ಸಲ್ಮಾನ್ ಖಾನ್​ಗೆ ಖಕಡ್ ಆಗಿ ಉತ್ತರಿಸೋಕೆ ಯಾವ ಸ್ಪರ್ಧಿಯಿಂದಲೂ ಆಗಿಲ್ಲ; ಇವರನ್ನು ಬಿಟ್ಟು

ಬಿಗ್ ಬಾಸ್ ನಿರೂಪಣೆಯಲ್ಲಿ ಸಲ್ಮಾನ ಖಾನ್ ಅವರು ಹಲವು ವರ್ಷಗಳಿಂದ ಇದ್ದಾರೆ. ಅವರು ಅನೇಕರಿಗೆ ದುಸ್ವಪ್ನವಾಗಿದ್ದಾರೆ. ಬಿಗ್ ಬಾಸ್ ಸಮಯದಲ್ಲಿ ಸಲ್ಲು ವಿರುದ್ಧ ಯಾರೆಂದರೆ ಯಾರೂ ಮಾತನಾಡುವುದಿಲ್ಲ. ಆದರೂ ಒಬ್ಬರು ಮಾತನಾಡಿದ್ದರು. ಅವರೇ ವಿನ್ನರ್ ಕೂಡ ಆದರು.

ಸಲ್ಮಾನ್ ಖಾನ್​ಗೆ ಖಕಡ್ ಆಗಿ ಉತ್ತರಿಸೋಕೆ ಯಾವ ಸ್ಪರ್ಧಿಯಿಂದಲೂ ಆಗಿಲ್ಲ; ಇವರನ್ನು ಬಿಟ್ಟು
ಸಲ್ಮಾನ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 12, 2024 | 7:48 AM

ಸಲ್ಮಾನ್ ಖಾನ್ ಅವರು ಹಲವು ವರ್ಷಗಳಿಂದ ‘ಬಿಗ್ ಬಾಸ್’ನ ನಡೆಸಿಕೊಂಡು ಬರುತ್ತಾ ಇದ್ದಾರೆ. ಅವರು ಹಲವು ಸೂಪರ್ ಹಿಟ್ ಎಪಿಸೋಡ್​ಗಳನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕಂಡರೆ ಅನೇಕರಿಗೆ ಭಯ ಇದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಭಯ ಹುಟ್ಟಿಸುತ್ತಾರೆ ಸಲ್ಲು. ಅವರಿಗೆ ಒಮ್ಮೆ ಸ್ಪರ್ಧಿಯೊಬ್ಬರು ತಿರುಗಿ ನಿಂತಿದ್ದರು. ಆ ವಿಡಿಯೋವು ಈಗ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ನಿರೂಪಣೆಯಲ್ಲಿ ಸಲ್ಮಾನ ಖಾನ್ ಅವರು ಹಲವು ವರ್ಷಗಳಿಂದ ಇದ್ದಾರೆ. ಅವರು ಅನೇಕರಿಗೆ ದುಸ್ವಪ್ನವಾಗಿದ್ದಾರೆ. ತಮ್ಮ ವಿರುದ್ಧ ಸಿಟ್ಟಿಗೆದ್ದರೆ ಸಲ್ಲು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಅವರಿಗೆ ಏಕಾಏಕಿ ಸಿಟ್ಟು ಬರುತ್ತದೆ. ಅವರು ಇದನ್ನು ನೇರವಾಗಿ ಸ್ಪರ್ಧಿಗಳ ಮೇಲೆ ಹಾಕುತ್ತಾರೆ. ಈ ಸಮಯದಲ್ಲಿ ಸಲ್ಲು ವಿರುದ್ಧ ಯಾರೆಂದರೆ ಯಾರೂ ಮಾತನಾಡುವುದಿಲ್ಲ. ಆದರೂ ಒಬ್ಬರು ಮಾತನಾಡಿದ್ದರು. ಅವರೇ ವಿನ್ನರ್ ಕೂಡ ಆದರು.

ಈ ರೀತಿ ಮಾತನಾಡಿದವರು ಬೇರೆ ಯಾರೂ ಅಲ್ಲ, ಸಿದ್ದಾರ್ಥ್ ಶುಕ್ಲಾ ಅವರು. ಸಿದ್ದಾರ್ಥ್ ಶುಕ್ಲಾ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದರು. 2019-20ರಲ್ಲಿ ನಡೆದ ಬಿಗ್ ಬಾಸ್​ನ ಭಾಗವಾಗಿದ್ದರು. ಅವರು ಇದರ ವಿನ್ನರ್ ಕೂಡ ಆದರು. ಈ ಬಿಗ್ ಬಾಸ್​ ವೇಳೆ ಅವರು ನೇರವಾಗಿ ಆವಾಜ್ ಹಾಕಿ ಸಲ್ಲುನೇ ಸೈಲೆಂಟ್ ಮಾಡಿದ್ದರು.

ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಲ್ಲು ಅನೇಕರನ್ನು ಬೈದು ಸೈಲೆಂಟ್ ಮಾಡಿರುವ ದೃಶ್ಯಗಳು ಇವೆ. ಅದೇ ರೀತಿ ಸಿದ್ದಾರ್ಥ್ ಶುಕ್ಲಾ ಹಾಗೂ ಸಲ್ಮಾನ್ ಖಾನ್ ನಡುವಿನ ಚರ್ಚೆಯೂ ಇದೆ. ಈ ಚರ್ಚೆಯಲ್ಲಿ ಸಲ್ಮಾನ್ ಖಾನ್ ಅವರ ವಿರುದ್ಧ ಸಿದ್ದಾರ್ಥ್ ಸಿಡೆದಿದ್ದಾರೆ.

‘ಏನಾದರೂ ತಪ್ಪಿದ್ದರೆ ಹೇಳಿ, ತಿದ್ದಿಕೊಳ್ಳುತ್ತೇನೆ. ಕ್ಷಮೆ ಕೇಳುತ್ತೇನೆ. ಈ ರೀತಿ ಕ್ಷಮೆ ಕೇಳಿದ್ದೇನೆ, ಮುಂದೆಯೂ ಕೇಳುತ್ತೇನೆ. ಆದರೆ, ನನ್ನ ತಪ್ಪಿಲ್ಲ ಎಂದರೆ ನಾನು ಯಾರಿಗೂ ಕ್ಷಮೆ ಕೇಳಲ್ಲ. 10 ಜನರ ತಂದು ನಿಲ್ಲಿಸಿ ನಿಮ್ಮದೇ ತಪ್ಪು ಎಂದು ಕೂಗಿದರೆ ಉಳಿದವರು ಕೇಳಬಹುದು, ಆದರೆ, ನಾನು ಕೇಳಲ್ಲ’ ಎಂದಿದ್ದರು ಅವರು.

ಇದನ್ನೂ ಓದಿ: 58ನೇ ವಯಸ್ಸಿನಲ್ಲೂ ಹೇಗಿದೆ ನೋಡಿ ಸಲ್ಮಾನ್ ಖಾನ್ ಫಿಟ್ನೆಸ್​; ಇಲ್ಲಿದೆ ಫೋಟೋ

ಸಿದ್ದಾರ್ಥ್ ಶುಕ್ಲಾ ಅವರು 2021ರ ಸೆಪ್ಟೆಂಬರ್ 2ರಂದು ಹೃದಯಾಘಾತದಿಂದ ಮೃತಪಟ್ಟರು. ಆಗ ಅವರಿಗೆ ಕೇವಲ 40 ವರ್ಷ ಆಗಿತ್ತು. ಇದು ನಿಜಕ್ಕೂ ಶಾಕಿಂಗ್ ಬೆಳವಣಿಗೆಯೇ ಆಗಿತ್ತು. ಅವರ ಸಾವು ಫ್ಯಾನ್ಸ್​ಗೆ ಹಾಗೂ ಕುಟುಂಬಕ್ಕೆ ಶಾಕಿಂಗ್ ಎನಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.