
ಓಂ ಪ್ರಕಾಶ್ ರಾವ್ ಅವರಿಗೆ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಆದರೆ, ಅವರು ಅನಾರೋಗ್ಯದ ಕಾರಣದಿಂದ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಇಂದಿನ (ಸೆಪ್ಟೆಂಬರ್ 14) ಎಪಿಸೋಡ್ನಲ್ಲಿ ಅವರು ಮುಂಜಾನೆ ಮಾತ್ರ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ದೊಡ್ಮನೆಯಲ್ಲಿ ಎಲ್ಲಿಯೂ ಕಾಣಿಸಿಲ್ಲ. ಅವರು ಬಿಗ್ ಬಾಸ್ ಮನೆಗೆ ಮರಳದಿರುವ ಕಠಿಣ ನಿರ್ಧಾರ ಮಾಡಿದ್ದಾರೆ.
ಓಂ ಪ್ರಕಾಶ್ ರಾವ್ ಅವರಿಗೆ ಸಾಕಷ್ಟು ವಯಸ್ಸಾಗಿದೆ. ಅವರಿಗೆ ಸಾಕಷ್ಟು ಅನಾರೋಗ್ಯ ಕಾಡುತ್ತಿದೆ. ಇದರ ನಡುವೆಯೂ ಅವರು ಕಳೆದ ಒಂದು ವಾರದಿಂದ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆದರೆ, ಒಂದು ತೊಂದರೆ ಅವರನ್ನು ಬಲವಾಗಿ ಕಾಡಿತ್ತು.ಅದುವೇ ಫ್ಲೈಟ್ ಜರ್ನಿ.
ಅರ್ಧ ಜನ ಬಿಗ್ ಬಾಸ್ ಮನೆ ಒಳಗೆ, ಇನ್ನರ್ಧ ಜನ ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ಹಾಕಿದ ಫ್ಲೈಟ್ನಲ್ಲಿ ಇದ್ದರು. ಅಲ್ಲಿದ್ದವರಿಗೆ ಸಾಕಷ್ಟು ಒತ್ತಡದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಪರಿಸ್ಥಿತಿಯನ್ನು ಎದುರಿಸಲು ಓಂ ಪ್ರಕಾಶ್ ರಾವ್ ಅವರಿಗೆ ಸಾಧ್ಯವಾಗಲೇ ಇಲ್ಲ. ಇದರಿಂದ ಅವರು ಹೊರ ಬರಬೇಕಾದ ಪರಿಸ್ಥಿತಿ ಇದೆ.
ಈ ಮೊದಲು ಕೂಡ ಅನಾರೋಗ್ಯದಿಂದ ಅನೇಕರು ಬಿಗ್ ಬಾಸ್ ಮನೆಯಿಂದ ಹೊರ ಹೋದ ಉದಾಹರಣೆ ಇದೆ. ಆದರೆ, ಅವರು ಬಿಗ್ ಬಾಸ್ ಮೇಲ್ವಿಚಾರಣೆಯಲ್ಲೇ ಅವರು ಟ್ರೀಟ್ಮೆಂಟ್ ತೆಗೆದುಕೊಂಡು ದೊಡ್ಮನೆಗೆ ಮರಳುತ್ತಿದ್ದರು. ಆದರೆ, ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್ ಮನೆಗೆ ಮರಳುವ ಆಲೋಚನೆಯಲ್ಲಿ ಇಲ್ಲ. ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅವರು ಮರಳುತ್ತಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ನಿಂದ ಅರ್ಧಕ್ಕೆ ಹೊರಬಂದ ಓಂ ಪ್ರಕಾಶ್ ರಾವ್; ಆರೋಗ್ಯದಲ್ಲಿ ಏರುಪೇರು
ಓಂ ಪ್ರಕಾಶ್ ರಾವ್ ಈ ಬಾರಿ ಹೆಚ್ಚು ಕಾಣಿಸಿಕೊಂಡಿಲ್ಲ. ಅವರು ಕಿರಿಯ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿದ್ದರು. ಈಗ ದೊಡ್ಮನೆಯಲ್ಲಿ ಅವರಿಲ್ಲದಿರುವುದು ಮನೆಯವರಿಗೆ ಹಾಗೂ ವೀಕ್ಷಕರಿಗೆ ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:42 pm, Mon, 14 September 26