ಈ ಕಾರಣಕ್ಕೆ ನೀವು ಪ್ರತಿದಿನ ಮರ ಸೇಬು ಹಣ್ಣನ್ನು ಸೇವಿಸಬೇಕು

| Updated By: Pavitra Bhat Jigalemane

Updated on: Feb 23, 2022 | 10:28 AM

ಒಂದು ಮರ ಸೇಬು ಹಣ್ಣಿನಲ್ಲಿ ಸರಿಸುಮಾರು 22 ಗ್ರಾಂನಷ್ಟು ಫೈಬರ್​ ಅಂಶವಿರುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಮರ ಸೇಬು ಹಣ್ಣು ಅತೀ ಅಗತ್ಯವಾದ ಹಣ್ಣು ಎಂದು ಹೇಳಬಹುದು.

ಈ ಕಾರಣಕ್ಕೆ ನೀವು ಪ್ರತಿದಿನ ಮರ ಸೇಬು ಹಣ್ಣನ್ನು ಸೇವಿಸಬೇಕು
ಮರಸೇಬು
Follow us on

ದೇಹದ ಆರೋಗ್ಯ ಉತ್ತಮವಾಗಲು ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ.  ಸಮೃದ್ಧವಾದ  ಪೌಷ್ಟಿಕಾಂಶ ಮತ್ತು ದೇಹಕ್ಕೆ ಬೇಕಾದ ಪ್ರೋಟೀನ್​ ಅಂಶಗಳನ್ನು ನೀಡುತ್ತವೆ. ಅಂತಹ ಹಣ್ಣುಗಳಲ್ಲಿ ಮರ ಸೇಬು ಹಣ್ಣು ಕೂಡ ಒಂದು. ಸುಲಭವಾಗಿ ಸಿಗುವ ಮರ ಸೇಬು ಹಣ್ಣುಗಳಲ್ಲಿ ಯಥೇಚ್ಛವಾದ ಫೈಬರ್​ ಅಂಶ ಅಡಕವಾಗಿದೆ. ಅದೇ ರೀತಿ ಕೊಕೋ ಮತ್ತು ಸೇಬುಹಣ್ಣುಗಳಲ್ಲಿರುವ ಕ್ಯಾಟೆಷಿನ್​ಗಳು ಮರ ಸೇಬು ಹಣ್ಣಿನಲ್ಲಿವೆ. ಇವು ದೇಹವನ್ನು ಸುರಕ್ಷಿತವಾಗಿಡುತ್ತವೆ. ಇನ್ನೂ ಮುಖ್ಯವಾಗಿ ದೇಹದ ತೂಕ ಇಳಿಕೆಗೆ ಇದು ಸಹಾಯಕ ಏಕೆಂದರೆ ಮರ ಸೇಬು ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಅಂಶವಿದೆ. ಹೀಗಾಗಿ ಡಯೆಟ್​ ಆಹಾರಕ್ಕೆ ಇದು ಅತಿ ಮುಖ್ಯವಾಗಿದೆ. ಮರ ಸೇಬುವಿನಲ್ಲಿ ಫೈಬರ್​, ಕಾರ್ಬೋಹೈಡ್ರೇಟ್ಸ್​, ವಿಟಮಿನ್​ ಸಿ, ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಸೇರಿದಂತೆ ದೇಹಕ್ಕೆ ಅಗತ್ಯವಾದ ಅಂಶಗಳನ್ನು ಪೂರೈಸುತ್ತದೆ. ಮರ ಸೇಬುವಿನಿಂದ ಮತ್ತಿನ್ನಿನೇನು ಪ್ರಯೋಜನಗಳಿವೆ ಎಂದು ಇಲ್ಲಿದೆ ನೋಡಿ ಮಾಹಿತಿ.

ಕರುಳಿನ ಆರೋಗ್ಯ:
ಮರ ಸೇಬು ಹಣ್ಣು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಪ್ರತಿದಿನ ಒಂದುಮರ ಸೇಬು ಹಣ್ಣು ಸೇವಿಸಿ. ಮರ ಸೇಬು ಹಣ್ಣು ಜೀರ್ಣ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜತೆಗೆ ಇದರಲ್ಲಿನ ಫೈಬರ್​ ಅಂಶಗಳು ಕರುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ, ಒಂದು ಮರ ಸೇಬು ಹಣ್ಣಿನಲ್ಲಿ ಸರಿಸುಮಾರು 22 ಗ್ರಾಂನಷ್ಟು ಫೈಬರ್​ ಅಂಶವಿರುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಮರ ಸೇಬು ಹಣ್ಣು ಅತೀ ಅಗತ್ಯವಾದ ಹಣ್ಣು ಎಂದು ಹೇಳಬಹುದು.

ಹಸಿವೆಯನ್ನು ನಿಯಂತ್ರಿಸುತ್ತದೆ:
ಫೈಬರ್​ ಅಂಶಗಳನ್ನು ಹೊಂದಿರುವ ಮರ ಸೇಬು ಹಣ್ಣು ಹಸಿವೆಯನ್ನು ನಿಯಂತ್ರಿಸುತ್ತದೆ.  ಇದೇ ಕಾರಣದಿಂದ ಡಯೆಟ್​ಗೂ ಕೂಡ ಮರ ಸೇಬುಅತ್ಯುತ್ತಮ ಆಹಾರವಾಗಿದೆ.  ಮಧುಮೇಹಿಗಳಿಗೂ ಉತ್ತಮ ಆಹಾರವಾಗಿರುವ ಮರ ಸೇಬು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ಹೃದಯದ ಆರೋಗ್ಯ:
ಹಾರ್ವರ್ಡ್​ ವಿಶ್ವವಿದ್ಯಾಲಯದ ಪ್ರಕಾರ ಫಯಬರ್​ ಅಂಶವುಳ್ಳ ಆಹಾರ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಮರ ಸೇಬು ಹಣ್ಣು ಕೂಡ ಒಂದು. ಹೀಗಾಗಿ ಪ್ರತಿದಿನ ಮರ ಸೇಬು ಹಣ್ಣು ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಇದೇ ಕಾರಣದಿಂದ ದಿನಕ್ಕೊಂದು ಮರ ಸೇಬು ನಿಮ್ಮ ಡಯೆಟ್​ ಪಟ್ಟಿಯಲ್ಲಿರಲಿ.

ಫ್ರೀ ರಾಡಿಕಲ್ಸ್​​ಗಳ ತಡೆ:
ಮಾನಸಿಕ ಒತ್ತಡವನ್ನು ಉಂಟುಮಾಡುವ ಫ್ರೀ ರಾಡಿಕಲ್ಸ್​​ಗಳನ್ನು ಮರ ಸೇಬು ಹಣ್ಣು ತಡೆಯುತ್ತದೆ. ಅಲ್ಲದೆ ಮರ ಸೇಬು  ಹಣ್ಣಿನಲ್ಲಿರುವ ವಿಟಮಿನ್​ ಸಿ ಅಂಶಗಳು ಮಧುಮೇಹ, ಕೆಲವು ಬಗೆಯ ಕ್ಯಾನ್ಸರ್​ಗಳು ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ತಡೆಯುತ್ತದೆ.

(ಇಲ್ಲಿರುವ ಮಾಹಿತಿ ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ ನೌ ವರದಿ ಆದರಿಸಿ ಸಲಹೆಗಳನ್ನು ನೀಡಲಾಗಿದೆ)

ಇದನ್ನೂ ಓದಿ: 

Curd: ರಾತ್ರಿ ವೇಳೆ ಮೊಸರು ತಿಂದರೆ ಏನಾಗುತ್ತದೆ?; ಆಯುರ್ವೇದ ತಜ್ಞರ ಸಲಹೆ ಹೀಗಿದೆ