‘ನಿನಗೆ ಸ್ತ್ರೀ ಮೋಹ ಇದೆ’; ಯಶಸ್​​ಗೆ ಮುಖಕ್ಕೆ ಹೊಡೆದಂತೆ ಹೇಳಿದ ಮಂಜು

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ 'ರಾಕ್ಷಸರು ಹಾಗೂ ಗಂಧರ್ವರು' ಟಾಸ್ಕ್ ಕಾವೇರಿದೆ. ಈ ವೇಳೆ ಮಂಜು, 'ನಿನಗೆ ಸ್ತ್ರೀ ಮೋಹ ಇದೆ' ಎಂದು ಯಶಸ್ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಯಶಸ್ ಸದಾ ಹೆಣ್ಣುಮಕ್ಕಳ ಜೊತೆ ಇರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲೂ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಮಂಜು ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

‘ನಿನಗೆ ಸ್ತ್ರೀ ಮೋಹ ಇದೆ’; ಯಶಸ್​​ಗೆ ಮುಖಕ್ಕೆ ಹೊಡೆದಂತೆ ಹೇಳಿದ ಮಂಜು
ಯಶಸ್-ಮಂಜು
Image Credit source: Colors Kannada

Updated on: Oct 07, 2026 | 7:06 AM

ಮುಖ್ಯಾಂಶಗಳು

  • ರಾಕ್ಷಸನ ಖಡಕ್ ವಾಗ್ದಾಳಿ
  • ಯಶಸ್ ಮುಖವಾಡ ಕಳಚಿದ ಮಂಜು
  • ಮಂಜುಗೆ ಯಶಸ್ ಸೈಲೆಂಟ್ ಕೌಂಟರ್

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಏರುತ್ತಿದೆ. ಸ್ಪರ್ಧಿಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ. ಪ್ರಸ್ತುತ ಮನೆಯಲ್ಲಿ ನಡೆಯುತ್ತಿರುವ ‘ರಾಕ್ಷಸರು ಹಾಗೂ ಗಂಧರ್ವರು’ ಟಾಸ್ಕ್ ಬಿಗ್ ಬಾಸ್ ಅಖಾಡವನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ. ಈ ಟಾಸ್ಕ್‌ನ ನಿಯಮದಂತೆ ರಾಕ್ಷಸರ ತಂಡದ ಆಜ್ಞೆಯನ್ನು ಗಂಧರ್ವರ ತಂಡ ಪಾಲಿಸಬೇಕಾಗಿದೆ. ಈ ವೇಳೆ ರಾಕ್ಷಸನಾಗಿರುವ ಮಂಜು ಹಾಗೂ ಗಂಧರ್ವನಾಗಿರುವ ಯಶಸ್ ನಡುವೆ ದೊಡ್ಡ ಮಟ್ಟದ ಚರ್ಚೆ ಮತ್ತು ತೀವ್ರ ವಾಗ್ವಾದ ನಡೆದಿದೆ.

ಆಟದ ಮಧ್ಯೆ ಯಶಸ್ ನಡುವಳಿಕೆ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ ಮಂಜು, ‘ನಿನಗೆ ಸ್ತ್ರೀ ಮೋಹ ಇದೆ’ ಎಂದು ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿದ್ದಾರೆ. ಯಶಸ್ ಸದಾ ಮನೆಯಲ್ಲಿ ಹೆಣ್ಣುಮಕ್ಕಳ ಜೊತೆಯಲ್ಲೇ ಸುತ್ತಾಡುತ್ತಾರೆ ಮತ್ತು ಅವರ ಬೆಂಬಲ ಪಡೆಯಲು ಪ್ರಯತ್ನಿಸುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದನ್ನೇ ಅಸ್ತ್ರವಾಗಿಸಿಕೊಂಡ ಮಂಜು, ಟಾಸ್ಕ್ ನೆಪದಲ್ಲಿ ಯಶಸ್ ಅವರ ಆಟದ ವೈಖರಿಯನ್ನು ಬಯಲಿಗಿಟ್ಟಿದ್ದಾರೆ.
ರಾಕ್ಷಸರು ಏನೇ ಹೇಳಿದರೂ ಅದಕ್ಕೆ ತಿರುಗೇಟು ನೀಡಬಾರದು ಎಂಬುದು ನಿಯಮ. ಹೀಗಾಗಿ, ಯಶಸ್ ಅವರು ನಗುತ್ತಲೇ, ‘ನಿಮಗೇನು ಪುರುಷ ಮೋಹ ಇದೆಯೇ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ತಬ್ಬಿಬ್ಬಾದ ಮಂಜು, ಕೆಲ ಕಾಲ ಮೌನ ತಾಳಿದರು.

ಯಶಸ್ ಸದಾ ಹೆಣ್ಣುಮಕ್ಕಳ ಜೊತೆ ಇರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಅವರು ಗೇಮ್ ಪ್ಲಾನ್ ಮಾಡುವುದಕ್ಕಿಂತ ಹೆಣ್ಣುಮಕ್ಕಳ ಜೊತೆ ಕಾಲ ಕಳೆಯುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸುತ್ತಿದ್ದಾರೆ. ಮಂಜು ಹೇಳಿದ ಮಾತು ಶೇ.100 ರಷ್ಟು ಸತ್ಯ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮಂಜು ಪರ ಬ್ಯಾಟ್ ಬೀಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ

ಮಂಜು ಅವರ ಈ ನೇರ ಮತ್ತು ಖಡಕ್ ಆರೋಪದ ಬಳಿಕ ಯಶಸ್ ಆಟದ ವೈಖರಿ ಬದಲಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ಈ ಟಾಸ್ಕ್ ಮುಗಿಯುವಷ್ಟರಲ್ಲಿ ಇಬ್ಬರ ನಡುವಿನ ಶೀತಲ ಸಮರ ಇನ್ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us