ರಹಾ ಹೆಸರಲ್ಲಿ ಆನೆ ದತ್ತು ಪಡೆದು ಆಲಿಯಾ ಮನೆಗೇ ಕಳುಹಿಸಿದ್ದ ರಾಮ್ ಚರಣ್

‘ನಾನು, ತಾರಕ್ (ಜೂನಿಯರ್ ಎನ್​ಟಿಆರ್​) ಹಾಗೂ ರಾಮ್ ಚರಣ್ ಸೆಟ್​ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರಿಗೂ ಬೇರೆ ಬೇರೆ ರೀತಿಯ ಶೆಡ್ಯೂಲ್ ಇರುತ್ತಿತ್ತು. ಆದರೆ, ಪ್ರಮೋಷನ್ ವೇಳೆ ನಮ್ಮ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು’ ಎಂದು ‘ಆರ್​ಆರ್​ಆರ್’ ಸಿನಿಮಾದ ಘಟನೆ ಬಗ್ಗೆ ಮಾತನಾಡಿದ್ದಾರೆ ಆಲಿಯಾ ಭಟ್.

ರಹಾ ಹೆಸರಲ್ಲಿ ಆನೆ ದತ್ತು ಪಡೆದು ಆಲಿಯಾ ಮನೆಗೇ ಕಳುಹಿಸಿದ್ದ ರಾಮ್ ಚರಣ್
ರಹಾ ಹೆಸರಲ್ಲಿ ಆನೆ ದತ್ತು ಪಡೆದು ಆಲಿಯಾ ಮನೆಗೇ ಕಳುಹಿಸಿದ್ದ ರಾಮ್ ಚರಣ್
Follow us
ರಾಜೇಶ್ ದುಗ್ಗುಮನೆ
|

Updated on: Oct 12, 2024 | 9:05 AM

ಆಲಿಯಾ ಭಟ್ ಅವರು ‘ಆರ್​​ಆರ್​ಆರ್’ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಜೊತೆ ತೆರೆಹಂಚಿಕೊಂಡಿದ್ದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ರಹಾ ಹೆಸರಲ್ಲಿ ಒಂದು ಆನೆಯನ್ನು ರಾಮ್ ಚರಣ್ ದತ್ತು ಪಡೆದಿದ್ದಾರೆ. ಈ ವಿಚಾರ ಕೇಳಿ ಅನೇಕರು ಖುಷಿಪಟ್ಟಿದ್ದಾರೆ. ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾಗೆ ಅನೇಕ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಖುಷಿಯಲ್ಲಿ ಆಲಿಯಾ ಈ ವಿಚಾರ ರಿವೀಲ್ ಮಾಡಿದ್ದಾರೆ.

‘ನಾನು, ತಾರಕ್ (ಜೂನಿಯರ್ ಎನ್​ಟಿಆರ್​) ಹಾಗೂ ರಾಮ್ ಚರಣ್ ಸೆಟ್​ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರಿಗೂ ಬೇರೆ ಬೇರೆ ರೀತಿಯ ಶೆಡ್ಯೂಲ್ ಇರುತ್ತಿತ್ತು. ಆದರೆ, ಪ್ರಮೋಷನ್ ವೇಳೆ ನಮ್ಮ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು’ ಎಂದು ‘ಆರ್​ಆರ್​ಆರ್’ ಸಿನಿಮಾದ ಘಟನೆ ಬಗ್ಗೆ ಮಾತನಾಡಿದ್ದಾರೆ ಆಲಿಯಾ ಭಟ್.

‘ಇದೊಂದು ಫನ್​ ಸ್ಟೋರಿ. ರಹಾ ಜನಿಸಿ ತಿಂಗಳಾಗಿತ್ತು. ನಾನು ವಾಕ್ ಮಾಡೋಣ ಎಂದು ಹೋದೆ. ಆಗ ಒಬ್ಬರು ಬಂದು ರಾಮ್ ಚರಣ್ ಆನೆ ಕಳುಹಿಸಿದ್ದಾರೆ ಎಂದರು. ನಾನು ಶಾಕ್ ಆದೆ. ಆನೆ ನಮ್ಮ ಮನೆಯ ಹತ್ತಿರ ಬರುತ್ತಿದೆ. ಅಂದರೆ ಏನು ಬೇಕಾದರೂ ಆಗಬಹುದು ಎಂದು ಯೋಚಿಸಿದೆ’ ಎಂಬುದಾಗಿ ವಿವರಿಸಿದ್ದಾರೆ ಆಲಿಯಾ ಭಟ್.

ರಾಮ್ ಚರಣ್ ಕಳುಹಿಸಿದ್ದು ನಿಜವಾದ ಆನೆ ಅಲ್ಲ. ರಹಾ ಹೆಸರಲ್ಲಿ ಆನೆಯನ್ನು ಅಡಾಪ್ಟ್ ಮಾಡಿಕೊಂಡ ಬಳಿಕ ಮರದ ಆನೆಯನ್ನು ಆಲಿಯಾ ಭಟ್ ಮನೆಗೆ ಕಳುಹಿಸಿದ್ದರು. ಇದಕ್ಕೆ ಎಲಿ ಎಂದು ಹೆಸರು ಕೊಡಲಾಗಿದೆ. ಈ ಆನೆ ಆಲಿಯಾ ಭಟ್ ಅವರ ಮನೆಯ ಊಟದ ಟೇಬಲ್​ ಹತ್ತಿರವೇ ಇಡಲಾಗಿದೆ. ಈ ಆನೆಯನ್ನು ರಹಾ ಸಾಕಷ್ಟು ಇಟಷ್ಟಪಟ್ಟಿದ್ದಾರಂತೆ.

ಇದನ್ನೂ ಓದಿ: ಮತ್ತೊಂದು ತೆಲುಗು ಸಿನಿಮಾದಲ್ಲಿ ಆಲಿಯಾ ಭಟ್? ನಿರ್ದೇಶಕ ಯಾರು?

ರಹಾಗೆ ಇನ್ನೂ ಎರಡು ವರ್ಷ ತುಂಬಿಲ್ಲ. ಆಗಲೇ ಆಕೆಗೆ ಸಾಕಷ್ಟು ಪ್ರೀತಿ ಸಿಗುತ್ತಿದೆ. ರಹಾ ಅವರ ಫೋಟೋ ಹಾಗೂ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇರುತ್ತವೆ. ಆಲಿಯಾ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.