‘ಜೀ ಕನ್ನಡ’ದಲ್ಲಿ ಮಾರ್ಚ್ 9ರಿಂದ ‘ಕೃಷ್ಣ ರುಕ್ಕು’; ಇದು ಪ್ರೀತಿ-ದ್ವೇಷದ ಕಥೆ

ಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಕೃಷ್ಣ ರುಕ್ಕು' ಮಾರ್ಚ್ 9 ರಿಂದ ಸಂಜೆ 6:30 ಕ್ಕೆ ಪ್ರಸಾರವಾಗಲಿದೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜಾಗಕ್ಕೆ ಬರುವ ಈ ಸೀರಿಯಲ್, ಅಣ್ಣನ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವ ರುಕ್ಕು ಮತ್ತು ಅವಳ ಪ್ರೀತಿ, ದ್ವೇಷ, ವಿಧಿಯಾಟದ ಕಥೆ ಹೇಳುತ್ತದೆ. ಮೌನ ಗುಡ್ಡೇಮನೆ ರುಕ್ಕು, ಅಕ್ಷಯ್ ನಾಯಕ್ ಕೃಷ್ಣನ ಪಾತ್ರದಲ್ಲಿ, ಜೊತೆಗೆ ಎಸ್. ನಾರಾಯಣ್, ಸುಚಿತ್ರಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

‘ಜೀ ಕನ್ನಡ’ದಲ್ಲಿ ಮಾರ್ಚ್ 9ರಿಂದ ‘ಕೃಷ್ಣ ರುಕ್ಕು’; ಇದು ಪ್ರೀತಿ-ದ್ವೇಷದ ಕಥೆ
ಕೃಷ್ಣ ರುಕ್ಕು

Updated on: Mar 05, 2026 | 3:07 PM

ಜೀ ಕನ್ನಡ ವಾಹಿನಿ ಹೊಸ ಹೊಸ ಕಥೆಗಳ ಜೊತೆ ಪ್ರೇಕ್ಷಕರ ಎದುರು ಬರುತ್ತಿದೆ. ಈಗ ಹೊಸ ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರಲು ಜೀ ವಾಹಿನಿ ರೆಡಿ ಆಗಿದೆ. ಅದುವೇ ‘ಕೃಷ್ಣ ರುಕ್ಕು’. ಮಾರ್ಚ್ 9ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಮೊದಲು ಈ ಸ್ಲಾಟ್​​ನಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಈ ಸೀರಿಯಲ್ ಮಾರ್ಚ್ 6ರಂದು ಕೊನೆ ಆಗುತ್ತಿದೆ. ಆ ಜಾಗಕ್ಕೆ ‘ಕೃಷ್ಣ ರುಕ್ಕು’ ಧಾರಾವಾಹಿ ಬಂದಿದೆ.

ಜೀ ಕನ್ನಡದಲ್ಲಿ ಪ್ರಸಾರ ಆಗುವ ಪ್ರತಿ ಧಾರಾವಾಹಿಯಲ್ಲೂ ಸಂಬಂಧಗಳ ಬಗ್ಗೆ, ಕುಟುಂಬದ ಬಗ್ಗೆ ಹೇಳಲಾಗುತ್ತದೆ. ಈ ಧಾರಾವಾಹಿ ಕೂಡ ಪ್ರೀತಿ, ದ್ವೇಷ ಹಾಗೂ ವಿಧಿಯಾಟದ ನಡುವೆ ಸಾಗುತ್ತದೆ. ಆಟೋ ಓಡಿಸೋ ಅಣ್ಣನ ಅಕಾಲಿಕ ನಿಧನದಿಂದ ಇಡೀ ಕುಟುಂಬದ ಜವಾಬ್ದಾರಿ ರುಕ್ಕು ಮೇಲೆ ಬೀಳುತ್ತದೆ. ಆಗ ಎದುರಾಗುವ ಸವಾಲುಗಳನ್ನು ಅವಳು ಹೇಗೆ ಎದುರಿಸುತ್ತಾಳೆ ಎಂಬುದು ಧಾರಾವಾಹಿಯ ಕಥೆ. ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ಮಾಡುತ್ತಿದ್ದಾರೆ.

ಎಸ್ ನಾರಾಯಣ್ ಅವರು ಸಿನಿಮಾ ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದರು. ಅವರಿಗೆ ಕಿರುತೆರೆ ಜೊತೆಯೂ ನಂಟಿದೆ. ಅವರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅವರ ಇರುವಿಕೆ ತಂಡಕ್ಕೆ ದೊಡ್ಡ ಬಲ ತುಂಬಿದಂತೆ ಆಗಿದೆ. ಖ್ಯಾತ ನಟಿ ಸುಚಿತ್ರ, ಗಾಯಕ ನವೀನ ಸಜ್ಜು ಮೊದಲಾದವರು ಧಾರಾವಾಹಿಯ ಭಾಗ ಆಗಿದ್ದಾರೆ. ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ‘ಕೃಷ್ಣ ರುಕ್ಕು’ ಸೀರಿಯಲ್​ನ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ

ಜೀ ಕನ್ನಡದ ಧಾರಾವಾಹಿಗಳು ಮೇಕಿಂಗ್ ವಿಷಯದಲ್ಲಿ ಸಾಕಷ್ಟು ಕಲರ್​ಫುಲ್ ಆಗಿರುತ್ತವೆ ಎಂಬ ಅಭಿಪ್ರಾಯ ವೀಕ್ಷಕರದ್ದು. ‘ಕೃಷ್ಣ ರುಕ್ಕು’ ಧಾರಾವಾಹಿ ಕೂಡ ಅದೇ ಮಾದರಿಯಲ್ಲಿ ಇದೆ ಎಂಬುದು ಪ್ರೋಮೋ ಮೂಲಕ ಗೊತ್ತಾಗಿದೆ. ಅಣ್ಣನ ಸಾವಿಗೆ ಕಾರಣ ಆದ ಕುಟುಂಬಕ್ಕೆ ಬರೋ ನಾಯಕಿ ಯಾವ ರೀತಿಯಲ್ಲಿ ದ್ವೇಷ ತೀರಿಸಿಕೊಳ್ಳುತ್ತಾಳೆ? ದ್ವೇಷ ಪ್ರೀತಿ ಆಗೋದು ಹೇಗೆ ಎಂಬ ಕುತೂಹಲದೊಂದಿಗೆ ಧಾರಾವಾಹಿ ಮೂಡಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:07 pm, Thu, 5 March 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us