‘ಹನುಮಾನ್ ಅಂಶ್’ ಕೈಬಿಟ್ಟ ತ್ರಿವಿಕ್ರಮ್​ಗೆ ಸಂಕಷ್ಟ: ಎದುರಾಳಿಯಾಗಿ ನಿಂತ ಸೂಪರ್ ಹಿಟ್ ಸಿನಿಮಾ

ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ₹400 ಕೋಟಿ ಗಳಿಸಿ ಇತಿಹಾಸ ಬರೆದ 'ಹನುಮಾನ್ ಅಂಶ್' ಸಿನಿಮಾವನ್ನು ತೆಲುಗಿನಲ್ಲಿ ಪ್ರಸ್ತುತಪಡಿಸುವುದರಿಂದ ನಿರ್ದೇಶಕ ತ್ರಿವಿಕ್ರಮ್ ಹಿಂದೆ ಸರಿದಿದ್ದಾರೆ. ಈಗ ಹೊಂಬಾಳೆ ಫಿಲ್ಮ್ಸ್ ಮೂಲಕ ಅಕ್ಟೋಬರ್ 9ಕ್ಕೆ ತೆಲುಗಿನಲ್ಲಿ ರಿಲೀಸ್ ಆಗುತ್ತಿದ್ದು, ತ್ರಿವಿಕ್ರಮ್ ಅವರ ಹೊಸ ಸಿನಿಮಾಗೆ ನೇರ ಸ್ಪರ್ಧೆ ನೀಡಲು ಸಿದ್ಧವಾಗಿದೆ.

‘ಹನುಮಾನ್ ಅಂಶ್’ ಕೈಬಿಟ್ಟ ತ್ರಿವಿಕ್ರಮ್​ಗೆ ಸಂಕಷ್ಟ: ಎದುರಾಳಿಯಾಗಿ ನಿಂತ ಸೂಪರ್ ಹಿಟ್ ಸಿನಿಮಾ
ಹನುಮಾನ್ ಅಂಶ್-ತ್ರಿವಿಕ್ರಮ್

Updated on: Oct 02, 2026 | 2:45 PM

ಮುಖ್ಯಾಂಶಗಳು

  • ₹400 ಕೋಟಿ ಗಳಿಸಿದ ಬ್ಲಾಕ್‌ಬಸ್ಟರ್ ಸಿನಿಮಾ
  • 'ಹನುಮಾನ್ ಅಂಶ್' ತೆಲುಗು ಹಕ್ಕು ಕೈಬಿಟ್ಟ ತ್ರಿವಿಕ್ರಮ್
  • ತಮ್ಮದೇ ಸಿನಿಮಾಗೆ ತಾವೇ ತಂದುಕೊಂಡ್ರ ಕಂಟಕ?

ಚಿಕ್ಕ ಬಜೆಟ್‌ನಲ್ಲಿ ನಿರ್ಮಾಣವಾಗಿ ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಭಕ್ತಿಪ್ರಧಾನ ಸಿನಿಮಾ ‘ಹನುಮಾನ್ ಅಂಶ್’. ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ಮೂಲಕ ಈ ಚಿತ್ರ ಇತಿಹಾಸ ನಿರ್ಮಿಸಿದೆ. ಕೇವಲ 1.75 ರಿಂದ 2 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 380 ರಿಂದ 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಈ ಚಿತ್ರದ ಹಂಚಿಕೆ ಕೈ ಬಿಟ್ಟ ತೆಲುಗು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಂಕಷ್ಟ ಎದುರಿಸಿದ್ದಾರೆ.

ಆರಂಭದಲ್ಲಿ ಈ ಸಿನಿಮಾದ ತೆಲುಗು ಹಕ್ಕುಗಳನ್ನು ತ್ರಿವಿಕ್ರಮ್ ಶ್ರೀನಿವಾಸ್ ಪಡೆದುಕೊಂಡಿದ್ದರು. ತಾವು ಸ್ವತಃ ಈ ಚಿತ್ರವನ್ನು ತೆಲುಗಿನಲ್ಲಿ ಪ್ರಸ್ತುತಪಡಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಆದರೆ ಕೊನೆಯ ಕ್ಷಣದ ದಿಢೀರ್ ಬೆಳವಣಿಗೆಯಲ್ಲಿ ಈ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರೆ. ಸಿನಿಮಾ ಬಿಡುಗಡೆಯನ್ನು ರದ್ದುಗೊಳಿಸಿ, ತೆಲುಗಿನಲ್ಲಿ ಈ ಚಿತ್ರವನ್ನು ರಿಲೀಸ್ ಮಾಡುವ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆ.

ತ್ರಿವಿಕ್ರಮ್ ಹಿಂದೆ ಸರಿದ ಬಳಿಕ ಈ ಚಿತ್ರದ ತೆಲುಗು ಹಕ್ಕುಗಳು ಹೊಂಬಾಳೆ ಫಿಲ್ಮ್ಸ್ ತೆಕ್ಕೆಗೆ ಬಿದ್ದಿವೆ. ‘ಕೆಜಿಎಫ್’, ‘ಸಲಾರ್’ ಹಾಗೂ ‘ಕಾಂತಾರ’ದಂತಹ ದೈತ್ಯ ಸಿನಿಮಾಗಳನ್ನು ನಿರ್ಮಿಸಿದ ಹೆಮ್ಮೆಯ ಹೊಂಬಾಳೆ ಸಂಸ್ಥೆ ಈಗ ‘ಹನುಮಾನ್ ಅಂಶ್’ ಸಿನಿಮಾವನ್ನು ತೆಲುಗು ಪ್ರೇಕ್ಷಕರ ಮುಂದೆ ತರಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇದರಿಂದಾಗಿ ತೆಲುಗು ಚಿತ್ರರಂಗದಲ್ಲೂ ಹನುಮಾನ್ ಅಂಶ್ ಬಿಡುಗಡೆಗೆ ಸಿದ್ಧತೆ ಆರಂಭವಾಗಿವೆ.

ಈಗ ಎಲ್ಲರ ಗಮನ ಸೆಳೆದಿರುವುದು ಈ ಸಿನಿಮಾದ ತೆಲುಗು ರಿಲೀಸ್ ಡೇಟ್. ‘ಹನುಮಾನ್ ಅಂಶ್’ ಸಿನಿಮಾ ಅಕ್ಟೋಬರ್ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷ ಎಂದರೆ ಅದೇ ದಿನ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ವೆಂಕಟೇಶ್ ಕಾಂಬಿನೇಷನ್‌ನ ‘ಆದರ್ಶ ಕುಟುಂಬಮ್ ಎಕೆ 47’ ಸಿನಿಮಾ ಕೂಡ ತೆರೆಕಾಣುತ್ತಿದೆ. ಅಂದರೆ ತ್ರಿವಿಕ್ರಮ್ ಅವರ ಸ್ವಂತ ಸಿನಿಮಾಗೆ ‘ಹನುಮಾನ್ ಅಂಶ್’ ನೇರ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ‘ಹನುಮಾನ್ ಅಂಶ್’ ಯಶಸ್ಸು, ಟಿವಿಗೂ ಬಂತು ಕರೋಲಿ ಬಾಬಾ ಕತೆ

ಕಳೆದ ವಾರದವರೆಗೂ ತ್ರಿವಿಕ್ರಮ್ ಅವರೇ ಪ್ರಸ್ತುತಪಡಿಸಬೇಕಿದ್ದ ಸಿನಿಮಾ, ಈಗ ಅವರದೇ ಹೊಸ ಸಿನಿಮಾಗೆ ಎದುರಾಳಿಯಾಗಿ ನಿಂತಿದೆ. ‘ಆದರ್ಶ ಕುಟುಂಬಮ್’ ಸಿನಿಮಾ ಕುಟುಂಬ ಪ್ರೇಕ್ಷಕರು ಮತ್ತು ಯುವಕರನ್ನು ಗುರಿಯಾಗಿಸಿಕೊಂಡಿದೆ. ಆದರೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿರುವ ಬ್ಲಾಕ್‌ಬಸ್ಟರ್ ‘ಹನುಮಾನ್ ಅಂಶ್’ ಸಿನಿಮಾ ತ್ರಿವಿಕ್ರಮ್ ಹಾಗೂ ಅವರ ತಂಡಕ್ಕೆ ಬಿಗ್ ಶಾಕ್ ನೀಡುವುದಂತೂ ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us