ತಲೆನೋವಿನ ಜೊತೆಗೆ ಈ ಲಕ್ಷಣ ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ! ಇದು ಜೀವಕ್ಕೆ ಅಪಾಯಕಾರಿಯಾಗಬಹುದು

ಸಾಮಾನ್ಯ ತಲೆನೋವಾದರೆ ಕೆಲವು ಸಮಯ ವಿಶ್ರಾಂತಿ ತೆಗೆದುಕೊಂಡರೆ ಸರಿಯಾಗುತ್ತದೆ ಆದರೆ, ಕೆಲವು ರೀತಿಯ ತಲೆನೋವು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಹೌದು, ತಲೆನೋವಿನ ಜೊತೆಗೆ ಕೆಲವು ಲಕ್ಷಣ ಕಂಡು ಬಂದರೆ ಅದನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಲವು ಲಕ್ಷಣಗಳು ಉಪಾಯದ ಎಚ್ಚರಿಕೆಯ ಸೂಚನೆಯಾಗಿರಬಹುದು. ಹಾಗಾದರೆ ತಲೆನೋವಿನ ಜೊತೆಗೆ ಯಾವ ರೀತಿ ಲಕ್ಷಣ ಕಂಡುಬಂದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಲೆನೋವಿನ ಜೊತೆಗೆ ಈ ಲಕ್ಷಣ ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ! ಇದು ಜೀವಕ್ಕೆ ಅಪಾಯಕಾರಿಯಾಗಬಹುದು
Dangerous Headache Symptoms
Image Credit source: Getty Images

Updated on: Jun 15, 2026 | 8:59 PM

ಇತ್ತೀಚಿನ ದಿನಗಳಲ್ಲಿ ತಲೆನೋವು (Headache) ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ, ನಿದ್ರಾಹೀನತೆ, ದಣಿವು ಅಥವಾ ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಹಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಬಹುತೇಕರು ಪೇನ್‌ಕಿಲ್ಲರ್ ತೆಗೆದುಕೊಂಡು ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಂದು ತಲೆನೋವೂ ಸಾಮಾನ್ಯವಲ್ಲ. ಕೆಲವೊಮ್ಮೆ ಇದು ಗಂಭೀರ ಮೆದುಳಿನ ಸಮಸ್ಯೆಗಳ ಮುನ್ನೆಚ್ಚರಿಕೆಯೂ ಆಗಿರಬಹುದು. ಹೌದು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಲವು ಲಕ್ಷಣಗಳು ಉಪಾಯದ ಎಚ್ಚರಿಕೆಯ ಸೂಚನೆಯಾಗಿರಬಹುದು. ಹಾಗಾದರೆ ತಲೆನೋವಿನ ಜೊತೆಗೆ ಯಾವ ರೀತಿ ಲಕ್ಷಣ ಕಂಡುಬಂದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೀವ್ರ ತಲೆನೋವು ಬಂದರೆ ಹೆಚ್ಚಿನ ಎಚ್ಚರ ವಹಿಸಿ

ಹಠಾತ್‌ ಆಗಿ ಜೀವನದಲ್ಲಿ ಎಂದಿಗೂ ಅನುಭವಿಸದಷ್ಟು ತೀವ್ರವಾದ ತಲೆನೋವು ಕೆಲವೇ ಕ್ಷಣಗಳಲ್ಲಿ ಹೆಚ್ಚಾದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಇದು ಮೆದುಳಿನ ರಕ್ತನಾಳ ಸಿಡಿತ ಅಥವಾ ಒಳ ರಕ್ತಸ್ರಾವದ ಸೂಚನೆಯಾಗಿರಬಹುದು.

ಜ್ವರ ಮತ್ತು ಕುತ್ತಿಗೆ ಬಿಗಿತ

ತಲೆನೋವಿನ ಜೊತೆಗೆ ಜ್ವರ, ಕುತ್ತಿಗೆಯ ಆಸುಪಾಸಿನಲ್ಲಿ ಗಟ್ಟಿಯಾದಂತೆ ಅನಿಸುವುದು ಅಥವಾ ಗಡ್ಡವನ್ನು ಎದೆಗೆ ತಾಗಿಸಲು ಕಷ್ಟವಾಗುವುದು ಕಂಡುಬಂದರೆ ಅದು ಮೆನಿಂಜೈಟಿಸ್‌ ಎಂಬ ಮೆದುಳಿನ ಸೋಂಕಿನ ಲಕ್ಷಣವಾಗಿರಬಹುದು. ಇಂತಹ ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಅಗತ್ಯ.

ಇದನ್ನೂ ಓದಿ: ತಕ್ಷಣ ಬರುವ ತೀವ್ರ ತಲೆನೋವು ಮತ್ತು ಆತಂಕ ಮೆದುಳಿನ ಅಸ್ವಸ್ಥತೆಯ ಲಕ್ಷಣವೇ?

ದೃಷ್ಟಿ ಮಂಕಾಗುವುದು ಮತ್ತು ವಾಂತಿ

ತಲೆನೋವಿನೊಂದಿಗೆ ಬೇರೆ ವಸ್ತುಗಳು ಎರಡೆರಡು ಬಾರಿ ಕಾಣುವುದು, ದೃಷ್ಟಿ ಮಂಕಾಗುವುದು ಅಥವಾ ಹಠಾತ್‌ ವಾಂತಿ ಆಗುವುದು ಮೆದುಳಿನ ಒಳ ಒತ್ತಡ ಹೆಚ್ಚಿದ ಸೂಚನೆಯಾಗಿರಬಹುದು. ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು.

ದೇಹದ ಒಂದು ಭಾಗ ದುರ್ಬಲವಾಗುವುದು

ಮಾತನಾಡಲು ತೊಂದರೆ, ತಲೆ ಸುತ್ತುವುದು, ಸಮತೋಲನ ಕಳೆದುಕೊಳ್ಳುವುದು ಅಥವಾ ಕೈ, ಕಾಲು, ಮುಖದ ಒಂದು ಭಾಗ ಮಂಕಾಗುವುದು ಬ್ರೇನ್‌ ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳು. ಇಂತಹ ಸಮಸ್ಯೆಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.

50 ವರ್ಷ ಮೇಲ್ಪಟ್ಟವರು ಹೆಚ್ಚು ಎಚ್ಚರವಹಿಸಬೇಕು

ಸಾಮಾನ್ಯವಾಗಿ 50 ವರ್ಷಗಳ ನಂತರ ಹೊಸ ರೀತಿಯ ತಲೆನೋವು ಆರಂಭವಾದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ವಿಶೇಷವಾಗಿ ಕ್ಯಾನ್ಸರ್ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ತಲೆನೋವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತದೆ.

ಹಾಗಾಗಿ ಸಾಮಾನ್ಯ ಮೈಗ್ರೇನ್ ಮತ್ತು ಅಪಾಯಕಾರಿ ತಲೆನೋವಿನ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ. ತಲೆನೋವಿನ ಜೊತೆಗೆ ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ಸೇವಿಸದೇ ತಕ್ಷಣ ನ್ಯೂರಾಲಜಿಸ್ಟ್‌ರನ್ನು ಸಂಪರ್ಕಿಸುವುದು ಸುರಕ್ಷಿತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us