ನೀವು ಅಂದುಕೊಂಡಂತೆ ಇಲ್ಲ ಜಗ್ಗ ಮಮ್ಮಿ; ಗಾನವಿಗೆ ಖಡಕ್ ತಿರುಗೇಟು

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ಗಾನವಿ ಅವರ ಪಾಪದ ಕೊಡ ತುಂಬಿದೆ ಎಂದು ಜಗದೀಶ್ ಅವರು ಹೇಳಿದ್ದಾರೆ. ತಮ್ಮ ಮೇಲೆ ಆರೋಪ ಮಾಡಿದ ಗಾನವಿಗೆ ಅವರು ಖಡಕ್ ತಿರುಗೇಟು ನೀಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಜಗದೀಶ್ ಅವರು ಖಾರವಾಗಿ ಮಾತನಾಡಿದರು.

ನೀವು ಅಂದುಕೊಂಡಂತೆ ಇಲ್ಲ ಜಗ್ಗ ಮಮ್ಮಿ; ಗಾನವಿಗೆ ಖಡಕ್ ತಿರುಗೇಟು
Ganavi, Jagga Mummy
Image Credit source: Colors Kannada

Updated on: Oct 06, 2026 | 10:42 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್ ಅವರು ಆರಂಭದಲ್ಲಿ ಸೌಮ್ಯವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರ ಆಟ ಬದಲಾಗಿದೆ. ಎಲ್ಲರ ಜೊತೆಗೂ ಜಗದೀಶ್ ಅವರು ಚೆನ್ನಾಗಿ ಇದ್ದಾರೆ. ಹಾಗಂತ ಆಟದಲ್ಲಿ ರಾಜಿ ಆಗುತ್ತಿಲ್ಲ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಹಿಂದೇಟು ಹಾಕುತ್ತಿಲ್ಲ. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಗ್ಗ ಮಮ್ಮಿ ಅವರು ಗಾನವಿ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ. ತಮ್ಮನ್ನು ಟಾರ್ಗೆಟ್ ಮಾಡಲು ಬಂದವರಿಗೆ ಸೂಕ್ತ ತಿರುಗೇಟು ನೀಡಿದ್ದಾರೆ.

ಈ ವಾರ ಯಾರ ಪಾಪದ ಕೊಡ ತುಂಬಿದೆ ಎಂಬುದನ್ನು ನಿರ್ಧರಿಸುವ ಸಮಯ. ಈ ವೇಳೆ ಪ್ರತಿಯೊಬ್ಬ ಸ್ಪರ್ಧಿ ಇಬ್ಬರನ್ನು ನಾಮಿನೇಟ್ ಮಾಡಬೇಕು. ಜಗ್ಗ ಮಮ್ಮಿ ಅವರು ಗಾನವಿ ಹಾಗೂ ಗಗನ್ ಚಿನ್ನಪ್ಪ ಅವರನ್ನು ನಾಮಿನೇಟ್ ಮಾಡಿದರು. ಸೂಕ್ತ ಕಾರಣ ನೀಡಿದಾಗ ಗಾನವಿ ಅವರು ಅದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಆಗ ಜಗ್ಗ ಮಮ್ಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದರು.

‘ನಾನು ಅಡುಗೆ ಮಾಡಿದರೆ ಮಾತ್ರ ಇವರಿಗೆ ತಿನ್ನೋಕೆ ಇರೋದು. ಇವರು ಎಲ್ಲವನ್ನೂ ನೋಡಿಕೊಂಡು ಬಂದಿದ್ದಾರೆ. ಜಗಳ ಆಡದೇ ಇದ್ದರೆ ಇವರಿಗೆ ವಿಧಿ ಇಲ್ಲ. ನಾನು ಗೇಮ್​ನಲ್ಲಿ ಆಟ ಆಡಿಲ್ಲ ಅಂತ ಅವರು ಹೇಳುತ್ತಾರೆ. ನಾನು ಎಷ್ಟು ಆಡಬೇಕೋ ಅಷ್ಟು ಆಡುತ್ತಿದ್ದೇನೆ. ಗಾನವಿ ಅವರು ಏನೂ ಆಡಿಲ್ಲ. ಕ್ಯಾಪ್ಟೆನ್ಸಿ ಆಟವನ್ನೇ ರದ್ದು ಮಾಡಿದ್ದಾರೆ’ ಎಂದು ಜಗದೀಶ್ ಅವರು ಗಾನವಿ ವಿರುದ್ಧ ಗುಡುಗಿದರು.

‘ಬರೀ ಡವ್, ನೀನು ಮಾಡುತ್ತಿರುವುದೆಲ್ಲ ಫೇಕ್. ನೀನು ಹಾಕಿಕೊಂಡ ಬಂದಿದ್ದ ಮುಖವಾಡ ಕಳಚಿ ಹೋಗಿದೆ. ಇಲ್ಲಿ ಮುಖವಾಡ ನಡೆಯೋದಿಲ್ಲ’ ಎಂದು ಗಾನವಿಯನ್ನು ಜಗದೀಶ್ ಟೀಕೆ ಮಾಡಿದರು. ‘ನೀವು ಕೂಡ ಚೆನ್ನಾಗಿ ಮಾತನಾಡಿಕೊಂಡು ಇದ್ದವರು ಸಡನ್ ಆಗಿ ಬಾಂಬ್ ಬ್ಲಾಸ್ಟ್ ಮಾಡುತ್ತೀರಿ’ ಎಂದು ಜಗದೀಶ್ ಮೇಲೆ ಗಾನವಿ ಆರೋಪಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ

‘ನಾನು ಎಲ್ಲರ ಜೊತೆ ಚೆನ್ನಾಗಿ ಇರಬೇಕು ಅಂತ ಬಂದೆ. ನಿಮ್ಮಂಥವರನ್ನು ನೋಡಿದಾಗ ಚೆನ್ನಾಗಿ ಇರಬಾರದು ಎನಿಸಿತು. ಕೆಟ್ಟ ಮನಸ್ಥಿತಿಗಳನ್ನು ನೋಡಿ ಕೆಟ್ಟ ಜಗದೀಶ ಆಗಿದ್ದೇನೆ. ನಿನ್ನನ್ನು ಮನೆಗೆ ಕಳಿಸಿ, ನಾನು ಟ್ರೋಫಿ ತೆಗೆದುಕೊಂಡು ಹೋಗುತ್ತೇನೆ’ ಎಂದು ಜಗದೀಶ್ ಅವರು ಗುಡುಗಿದ್ದಾರೆ. ಅದೇ ರೀತಿ ಗಗನ್ ಚಿನ್ನಪ್ಪ ಅವರನ್ನು ಕೂಡ ಜಗದೀಶ್ ನಾಮಿನೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us