Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratan Tata Car Collection: ರತನ್ ಟಾಟಾ ಅವರ ಇಷ್ಟದ ಕಾರು ಯಾವುದು?, ಮನೆಯಲ್ಲಿ ಒಟ್ಟು ಎಷ್ಟು ಕಾರುಗಳಿದ್ದವು?

ರತನ್ ಟಾಟಾ ಈ ಹಿಂದೆ ಹೋಂಡಾ ಸಿವಿಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಳಿಕ ಟಾಟಾ ಗ್ರೂಪ್‌ನ ಟಾಟಾ ನೆಕ್ಸನ್ ಇವಿಯಲ್ಲಿ ಪ್ರಯಾಣಿಸಲು ಪ್ರಾರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಅವರು ಇದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದರಂತೆ.

Ratan Tata Car Collection: ರತನ್ ಟಾಟಾ ಅವರ ಇಷ್ಟದ ಕಾರು ಯಾವುದು?, ಮನೆಯಲ್ಲಿ ಒಟ್ಟು ಎಷ್ಟು ಕಾರುಗಳಿದ್ದವು?
ರತನ್​​​ ಟಾಟಾ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 10, 2024 | 11:53 AM

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಮತ್ತು ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ನಿಧನರಾದರು. ರತನ್ ಅವರು ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಇಂದು, ಸುರಕ್ಷತೆಯ ವಿಷಯಕ್ಕೆ ಬಂದಾಗ ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಬಲವಾದ ಹಿಡಿತವನ್ನು ಸಾಧಿಸಿದೆ. ಅನೇಕ ಕಂಪನಿಗಳನ್ನು ಎತ್ತರಕ್ಕೆ ಕೊಂಡೊಯ್ದ ರತನ್ ಟಾಟಾ ಅವರ ಕಾರು ಸಂಗ್ರಹಣೆಯಲ್ಲಿ ಯಾವ ವಾಹನಗಳಿತ್ತು?, ಇವರ ಇಷ್ಟದ ಕಾರು ಯಾವುದು ಎಂಬ ಮಾಹಿತಿಯನ್ನು ನಾವು ನೀಡಲಿದ್ದೇವೆ.

ವರದಿಗಳ ಪ್ರಕಾರ, ರತನ್ ಟಾಟಾ ಈ ಹಿಂದೆ ಹೋಂಡಾ ಸಿವಿಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಳಿಕ ಟಾಟಾ ಗ್ರೂಪ್‌ನ ಟಾಟಾ ನೆಕ್ಸನ್ ಇವಿಯಲ್ಲಿ ಪ್ರಯಾಣಿಸಲು ಪ್ರಾರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಅವರು ಇದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದರಂತೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಿಭಾಗದಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿರುವುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ಕರ್ನಾಟಕದ ಬಗ್ಗೆ ಗೌರವ, ಆದರ ಹೊಂದಿದ್ದ ರತನ್ ಟಾಟಾ; ಹೇಗಿತ್ತು ಈ ರಾಜ್ಯದೊಂದಿಗೆ ಅವರ ಸಂಬಂಧ?

ರತನ್ ಟಾಟಾ ಕಾರು ಸಂಗ್ರಹ:

ರತನ್ ಟಾಟಾ ಅವರ ಕಾರು ಸಂಗ್ರಹಣೆಯಲ್ಲಿ ಒಂದಲ್ಲ ಹಲವು ಐಷಾರಾಮಿ ಕಾರುಗಳಿವೆ. ಅವುಗಳಲ್ಲಿ ಅವರ ಹೃದಯಕ್ಕೆ ತುಂಬಾ ಹತ್ತಿರವಾದ ಕಾರು ಇದೆ. ಟಾಟಾ ಮೋಟಾರ್ಸ್‌ ನ್ಯಾನೋ ಕಾರನ್ನು ಈಗ ಉತ್ಪಾದರೆ ಮಾಡುತ್ತಿಲ್ಲ. ಆದರೆ ರತನ್ ಟಾಟಾ ಅವರ ಗ್ಯಾರೇಜ್‌ನಲ್ಲಿ ಟಾಟಾ ನ್ಯಾನೋ ಕೂಡ ಇದ್ದು, ಇದು ಅವರ ಫೇವರಿಟ್ ಕಾರಂತೆ. ಟಾಟಾ ನ್ಯಾನೋ ಅವರ ಕನಸಿನ ಯೋಜನೆಯಾಗಿತ್ತು. 1 ಲಕ್ಷ ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾದ ಈ ಸಣ್ಣ ಕಾರು ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

ಟಾಟಾ ನ್ಯಾನೋ ಮಾತ್ರವಲ್ಲ, 2023 ರಲ್ಲಿ ಟಾಟಾ ಇಂಡಿಕಾದ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರತನ್ ಟಾಟಾ ಅವರು ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಟಾಟಾ ಇಂಡಿಕಾ ಭಾರತದ ಮೊದಲ ಸ್ವದೇಶಿ ಕಾರು ಎಂದು ಬರೆದಿದ್ದರು. ಇದರೊಂದಿಗೆ ಈ ಕಾರು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದೂ ಬರೆದಿದ್ದಾರೆ. ಇದು ಕೂಡ ಅವರ ಬಳಿ ಇದೆಯಂತೆ.

View this post on Instagram

A post shared by Ratan Tata (@ratantata)

ಟಾಟಾ ನ್ಯಾನೋ, ಟಾಟಾ ಇಂಡಿಕಾ ಹೊರತುಪಡಿಸಿ, ಟಾಟಾ ಮೋಟಾರ್ಸ್‌ನ ಅತ್ಯಂತ ಜನಪ್ರಿಯ ಮತ್ತು ಸುರಕ್ಷಿತ ವಾಹನ ಟಾಟಾ ನೆಕ್ಸಾನ್ ಕೂಡ ರತನ್ ಟಾಟಾ ಅವರ ಕಾರು ಸಂಗ್ರಹಣೆಯಲ್ಲಿ ಸೇರಿದೆ. ವರದಿಗಳ ಪ್ರಕಾರ, ಈ ವಾಹನಗಳ ಹೊರತಾಗಿ, ರತನ್ ಟಾಟಾ ಮರ್ಸಿಡಿಸ್-ಬೆನ್ಜ್ SL500, ಮಾಸೆರಾಟಿ ಕ್ವಾಟ್ರೋಪೋರ್ಟ್, ಲ್ಯಾಂಡ್ ರೋವರ್ ಫ್ರೀಲ್ಯಾಂಡರ್, ಕ್ಯಾಡಿಲಾಕ್ XLR ಮತ್ತು ಹೋಂಡಾ ಸಿವಿಕ್‌ನಂತಹ ವಾಹನಗಳನ್ನು ಸಹ ಹೊಂದಿದ್ದರು.

ಆಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ