
ಬಿಗ್ಬಾಸ್ ಮನೆಯಲ್ಲಿ ಈಗ ‘ಸ್ನೇಹಿತರ ಸವಾಲ್’ ಸೀಸನ್ ಚಾಲ್ತಿಯಲ್ಲಿದೆ. 13ನೇ ಸೀಸನ್ ಆರಂಭ ಆದಾಗಿನಿಂದಲೂ ಬಲು ಆತ್ಮೀಯ ಗೆಳೆಯರಾಗಿದ್ದ ಗಗನ್ ಮತ್ತು ತಾಂಡವ್ ಕಳೆದ ವಾರ ಕೆಟ್ಟದಾಗಿ ಜಗಳ ಮಾಡಿಕೊಂಡರು. ಇಬ್ಬರೂ ಸಹ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಆ ಬಳಿಕ ಅವರು ಸರಿ ಹೋಗಿದ್ದರು. ಅದೇ ಸಮಯದಲ್ಲಿ ಮತ್ತೊಂದು ಸ್ನೇಹಿತರ ಜೋಡಿ ಆಸಿಯಾ ಮತ್ತು ಸೌಂದರ್ಯಾ ನಡುವೆಯೂ ಬಿರುಕು ಮೂಡಿತ್ತು. ಅದೀಗ ಇನ್ನಷ್ಟು ದೊಡ್ಡದಾಗಿದೆ.
ಆಸಿಯಾ ಮತ್ತು ಸೌಂದರ್ಯಾ ಪರಸ್ಪರ ಕಳೆದ ವಾರದಿಂದಲೂ ಜಗಳ ಮಾಡಿಕೊಳ್ಳುತ್ತಲೇ ಬರುತ್ತಿದ್ದಾರೆ. ಆದರೆ ಈ ವಾರ ಆ ಜಗಳ ಇನ್ನೂ ಹೆಚ್ಚಾಗಿದೆ. ಗುರುವಾರದ ಎಪಿಸೋಡಿನಲ್ಲಂತೂ ತಾಳ್ಮೆ ಕಳೆದುಕೊಂಡ ಸೌಂದರ್ಯಾ ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ‘ಹೊಡೆದು ಕೊಂದು ಬಿಡುತ್ತೇನೆ’ ಎಂದೆಲ್ಲ ಬೆದರಿಕೆಯನ್ನು ಸಹ ಸೌಂದರ್ಯಾ ಹಾಕಿದರು.
ಆಗಿದ್ದಿಷ್ಟು, ಆಸಿಯಾ, ಗಾನವಿ ಮತ್ತು ಸೌಂದರ್ಯಾ ಅವರುಗಳು ಯುವರಾಣಿಗಳಾಗಿದ್ದರು, ಮಹಾರಾಣಿ ರೇಸಿನಲ್ಲಿದ್ದರು. ಟಾಸ್ಕ್ನಲ್ಲಿ ಗೆದ್ದ ಆಸಿಯಾ, ಸೌಂದರ್ಯಾ ಅವರನ್ನು ಯುವರಾಣಿ ಸ್ಥಾನದಿಂದ ಕೆಳಗಿಳಿಸಿ ಅವರನ್ನು ನಾಮಿನೇಟ್ ಮಾಡಿದರು. ಈ ವಾರದ ನಾಮಿನೇಷನ್ ನಿಯಮದ ಅನುಸಾರ ನಾಮಿನೇಟ್ ಆದವರ ಮೇಲೆ ನಾಮಿನೇಟ್ ಮಾಡಿದವರು ಸಗಣಿ ನೀರು ಸುರಿಯಬೇಕಿತ್ತು. ಆದರೆ ನಾಮಿನೇಷನ್ಗೆ ಕಾರಣ ಕೊಡುವ ಸಮಯದಲ್ಲಿ ಆಸಿಯಾ ಮತ್ತು ಸೌಂದರ್ಯಾ ನಡುವೆ ಬಹಳ ಜಗಳ ನಡೆಯಿತು. ಸೌಂದರ್ಯಾ ಅಂತೂ, ‘ಬಿಗ್ಬಾಸ್ ಒಂದು ಅವಕಾಶ ಕೊಡಿ, ನಾನು ಇವಳನ್ನು ಮಣ್ಣು ಮುಕ್ಕಿಸುತ್ತೇನೆ’ ಎಂದು ಹೇಳಿದರು.
ಇದನ್ನೂ ಓದಿ:ಇದೇ ಮೊದಲು: ಬಿಗ್ಬಾಸ್ ಮನೆಯಲ್ಲಿ ನಡೆಯಿತು ಮದುವೆ ನಿಶ್ಚಿತಾರ್ಥ
ಸೌಂದರ್ಯಾ, ಆಸಿಯಾ ಮಾತ್ರವಲ್ಲದೆ ಧನುಶ್ ವಿರುದ್ಧವೂ ಜಗಳ ಮಾಡಿದರು. ಧನುಶ್ ಅನ್ನು ಕಪಿ, ಮಂಗ ಎಂದೆಲ್ಲ ಕರೆದರೆ, ಧನುಶ್, ಸೌಂದರ್ಯಾ ಅನ್ನು ಪೆದ್ದುಗುಂಡಿ ಎಂದು ಕರೆದರು. ಬಳಿಕ ಆಸಿಯಾ, ಸೌಂದರ್ಯಾ ಮೇಲೆ ಸಗಣಿ ನೀರು ಸುರಿದರು, ಈ ವೇಳೆ ಆಸಿಯಾ ಮೇಲೆ ನೀರು ಬೀಳುವಂತೆ ಸೌಂದರ್ಯಾ ಕೈಗಳ ಮೂಲಕ ನೀರನ್ನು ಆಸಿಯಾ ಕಡೆ ಚಿಮ್ಮಿಸಿದರು. ಆದರೆ ನೀರು ಸುರಿಯುವಾಗ ಆಸಿಯಾರ ಕೈಯಲ್ಲಿದ್ದ ಬಜೆಟ್ ಸೌಂದರ್ಯಾ ತಲೆಗೆ ತುಸು ತಾಗಿತು.
ಸೌಂದರ್ಯಾಗೆ ಇದು ಬಹಳ ಸಿಟ್ಟು ತರಿಸಿತು. ಅಲ್ಲಿಯೇ ಇದ್ದ ಖಾಲಿ ಬಜೆಟ್ ಕೈಗೆತ್ತಿಕೊಂಡ ಸೌಂದರ್ಯಾ, ಆಸಿಯಾರ ಮೇಲೆರಗಿ ಹೋದರು. ‘ಬಾರಿಸಿಬಿಡುತ್ತೇನೆ’ ಎಂದರು. ಬಾ ಅಖಾಡಕ್ಕೆ ಎಂದು ಪಂಥಾಹ್ವಾನ ಮಾಡಿದರು. ಆಸಿಯಾ, ‘ನಾನು ಹೊಡೆದಿಲ್ಲ, ನನಗೆ ಗೊತ್ತಿಲ್ಲದಂತೆ ತಾಗಿತು’ ಎಂದರು. ಆದರೂ ಸೌಂದರ್ಯಾ ಸಿಟ್ಟು ಕಡಿಮೆ ಆಗಲಿಲ್ಲ. ಆ ಬಳಿಕವೂ ಸಹ ಆಸಿಯಾ ಪಕ್ಕ ಹೋಗಿ ಕುಣಿಯುತ್ತಾ, ಆಸಿಯಾಗೆ ಸಗಣಿ ನೀರು ಬೀಳುವಂತೆ ಮಾಡಿದರು. ಸೌಂದರ್ಯಾ ನಾಮಿನೇಟ್ ಆಗುವ ಮೂಲಕ ಈ ವಾರದ ನಾಮಿನೇಷನ್ ಟಾಸ್ಕ್ ಮುಗಿಯಿತು. ಈ ವಾರ ಜಗದೀಶ್, ಮಂಜು, ಕಿರಣ್, ಯಶಸ್, ಸೌಂದರ್ಯಾ. ನಾಮಿನೇಟ್ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ