ಧಾರಾವಾಹಿಗಳ ಟಿಆರ್​ಪಿ; ಟಾಪ್​ 10 ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ಇದೆಯೇ ನೋಡಿ

Kannada Serial TRP: 26ನೇ ವಾರದ ಧಾರಾವಾಹಿಗಳ ಟಿಆರ್​ಪಿ ಹೊರ ಬಿದ್ದಿದೆ. ಎಂದಿನಂತೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಇದು ಧಾರಾವಾಹಿ ತಂಡದ ಖುಷಿ ಹೆಚ್ಚಿಸಿದೆ. ಹಿರಿಯ ನಟಿ ಉಮಾಶ್ರೀ ಅವರು ಈ ಧಾರಾವಾಹಿಯಲ್ಲಿ ಪ್ರಬುದ್ಧವವಾಗಿ ನಟಿಸುತ್ತಿದ್ದಾರೆ. ಅವರ ನಟನೆ ಅನೇಕರಿಗೆ ಇಷ್ಟ ಆಗಿದೆ.

ಧಾರಾವಾಹಿಗಳ ಟಿಆರ್​ಪಿ; ಟಾಪ್​ 10 ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ಇದೆಯೇ ನೋಡಿ
ಧಾರಾವಾಹಿಗಳ ಟಿಆರ್​ಪಿ; ಟಾಪ್​ 10 ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಯೂ ಇದೆಯೇ ನೋಡಿ

Updated on: Jul 04, 2024 | 2:18 PM

ಧಾರಾವಾಹಿಗಳ ಟಿಆರ್​ಪಿಯಲ್ಲಿ ಏರಿಳಿತ ಕಾಮನ್. ಈ ವಾರ ಮೊದಲಿದ್ದ ಧಾರಾವಾಹಿಗಳು ಮುಂದಿನ ವಾರ ಎರಡನೇ ಸ್ಥಾನಕ್ಕೆ ಕುಸಿಯಬಹುದು. ಧಾರಾವಾಹಿಗಳ ಕಥೆ ಯಾವ ರೀತಿಯಲ್ಲಿ ಸಾಗುತ್ತಿದೆ ಎಂಬುದರ ಮೇಲೆ ಟಿಆರ್​ಪಿ ನಿರ್ಧಾರ ಆಗುತ್ತದೆ. ಇವುಗಳ ಜೊತೆ ಐಪಿಎಲ್, ವಿಶ್ವಕಪ್ ರೀತಿಯ ಮ್ಯಾಚ್​ಗಳಿದ್ದರಂತೂ ಧಾರಾವಾಹಿಗೆ ಅಂದುಕೊಂಡ ಟಿಆರ್​ಪಿ ಸಿಗುವುದೇ ಇಲ್ಲ. ಈಗ 26ನೇ ವಾರದ ಧಾರಾವಾಹಿಗಳ ಟಿಆರ್​ಪಿ ಹೊರ ಬಿದ್ದಿದೆ. ಎಂದಿನಂತೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಕಳೆದ ಕೆಲವು ತಿಂಗಳಿಂದ ಮೊದಲ ಸ್ಥಾನ ಕಾಪಾಡಿಕೊಳ್ಳುತ್ತಾ ಬಂದಿದೆ. 26ನೇ ವಾರವೂ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಇದು ಧಾರಾವಾಹಿ ತಂಡದ ಖುಷಿ ಹೆಚ್ಚಿಸಿದೆ. ಹಿರಿಯ ನಟಿ ಉಮಾಶ್ರೀ ಅವರು ಈ ಧಾರಾವಾಹಿಯಲ್ಲಿ ಪ್ರಬುದ್ಧವವಾಗಿ ನಟಿಸುತ್ತಿದ್ದಾರೆ. ಅವರ ನಟನೆ ಅನೇಕರಿಗೆ ಇಷ್ಟ ಆಗಿದೆ.

ಎರಡನೇ ಸ್ಥಾನದಲ್ಲಿ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಇದೆ. ಹಲವು ಟ್ವಿಸ್ಟ್​ಗಳನ್ನು ಪಡೆದುಕೊಂಡು ಈ ಧಾರಾವಾಹಿ ಸಾಗುತ್ತಿದೆ. ಈ ಧಾರಾವಾಹಿ ಅನೇಕರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಎರಡನೇ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿತ್ತು.

ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗೆ ಆರಂಭವಾದ ಈ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಸೀತಾ ಹಾಗೂ ರಾಮ್ ಮಧ್ಯೆ ಪ್ರೀತಿ ಬೆಳೆದು ಇವರ ಮದುವೆ ಸಂಭ್ರಮ ನಡೆಯುತ್ತಿದೆ. ಈ ಸಂದರ್ಭದಲ್ಲಿ ಧಾರಾವಾಹಿಗೆ ಉತ್ತಮ ಟಿಆರ್​ಪಿ ಸಿಗುತ್ತಿದೆ.

ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಮೊದಲಿನಷ್ಟು ಟಿಆರ್​ಪಿ ಉಳಿಸಿಕೊಂಡಿಲ್ಲ. ಆದಾಗ್ಯೂ ರ‍್ಯಾಂಕಿಂಗ್​ನಲ್ಲಿ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ. ಟಾಪ್​ ಐದರಲ್ಲಿ ಇರೋ ಎಲ್ಲಾ ಧಾರಾವಾಹಿಗಳು ಜೀ ಕನ್ನಡದವು.

ಇದನ್ನೂ ಓದಿ: ಕಿರುತೆರೆ ಇತಿಹಾಸದಲ್ಲಿ ‘ಅಮೃತಧಾರೆ’ ಹೊಸ ದಾಖಲೆ; ಧಾರಾವಾಹಿ ಹಾಡುಗಳಿಗೊಂದು ಜೂಕ್ ​ಬಾಕ್ಸ್

ಆರನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’, ಏಳನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ, ಎಂಟನೇ ಸ್ಥಾನದಲ್ಲಿ ‘ನಿನಗಾಗಿ’ ಹಾಗೂ ‘ರಾಮಾಚಾರಿ’ ಧಾರಾವಾಹಿಗಳು ಇವೆ. ಒಂಭತ್ತನೇ ಸ್ಥಾನದಲ್ಲಿ ‘ಶ್ರೀಗೌರಿ’ ಹಾಗೂ ಹತ್ತನೇ ಸ್ಥಾನದಲ್ಲಿ ‘ಕರಿಮಣಿ’ ಧಾರಾವಾಹಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us