ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನ ಸಮಸ್ಯೆ ಹೆಚ್ಚಾಗದಂತೆ ತಡೆಯಲು ಈ ರೀತಿ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2024 | 5:59 PM

ಕೀಲು ನೋವಿಗೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಮೂಳೆ ದುರ್ಬಲಗೊಳ್ಳುವುದು, ಹೆಚ್ಚಿದ ಯೂರಿಕ್ ಆಮ್ಲ, ಸಂಧಿವಾತ, ಗಾಯ ಇತ್ಯಾದಿಗಳು ಸೇರಿವೆ. ಹಿಂದಿನ ಕಾಲದಲ್ಲಿ, ವಯಸ್ಸು ಹೆಚ್ಚಾಗುವುದು ಕೀಲು ನೋವಿಗೆ ಕಾರಣವೆಂದು ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಒಂದು ನಿರ್ದಿಷ್ಟ ವಯಸ್ಸಿನ ನಂತರ ಕಂಡು ಬರುತ್ತದೆ, ಜೊತೆಗೆ ಕೀಲು ನೋವಿನ ಸಮಸ್ಯೆಯೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಕಂಡು ಬರುತ್ತಿದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಹಾಗಾದರೆ ಇದಕ್ಕೆ ಪ್ರಮುಖ ಕಾರಣವೇನು? ಯಾವ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬಾರದು? ಇಲ್ಲಿದೆ ಮಾಹಿತಿ.

ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನ ಸಮಸ್ಯೆ ಹೆಚ್ಚಾಗದಂತೆ ತಡೆಯಲು ಈ ರೀತಿ ಮಾಡಿ
Follow us on

ವಯಸ್ಸು ಹೆಚ್ಚಾಗುತ್ತಿದ್ದಂತೆ ಕೀಲು ನೋವಿನ ಸಮಸ್ಯೆ ಕಂಡುಬರುವುದು ಸಾಮಾನ್ಯ. ಹವಾಮಾನ ತುಂಬಾ ತಂಪಾಗಿರುವಾಗ, ಕೀಲುಗಳು ಮತ್ತು ಸ್ನಾಯುಗಳಲ್ಲಿ ನೋವು ಉಂಟಾಗಬಹುದು. ಇದಲ್ಲದೆ, ಕೀಲು ನೋವಿಗೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಮೂಳೆ ದುರ್ಬಲಗೊಳ್ಳುವುದು, ಹೆಚ್ಚಿದ ಯೂರಿಕ್ ಆಮ್ಲ, ಸಂಧಿವಾತ, ಗಾಯ ಇತ್ಯಾದಿಗಳು ಸೇರಿವೆ. ಹಿಂದಿನ ಕಾಲದಲ್ಲಿ, ವಯಸ್ಸು ಹೆಚ್ಚಾಗುವುದು ಕೀಲು ನೋವಿಗೆ ಕಾರಣವೆಂದು ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಒಂದು ನಿರ್ದಿಷ್ಟ ವಯಸ್ಸಿನ ನಂತರ ಕಂಡು ಬರುತ್ತದೆ, ಜೊತೆಗೆ ಕೀಲು ನೋವಿನ ಸಮಸ್ಯೆಯೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಕಂಡು ಬರುತ್ತಿದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಹಾಗಾದರೆ ಇದಕ್ಕೆ ಮುಖ್ಯ ಕಾರಣವೇನು? ಇಲ್ಲಿದೆ ಮಾಹಿತಿ.

ಆಹಾರದ ನಿರ್ಲಕ್ಷ್ಯ: ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ದೇಹದಲ್ಲಿ ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪೋಷಕಾಂಶಗಳಾಗಿವೆ. ಇದನ್ನು ಒದಗಿಸುವ ಆಹಾರವನ್ನು ನೀವು ಸೇವನೆ ಮಾಡದಿದ್ದರೆ ಕ್ಯಾಲ್ಸಿಯಂ ಕೊರತೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ನೀವು ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನಿಂದ ಬಳಲಬಹುದು. ಆದ್ದರಿಂದ, ಮೊಟ್ಟೆಗಳು, ಒಣಗಿದ ಮೀನು, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಧಾನ್ಯಗಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಜೊತೆಗೆ ಸ್ನಾಯು ನೋವುಗಳನ್ನು ತಪ್ಪಿಸಲು ಪ್ರೋಟೀನ್ ಭರಿತ ಆಹಾರಗಳನ್ನು ತೆಗೆದುಕೊಳ್ಳಬೇಕು.

ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು: ನೀವು ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿದರೆ ಅಥವಾ ಫೋನ್ ಬಳಸಿದರೆ ಅಥವಾ ಟಿವಿ ನೋಡುತ್ತಿದ್ದರೆ, ಭುಜದ ಕೀಲುಗಳು, ಮೊಣಕಾಲುಗಳು, ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳಲ್ಲಿ ನೋವು ಉಂಟಾಗಬಹುದು. ಹಾಗಾಗಿ ಒಬ್ಬ ವ್ಯಕ್ತಿ ಕನಿಷ್ಠ ಪ್ರತಿ 40 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಬೇಕು ಮತ್ತು ಲಘು ಸ್ಟ್ರೆಚಿಂಗ್ ಅಥವಾ ನಡಿಗೆ ಮಾಡಬೇಕು.

ತೂಕವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಡಿ: ತೂಕ ಹೆಚ್ಚಾಗುತ್ತಿದ್ದರೆ ಸಮಯಕ್ಕೆ ಸರಿಯಾಗಿ ಗಮನ ಹರಿಸಿ. ಇಲ್ಲದಿದ್ದರೆ ಮುಂದೆ ಇದು ತುಂಬಾ ಕಷ್ಟವಾಗುತ್ತದೆ. ಬೊಜ್ಜು ಮಧುಮೇಹ, ಹೃದ್ರೋಗ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುವುದಲ್ಲದೆ, ಕೀಲುಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ನಿಮಗೆ ನೋವಿನ ಸಮಸ್ಯೆ ಉಂಟಾಗಬಹುದು.

ವ್ಯಾಯಾಮ ಮಾಡದಿರುವುದು: ಯೋಗ, ಜಾಗಿಂಗ್, ಸೈಕ್ಲಿಂಗ್, ಲೈಟ್ ಸ್ಟ್ರೆಚಿಂಗ್ ಮುಂತಾದ ಯಾವುದಾದರೂ ದೈಹಿಕ ಚಟುವಟಿಕೆಯನ್ನು ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಆಧುನಿಕ ಜೀವನಶೈಲಿಯಲ್ಲಿ, ಆಹಾರ ಪದ್ಧತಿಯು ಸರಿಯಾಗಿ ಇರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ದೇಹಕ್ಕೆ ತಕ್ಕಂತೆ ಚಲನೆ ಇರುವುದಿಲ್ಲ. ಇದರಿಂದ ಕೀಲು ನೋವು ಮತ್ತು ಸ್ನಾಯು ಬಿಗಿತದಂತಹ ಸಮಸ್ಯೆಗಳು ಬರಬಹುದು. ವ್ಯಾಯಾಮ ಮಾಡದಿರುವುದು ಇತರ ಅನೇಕ ದೈಹಿಕ ಸಮಸ್ಯೆಗಳನ್ನು ಕೂಡ ಹೆಚ್ಚಿಸುತ್ತದೆ.

ಅನಾರೋಗ್ಯಕರ ಆಹಾರಗಳು: ಕೆಲವರು ಎಲ್ಲಾ ತಿಳಿದಿದ್ದರೂ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುತ್ತಲೇ ಇರುತ್ತಾರೆ. ಇದರಿಂದ ಅನೇಕ ರೋಗಗಳು ಬರಬಹುದು. ಉದಾಹರಣೆಗೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ ಬಳಿಕ ಈ ರೋಗಲಕ್ಷಣಗಳು ಸಂಧಿವಾತವಾಗಿ ಬದಲಾಗಬಹುದು. ಈ ಕಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನ ಸಮಸ್ಯೆಯನ್ನು ಬರಬಹುದು. ಹಾಗಾಗಿ ಆಹಾರ ಸೇವನೆ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Thu, 17 October 24