ರಶ್ಮಿಕಾ ಮಾತ್ರವಲ್ಲ ವಿಜಯ್ ದೇವರಕೊಂಡ ಸಹ ‘ತಾಳಿ’ ಕಟ್ಟಿಕೊಂಡಿದ್ದಾರಾ?

Vijay Deverakonda and Rashmika Mandanna: ರಶ್ಮಿಕಾ ಮತ್ತು ವಿಜಯ್ ಅವರ ಮದುವೆಯ ಚಿತ್ರಗಳು ಇನ್​​ಸ್ಟಾಗ್ರಾಂನಲ್ಲಿ ದಾಖಲೆಯನ್ನೇ ಬರೆದವು. ಅವರ ಉಡುಗೆ, ಧರಿಸಿದ್ದ ಆಭರಣಗಳು ಹೊಸ ಟ್ರೆಂಡ್ ಸೃಷ್ಟಿ ಮಾಡಿದವು. ಆಧುನಿಕತೆಯ ಜೊತೆಗೆ ಸಂಪ್ರದಾಯವನ್ನು ಬೆರೆಸಿದ್ದ ಅವರ ಮದುವೆಯ ಚರ್ಚೆಗಳು ವಾರಗಳ ಗಟ್ಟಲೆ ನಡೆದವು. ಇದೀಗ ವಿಜಯ್ ತಮ್ಮ ಪತ್ನಿಯನ್ನು ಅದೆಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿಯನ್ನು ನೆಟ್ಟಿಗರು ಹುಡುಕಿದ್ದಾರೆ.

ರಶ್ಮಿಕಾ ಮಾತ್ರವಲ್ಲ ವಿಜಯ್ ದೇವರಕೊಂಡ ಸಹ ‘ತಾಳಿ’ ಕಟ್ಟಿಕೊಂಡಿದ್ದಾರಾ?
Vijay Rashmika

Updated on: May 27, 2026 | 6:39 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಇದೇ ಫೆಬ್ರವರಿ 26 ರಂದು ಬಲು ಅದ್ಧೂರಿಯಾಗಿ ಮದುವೆಯಾದರು. ಇವರ ಮದುವೆಯ ಚಿತ್ರಗಳು ಇನ್​​ಸ್ಟಾಗ್ರಾಂನಲ್ಲಿ ದಾಖಲೆಯನ್ನೇ ಬರೆದವು. ಅವರ ಉಡುಗೆ, ಧರಿಸಿದ್ದ ಆಭರಣಗಳು ಹೊಸ ಟ್ರೆಂಡ್ ಸೃಷ್ಟಿ ಮಾಡಿದವು. ಆಧುನಿಕತೆಯ ಜೊತೆಗೆ ಸಂಪ್ರದಾಯವನ್ನು ಬೆರೆಸಿದ್ದ ಅವರ ಮದುವೆಯ ಚರ್ಚೆಗಳು ವಾರಗಳ ಗಟ್ಟಲೆ ನಡೆದವು. ಇದೀಗ ವಿಜಯ್ ತಮ್ಮ ಪತ್ನಿಯನ್ನು ಅದೆಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿಯನ್ನು ನೆಟ್ಟಿಗರು ಹುಡುಕಿದ್ದಾರೆ.

ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ವಿಮಾನ ನಿಲ್ದಾಣವೊಂದರಿಂದ ಹೊರಗೆ ಬರುವಾಗ ಅವರ ಫೋಟೊಗಳನ್ನು ಪಾಪರಾಜಿಗಳು ತೆಗೆದಿದ್ದರು. ಈ ವೇಳೆ ವಿಜಯ್ ಕೊರಳಿಗೆ ಧರಿಸಿದ್ದ ಸರವೊಂದು ಗಮನ ಸೆಳೆಯಿತು. ವಿಜಯ್, ತಮ್ಮ ಕೊರಳಿಗೆ ರಶ್ಮಿಕಾರ ಇನಿಷಿಯಲ್ ‘ಆರ್’ ಇರುವ ಲಾಕೆಟ್ ಒಂದನ್ನು ಧರಿಸಿದ್ದರು. ಮದುವೆಗೆ ಮುಂಚೆ ಈ ಲಾಕೆಟ್ ವಿಜಯ್ ಕೊರಳಲ್ಲಿ ಇರಲಿಲ್ಲ. ಆದರೆ ಇತ್ತೀಚೆಗೆ ವಿಜಯ್ ಅವರು ಆರ್ ಲಾಕೆಟ್ ಹೊಂದಿದ ಚೈನ್ ಅನ್ನು ಕೊರಳಿಗೆ ಧರಿಸುತ್ತಿದ್ದಾರೆ. ಪತ್ನಿಯ ಮೇಲಿನ ಪ್ರೀತಿಗೆ ಈ ಲಾಕೆಟ್ ಧರಿಸುತ್ತಿದ್ದಾರೆ ಎನ್ನಲಾಗಿದೆ.

ವಿಜಯ್​​ರ ಚೈನ್ ನೋಡಿದ ನೆಟ್ಟಿಗರು, ‘ಇದು ವಿಜಯ್ ಧರಿಸುತ್ತಿರುವ ತಾಳಿ’ ಎಂದಿದ್ದು, ವಿಜಯ್ ಅವರ ಪ್ರೀತಿಯನ್ನು ಕೊಂಡಾಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಪರಸ್ಪರ ಕೆಲ ವರ್ಷಗಳ ಕಾಲ ಪ್ರೀತಿಸಿ, ವಿವಾಹವಾಗಿದ್ದಾರೆ. ಮದುವೆಗೆ ಮುಂಚೆ ವಿಜಯ್ ಬಗ್ಗೆ ಭಾವುಕವಾಗಿ ಮಾತನಾಡಿದ್ದ ರಶ್ಮಿಕಾ, ‘ವಿಜಯ್ ಅಪರೂಪದ ವ್ಯಕ್ತಿ, ಅವರು ನನ್ನನ್ನು ನನ್ನಂತೆಯೇ ಇರಲು ಬಿಡುತ್ತಾರೆ. ಸಮಾನತೆಗೆ ಬೆಲೆ ಕೊಡುತ್ತಾರೆ’ ಎಂದಿದ್ದರು. ಈಗ ರಶ್ಮಿಕಾ ತಾಳಿ ಧರಿಸಿರುವಾಗ, ತಾವು ರಶ್ಮಿಕಾರ ಹೆಸರಿನ ಲಾಕೆಟ್ ತೊಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಕ್ಯೂಟ್ ವಿಡಿಯೋ ನೋಡಿ

ಮದುವೆಯ ಬಳಿಕ ಇಬ್ಬರೂ ತಮ್ಮ-ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಅವರು ‘ರಣಬಲಿ’ ಹೆಸರಿನ ಸಿನಿಮಾನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ನಟಿಸುತ್ತಿರುವ ಮೂರನೆ ಸಿನಿಮಾ ಇದಾಗಿದೆ. ಇದರ ಹೊರತಾಗಿ ರಶ್ಮಿಕಾ ನಟನೆಯ ‘ಕಾಕ್​ಟೇಲ್ 2’ ಹಿಂದಿ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ‘ಮೈಸಾ’ ಹೆಸರಿನ ಆಕ್ಷನ್ ಹಾರರ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇವುಗಳ ಬಳಿಕ ಮತ್ತೊಂದು ಹಾರರ್ ಹಿಂದಿ ಸಿನಿಮಾನಲ್ಲಿ ರಶ್ಮಿಕಾ ನಟಿಸಲಿದ್ದಾರೆ. ತಮಿಳಿನಲ್ಲಿ ಅಜಿತ್ ಕುಮಾರ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಇನ್ನು ವಿಜಯ್ ದೇವರಕೊಂಡ ಸದ್ಯಕ್ಕೆ ‘ರಣಬಲಿ’ಯಲ್ಲಿ ನಟಿಸುತ್ತಿದ್ದು, ಅದರ ಜೊತೆಗೆ ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us