Smiling Depression: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಯಾರು ಅಪಾಯದಲ್ಲಿದ್ದಾರೆ ತಿಳಿದುಕೊಳ್ಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 01, 2024 | 10:54 AM

ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರೂ ನೋಡುವವರ ಕಣ್ಣಿಗೆ ಸದಾ ನಗುವಂತೆ ನಾಟಕವಾಡುತ್ತಿರುತ್ತಾರೆ. ಈ ರೀತಿಯ ಮಾನಸಿಕ ಖಿನ್ನತೆ ಎಲ್ಲಾ ರೋಗಕ್ಕಿಂತಲೂ ಹೆಚ್ಚು ಅಪಾಯಕಾರಿ. ಕೆಲವೊಂದು ಬಾರಿ ತಮಗೆ ಖಿನ್ನತೆ ಇದೆ ಎಂಬುದು ಗೊತ್ತಿರುವುದಿಲ್ಲ. ಸದಾ ನೋವನ್ನು ಮರೆಮಾಚುತ್ತಾ ಎಲ್ಲರೊಂದಿಗೆ ನಗುನಗುತ್ತಾ ಖುಷಿಯಿಂದ ಮಾತನಾಡುತ್ತಾರೆ. ಆ ವ್ಯಕ್ತಿಗೆ ಖಿನ್ನತೆ ಇದೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ ಇದನ್ನೇ ಸ್ಮೈಲಿಂಗ್ ಡಿಪ್ರೆಷನ್ ಅಥವಾ ನಗುವಿನ ಖಿನ್ನತೆ ಎಂದು ಕರೆಯಲಾಗುತ್ತದೆ.

Smiling Depression: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಯಾರು ಅಪಾಯದಲ್ಲಿದ್ದಾರೆ ತಿಳಿದುಕೊಳ್ಳಿ
Follow us on

ನಗಿಸುತ್ತಾ, ನಗುತ್ತಿರುವವರ ಹಿಂದೆ ಸಾವಿರ ನೋವಿರುತ್ತದೆ ಎಂಬ ಮಾತನ್ನು ಕೇಳಿರಬಹುದು. ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರೂ ನೋಡುವವರ ಕಣ್ಣಿಗೆ ಸದಾ ನಗುವಂತೆ ನಾಟಕವಾಡುತ್ತಿರುತ್ತಾರೆ. ಈ ರೀತಿಯ ಮಾನಸಿಕ ಖಿನ್ನತೆ ಎಲ್ಲಾ ರೋಗಕ್ಕಿಂತಲೂ ಹೆಚ್ಚು ಅಪಾಯಕಾರಿ. ಕೆಲವೊಂದು ಬಾರಿ ತಮಗೆ ಖಿನ್ನತೆ ಇದೆ ಎಂಬುದು ಗೊತ್ತಿರುವುದಿಲ್ಲ. ಸದಾ ನೋವನ್ನು ಮರೆಮಾಚುತ್ತಾ ಎಲ್ಲರೊಂದಿಗೆ ನಗುನಗುತ್ತಾ ಖುಷಿಯಿಂದ ಮಾತನಾಡುತ್ತಾರೆ. ಆ ವ್ಯಕ್ತಿಗೆ ಖಿನ್ನತೆ ಇದೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ ಇದನ್ನೇ ಸ್ಮೈಲಿಂಗ್ ಡಿಪ್ರೆಷನ್ ಅಥವಾ ನಗುವಿನ ಖಿನ್ನತೆ ಎಂದು ಕರೆಯಲಾಗುತ್ತದೆ. ಇದರಲ್ಲಿ ವ್ಯಕ್ತಿ ನಿಮಗೆ ಹೊರಗೆ ಸಂತೋಷದಿಂದ ಇರುವಂತೆ ಕಾಣುತ್ತಾನೆ, ಆದರೆ ವಾಸ್ತವದಲ್ಲಿ ಆತ ನೋವನ್ನು ಅನುಭವಿಸುತ್ತಿರುತ್ತಾನೆ. ಹಾಗಾದರೆ ಇದರ ರೋಗಲಕ್ಷಣಗಳೇನು? ಯಾವ ರೀತಿಯ ಚಿಕಿತ್ಸೆ ಕೊಡಬೇಕು? ಪತ್ತೆಹಚ್ಚುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಇದರ ರೋಗಲಕ್ಷಣಗಳೇನು? ಯಾವ ರೀತಿಯ ಚಿಕಿತ್ಸೆ ಕೊಡಬೇಕು?

  • ತೂಕದಲ್ಲಿ ಬದಲಾವಣೆ ಅಥವಾ ಹಸಿವು ಕಡಿಮೆಯಾಗುವುದು.
  • ನಿದ್ರೆಯ ಸಮಯ ಬದಲಾಗಬಹುದು.
  • ಆಲಸ್ಯ.
  • ಗಮನವಿಟ್ಟು ಯಾವುದೇ ಕೆಲಸ ಮಾಡಲು ಸಾಧ್ಯವಿರುವುದಿಲ್ಲ.
  • ಪದೇ ಪದೇ ಕೋಪ, ಕಿರಿಕಿರಿಗೆ ಒಳಗಾಗುವುದು.
  • ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸದಿರುವುದು.

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

ಸ್ಮೈಲಿಂಗ್ ಡಿಪ್ರೆಶನ್ ಅಥವಾ ನಗುವಿನ ಖಿನ್ನತೆ ಯಾರಲ್ಲಿ ಬೇಕಾದರೂ ಕಂಡುಬರಬಹುದು, ತುಂಬಾ ಮಹತ್ವಾಕಾಂಕ್ಷೆಯುಳ್ಳವರು. ಬದುಕಿನಲ್ಲಿ ವಿವಿಧ ಕಾರಣಗಳಿಗೆ ಮೋಸ ಹೋದವರು, ವ್ಯಸನಿಗಳು ಈ ಖಿನ್ನತೆಗೆ ಒಳಗಾಗಬಹುದು. ಅಥವಾ ಜೀವನದಲ್ಲಿ ಹಠಾತ್ ಬದಲಾವಣೆ ಈ ಖಿನ್ನತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಮಾನಸಿಕ ಆರೋಗ್ಯ ಹದಗೆಡಲು ಕಾರಣ ಹಾಗೂ ಅದರಿಂದ ಹೊರಬರಲು ಏನು ಮಾಡಬೇಕು?

ಪತ್ತೆಹಚ್ಚುವುದು ಹೇಗೆ?

ಜನರು ತಮ್ಮ ಭಾವನೆಗಳನ್ನು ಮರೆಮಾಚುವುದರಿಂದ ಖಿನ್ನತೆಯ ರೋಗನಿರ್ಣಯ ಕಷ್ಟಕರವಾಗಿರುತ್ತದೆ. ಆದರೆ ನಿಮಗೆ ಅನುಮಾನ ಬಂದಲ್ಲಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಬಹುದು. ಅವರು ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ನಿಮ್ಮ ಪರಿಸ್ಥಿತಿಯನ್ನು ನಿರ್ಣಯಿಸುತ್ತಾರೆ. ರೋಗಲಕ್ಷಣಗಳು ಒಂದು ತಿಂಗಳಿಗಿಂತ ಹೆಚ್ಚು ಕಾಲ ಇದ್ದರೆ, ಅದು ತೀವ್ರ ಮಟ್ಟಕ್ಕೆ ಹೋಗಬಹುದು. ಟಾಕ್ ಥೆರಪಿ ಮತ್ತು ಇತರ ಮೌಲ್ಯಮಾಪನಗಳು ನಿಮ್ಮ ಪರಿಸ್ಥಿತಿಯನ್ನು ಕಂಡುಹಿಡಿಯಲು ವೈದ್ಯರಿಗೆ ಸಹಾಯ ಮಾಡುತ್ತದೆ. ವ್ಯಕ್ತಿಯ ವರ್ತನೆ, ಕುಟುಂಬ ಇತಿಹಾಸ ಎಲ್ಲವೂ ಕೂಡ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: