‘ಆಸೆ’ ಧಾರಾವಾಹಿಯಿಂದ ಸೂರ್ಯ ಪಾತ್ರ ಮಾಯವಾಗಿದ್ದೇಕೆ? ನಿನಾದ್ ಕೊಟ್ಟರು ಉತ್ತರ

ಸ್ಟಾರ್ ಸುವರ್ಣದ ‘ಆಸೆ’ ಧಾರಾವಾಹಿಯಲ್ಲಿ ಸೂರ್ಯ ಪಾತ್ರದಲ್ಲಿ ನಟಿಸುತ್ತಿರುವ ನಿನಾದ್ ಹರಿತ್ಸ ಅವರು ಸದ್ಯ ಪರದೆಯಿಂದ ದೂರ ಉಳಿದಿದ್ದಾರೆ. ಸಾಲ ತೀರಿಸಲು ದುಬೈಗೆ ತೆರಳಿರುವ ಕಥೆಯ ಹಿನ್ನೆಲೆಯಲ್ಲಿ ಪಾತ್ರಕ್ಕೆ ಬ್ರೇಕ್ ಸಿಕ್ಕಿದ್ದು, ಮಹತ್ತರ ಕೆಲಸಕ್ಕಾಗಿ ತಾವೂ ಕೂಡ ಒಂದು ಸಣ್ಣ ಬಿಡುವು ಪಡೆದಿರುವುದಾಗಿ ನಟ ಸ್ಪಷ್ಟಪಡಿಸಿದ್ದಾರೆ.

‘ಆಸೆ’ ಧಾರಾವಾಹಿಯಿಂದ ಸೂರ್ಯ ಪಾತ್ರ ಮಾಯವಾಗಿದ್ದೇಕೆ? ನಿನಾದ್ ಕೊಟ್ಟರು ಉತ್ತರ
ನಿನಾದ್

Updated on: Nov 14, 2026 | 11:58 AM

ಮುಖ್ಯಾಂಶಗಳು

  • ‘ಆಸೆ’ ಧಾರಾವಾಹಿಯಿಂದ ಸೂರ್ಯ ಪಾತ್ರ ಮಾಯ
  • 1000 ಎಪಿಸೋಡ್ ಪೂರೈಸಿದ ಬಳಿಕ ಮಹತ್ತರ ಕೆಲಸಕ್ಕಾಗಿ ಬ್ರೇಕ್
  • ಕಂಬ್ಯಾಕ್ ಗಾಗಿ ಕಾತರದಿಂದ ಕಾಯುತ್ತಿರುವ ಕಿರುತೆರೆ ಪ್ರೇಕ್ಷಕರು

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಆಸೆ’ ಧಾರಾವಾಹಿ ಪ್ರೇಕ್ಷಕರ ಮನಗೆದ್ದಿದೆ. ಈ ಸೀರಿಯಲ್​​ನ ಕಥಾ ನಾಯಕ ನಿನಾದ್ ಹರಿತ್ಸ, ಪ್ರಿಯಾಂಕಾ, ಮಂಡ್ಯ ರಮೇಶ್ ಸೇರಿದಂತೆ ಎಲ್ಲಾ ಕಲಾವಿದರ ನಟನೆ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯಲ್ಲಿ ಸೂರ್ಯ ಪಾತ್ರ ಮಾಡಿರೋ ನಿನಾದ್ ಅವರು ಕಳೆದ ಕೆಲ ಸಮಯದಿಂದ ಪರದೆಯ ಮೇಲೆ ಕಾಣಿಸುತ್ತಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ನಿನಾದ್ ಕಡೆಯಿಂದ ಉತ್ತರ ಸಿಕ್ಕಿದೆ.

ಸಾಲ ತೀರಿಸದ ಕಾರಣಕ್ಕೆ ರಂಗನಾಥ್ ಅವರ ಮನೆಯನ್ನು ಜಪ್ತಿ ಮಾಡಲಾಗಿದೆ. ಈ ಮನೆ ಬಿಡಿಸಿಕೊಳ್ಳಬೇಕು ಎಂಬುದು ಸೂರ್ಯನ ಆಸೆ. ಈ ಕಾರಣದಿಂದಲೇ ಆತ ದುಡಿಮೆಗಾಗಿ ದುಬೈಗೆ ತೆರಳಿದ್ದಾನೆ. ಈ ಕಾರಣಕ್ಕೆ ಸೂರ್ಯನ ಪಾತ್ರ ತೆರೆಮೇಲೆ ಬರುತ್ತಿಲ್ಲ. ಈ ವಿಷಯವಾಗಿ ನಿನಾದ್ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ. ಅವರು ಒಂದು ಸಣ್ಣ ಬ್ರೇಕ್​ನಲ್ಲಿರೋದಾಗಿ ಹೇಳಿದ್ದಾರೆ.

Loading...

‘ನಾನು ಧಾರಾವಾಹಿಗಾಗಿ ಹಲವು ವರ್ಷ ಮೀಸಲಿಟ್ಟಿದ್ದೇನೆ. 1000 ಎಪಿಸೋಡ್​​ಗಳನ್ನು ಪೂರ್ಣಗೊಳಿಸಿದ್ದೇನೆ. ಇಷ್ಟು ದೊಡ್ಡ ಸಾಧನೆ ಮಾಡೋದು ಸುಲಭವಲ್ಲ. ಈಗ ಒಂದು ಮಹತ್ತರ ಕೆಲಸಕ್ಕಾಗಿ ಬ್ರೇಕ್ ಪಡೆದಿದ್ದೇನೆ’ ಎನ್ನುತ್ತಾರೆ ನಿನಾದ್. ಮುಂದಿನ ದಿನಗಳಲ್ಲಿ ಅವರು ಧಾರಾವಾಹಿಗೆ ಕಂಬ್ಯಾಕ್ ಮಾಡಲಿದ್ದಾರೆ. ಅಲ್ಲಿಯವರೆಗೆ ಧಾರಾವಾಹಿ ಅವರಿಲ್ಲದೆ ಸಾಗಲಿದೆ.

ಆ ಮಹತ್ತರ ಕೆಲಸ ಏನು? ಈ ಬಗ್ಗೆ ನಿನಾದ್ ಮೌನ ಮುರಿದಿಲ್ಲ. ‘ಎಲ್ಲವನ್ನೂ ಹೇಳೋಕೆ ಒಂದು ಸಮಯ ಅನ್ನೋದು ಬರಬೇಕು. ಸರಿಯಾದ ಸಮಯಕ್ಕೆ ಎಲ್ಲವೂ ರಿವೀಲ್ ಆದರೆ ಅದಕ್ಕೆ ಒಂದು ಮೌಲ್ಯ ಸಿಗುತ್ತದೆ. ಅಲ್ಲಿಯವರೆಗೆ ಎಲ್ಲರೂ ಕಾಯಬೇಕು’ ಎಂದು ಕುತೂಹಲ ಹೆಚ್ಚಿಸುತ್ತಾರೆ ನಿನಾದ್.

ಇದನ್ನೂ ಓದಿ: ‘ಆಸೆ’ ಧಾರಾವಾಹಿಯಲ್ಲಿ ಭಾವನೆಗಳ ಪಯಣ; ಸೂರ್ಯ ಪಾತ್ರಧಾರಿ ನಿನಾದ್ ಏನಂತಾರೆ?

ನಿನಾದ್ ಅವರಿಗೆ ಕಿರುತೆರೆ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಆಸೆ’ ಧಾರಾವಾಹಿಯಲ್ಲಿ ಸೂರ್ಯ ಆಗಿ ಅವರು ಎಲ್ಲರ ಮನೆಮಾತಾಗಿದ್ದಾರೆ. ಅವರು ಆದಷ್ಟು ಬೇಗ ಮತ್ತೆ ತೆರೆಮೇಲೆ ಬರಲಿ ಎಂಬುದು ವೀಕ್ಷಕರ ಕೋರಿಕೆ. ಈ ಕೋರಿಕೆ ಯಾವಾಗ ಈಡೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us