Lungs: ಶ್ವಾಸಕೋಶ ಕಾಯಿಲೆಗಳ ಲಕ್ಷಣಗಳೇನು? ಇಲ್ಲಿವೆ ನೋಡಿ

| Updated By: sandhya thejappa

Updated on: Sep 25, 2021 | 1:18 PM

ಶ್ವಾಸಕೋಶ ಕಾಯಿಲೆಗಳಿಗೆ ಸಂಬಂಧಿಸಿದ ಕೆಲ ಲಕ್ಷಣಗಳನ್ನು ಪೌಷ್ಟಿಕ ತಜ್ಞರಾದ ಲವ್​ನೀತ್ ಬಾತ್ರಾರವರು ಇನ್ಟ್ಸಾಗ್ರಾಮ್​ನಲ್ಲಿ ತಿಳಿಸಿದ್ದಾರೆ.

Lungs: ಶ್ವಾಸಕೋಶ ಕಾಯಿಲೆಗಳ ಲಕ್ಷಣಗಳೇನು? ಇಲ್ಲಿವೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಯಾವುದೇ ಆರೋಗ್ಯ ಸಮಸ್ಯೆಗಳು ಗಂಭೀರವಾಗುವ ತನಕ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಆರಂಭದ ಹಂತದಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ತೆಗೆದುಕೊಳ್ಳಬೇಕು. ಸೂಕ್ತ ಪರಿಹಾರ ಪಡೆಯಬೇಕು. ಅದರಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇದರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳು ತಕ್ಷಣ ಗಮನಕ್ಕೆ ಬರುವುದಿಲ್ಲ. ಇದರಿಂದ ರೋಗ ಗಂಭೀರವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಶ್ವಾಸಕೋಶ ಕಾಯಿಲೆಗಳಿಗೆ ಸಂಬಂಧಿಸಿದ ಕೆಲ ಲಕ್ಷಣಗಳನ್ನು ಪೌಷ್ಟಿಕ ತಜ್ಞರಾದ ಲವ್​ನೀತ್ ಬಾತ್ರಾರವರು ಇನ್ಟ್ಸಾಗ್ರಾಮ್​ನಲ್ಲಿ ತಿಳಿಸಿದ್ದಾರೆ.

* ಎದೆ ನೋವು
ಬಹಳಷ್ಟು ಜನರು ಎದೆ ನೋವಿನೊಂದಿಗೆ ಬಳಲುತ್ತಿರುತ್ತಾರೆ. ಇದು ಮಾಮುಲಿ ಇದ್ದಿದ್ದೆ ಅಂತ ಹಲವರು ನಿರ್ಲಕ್ಷಿಸುತ್ತಾರೆ. ಆದರೆ ಎದೆ ನೋವು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಇರುತ್ತದೆ. ಉಸಿರಾಡುವಾಗ ಅಥವಾ ಕೆಮ್ಮುವಾಗ ಎದೆ ನೋವು ಹೆಚ್ಚಾದರೆ ಇದು ಶ್ವಾಸಕೋಶ ಕಾಯಿಲೆಗಳ ಲಕ್ಷಣವಾಗಿದೆ ಎಂದು ತಿಳಿದುಕೊಳ್ಳಬೇಕು.

* ಹೆಚ್ಚು ಕಫ
ಕಫ ಇದ್ದರೆ ಉಸಿರಾಡುವುದು ಕಷ್ಟ. ಅತಿಯಾದ ಕಫ ಇದ್ದರೆ ಉಸಿರಾಡುವಾಗ ಒಂದು ರೀತಿಯ ಗೊರ ಗೊರ ಶಬ್ದ ಕೇಳಿ ಬರುತ್ತದೆ. ಶೀತವಾದಾಗ ಕಫ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಶೀತ ಒಂದು ವಾರ ಇರುತ್ತದೆ. ಆದರೆ ಕಫ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿದ್ದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಲಕ್ಷಣವನ್ನು ಸೂಚಿಸುತ್ತದೆ.

* ತೂಕ ನಷ್ಟ
ಡಯಟ್ ಅಥವಾ ವರ್ಕೌಟ್ ಮಾಡದೇ ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದು ಅನಾರೋಗ್ಯದ ಲಕ್ಷಣವನ್ನು ಸೂಚಿಸುತ್ತದೆ.

* ಉಸಿರಾಟದಲ್ಲಿ ಬದಲಾವಣೆ
ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲವೆಂದರೆ ಅದು ಶ್ವಾಸಕೋಶ ಕಾಯಿಲೆಗಳ ಲಕ್ಷಣ ಆಗಿದೆ ಎಂದರ್ಥ.

* ಕೆಮ್ಮಿನ ಜೊತೆಗೆ ರಕ್ತ
ಎರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಯವರೆಗೆ ಕೆಮ್ಮಿದ್ದರೆ ಅದು ದೀರ್ಘಕಾಲದ ಕೆಮ್ಮು ಅಂತ ಪರಿಗಣಿಸಲಾಗುತ್ತದೆ. ಕೆಮ್ಮಿನ ಜೊತೆಗೆ ರಕ್ತವೂ ಬಂದರೆ ಶ್ವಾಸಕೋಶ ಕಾಯಿಲೆಗಳ ಲಕ್ಷಣವಾಗಿರುತ್ತದೆ. ಹೀಗಾಗಿ ತಡ ಮಾಡದೆ ವೈದ್ಯರ ಸಲಹೆ ಪಡೆಯಬೇಕು.

ಈ ಮೇಲಿನ ಲಕ್ಷಣಗಳು ಕಂಡುಬಂದರೆ ಲಘುವಾಗಿ ಪರಿಗಣಿಸದೆ ತಕ್ಷಣ ವೈದ್ಯರ ಮೊರೆ ಹೋಗಿ, ಅಗತ್ಯವಿರುವ ಚಿಕಿತ್ಸೆ ಪಡೆದುಕೊಳ್ಳಿ. ಆಗ ಮಾತ್ರ ಶ್ವಾಸಕೋಶ ಕಾಯಿಲೆಗಳು ಗಂಭೀರ ಮಟ್ಟಕ್ಕೆ ಹೋಗುವುದನ್ನು ತಡೆಗಟ್ಟಬಹುದು.

ಇದನ್ನೂ ಓದಿ

Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ

Vastu Tips: ಅಡುಗೆ ಮನೆಯಲ್ಲಿ ಈ ನಾಲ್ಕು ವಸ್ತುಗಳು ಖಾಲಿಯಾದರೆ ಹಣಕ್ಕೆ ಕೊರತೆ ಎದುರಾಗುತ್ತದೆ, ಎಚ್ಚರವಿರಲಿ!

(Lung health Tips here are some warning signs you should not ignore Symptoms of Lungs Diseases details in Kannada)

Published On - 1:18 pm, Sat, 25 September 21