ನಾನು, ಎಂಜಿಆರ್​ ಗಿಂತಲೂ ಗ್ರೇಟ್ ಎಂದರೇ ವಿಜಯ್: ಹೇಳಿದ್ದೇನು?

Thalapathy Vijay as CM: ತಮಿಳುನಾಡು ಸಿಎಂ ವಿಜಯ್ ತಮ್ಮ ವಿನಯತೆ, ಗಾಂಭೀರ್ಯತೆಯಿಂದಲೂ ಗಮನ ಸೆಳೆಯುತ್ತಿದ್ದಾರೆ. ಇದೆಲ್ಲ ಇರುವಾಗ ಇದೀಗ ವಿಜಯ್ ನೀಡಿರುವ ಹೇಳಿಕೆ ಖುದ್ದು ಅವರ ಅಭಿಮಾನಿಗಳಿಗೇ ಇರುಸು-ಮುರುಸು ಉಂಟು ಮಾಡಿದೆ. ವಿನಯದಿಂದ ವರ್ತಿಸುವ ವಿಜಯ್, ತಮ್ಮನ್ನು ತಮಿಳು ಚಿತ್ರರಂಗದ ದಿಗ್ಗಜ, ಎಂಜಿಆರ್​​ ಜೊತೆಗೆ ಹೋಲಿಸಿಕೊಂಡಿರುವುದು ಮಾತ್ರವಲ್ಲ, ಪರೋಕ್ಷವಾಗಿ ತಾವು ಎಂಜಿಆರ್​​ಗಿಂತಲೂ ಗ್ರೇಟ್ ಎಂದಿದ್ದಾರೆ.

ನಾನು, ಎಂಜಿಆರ್​ ಗಿಂತಲೂ ಗ್ರೇಟ್ ಎಂದರೇ ವಿಜಯ್: ಹೇಳಿದ್ದೇನು?
Thalapathy Vijay Mgr

Updated on: Jun 02, 2026 | 12:50 PM

ವಿಜಯ್ (Vijay) ತಮಿಳುನಾಡಿನ ಸಿಎಂ ಆಗಿ ಇತಿಹಾಸ ಬರೆದಿದ್ದಾರೆ. ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಅವರಿಗೆ ವಿಜಯ್ ಧಕ್ಕಿದೆ. ಸಿಎಂ ಆದಬಳಿಕವೂ ಕೆಲ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಂಡು ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದಾರೆ. ವಿಜಯ್ ತಮ್ಮ ವಿನಯತೆ, ಗಾಂಭೀರ್ಯತೆಯಿಂದಲೂ ಗಮನ ಸೆಳೆಯುತ್ತಿದ್ದಾರೆ. ಇದೆಲ್ಲ ಇರುವಾಗ ಇದೀಗ ವಿಜಯ್ ನೀಡಿರುವ ಹೇಳಿಕೆ ಖುದ್ದು ಅವರ ಅಭಿಮಾನಿಗಳಿಗೇ ಇರುಸು-ಮುರುಸು ಉಂಟು ಮಾಡಿದೆ. ವಿನಯದಿಂದ ವರ್ತಿಸುವ ವಿಜಯ್, ತಮ್ಮನ್ನು ತಮಿಳು ಚಿತ್ರರಂಗದ ದಿಗ್ಗಜ, ಎಂಜಿಆರ್​​ ಜೊತೆಗೆ ಹೋಲಿಸಿಕೊಂಡಿರುವುದು ಮಾತ್ರವಲ್ಲ, ಪರೋಕ್ಷವಾಗಿ ತಾವು ಎಂಜಿಆರ್​​ಗಿಂತಲೂ ಗ್ರೇಟ್ ಎಂದಿದ್ದಾರೆ.

ಮುಖ್ಯಮಂತ್ರಿ ವಿಜಯ್ ಸಿಎಂ ಆದ ಬಳಿಕ ನಿನ್ನೆ (ಸೋಮವಾರ) ತಿರುಚಿರಾಪಳ್ಳಿಯಲ್ಲಿ ತಮ್ಮ ಮೊದಲ ಸಾರ್ವಜನಿಕ ರ್‍ಯಾಲಿ ನಡೆಸಿದರು. ಅಲ್ಲಿ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಗೆಲ್ಲಿಸಿದ್ದಕ್ಕೆ ಜನರಿಗೆ ಧನ್ಯವಾದ ಅರ್ಪಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ವಿರೋಧಿಗಳ ಲೇವಡಿ ಮಾಡಿದರು. ವಿರೋಧಿಗಳು ಮೊದಲ ಆರು ತಿಂಗಳು ಪರಿಸ್ಥಿತಿಯನ್ನು ಗಮನಿಸುವುದಾಗಿ ಹೇಳಿದ್ದರು, ಆದರೆ ಅವರಿಂದ 6 ದಿನಗಳೂ ಸಹ ಸುಮ್ಮನಿರಲು ಸಾಧ್ಯವಾಗಲಿಲ್ಲ ಎಂದು ಅವರು ಪರೋಕ್ಷವಾಗಿ ಮಾಜಿ ಸಿಎಂ ಸ್ಟಾಲಿನ್ ಅವರಿಗೆ ಟಾಂಗ್ ನೀಡಿದರು.

ತಮಿಳುನಾಡು ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ ಅವರು, ‘ದಿವಂಗತ, ಮಾಜಿ ಸಿಎಂ ಎಂಜಿಆರ್ ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆದಿರಲಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಆದರೂ ಇಂದು ನೀವು ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಇಷ್ಟೊಂದು ಭಾರಿ ಬೆಂಬಲವನ್ನು ನೀಡಿದ್ದೀರಿ. ನಾನು ನನ್ನನ್ನು ಎಂಜಿಆರ್ ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಎಂಜಿಆರ್; ಎಂಜಿಆರ್ ಅವರೇ, ಆದರೆ ನಾನು ನಿಮ್ಮ ವಿಜಯ್. ಎಂಜಿಆರ್, ಅಣ್ಣಾ ಮತ್ತು ಪೆರಿಯಾರ್ ಅವರು ತೋರಿಸಿದ ಹಾದಿಯಲ್ಲಿ ಕೆಲಸ ಮಾಡಲು ನಾನು ಬಂದಿದ್ದೇನೆ’ ಎಂದರು.

ಇದನ್ನೂ ಓದಿ:ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ವಿಜಯ್; ಕಾರಣ ಬೇರೆಯೇ ಇದೆ

ಎಂಜಿಆರ್ ಅವರು ಜೂನ್ 30, 1977 ರಿಂದ ಡಿಸೆಂಬರ್ 24, 1987 ರಲ್ಲಿ ತಮ್ಮ ನಿಧನದವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಭಾರತದಲ್ಲಿ ಮುಖ್ಯಮಂತ್ರಿಯಾದ ಮೊದಲ ಚಲನಚಿತ್ರ ನಟರಾಗಿದ್ದರು. ದಕ್ಷಿಣದಲ್ಲಿ ಸಿನಿಮಾ ನಟರು ಚುನಾವಣೆಗೆ ಧುಮುಕುವ ಪದ್ಧತಿಗೆ ಚಾಲನೆ ಕೊಟ್ಟವರು ಅವರೇ.

ಕಳೆದ ತಿಂಗಳು ನಡೆದ ತಮಿಳುನಾಡು ಚುನಾವಣೆ ಮತ ಎಣಿಕೆಯಲ್ಲಿ, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ರಾಜಕೀಯ ಮೈಲಿಗಲ್ಲು ಸೃಷ್ಟಿಸಿ ಸರ್ಕಾರವನ್ನು ರಚಿಸಿತು. ಈ ಚುನಾವಣೆಯಲ್ಲಿ ಟಿವಿಕೆ ನಾಯಕ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಜಯ ದಾಖಲಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us