ಚಹಾವನ್ನು ಮತ್ತೆ ಮತ್ತೆ ಕುದಿಸಿ ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?

|

Updated on: Oct 16, 2023 | 4:47 PM

ಒಮ್ಮೆ ಮಾಡಿಟ್ಟ ಚಹಾವನ್ನು 4 ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟು ನಂತರ ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ, ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ನಿಮಗಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

ಚಹಾವನ್ನು ಮತ್ತೆ ಮತ್ತೆ ಕುದಿಸಿ ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
ಚಹಾ
Image Credit source: iStock
Follow us on

ಚಹಾ ಮತ್ತು ಕಾಫಿ ಎರಡೂ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಪಾನೀಯಗಳಾಗಿವೆ. ಚಹಾವು ಭಾರತದಲ್ಲಿ ಅತ್ಯಂತ ಪ್ರಿಯವಾದ ಬಿಸಿ ಪಾನೀಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ ಒಮ್ಮೆಯಾದರೂ ಚಹಾವನ್ನು ಕುಡಿಯುತ್ತಾನೆ. ಆದರೆ, ಒಮ್ಮೆ ಮಾಡಿಟ್ಟ ಚಹಾವನ್ನು 4 ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟು ನಂತರ ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ, ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ನಿಮಗಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

ಟೀಯನ್ನು ಮತ್ತೆ ಮತ್ತೆ ಯಾಕೆ ಬಿಸಿ ಮಾಡಿ ಕುಡಿಯಬಾರದು?:

1. ಬ್ಯಾಕ್ಟೀರಿಯಾದ ಬೆಳವಣಿಗೆ:

ಒಮ್ಮೆ ಕುದಿಸಿ ಇಟ್ಟಿರುವ ಚಹಾದಲ್ಲಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಇದು ಕೆಲವು ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ.

2. ಫುಡ್​ ಪಾಯ್ಸನ್ ಸಾಧ್ಯತೆ:

ಚಹಾದಲ್ಲಿನ ಬ್ಯಾಕ್ಟೀರಿಯಾಗಳು ಅದರಲ್ಲೂ ವಿಶೇಷವಾಗಿ ಹಾಲು ಹಾಕಿ ಮಾಡಿದ ಚಹಾದಲ್ಲಿರುವ ಬ್ಯಾಕ್ಟೀರಿಯಾಗಳು ಫುಡ್ ಪಾಯ್ಸನ್ ಉಂಟುಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಹುಣಸೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಕೆಟ್ಟೀತು ಎಚ್ಚರ!

3. ಪೋಷಕಾಂಶಗಳ ನಷ್ಟ:

ಹರ್ಬಲ್ ಟೀಯನ್ನು ಮತ್ತೆ ಬಿಸಿ ಮಾಡಿದಾಗ ಅದರ ಪೋಷಕಾಂಶಗಳು ಮತ್ತು ಖನಿಜಗಳನ್ನು ಕಳೆದುಕೊಳ್ಳುತ್ತದೆ. ಸಾರಭೂತ ತೈಲಗಳು ಮತ್ತು ಪ್ರಯೋಜನಕಾರಿ ಸಂಯುಕ್ತಗಳು ನಾಶವಾಗುತ್ತವೆ. ಮತ್ತೆ ಬಿಸಿಮಾಡಿದ ಚಹಾ ಕಡಿಮೆ ಪೌಷ್ಟಿಕಾಂಶವನ್ನು ಹೊಂದಿರುತ್ತದೆ.

4. ಹೊಟ್ಟೆಯ ಸಮಸ್ಯೆಗಳು:

ನಿರಂತರವಾಗಿ ಮತ್ತೆ ಮತ್ತೆ ಚಹಾವನ್ನು ಬಿಸಿ ಮಾಡುವುದರಿಂದ ಹೊಟ್ಟೆಯ ಸಮಸ್ಯೆ, ಅತಿಸಾರ, ಹೊಟ್ಟೆ ಉಬ್ಬುವುದು, ವಾಕರಿಕೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಚಹಾದ ದೀರ್ಘಕಾಲದ ಶೇಖರಣೆಯು ಹೆಚ್ಚುವರಿ ಟ್ಯಾನಿನ್ ಬಿಡುಗಡೆಗೆ ಕಾರಣವಾಗುತ್ತದೆ, ಇದು ಕಹಿ ರುಚಿಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ನಿಮ್ಮ ದಿನವನ್ನು ಬ್ಲಾಕ್ ಟೀ ಜೊತೆ ಪ್ರಾರಂಭಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ?

ಟೀ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ. ಹಲವಾರು ಅಧ್ಯಯನಗಳ ಪ್ರಕಾರ, ಚಹಾ ಮಾಡಲು ಬಳಸುವ ಟೀ ಪೌಡರ್ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಕಪ್ ಟೀ ಕುಡಿಯುವುದರಿಂದ ರಕ್ತದೊತ್ತಡದ ಪ್ರಮಾಣ ಕೊಂಚ ಕಡಿಮೆ ಆಗುತ್ತದೆ. ಇದು ಹೃದ್ರೊಗದ ಪ್ರಮಾಣವನ್ನು ಶೇ. 11ರಷ್ಟು ಕುಂಠಿತಗೊಳಿಸುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ.

ಹೃದಯದ ಆರೋಗ್ಯದ ಮೇಲೆ ಟೀಯ ನೇರ ಪ್ರಮಾಣ ಏನೆಂಬುದರ ಬಗ್ಗೆ ಇನ್ನೂ ಯಾವ ಅಧ್ಯಯನವನ್ನೂ ಮಾಡಿಲ್ಲ. ಟೀಯನ್ನು ಹಸುವಿನ ಹಾಲು ಅಥವಾ ಸೋಯಾ ಹಾಲಿನಿಂದ ತಯಾರಿಸಲಾಗುತ್ತದೆ. ಅವೆರಡೂ ಪ್ರೋಟೀನಿನಿಂದ ಕೂಡಿರುತ್ತದೆ. ಪ್ರೊಟೀನ್ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುವ ಪೋಷಕಾಂಶವಾಗಿದೆ. ನಿದ್ರೆಯನ್ನು ನಿಯಂತ್ರಿಸಲು ಕೂಡ ಚಹಾ ಸಹಕಾರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ