
ಬಿಗ್ ಬಾಸ್ ಕನ್ನಡ ದೊಡ್ಮನೆಯಲ್ಲಿ ಪ್ರತಿದಿನವೂ ಒಂದಲ್ಲ ಒಂದು ಹೊಸ ವಿವಾದಗಳು, ಚರ್ಚೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿ ಜಗದೀಶ್ ಅವರು ಸಹ-ಸ್ಪರ್ಧಿ ಸೋನಿಕಾ ಜೊತೆ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಮಾಡುತ್ತಿರುವ ಫ್ಲರ್ಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸರಸ-ಸಲ್ಲಾಪ, ತಮಾಷೆಯ ಮಾತುಗಳು ದೊಡ್ಮನೆಯಲ್ಲಿ ಸಾಮಾನ್ಯವಾದರೂ, ಜಗದೀಶ್ ಅವರ ಈ ವರ್ತನೆ ಹೊರಗಡೆ ವೀಕ್ಷಕರಿಗೆ ತೀರಾ ಕೆಟ್ಟದಾಗಿ ಕಾಣಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮನೆಯಲ್ಲಿ ಜಗದೀಶ್ ಅವರು ಸೋನಿಕಾ ಬಳಿ ಹೋಗಿ ‘ಪ್ರೀತ್ಸೇ ಪ್ರೀತ್ಸೇ’ ಎಂದು ಹಾಡು ಹೇಳುತ್ತಾ ಫ್ಲರ್ಟ್ ಮಾಡಲು ಯತ್ನಿಸುತ್ತಿದ್ದಾರೆ. ಅವರು ಇದನ್ನು ಕೇವಲ ಮನರಂಜನೆ ಅಥವಾ ತಮಾಷೆಗಾಗಿ ಮಾಡುತ್ತಿರಬಹುದು. ಆದರೆ, ವೀಕ್ಷಕರು ಮತ್ತು ನೆಟ್ಟಿಗರು ಇದನ್ನು ಅಷ್ಟು ಹಗುರವಾಗಿ ಸ್ವೀಕರಿಸುತ್ತಿಲ್ಲ. ಈಗಾಗಲೇ ಜಗದೀಶ್ ಅವರಿಗೆ ಮದುವೆಯಾಗಿ ಒಂದು ಮಗುವಿದೆ. ಕುಟುಂಬಸ್ಥರಾಗಿ, ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ದೊಡ್ಮನೆಗೆ ಬಂದಿರುವ ಜಗದೀಶ್, ಈ ರೀತಿ ಯುವತಿಯೊಬ್ಬಳ ಜೊತೆ ಫ್ಲರ್ಟ್ ಮಾಡುವುದು ಎಷ್ಟು ಸರಿ? ಇದು ಅವರ ಕುಟುಂಬದ ಮೇಲೆಯೂ ಪ್ರಭಾವ ಬೀರುವುದಿಲ್ಲವೇ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
I have a feeling this is going to end very badly…
I sincerely hope I’m wrong
#BBK13 https://t.co/Yp3nzxkDf9— ಅಲ್ಪಸಂಖ್ಯಾತ (@alpasankhyata) October 5, 2026
ತಾವು ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಕೆಲವು ಸ್ಪರ್ಧಿಗಳು ಈ ರೀತಿಯ ಕೆಲಸವನ್ನು ಮಾಡಿದ ಉದಾಹರಣೆ ಸಾಕಷ್ಟಿದೆ. ಹಲವು ಸಂದರ್ಭಗಳಲ್ಲಿ ಅದು ಅವರಿಗೇ ಬ್ಯಾಕ್ಫೈಯರ್ ಆದ ಉದಾಹರಣೆ ಇದೆ. ಜಗದೀಶ್ ವಿಷಯದಲ್ಲಿ ಹೀಗೆಯೇ ಆಗುವ ಸಾಧ್ಯತೆ ದಟ್ಟವಾಗಿದೆ.
ಜಗದೀಶ್ ಅವರು ಮೈಸೂರಿನ ಮಹದೇವಪುರದವರು. ಅವರು ಡಾರ್ಲಿಂಗ್ ಕೃಷ್ಣ ಅವರ ಮನೆಯಲ್ಲಿ ಸಹಾಯಕ್ಕೆ ಇದ್ದರು. ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಅವರು ಜಗ್ಗು ಮಮ್ಮಿ ಎಂಬ ಪಾತ್ರ ಮಾಡಿ ಗಮನ ಸೆಳೆದರು. ಈಗ ಅವರು ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿದ್ದಾರೆ. ಜಗಳ ಮಾಡಿಯೂ ಸುದ್ದಿ ಆಗುತ್ತಿದ್ದಾರೆ.