾ ಬಾಲಿವುಡ್​ನಲ್ಲಿ ನಟಿಯಾಗಿ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾರೆ. ಇದೀಗ ಮೀರಾ ಚೋಪ್ರಾ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಅವರನ್ನು ಕೊಂಡಾಡಿದ್ದಾರೆ.

‘ಕಂಗನಾ ಫೈಟರ್’: ನಟಿಯನ್ನು ಹಾಡಿ ಹೊಗಳಿದ ಬಾಲಿವುಡ್ ನಾಯಕಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 11, 2024 | 6:48 PM

ನಟಿ ಕಂಗನಾ ರಣಾವತ್ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. ಅವರಿಗೆ ಅನೇಕರನ್ನು ಕಂಡರೆ ಆಗೋದಿಲ್ಲ. ಅವರು ಸುಖಾಸುಮ್ಮನೆ ಕಿರಿಕ್ ಮಾಡಿಕೊಳ್ಳುತ್ತಾರೆ. ಹಲವರ ವಿರುದ್ಧ ಅವರು ಸಿಡಿದೆದ್ದಿದ್ದು ಇದೆ. ಅದೇ ರೀತಿ ಅವರನ್ನು ಕಂಡರೂ ಅನೇಕರಿಗೆ ಆಗೋದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಅವರನ್ನು ಹೊಗಳಿದವರು ತುಂಬಾನೇ ಕಡಿಮೆ, ಈಗ ಕಂಗನಾ ಬಗ್ಗೆ ಓರ್ವ ನಟಿ ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

ಕಂಗನಾ ರಣಾವತ್ ಅವರ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದು ಪ್ರಿಯಾಂಕಾ ಚೋಪ್ರಾ ಅವರ ಕಸಿನ್ ಮೀರಾ ಚೋಪ್ರಾ. ನಟನೆಯಲ್ಲಿ ಗೆದ್ದ ಬಳಿಕ ಕಂಗನಾ ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ. ‘ಯುವ ಜನತೆ ರಾಜಕೀಯಕ್ಕೆ ಇಳಿಯಬೇಕು. ಕಂಗನಾ ಅವರನ್ನೇ ನೋಡಿ.. ಅವರಿಗೆ ಅದರಲ್ಲಿ ಇಳಿಯಲು ಸರಿಯಾದ ಸಮಯ. ಅವರು ಉತ್ತಮ ನಟಿ’ ಎಂದಿದ್ದಾರೆ.

‘ನಾನು ಕಂಗನಾ ಅಭಿಮಾನಿ. ನಾನು ಕಂಗನಾ ಅವರ ದೊಡ್ಡ ಅಭಿಮಾನಿ. ಅವರು ಇಂಡಸ್ಟ್ರಿಯಲ್ಲಿ ಮಾಡಿರೋದನ್ನು ಈ ಮೊದಲು ಯಾರೂ ಮಾಡಿಲ್ಲ. ಬಾಲಿವುಡ್​ನಲ್ಲಿ ಆರಂಭದಿಂದ ಯಾರೂ ಮಾಡಿರದ್ದನ್ನು ಅವರು ಮಾಡಿ ತೋರಿಸಿದ್ದಾರೆ ಅನ್ನೋದು ವಿಶೇಷ’ ಎಂದಿದ್ದಾರೆ ಮೀರಾ. ‘ಕಂಗನಾ ಫೈಟರ್. ಅವರು ಒಬ್ಬಂಟಿ. ಅವರು ಕೆಲಸ ಮಾಡೋದೆ ಹಾಗೆ. ಕಂಗನಾ ಎಲ್ಲವನ್ನೂ ಮಾಡುತ್ತಾರೆ. ಈ ರೀತಿ ಮ್ಯಾನೇಜ್ ಮಾಡೋಕೆ ಯಾರಿಂದಲೂ ಸಾಧ್ಯವಾಗಿಲ್ಲ’ ಎಂದು ಕಂಗನಾ ರಣಾವತ್ ಅರ ಬಗ್ಗೆ ಮೀರಾ ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

ಇದನ್ನೂ ಓದಿ:ಕೃಷಿ ಕಾಯ್ದೆ ವಿಚಾರ: ಹೇಳಿಕೆ ಹಿಂಪಡೆದ ಕಂಗನಾ ರನೌತ್

‘ಕಂಗನಾ ಯಾವಾಗಲೂ ಡಿಪ್ಲೋಮೆಟಿಕ್ ಆಗಿ ನಡೆದುಕೊಂಡಿಲ್ಲ. ಈ ಕಾರಣಕ್ಕೆ ಅವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅವರು ಅತ್ಯುತ್ತಮ ನಟಿ ಅನ್ನೋದನ್ನು ಯಾರೂ ತಳ್ಳಿ ಹಾಕಲು ಸಾಧ್ಯವಿಲ್ಲ. ನಟನೆಯಿಂದ ರಾಜಕೀಯದಲ್ಲಿ ಸಹಕಾರಿ ಆಯಿತೇ? ಇಲ್ಲ. ಅವರು 10 ದಿನಕ್ಕೊಮ್ಮೆ ಕ್ಷಮೆ ಕೇಳುತ್ತಾರೆ. ಹೃದಯದಿಂದ ಮಾತನಾಡಿ ಅವರು ಸಮಸ್ಯೆ ಮಾಡಿಕೊಳ್ಳುತ್ತಾರೆ’ ಎಂದಿದ್ದಾರೆ ಅವರು.

ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾದ ರಿಲೀಸ್ ನಿರೀಕ್ಷೆಯಲ್ಲಿ ಇದ್ದಾರೆ. ಈ ಚಿತ್ರವು ಸೆನ್ಸಾರ್ ಮಂಡಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಈ ಚಿತ್ರವು ಸೆಪ್ಟೆಂಬರ್ನಲ್ಲೇ ರಿಲೀಸ್ ಆಗಿರಬೇಕಿತ್ತು. ಆದರೆ, ಕಾರಣಾಂತರಗಳಿಂದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಯಶಸ್ಸು ಕಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್