
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಾನವಿ ಅವರ ಆಟ ಮತ್ತು ವರ್ತನೆ ಕಂಡು ಮನೆಮಂದಿ ಶಾಕ್ ಆಗಿದ್ದಾರೆ. ಸಹ ಸ್ಪರ್ಧಿ ಜಗದೀಶ್ ಅವರ ಜೊತೆ ಜಗಳಕ್ಕೆ ಇಳಿದ ಗಾನವಿ, ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಟೀಕಿಸಿದ್ದಾರೆ. ಮೊದಲು ತಾವೇ ಕಿರಿಕ್ ಶುರು ಮಾಡಿ, ನಂತರ ತಾವೇ ಸಂತ್ರಸ್ತೆ ಎಂಬಂತೆ ಡ್ರಾಮಾ ಮಾಡುತ್ತಿರುವ ಗಾನವಿ ನಡೆಗೆ ಈಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಜಗಳದ ವೇಳೆ ಗಾನವಿ ಅವರು ಜಗದೀಶ್ ಅವರನ್ನು ಉದ್ದೇಶಿಸಿ, ‘ನೀನು ವಠಾರದ ಆಂಟಿಯ ರೀತಿ ಇದ್ದೀಯ. ಮೊದಲು ಗಂಡಸಾಗಿ ಗಂಡಸಿನ ರೀತಿ ಮಾತನಾಡೋದನ್ನು ಕಲಿ’ ಎಂದು ಕೀಳಾಗಿ ಮಾತನಾಡಿದ್ದಾರೆ. ಈ ಹಿಂದೆ ಕೂಡ ಜಗದೀಶ್ ಅವರು ಮನೆಯಲ್ಲಿ ಇಂಥದ್ದೇ ಅವಮಾನ ಅನುಭವಿಸಿದ್ದರು. ಆಗ ಕಿಚ್ಚ ಸುದೀಪ್ ಅವರು ಜಗದೀಶ್ ಬೆಂಬಲಕ್ಕೆ ನಿಂತು, ‘ಅವರಿಗೂ ಮಗಳಿದ್ದಾಳೆ. ಅವರ ಬಗ್ಗೆ ಈ ರೀತಿ ಮಾತನಾಡಿದಾಗ ಅವರ ಮಗಳಿಗೆ ಹೇಗೆ ಅನಿಸಬೇಡ’ ಎಂದು ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು.
ಸುದೀಪ್ ಅವರು ಎಚ್ಚರಿಕೆ ನೀಡಿದ್ದರೂ ಗಾನವಿ ಮತ್ತೆ ಅದೇ ರೀತಿಯ ಪದಗಳನ್ನು ಬಳಸಿ ದೊಡ್ಡ ಚರ್ಚೆಗೆ ಕಾರಣವಾಗಿದ್ದಾರೆ. ಗಾನವಿ ಆಡಿದ ಈ ಮಾತುಗಳಿಂದ ಜಗದೀಶ್ ತೀವ್ರವಾಗಿ ಕೆರಳಿದ್ದಾರೆ. ತಾಳ್ಮೆ ಕಳೆದುಕೊಂಡ ಜಗದೀಶ್, ‘ಮಾನ ಗೆಟ್ಟವಳು ನೀನು’ ಎಂದು ಗಾನವಿಗೆ ಖಡಕ್ ಕೌಂಟರ್ ಕೊಟ್ಟಿದ್ದಾರೆ. ಜಗದೀಶ್ ತಿರುಗೇಟು ನೀಡುತ್ತಿದ್ದಂತೆಯೇ ಗಾನವಿ ವರಸೆ ಬದಲಿಸಿದ್ದಾರೆ.
ಇದನ್ನೂ ಓದಿ: ‘ಕದ್ರಿ’ ಸಿನಿಮಾದಲ್ಲಿ ಹೀರೋ ಆದ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ
ತಾವು ಆಡಿದ ಕೆಟ್ಟ ಮಾತುಗಳನ್ನು ಮರೆಮಾಚಿದ ಗಾನವಿ, ಜಗದೀಶ್ ಅವರದ್ದೇ ತಪ್ಪು ಎಂಬಂತೆ ಬಿಂಬಿಸಲು ಡ್ರಾಮಾ ಶುರು ಮಾಡಿದ್ದಾರೆ. ‘ಕೆಟ್ಟದಾಗಿ ಮಾತನಾಡಬೇಡ’ ಎಂದು ಜೋರಾಗಿ ಕೂಗಾಡುತ್ತಾ ತಾವೇ ಸಂತ್ರಸ್ತೆಯಂತೆ ನಟಿಸಿದ್ದಾರೆ. ಗಾನವಿ ಅವರ ಈ ಎರಡು ಮುಖದ ಆಟ ನೋಡಿ ಮನೆಯ ಇತರ ಸ್ಪರ್ಧಿಗಳು ದಂಗಾಗಿದ್ದು, ವೀಕೆಂಡ್‌ನಲ್ಲಿ ಸುದೀಪ್ ಈ ವಿಚಾರವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.