ರತನ್ ಟಾಟಾಗೂ ಚಿತ್ರರಂಗಕ್ಕೂ ಸಂಬಂಧವೇನು? ನಿರ್ಮಾಣ ಮಾಡಿದ್ದು ಒಂದೇ ಸಿನಿಮಾ

ಜನಪ್ರಿಯ ಉದ್ಯಮಿ, ಅಜಾತಶತ್ರು ರತನ್ ಟಾಟಾ ನಿಧನರಾಗಿದ್ದಾರೆ, ದೇಶ ವಿದೇಶದ ಉದ್ಯಮಿಗಳು, ರಾಜಕಾರಣಿಗಳು ಚಿತ್ರರಂಗದ ಗಣ್ಯರು ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅಂದಹಾಗೆ ರತನ್ ಟಾಟಾ ತಮ್ಮ ಜೀವನದಲ್ಲಿ ಕೇವಲ ಒಂದೇ ಒಂದು ಸಿನಿಮಾ ನಿರ್ಮಾಣ ಮಾಡಿದ್ದರು. ಯಾವುದದು? ಸಿನಿಮಾದ ಕತೆ ಏನಾಯ್ತು?

ರತನ್ ಟಾಟಾಗೂ ಚಿತ್ರರಂಗಕ್ಕೂ ಸಂಬಂಧವೇನು? ನಿರ್ಮಾಣ ಮಾಡಿದ್ದು ಒಂದೇ ಸಿನಿಮಾ
Follow us
ಮಂಜುನಾಥ ಸಿ.
|

Updated on: Oct 10, 2024 | 12:06 PM

ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ನಿನ್ನೆ ತಡರಾತ್ರಿ ನಿಧನ ಹೊಂದಿದ್ದಾರೆ. ಟಾಟಾ ಗ್ರೂಪ್​ ಹಾಗೂ ಟಾಟಾ ಸನ್ಸ್​ನ ಮಾಜಿ ಚೇರ್​ಮೆನ್ ಆಗಿದ್ದ ರತನ್ ಟಾಟಾ, ಭಾರತದ ಪ್ರಗತಿಗೆ ನೀಡಿರುವ ಕೊಡುಗೆ ಬಹಳ ದೊಡ್ಡದು. ಭಾರತದ ಅತ್ಯುತ್ತಮ ಉದ್ಯಮಿ ಎಂದೇ ರತನ್ ಟಾಟಾ ಅವರನ್ನು ಕರೆಯಲಾಗುತ್ತದೆ. ರತನ್ ಟಾಟಾ ಅವರ ಅಗಲಿಕೆಗೆ ಪ್ರಧಾನಿ ಮೋದಿ ಆದಿಯಾಗಿ ಹಲವಾರು ರಾಜಕಾರಣಿಗಳು, ಉದ್ಯಮಿಗಳು, ಚಿತ್ರರಂಗದ ಗಣ್ಯರು ಶೋಕ ಸಂದೇಶ ಹಂಚಿಕೊಂಡಿದ್ದಾರೆ. ಅಂದಹಾಗೆ ಖ್ಯಾತ ಉದ್ಯಮಿ ಆಗಿದ್ದ ರತನ್ ಟಾಟಾ ಅವರಿಗೆ ಚಿತ್ರರಂಗದೊಟ್ಟಿಗೆ ಸಂಬಂಧ ಇತ್ತು. ಸಿನಿಮಾ ಬಗ್ಗೆ ಪ್ರೀತಿ ಇರಿಸಿಕೊಂಡಿದ್ದ ರತನ್ ಅವರು ಒಂದು ಸಿನಿಮಾ ನಿರ್ಮಾಣವನ್ನೂ ಮಾಡಿದ್ದರು.

ಟಾಟಾ ಸಂಸ್ಥೆ, ಸಣ್ಣ ಮೊಳೆ, ಉಪ್ಪು ತಯಾರಿಕೆಯಿಂದ ಹಿಡಿದು ವಿಮಾನ, ಸಾಫ್ಟ್​ವೇರ್​ ಅಂಥಹಾ ವಸ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಹಲವು ಕ್ಷೇತ್ರಗಳಲ್ಲಿ ಟಾಟಾ ಸಂಸ್ಥೆ ಕೆಲಸ ಮಾಡುತ್ತಿದೆ. ಆದರೆ ಚಿತ್ರರಂಗದಿಂದ ಮಾತ್ರ ದೂರವೇ ಇದೆ. ಆದರೆ ರತನ್ ಟಾಟಾ ಕೇವಲ ಒಂದೇ ಒಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದಾದ ಬಳಿಕ ಅವರು ಮತ್ತೆ ಚಿತ್ರರಂಗದ ಕಡೆ ಮುಖ ಮಾಡಲಿಲ್ಲ.

ಅಮಿತಾಬ್ ಬಚ್ಚನ್ ನಟಿಸಿದ್ದ ‘ಏತಬಾರ್’ ಸಿನಿಮಾಕ್ಕೆ ರತನ್ ಟಾಟಾ ಸಹ ನಿರ್ಮಾಪಕರಾಗಿದ್ದರು. ಅಸಲಿಗೆ ಆ ಸಿನಿಮಾಕ್ಕೆ ನಾಲ್ಕು ಮಂದಿ ನಿರ್ಮಾಪಕರು, ಅವರಲ್ಲಿ ರತನ್ ಟಾಟಾ ಸಹ ಒಬ್ಬರು. ಸಿನಿಮಾಕ್ಕೆ ಜತಿನ್ ಕುಮಾರ್, ಖುಷ್ರು ಬುದ್ರಾ, ಮನ್​ದೀಪ್ ಸಿಂಗ್ ಅವರುಗಳು ಸಹ ಬಂಡವಾಳ ಹಾಕಿದ್ದರು. ರತನ್ ಟಾಟಾ ಆ ಸಿನಿಮಾದ ಮುಖ್ಯ ನಿರ್ಮಾಪಕರಾಗಿದ್ದರು. ವಿಕಿಪೀಡಿಯಾನಲ್ಲಿ ರತನ್ ಟಾಟಾ ನಿರ್ಮಾಣದ ಸಿನಿಮಾ ಎಂದೇ ನಮೂದಿಸಲಾಗಿದೆ.

ಇದನ್ನೂ ಓದಿ:Ratan Tata Car Collection: ರತನ್ ಟಾಟಾ ಅವರ ಇಷ್ಟದ ಕಾರು ಯಾವುದು?, ಮನೆಯಲ್ಲಿ ಒಟ್ಟು ಎಷ್ಟು ಕಾರುಗಳಿದ್ದವು?

2004 ರಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ‘ಏತಬಾರ್’ ಸಿನಿಮಾ 1992 ರ ಹಾಲಿವುಡ್ ಸಿನಿಮಾ ‘ಫಿಯರ್’ನಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿದ್ದ ಸಿನಿಮಾ ಆಗಿತ್ತು. ವಿಕ್ರಂ ಭಟ್ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ಜಾನ್ ಅಬ್ರಹಾಂ ಹಾಗೂ ಬಿಪಾಶಾ ಬಸು, ಸುಪ್ರಿಯಾ ಪಿಳ್ಗಾಂವಕರ್ ಇನ್ನಿತರೆ ನಟರು ಇದ್ದರು. ಸಿನಿಮಾ ಕ್ರೈಂ ಥ್ರಿಲ್ಲರ್ ಆಗಿತ್ತು. 2002 ರಲ್ಲಿ ಈ ಸಿನಿಮಾಕ್ಕೆ 9.50 ಕೋಟಿ ಬಜೆಟ್ ಹಾಕಲಾಗಿತ್ತು. ಆದರೆ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಗಳಿಸಿದ್ದು ಕೇವಲ 7.50 ಕೋಟಿ ಮಾತ್ರ. ರತನ್ ಟಾಟಾ ತಮ್ಮ ಮೊದಲ ಪ್ರಯತ್ನದಲ್ಲಿಯೇ ನಷ್ಟ ಅನುಭವಿಸಿದರು. ಅದಾದ ಬಳಿಕ ಇನ್ಯಾವುದೇ ಸಿನಿಮಾ ನಿರ್ಮಾಣ ಮಾಡಲಿಲ್ಲ.

ಹಾಗೆಂದು ಟಾಟಾ ಸಂಸ್ಥೆ ಮನೊರಂಜನಾ ಕ್ಷೇತ್ರದಲ್ಲಿ ಇಲ್ಲ ಎಂದೇನಿಲ್ಲ. ಟಾಟಾ ಸ್ಕೈ, ಟಾಟಾ ನಿಯೋ ಒಟಿಟಿ, ಟಾಟಾ ಕಮ್ಯೂನಿಕೇಷನ್, ಟಾಟಾ ಪ್ಲೇ, ತೇಜಸ್ ನೆಟ್​ವರ್ಕ್​​ ಮೂಲಕ ಮನೊರಂಜನಾ ಕ್ಷೇತ್ರದಲ್ಲಿಯೂ ಟಾಟಾ ಸಂಸ್ಥೆ ಗ್ರಾಹಕರಿಗೆ ಸೇವೆ ನೀಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು