AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vettaiyan twitter review: ರಜನಿ ಖಾತೆಗೆ ಮತ್ತೊಂದು ಬ್ಲಾಕ್​ ಬಸ್ಟರ್, ಭರವಸೆ ಉಳಿಸಿಕೊಂಡ ಜ್ಞಾನವೇಲು

Vettaiyan movie: ರಜನೀಕಾಂತ್, ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ನಟಿಸಿರುವ ‘ವೆಟ್ಟೆಯಾನ್’ ಸಿನಿಮಾ ಇಂದು (ಅಕ್ಟೋಬರ್ 10) ಬಿಡುಗಡೆ ಆಗಿದ್ದು, ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ.

Vettaiyan twitter review: ರಜನಿ ಖಾತೆಗೆ ಮತ್ತೊಂದು ಬ್ಲಾಕ್​ ಬಸ್ಟರ್, ಭರವಸೆ ಉಳಿಸಿಕೊಂಡ ಜ್ಞಾನವೇಲು
ಮಂಜುನಾಥ ಸಿ.
|

Updated on: Oct 10, 2024 | 10:47 AM

Share

ರಜನೀಕಾಂತ್ ನಟನೆಯ ‘ವೆಟ್ಟೆಯಾನ್’ ಸಿನಿಮಾ ಇಂದು (ಅಕ್ಟೋಬರ್ 10) ಬಿಡುಗಡೆ ಆಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳನ್ನು ಹಾಕಲಾಗಿದೆ. ಸಿನಿಮಾ ನೋಡಿ ಬಂದ ಜನ ಟ್ವಿಟ್ಟರ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ಯಾಕೋ ಬೋರಿಂಗ್ ಸಿನಿಮಾ ಇದ್ದಂತಿದೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಸಿನಿಮಾ ಬಿಡುಗಡೆ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪಾಸಿಟಿವ್ ವಿಮರ್ಶೆಗಳು, ಪ್ರಶಂಸೆಗಳೇ ತುಂಬಿವೆ.

‘ಎನ್​ಕೌಂಟರ್​ಗೆ ಸಂಬಂಧಿಸಿದಂತೆ ಒಳ್ಳೆಯ ಕತೆ, ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯ ವ್ಯವಸ್ಥೆ ನಡುವಿನ ಸಂಬಂಧ ಅತ್ಯದ್ಭುತ ವಿಶ್ಲೇಷಣೆ. ಕಂಟೆಂಟ್ ಹೊಂದಿರುವ ಕತೆ ಆಗಿದ್ದರೂ ಸಹ ಸಿನಿಮಾದಲ್ಲಿ ಸರಿಯಾದ ಪ್ರಮಾಣದಲ್ಲಿ ಕಮರ್ಶಿಯಲ್ ಅಂಶಗಳನ್ನು ತುಂಬಲಾಗಿದೆ. ರಜನೀಕಾಂತ್ ವೃತ್ತಿ ಜೀವನದಲ್ಲಿಯೇ ಅತ್ಯುತ್ತಮ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಇದು. ನಿರ್ದೇಶಕ ಜ್ಞಾನವೇಲು ತಮ್ಮ ಪ್ರತಿಭೆ ತೋರಿಸಿದ್ದಾರೆ. ಅನಿರುದ್ಧ್​ ಸಂಗೀತ ಅತ್ಯುತ್ತಮ’ ಎಂದು ಮಲೇಷಿಯಾ ಟಾಕಿಸ್ ಖಾತೆಯಿಂದ ಟ್ವೀಟ್ ಆಗಿದೆ.

‘ಜೈ ಭೀಮ್’ ಸಿನಿಮಾ ಹೇಗೆ ಒಂದು ಅತ್ಯುತ್ತಮ ಕಂಟೆಂಟ್ ಸಿನಿಮಾ ಆಗಿ ಹೆಸರು ಮಾಡಿತೊ ಹಾಗೆಯೇ ‘ವೆಟ್ಟೆಯನ್’ ಸಿನಿಮಾ ಅದ್ಭುತವಾಗಿದೆ. ಒಂದು ಬಾರಿ ನೋಡಿದರೆ ಸಾಲದು ಎರಡು ಬಾರಿ ನೋಡಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ರಜನೀಕಾಂತ್ ಸಿನಿಮಾ ಅಲ್ಲ, ಇದು ಜ್ಞಾನವೇಲು ಸಿನಿಮಾ, ಆದರೆ ಜ್ಞಾನವೇಲು ಸಿನಿಮಾನಲ್ಲಿ ರಜನೀಕಾಂತ್ ಅದ್ಭುತವಾಗಿ ನಟಿಸಿದ್ದಾರೆ. ರಜನೀಕಾಂತ್ ಇರುವ ಎಲ್ಲ ಸೀನ್​ಗಳು ಅದ್ಭುತ. ಕ್ಲೈಮ್ಯಾಕ್ಸ್ ಅಂತೂ ಭರ್ಜರಿಯಾಗಿದೆ’ ಎಂದಿದ್ದಾರೆ ಶಿವಾ ಜಿ ಎಂಬ ಒಬ್ಬ ಟ್ವಿಟ್ಟರ್ ಬಳಕೆದಾರ.

ಇದನ್ನೂ ಓದಿ:ರಜನೀಕಾಂತ್ ಜೊತೆ ಸಮಂತಾ ಹೋಲಿಕೆ, ಖ್ಯಾತ ನಿರ್ದೇಶಕ ಕೊಟ್ಟ ಕಾರಣವೇನು?

‘ಇಂಥಹಾ ಒಂದು ಒಳ್ಳೆಯ ಸಿನಿಮಾ ನೋಡಿ ಬಹಳ ದಿನಗಳೇ ಆಗಿ ಹೋಗಿತ್ತು. ಕಮರ್ಶಿಯನ್ ನಟನನ್ನು ಇಟ್ಟುಕೊಂಡು ಇಷ್ಟು ಒಳ್ಳೆ ಸಿನಿಮಾವನ್ನು ನಿರ್ದೇಶಕ ಕೊಟ್ಟಿದ್ದಾರೆ. ಮಾಸ್ ಇಮೇಜಿನ ನಟನನ್ನು ಒಂದು ಪ್ರಮುಖವಾದ ವಿಷಯವುಳ್ಳ ಸಿನಿಮಾದಲ್ಲಿ ಇಷ್ಟು ಚೆನ್ನಾಗಿ ತೋರಿಸಿರುವ ಜ್ಞಾನವೇಲು ಪ್ರತಿಭೆಗೆ ಥ್ಯಾಂಕ್ಸ್ ಹೇಳಲೇಬೇಕು. ರಜನಿ ಅಭಿನಿಗಳು ಖುಷಿ ಪಡುವಂಥಹಾ ಸಿನಿಮಾ ಇದು’ ಎಂದು ಸಿನಿಮಾ ನೋಡಿ ಬಂದ ಅಭಿಮಾನಿಯೊಬ್ಬರು ರಿಯಾಕ್ಷನ್ ಕೊಟ್ಟಿದ್ದಾರೆ.

‘ಸಿನಿಮಾದ ಎಂಟ್ರಿ ಸೀನ್​ನಿಂದ ಹಿಡಿದು ಕ್ಲೈಮ್ಯಾಕ್ಸ್ ವರೆಗೆ ಕ್ಲಾಸ್​ತನವನ್ನು ನಿರ್ದೇಶಕ ಜ್ಞಾನವೇಲು ಮೇಂಟೇನ್ ಮಾಡಿದ್ದಾರೆ. ರಜನೀಕಾಂತ್ ಇಡೀ ಸಿನಿಮಾದಲ್ಲಿ ಭಿನ್ನ ಭಿನ್ನ ರೀತಿಯಲ್ಲಿ, ಸನ್ನಿವೇಶಗಳಲ್ಲಿ ತಮ್ಮ ನಟನಾ ಪ್ರತಿಭೆ ತೋರಿಸಿದ್ದಾರೆ. ಪ್ರತಿ ದೃಶ್ಯದಲ್ಲಿಯೂ ಮಿಂಚಿದ್ದಾರೆ. ಹಲವು ಪಾತ್ರಗಳಿರುವ, ಹಲವು ಸಂಭಾಷಣೆಗಳಿರುವ ಚಿತ್ರಕತೆಯನ್ನು ಬಿಗಿಯಾಗಿ ಕಟ್ಟಿಕೊಂಡಿರುವ ರೀತಿಗೆ ಹ್ಯಾಟ್ಸ್​ಆಫ್. ಫಹಾದ್ ಫಾಸಿಲ್ ನಟನೆ ಅದ್ಭುತ. ರಜನೀಕಾಂತ್ ಹಾಗೂ ಫಹಾದ್ ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳನ್ನು ಸಿನಿಮಾ ಪ್ರೇಮಿಗಳು ಬಹಳ ಕಾಲ ನೆನಪಲ್ಲಿಟ್ಟುಕೊಳ್ಳುತ್ತಾರೆ. ಅಮಿತಾಬ್ ಬಚ್ಚನ್, ಅವರಿಗೆ ಪಾತ್ರ ಅದ್ಭುತವಾಗಿ ಸೂಟ್ ಆಗಿದೆ. ರಾಣಾ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಕಣ್ಣುಗಳೇ ಮಾತನಾಡುತ್ತವೆ’ ಎಂದು ಸುದೀರ್ಘ ವಿಮರ್ಶೆ ಬರೆದಿದ್ದಾರೆ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ.

ಕೇರಳದಲ್ಲಿಯೂ ಸಹ ಜನ ‘ವೆಟ್ಟೆಯಾನ್’ ಸಿನಿಮಾವನ್ನು ಬಹಳ ಮೆಚ್ಚಿಕೊಂಡಿದ್ದಾರೆ. ‘ಅದ್ಭುತವಾದ ಸಿನಿಮಾ, ಅದ್ಭುತವಾದ ಚಿತ್ರಕತೆ, ಅದ್ಭುತವಾದ ನಿರ್ದೇಶನ, ಅದ್ಭುತವಾದ ನಟನೆ, ಅದ್ಭುತವಾದ ಸಂಗೀತ, ಅದ್ಭುತವಾದ ಸಿನಿಮಾಟೊಗ್ರಫಿ ಒಟ್ಟಿಗೆ ಸೇರಿದರೆ ಮಾತ್ರವೇ ಇಂಥಹಾ ಸಿನಿಮಾ ಮೂಡಿ ಬರಲು ಸಾಧ್ಯ’ ಎಂದು ಮಲಯಾಳಿ ಸಿನಿಮಾ ಪ್ರೇಮಿಯೊಬ್ಬರು ಚಿತ್ರ ನೋಡಿ ಬಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಟ್ವಿಟ್ಟರ್​ನಲ್ಲಿ ‘ವೆಟ್ಟೆಯಾನ್’ ಸಿನಿಮಾದ ಬಗ್ಗೆ ಬಹುತೇಕ ಪಾಸಿಟಿವ್ ಅಭಿಪ್ರಾಯಗಳೇ ಇವೆ. ನೆಗೆಟಿವ್ ವಿಮರ್ಶೆಗಳು ಬಹಳ ಕಡಿಮೆ ಇವೆ. ರಜನೀಕಾಂತ್​ ಸಿನಿಮಾ ಆಗಿದ್ದರು ಸಹ ಮಾಸ್ ದೃಶ್ಯಗಳ ಜೊತೆಗೆ ಕ್ಲಾಸ್ ಕೂಡ ಸೇರಿಕೊಂಡಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ