‘ಸಿಂಗಂ ಅಗೇನ್’ ರಿಲೀಸ್ಗೂ ಮೊದಲು ಬಿಡುಗಡೆ ಕಾಣ್ತಿದೆ ‘ಸಿಂಘಂ’ ಸಿನಿಮಾ
Singham Again release: ಭಾರಿ ತಾರಾಗಣ ಹೊಂದಿರುವ ‘ಸಿಂಘಂ ಅಗೇನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆಗೆ ಮುಂಚೆ ‘ಸಿಂಘಂ’ ಸಿನಿಮಾ ಮರು ಬಿಡುಗಡೆ ಆಗಲಿದೆ.
ರೋಹಿತ್ ಶೆಟ್ಟಿ ಅವರು ಬಾಲಿವುಡ್ನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಅದರಲ್ಲೂ ಅವರ ಕಾಪ್ ಯೂನಿವರ್ಸ್ ಹೆಚ್ಚು ಗಮನ ಸೆಳೆದಿದೆ. ಅವರ ನಿರ್ದೇಶನದ ‘ಸಿಂಗಂ’ ಚಿತ್ರವು ಸೂಪರ್ ಹಿಟ್ ಆಗಿತ್ತು. ಈ ಕಾಪ್ ಯೂನಿವರ್ಸ್ ಅಡಿಯಲ್ಲಿ ‘ಸಿಂಬಾ’, ‘ಸೂರ್ಯವಂಶಿ’ ಸಿನಿಮಾಗಳು ಬರುತ್ತವೆ. ಈಗ ಈ ಪಾತ್ರಗಳನ್ನು ಇಟ್ಟುಕೊಂಡು ರೋಹಿತ್ ಶೆಟ್ಟಿ ‘ಸಿಂಗಂ ಅಗೇನ್’ ಸಿನಿಮಾ ಮಾಡಿದ್ದು, ದೀಪಾವಳಿಗೆ ಬಿಡುಗಡೆ ಕಾಣುತ್ತಿದೆ. ಅದಕ್ಕೂ ಮೊದಲು ಒಂದು ಸಿಹಿ ಸುದ್ದಿ ಇದೆ.
‘ಸಿಂಗಂ ಅಗೇನ್’ ಅಥವಾ ‘ಸಿಂಗಂ 3’ ಅನ್ನೋದು ‘ಸಿಂಗಂ’ ಚಿತ್ರದ ಮುಂದುವರಿದ ಭಾಗವೇ ಆಗಿದೆ. ಈ ಚಿತ್ರವನ್ನು ನೋಡಬೇಕು ಎಂದರೆ ಅದರ ಹಿಂದಿನ ಸಿನಿಮಾ ನೋಡಿರಬೇಕು. ಈ ಕಾರಣದಿಂದಲೇ ಸಿಂಗಂನ ಮೂಲ ಕಥೆ ನೆನಪು ಮಾಡಿಸಲು ‘ಸಿಂಗಂ’ ಚಿತ್ರವನ್ನು ರೀ ರೀಲ್ ಮಾಡಲಾಗುತ್ತಿದೆ. ಅಕ್ಟೋಬರ್ 18 ಅಂದರೆ ಮುಂದಿನ ಶುಕ್ರವಾರ ‘ಸಿಂಗಂ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ನೋಡಿದ 15 ದಿನಗಳಲ್ಲಿ ‘ಸಿಂಗಂ ಅಗೇನ್’ ಚಿತ್ರವು ಥಿಯೇಟರ್ನಲ್ಲಿ ರಿಲೀಸ್ ಕಾಣಲಿದೆ. ತಂಡದ ಕಡೆಯಿಂದ ಈ ಬಗ್ಗೆ ಘೋಷಣೆ ಆಗಿದೆ.
ಇದನ್ನೂ ಓದಿ:ಲೇಡಿ ಸಿಂಘಂ ಗೆಟಪ್ನಲ್ಲಿ ಬಂದರೂ ಟ್ರೋಲ್ ಆದ ದೀಪಿಕಾ ಪಡುಕೋಣೆ
ನವೆಂಬರ್ 1ರಂದು ‘ಸಿಂಗಂ ಅಗೇನ್’ ಸಿನಿಮಾ ರಿಲೀಸ್ ಆಗುತ್ತಿದೆ. ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಜಾಕಿ ಶ್ರಾಫ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡುತ್ತಾರೆ ಎಂದು ವರದಿ ಆಗಿದೆ. ಅರ್ಜುನ್ ದೇವಗನ್, ಜ್ಯೋತಿ ದೇಶಪಾಂಡೆ, ರೋಹಿತ್ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರೋಹಿತ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ.
ದೇಶಾದ್ಯಂತ ರೀ ರಿಲೀಸ್ಗಳು ಹೆಚ್ಚುತ್ತಿವೆ. ಇತ್ತೀಚೆಗೆ ಹಿಂದಿಯಲ್ಲಿ ‘ತುಂಬಾಡ್’ ಸಿನಿಮಾ ರೀ ರಿಲೀಸ್ ಆಗಿ ಒಳ್ಳೆಯ ಬಿಸ್ನೆಸ್ ಮಾಡಿತ್ತು. ‘ಸಿಂಗಂ’ ಚಿತ್ರ ಕೂಡ ಯಶಸ್ಸು ಕಂಡಿರುವ ಸಿನಿಮಾ ಆಗಿರುವುದರಿಂದ ಅದನ್ನು ಜನರು ಇಷ್ಟಪಟ್ಟು ನೋಡಿ ಒಳ್ಳೆಯ ಕಲೆಕ್ಷನ್ ಮಾಡಿಸಿದರೂ ಅಚ್ಚರಿ ಏನಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ