
‘ಬಿಗ್ ಬಾಸ್’ ಮನೆಯಲ್ಲಿ ಯಾರು, ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸತತ ಎಚ್ಚರಿಕೆ ಕೊಟ್ಟರೂ ಕೆಲವರು ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇನ್ನೂ ಕೆಲವರು ಅರಿತುಕೊಂಡು ಬದಲಾಗುತ್ತಾರೆ. ಈಗ ಸೌಂದರ್ಯಾ ಶೆಟ್ಟಿ ಅವರು ತಮ್ಮ ತಪ್ಪು ತಿದ್ದಿಕೊಂಡು ಮುಂದೆ ಸಾಗಿದ್ದಾರೆ. ಆದರೆ, ಆಸಿಯಾ ಅವರು ತಮ್ಮ ಶ್ರಮವನ್ನು ವ್ಯರ್ಥ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಹಾಗೂ ಯಶಸ್ ಗೌಡ ತುಂಬಾನೇ ಆಪ್ತತೆ ಬೆಳೆಸಿಕೊಂಡಿದ್ದರು. ಸದಾ ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಾ ಇದ್ದರು. ನಂತರ ಸೌಂದರ್ಯಾ ಅವರು ಗಗನ್ ಜೊತೆ ಕ್ಲೋಸ್ ಆದ ಬಳಿಕ, ‘ನಿಮ್ಮಿಬ್ಬರ ಮಧ್ಯೆ ಏನು ನಡೆಯುತ್ತಿದೆ’ ಎಂದು ಸೌಂದರ್ಯಾ ಅವರನ್ನು ಯಶಸ್ ಪ್ರಶ್ನೆ ಮಾಡಿದ್ದರು. ಪದೇ ಪದೇ ಈ ವಿಷಯವನ್ನು ತೆಗೆಯಲಾಯಿತು. ಇದು ಸೌಂದರ್ಯಾಗೆ ಇಷ್ಟ ಆಗಿಲ್ಲ. ತಮ್ಮ ಹೆಸರಿಗೆ ಯಾವಾಗ ಕಳಂಕ ಬರುತ್ತಿದೆ ಎಂಬುದು ಅರಿವಾಯಿತೋ ಸೌಂದರ್ಯಾ ಬದಲಾಗಿದ್ದಾರೆ.
ಯಶಸ್ ಅವರು ಹಿಂದೆ ಹಿಂದೆ ಬಂದು ಸೌಂದರ್ಯಾ ಬಳಿ ಮಾತನಾಡುವಂತೆ ಕೋರಿದರೂ, ಅವರು ಮಾತ್ರ ಒಂದು ಸ್ವಲ್ಪವೂ ಅದಕ್ಕೆ ಸೊಪ್ಪು ಹಾಕಲಿಲ್ಲ, ಹಿಂದಿರುಗಿ ನೋಡಲಿಲ್ಲ, ಕಿರಿಕಿರಿ ಮಾಡಿಕೊಂಡು ‘ಹೋಗಲೋ’ ಎಂದು ಬಯ್ಯಲಿಲ್ಲ. ಮೌನವೇ ಬೆಸ್ಟ್ ಎಂದು ಸುಮ್ಮನಾಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಗೆಲ್ಲೋದು ಇವರೇ; ಭವಿಷ್ಯ ನುಡಿದ ಲಿಖಿತ್
ಆಸಿಯಾ ಅವರು ಬಂದ ಎರಡು ವಾರ ಉತ್ತಮ ಪ್ರದರ್ಶನ ನೀಡಿದರು. ಅವರು ಕಪ್ ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರ ಆಟ ಇತ್ತೀಚೆಗೆ ಬದಲಾಗಿದೆ. ಯಶಸ್ ಜೊತೆ ಕಾಲ ಕಳೆಯುತ್ತಾ ಇರುತ್ತಾರೆ. ಇದು ಆಸಿಯಾ ಗೇಮ್ ಮೇಲೆ ನೇರವಾಗಿ ಹಾಗೂ ಪರೋಕ್ಷವಾಗಿ ಪ್ರಭಾವ ಬೀರುತ್ತಿದೆ. ಸುದೀಪ್ ಅವರು ಪರೋಕ್ಷ ಎಚ್ಚರಿಕೆ ನೀಡಿದರೂ, ಅವರು ಬದಲಾಗಿಲ್ಲ. ಅವರು ಆಟ ಬದಲಿಸಿಕೊಳ್ಳದೇ ಹೋದರೆ ಸಾಕಷ್ಟು ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.