ಪ್ರತ್ಯೇಕತೆಯ ಆತಂಕವು ಕಾಳಜಿ, ಚಿಂತೆ, ಭಯ ಅಥವಾ ಭೀತಿಯ ರೂಪದಲ್ಲಿ ವ್ಯಕ್ತವಾಗುವ ವಿಶಿಷ್ಟ ಭಾವನೆಯಾಗಿದೆ. ಇದು ದೂರವಿರುವುದು, ವ್ಯಕ್ತಿಯಿಂದ ಬೇರ್ಪಡುವುದು ಅಥವಾ ಕಳೆದುಕೊಳ್ಳುವುದು. ಇದು ಪೋಷಕರಾಗಿರಬಹುದು, ಸಂಗಾತಿ, ವ್ಯಕ್ತಿ, ಮಕ್ಕಳು, ಸಾಕು ಪ್ರಾಣಿಯಾಗಿರಬಹುದು, ಕೆಲವು ಸಂದರ್ಭಗಳಲ್ಲಿ ಅದು ಹುಟ್ಟಿದ ಸ್ಥಳ ಅಥವಾ ವಸ್ತುಗಳಾಗಿರಬಹುದು.ಪ್ರತ್ಯೇಕತೆಯ ಆತಂಕವನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಎಚ್ಟಿ ಲೈಫ್ ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ, ಪಿಎಚ್ಡಿ ಎಂಎಸ್ಡಬ್ಲ್ಯೂ, ಪಿಎಚ್ಡಿ ಎಂಎಸ್ಡಬ್ಲ್ಯೂ, ಲೊಯೊಲಾ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಥಿಂಕ್ ವುಮೆನ್ ಕಂಪನಿಯ ಸ್ಥಾಪಕಿ ಶ್ವೇತಾ ಸಿಂಗ್, “ಸಂಘರ್ಷಗಳು ಹಲವಾರು ಕಾರಣಗಳಿಗಾಗಿ ಸಂಭವಿಸುತ್ತವೆ. ಅಲ್ಲದೆ, ಕೆಲವೊಮ್ಮೆ ಎಲ್ಲರ ಮೌಲ್ಯಗಳು, ಆಲೋಚನೆ ವಿಭಿನ್ನವಾಗಿರುತ್ತದೆ. ಎಲ್ಲಕಿಂತ ದೃಷ್ಟಿಕೋನ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಸಂಬಂಧಗಳ ನಡುವಿನ ಬಿರುಕು ಮನಸ್ಸುಗಳನ್ನು ಬೇರ್ಪಡಿಸಿ ಬಿಡುತ್ತವೆ. ಹಾಗಾಗಿ ವಿವೇಚನೆಯಿಂದ ಸಂಘರ್ಷಗಳನ್ನು ಪರಿಹರಿಸಬೇಕು. ಬಗೆಹರಿಸದ ಸಂಘರ್ಷಗಳು ಸಂಬಂಧದ ಪ್ರತ್ಯೇಕತೆ ಮತ್ತು ವಿಚ್ಛೇದನಗಳಿಗೆ ಕಾರಣವಾಗಬಹುದು.
ಸಂಬಂಧದಲ್ಲಿನ ಬಿರುಕು ಕೆಲವರಲ್ಲಿ ಅಸುರಕ್ಷಿತ ಭಾವನೆಯನ್ನು ಉಂಟುಮಾಡುತ್ತದೆ, ಇದನ್ನು ನಿಭಾಯಿಸುವುದು ಸುಲಭವಲ್ಲ. ಅವರ ಆತ್ಮಗೌರವಕ್ಕೆ ಹೊಡೆತ ಬೀಳುತ್ತದೆ, ಮನಸ್ಸು ನಕಾರಾತ್ಮಕತೆಯಿಂದ ತುಂಬಿ ಹೋಗುತ್ತದೆ. ಜೊತೆಗೆ ಅದನ್ನು ವ್ಯಕ್ತಪಡಿಸಲು ಅಸಮರ್ಥತೆ ಕೋಪವಾಗಿ ಪ್ರಕಟವಾಗುತ್ತದೆ. ದೇಹದ ಮೂಲಭೂತ ಅಗತ್ಯಗಳಂತೆ, ಭಾವನಾತ್ಮಕ ನೆರವೇರಿಕೆಯು ಸಹ ಅತ್ಯಗತ್ಯ. ಜನರು ಆ ಸಂತೃಪ್ತಿಯ ಪ್ರಜ್ಞೆಯನ್ನು ಕಳೆದುಕೊಂಡಾಗ, ಪ್ರತ್ಯೇಕತೆಯ ಆತಂಕಕ್ಕೂ ಕಾರಣವಾಗುತ್ತದೆ.
ಕಾಲಾನಂತರದಲ್ಲಿ ಸಂಬಂಧವು ವಿಕಸನಗೊಳ್ಳಬಹುದು. ಹಾಗಾಗಿ ಸಂಬಂಧ ಪ್ರಾರಂಭಿಸಿದಾಗಲೇ, ನಾವು ಸಮಸ್ಯೆಗಳನ್ನು ನಿರೀಕ್ಷಿಸಬೇಕು, ಇದರಿಂದ ಸಂಬಂಧದಲ್ಲಿ ಉದ್ಭವಿಸುವ ಪ್ರತ್ಯೇಕತೆಯ ಆತಂಕವನ್ನು ನಿಭಾಯಿಸುವುದು ಸುಲಭಗೊಳ್ಳುತ್ತದೆ. ಇಲ್ಲದಿದ್ದರೆ ಸಮಸ್ಯೆಗಳು ಅಗಾಧವಾಗಬಹುದು. ಯಾರ ಜೀವನದಲ್ಲಿಯೂ ಪರಿಪೂರ್ಣತೆ ಎನ್ನುವುದು ಇಲ್ಲ. ಹಾಗಾಗಿ ಬದುಕಿನ ಪ್ರಯಾಣವು ವಿಭಿನ್ನ ರೀತಿಯ ಸಂಬಂಧದ ಆವಿಷ್ಕಾರ ಮತ್ತು ನವೀಕರಣದ ರೇಖೆಯಾಗಬಹುದು. ಯಾವಾಗಲೂ ಮುಕ್ತ ಮನಸ್ಸುನ್ನು ಹೊಂದಿರುವವರಲ್ಲಿ ಸಂಘರ್ಷ ಕಡಿಮೆಯಾಗುತ್ತದೆ. ದಿನನಿತ್ಯದ ಜೀವನ ಸುಖವಾಗಿರುತ್ತದೆ.
ಇದನ್ನೂ ಓದಿ: ನಿಮ್ಮ ಈ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು
ಮಕ್ಕಳ ಮನಶ್ಶಾಸ್ತ್ರಜ್ಞೆ ಮತ್ತು ಕೆಎಲ್ಎಐ ಸೆಂಟರ್ ಫಾರ್ ಚೈಲ್ಡ್ ಡೆವಲಪ್ಮೆಂಟ್ ಅಂಡ್ ಕೇರ್ನ ತರಬೇತಿ ಮತ್ತು ಅಭಿವೃದ್ಧಿಯ ಸಲಹಾ ಮುಖ್ಯಸ್ಥರಾದ ಮೇಘನಾ ಯಾದವ್, “ಚಿಕ್ಕ ಮಕ್ಕಳಲ್ಲಿ ಪ್ರತ್ಯೇಕತೆಯ ಆತಂಕ ಸಾಮಾನ್ಯವಾಗಿದೆ. ವಿಶೇಷವಾಗಿ ಅವರು ಶಾಲೆಗೆ ಹೋಗಲು ಪ್ರಾರಂಭಿಸುವಾಗ ಅಥವಾ ದೀರ್ಘ ಬೇಸಿಗೆ ರಜೆಯ ನಂತರ ಡೇಕೇರ್ಗೆ ಹಾಜರಾಗುವಾಗ ಈ ರೀತಿಯ ಅನುಭವವಾಗುತ್ತದೆ. ಮೊದಲಿಗೆ ಇದು ಮಕ್ಕಳಿಗೆ ಮಾತ್ರವಲ್ಲದೆ ಪೋಷಕರಿಗೂ ತುಂಬಾ ಒತ್ತಡವನ್ನುಂಟು ಮಾಡುತ್ತದೆ ಎಂಬ ಅಂಶವನ್ನು ಪೋಷಕರು ತಿಳಿದಿರಬೇಕು. ಈ ಸ್ವೀಕಾರವು ಪೋಷಕರಿಗೆ ಆತಂಕವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ಈ ಭಾವನೆಗಳನ್ನು ನಿರ್ವಹಿಸುವಲ್ಲಿ ತಮ್ಮ ಮಕ್ಕಳನ್ನು ಬೆಂಬಲಿಸಲು ಸಾಧ್ಯವಾಗುತ್ತದೆ. ಹಾಗಾಗಿ ಮುಂಬರುವ ಬದಲಾವಣೆಗಳ ಬಗ್ಗೆ ಮಗುವಿನೊಂದಿಗೆ ಮುಕ್ತ ಸಂವಹನವು, ಅವರನ್ನು ಮುಂಚಿತವಾಗಿ ಶಾಲೆಗೆ ಸಿದ್ಧಪಡಿಸಲು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ಕಾಲಾನಂತರದಲ್ಲಿ ನಿರಂತರ ಪುನರಾವರ್ತನೆ, ಅಂತಿಮವಾಗಿ ಶಾಲೆಗೆ ಮರಳಲು ಕಾರಣವಾಗುತ್ತದೆ.
ಮೈಂಡ್ ಆಲ್ಕೋವ್ನ ಸ್ಥಾಪಕ ಶುಭಾಂಗಿ ರಸ್ತೋಗಿ, “ವಿಶೇಷವಾಗಿ ವಯಸ್ಕರಲ್ಲಿ, ಕಾಲೇಜಿಗೆ ಹೋಗುವುದು, ಅಥವಾ ಆದ್ಯತೆಯ ನಗರ, ಹೊಸ ಉದ್ಯೋಗ, ಮದುವೆಯ ನಂತರ ಹೊಂದಾಣಿಕೆ, ಮಗುವನ್ನು ಹೊಂದುವುದು, ಪ್ರಣಯ ಸಂಗಾತಿಯಿಂದ ಬೇರ್ಪಡುವುದು ಅಥವಾ ಮದುವೆ, ಸ್ನೇಹ ಅಥವಾ ಸಂಬಂಧವನ್ನು ಮುರಿದುಕೊಳ್ಳುವುದು ಮುಂತಾದ ದೊಡ್ಡ ದೊಡ್ಡ ಜೀವನದ ಬದಲಾವಣೆಗಳಿಂದ ಭಯ ಅಥವಾ ಭೀತಿ ಉಂಟಾಗಬಹುದು. ಇದರಿಂದ ತಲೆನೋವು, ವಾಕರಿಕೆ, ಹೃದಯ ಬಡಿತ, ಅತಿಯಾದ ಬೆವರುವಿಕೆ, ಸಾವು ಅಥವಾ ನರ ಶಕ್ತಿಯಿಂದ ಹಿಡಿದು ದೈಹಿಕ ರೋಗಲಕ್ಷಣಗಳು ಈ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದು ನಿದ್ರೆ, ಸಾಮಾಜಿಕ ಜೀವನ ಮತ್ತು ಕೆಲಸದ ಮೇಲೆ ಪರಿಣಾಮ ಬೀರಬಹುದು.
ನಿಮ್ಮ ಮೇಲೆ ಮತ್ತು ಪ್ರಕ್ರಿಯೆಯಲ್ಲಿ ನಂಬಿಕೆ ಇಡುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಮತ್ತು ನಿಮಗೆ ವಿಷಯಗಳನ್ನು ಆರಾಮದಾಯಕವಾಗಿಡಲು ಕೆಲವು ವ್ಯವಸ್ಥೆಗಳನ್ನು ರಚಿಸಿಕೊಂಡ ನಂತರ, ನಂಬಿಕೆಇಟ್ಟುಕೊಂಡು ನಿಮ್ಮ ಕೆಲಸವನ್ನು ಶಾಂತಿಯುತ ರೀತಿಯಲ್ಲಿ ಮುಂದುವರಿಸಿ. ಪ್ರೀತಿ ಪಾತ್ರರನ್ನು ತೊರೆಯುವಾಗ ಆತಂಕಕ್ಕೊಳಗಾಗುವುದು ಸಾಮಾನ್ಯ ಭಾವನೆಯಾಗಿದೆ. ಆ ಆರಾಮ ವಲಯದಿಂದ ಹೊರಬರುವುದು ಮತ್ತು ಆತಂಕವನ್ನು ಎದುರಿಸಲು ಗಟ್ಟಿ ಮನಸ್ಸು ಮಾಡಿಕೊಳ್ಳುವುದು ನಿಮ್ಮ ಬದುಕಿಗೊಂದು ಅರ್ಥ ನೀಡುತ್ತದೆ. ಇದೆಲ್ಲದರ ಬಳಿಕ ನಿಮ್ಮ ದೈನಂದಿನ ದಿನಚರಿ ಶಾಂತ ರೀತಿಯಲ್ಲಿ ನಡೆಸುವುದು ಸುಲಭವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:05 pm, Wed, 31 May 23