World Menopause Day: ಋತುಬಂಧದ ಸಮಯದಲ್ಲಿ ಸ್ತನಗಳ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2024 | 11:52 AM

ಋತುಬಂಧವು 40 ಮತ್ತು 50ರ ಮಧ್ಯದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಒಂದು ಪ್ರಮುಖ ಹಂತವಾಗಿದೆ. ನಂತರ ಅವರು ಮುಟ್ಟಾಗುವುದಿಲ್ಲ. ವೈದ್ಯಕೀಯ ಪರಿಭಾಷೆಯಲ್ಲಿ, ಋತುಬಂಧವು (Menopause) ಮಹಿಳೆಯರಲ್ಲಿ ಋತುಚಕ್ರದ ಅಂತ್ಯವನ್ನು ಸೂಚಿಸುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿಸಲು ಜೊತೆಗೆ ಜಾಗೃತಿ ಮೂಡಿಸಲು ಅಕ್ಟೋಬರ್ 18ರಂದು, ವಿಶ್ವ ಋತುಬಂಧ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರಿಗೆ ತಮ್ಮ ಯೋಗಕ್ಷೇಮದ ಬಗ್ಗೆ ಗಮನ ಹರಿಸಲು ನೆನಪಿಸುತ್ತದೆ, ವಿಶೇಷವಾಗಿ ಋತುಬಂಧದ ಪರಿವರ್ತಕ ಹಂತದಲ್ಲಿ. ಇದೊಂದು ನೈಸರ್ಗಿಕ ಜೈವಿಕ ಪ್ರಕ್ರಿಯೆ, ಆದರೆ ಇದರಿಂದ ಸ್ತನ ಆರೋಗ್ಯದಲ್ಲಿನ ವ್ಯತ್ಯಾಸ ಸೇರಿದಂತೆ ಮಹಿಳೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತದೆ. ಹಾಗಾಗಿ ಈ ಸಯಮದಲ್ಲಿ ಸ್ತನಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

World Menopause Day: ಋತುಬಂಧದ ಸಮಯದಲ್ಲಿ ಸ್ತನಗಳ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಋತುಬಂಧದ ಸಮಯದಲ್ಲಿ ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಎರಡೂ ರೀತಿಯಲ್ಲಿಯೂ ಬದಲಾವಣೆಗಳನ್ನು ಎದುರಿಸುತ್ತಾರೆ. ಋತುಬಂಧವು 40 ಮತ್ತು 50ರ ಮಧ್ಯದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಒಂದು ಪ್ರಮುಖ ಹಂತವಾಗಿದೆ. ನಂತರ ಅವರು ಮುಟ್ಟಾಗುವುದಿಲ್ಲ. ವೈದ್ಯಕೀಯ ಪರಿಭಾಷೆಯಲ್ಲಿ, ಋತುಬಂಧವು (Menopause) ಮಹಿಳೆಯರಲ್ಲಿ ಋತುಚಕ್ರದ ಅಂತ್ಯವನ್ನು ಸೂಚಿಸುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿಸಲು ಜೊತೆಗೆ ಜಾಗೃತಿ ಮೂಡಿಸಲು ಅಕ್ಟೋಬರ್ 18ರಂದು, ವಿಶ್ವ ಋತುಬಂಧ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರಿಗೆ ತಮ್ಮ ಯೋಗಕ್ಷೇಮದ ಬಗ್ಗೆ ಗಮನ ಹರಿಸಲು ನೆನಪಿಸುತ್ತದೆ, ವಿಶೇಷವಾಗಿ ಋತುಬಂಧದ ಪರಿವರ್ತಕ ಹಂತದಲ್ಲಿ. ಇದೊಂದು ನೈಸರ್ಗಿಕ ಜೈವಿಕ ಪ್ರಕ್ರಿಯೆ, ಆದರೆ ಇದರಿಂದ ಸ್ತನ ಆರೋಗ್ಯದಲ್ಲಿನ ವ್ಯತ್ಯಾಸ ಸೇರಿದಂತೆ ಮಹಿಳೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತದೆ. ಹಾಗಾಗಿ ಈ ಸಯಮದಲ್ಲಿ ಸ್ತನಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

ಋತುಬಂಧದ ಸಮಯದಲ್ಲಿ ಸ್ತನಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಇಲ್ಲಿವೆ ಸಲಹೆಗಳು:

1. ನಿಯಮಿತ ಸ್ವಯಂ ಪರೀಕ್ಷೆಗಳು

ನಿಮ್ಮ ಸ್ತನ ಅಂಗಾಂಶದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗುವುದನ್ನು ತಿಳಿದುಕೊಳ್ಳಲು ನೀವೇ ಮಾಸಿಕವಾಗಿ ಸ್ತನ ಪರೀಕ್ಷೆಗಳನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಸ್ತನದಲ್ಲಿ ಉಂಡೆಗಳು, ಊತ ಅಥವಾ ಚರ್ಮದ ಬಣ್ಣದಲ್ಲಿ ಬದಲಾವಣೆಗಳು ಆಗುವುದನ್ನು ಗುರುತಿಸುವುದು ಸುಲಭವಾಗುತ್ತದೆ.

2. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ

ಹಣ್ಣು, ತರಕಾರಿ, ಧಾನ್ಯಗಳು ಮತ್ತು ತೆಳ್ಳಗಿನ ಪ್ರೋಟೀನ್ ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಇದು ನಿಮಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅತಿಯಾದ ಮದ್ಯಪಾನವನ್ನು ತಪ್ಪಿಸಿ ಮತ್ತು ಧೂಮಪಾನವನ್ನು ತ್ಯಜಿಸಿ, ಏಕೆಂದರೆ ಈ ಎರಡೂ ಅಭ್ಯಾಸಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

3. ಹೈಡ್ರೇಟ್ ಆಗಿರಿ

ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ಸರಿಯಾದ ರೀತಿಯಲ್ಲಿ ಹಾಗೂ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಸ್ತನಗಳ ಆರೋಗ್ಯ ಚೆನ್ನಾಗಿರುತ್ತದೆ, ಆರೋಗ್ಯವೂ ಹದಗೆಡುವುದಿಲ್ಲ.

4. ಮೂಳೆಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ

ಋತುಬಂಧವು ಹೆಚ್ಚಾಗಿ ಮೂಳೆ ಸಾಂದ್ರತೆಯ ಇಳಿಕೆಗೆ ಕಾರಣವಾಗುತ್ತದೆ. ನಿಮ್ಮ ಆರೋಗ್ಯ ತಜ್ಞರು ಶಿಫಾರಸು ಮಾಡಿದಂತಹ ಆಹಾರ ಸೇವನೆ ಮಾಡುವ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸಿ. ಮೂಳೆಗಳು ಆರೋಗ್ಯವಾಗಿರುವುದು ಅವಶ್ಯಕ ಅದಲ್ಲದೆ ಇವು ಸ್ತನಗಳು ಸೇರಿದಂತೆ ನಿಮ್ಮ ಆಂತರಿಕ ಅಂಗಗಳಿಗೆ ಅಗತ್ಯ ರಕ್ಷಣೆಯನ್ನು ಒದಗಿಸುತ್ತವೆ.

5. ನಿಯಮಿತ ತಪಾಸಣೆ

ನಿಮ್ಮ ಆರೋಗ್ಯ ತಜ್ಞರು ಒದಗಿಸಿದ ಸಲಹೆಯಂತೆ ನಿಯಮಿತ ಮ್ಯಾಮೊಗ್ರಾಮ್ ಗಳು ಮತ್ತು ಕ್ಲಿನಿಕಲ್ ಸ್ತನ ಪರೀಕ್ಷೆಗಳನ್ನು ಮಾಡಿಕೊಳ್ಳಿ. ಸ್ತನ ಕ್ಯಾನ್ಸರ್ ಅನ್ನು ಮುಂಚಿತವಾಗಿ ಪತ್ತೆಹಚ್ಚಲು ಈ ಸ್ಕ್ರೀನಿಂಗ್ ಗಳು ಅಗತ್ಯವಾಗಿದೆ.

6. ಒತ್ತಡವನ್ನು ಹೆಚ್ಚಿಸಿಕೊಳ್ಳಬೇಡಿ

ಋತುಬಂಧವು ಭಾವನಾತ್ಮಕ ಮತ್ತು ದೈಹಿಕ ಒತ್ತಡವನ್ನು ತರಬಹುದು. ಹಾಗಾಗಿ ಯೋಗ, ಧ್ಯಾನ ಅಥವಾ ಆಳವಾದ ಉಸಿರಾಟದಂತಹ ವ್ಯಾಯಾಮಗಳನ್ನು ಅಭ್ಯಾಸ ಮಾಡಿ. ಒತ್ತಡವನ್ನು ನಿರ್ವಹಿಸುವುದು ಸ್ತನಗಳ ಆರೋಗ್ಯ ಸೇರಿದಂತೆ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಸೂಚನೆ: ಪ್ರತಿಯೊಬ್ಬ ಮಹಿಳೆಯ ದೇಹವು ವಿಭಿನ್ನವಾಗಿದೆ. ಹಾಗಾಗಿ ನಿಮ್ಮ ವೈಯಕ್ತಿಕ ಆರೋಗ್ಯ ಅಗತ್ಯಗಳಿಗೆ ಅನುಗುಣವಾಗಿ ಈ ಸಲಹೆಗಳನ್ನು ಅನುಸರಿಸಿ. ವೈಯಕ್ತಿ ಸಲಹೆ ಪಡೆಯಲು ನಿಮ್ಮ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ