ಕ್ಯಾನ್ಸರ್ ಎಂಬುದು ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭದಲ್ಲೇ ಪತ್ತೆ ಹಚ್ಚಿಸದರೆ ಸ್ವಲ್ಪ ಮಟ್ಟಿಗೆ ಗುಣಪಡಿಸಬಹುದು ಆದರೆ ಕಾಲ ಮೀರಿದರೆ ರೋಗಿ ಬದುಕುಳಿಯುವುದು ಕಷ್ಟ. ಅಮೆರಿಕದ ವಿಜ್ಞಾನಿಗಳು ಹೊಸ ಆವಿಷ್ಕಾರ ಮಾಡಿದ್ದು, ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆ ಹಚ್ಚುವ ಲೆನ್ಸ್ ಅನ್ನು ಕಂಡು ಹಿಡಿದಿದ್ದಾರೆ.
ಕ್ಯಾಲಿಫೋರ್ನಿಯಾದ ಟೆರಾಸಾಕಿ ಇನ್ಸ್ಟಿಟ್ಯೂಟ್ ಫಾರ್ ಬಯೋಮೆಡಿಕಲ್ ಇನ್ನೋವೇಷನ್ ತಂಡವು ಅಭಿವೃದ್ಧಿಪಡಿಸಿದ ನೋವರಲ್ ಲೆನ್ಸ್ ಎಕ್ಸೋಸೋಮ್ಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.
ಕಣ್ಣೀರಿನಲ್ಲಿ ಬಿಡುಗಡೆಗೊಳ್ಳುವ ಅತಿಸೂಕ್ಷ್ಮ ಎಕ್ಸೋಸೋಮ್ಗಳನ್ನು ಹಿಡಿದಿಡುವಂಥ ಅತ್ಯಂತ ಸೂಕ್ಷ್ಮ ಕಣಗಳನ್ನು ಈ ಮಸೂರಗಳು ಹೊಂದಿವೆ. ಇದರಿಂದಾಗಿ ಸುಲಭ ಹಾಗೂ ಕ್ಷಿಪ್ರವಾಗಿ ಕ್ಯಾನ್ಸರ್ ಕಾಯಿಲೆಗಳನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚಬಹುದು .
ಶರೀರವು ತನಗೆ ಬೇಡದ ವಸ್ತುಗಳನ್ನು ಕೋಶಗಳ ಮೂಲಕ ಹೊರ ಹಾಕುವ ಎಲ್ಲಾ ವಸ್ತುಗಳಲ್ಲೂ ಎಕ್ಸೋಸೋಮ್ಗಳು ಧಾರಾಳವಾಗಿವೆ. ಆಯಾ ದೇಹದ ಜೈವಿಕ ಗುರುತುಗಳಿಂದ ಸಮೃದ್ಧವಾಗಿರುವ ಈ ಎಕ್ಸೋಸೋಮ್ಗಳು ದೇಹಕ್ಕೆ ಮುಂದಾಗಬಹುದಾದ ವಿಷಯಗಳ ಮುನ್ಸೂಚನೆ ನೀಡಬಲ್ಲದು.
ಎಕ್ಸೋಸೋಮ್ಗಳು ಹೆಚ್ಚಿನ ಜೀವಕೋಶಗಳಲ್ಲಿ ರೂಪುಗೊಳ್ಳುತ್ತವೆ, ಪ್ಲಾಸ್ಮಾ, ಲಾಲಾರಸ, ಮೂತ್ರ ಮತ್ತು ಕಣ್ಣೀರು ಮುಂತಾದ ಅನೇಕ ದೈಹಿಕ ದ್ರವಗಳಾಗಿ ಸ್ರವಿಸುತ್ತದೆ. ತಂಡ ಅಭಿವೃದ್ಧಿಪಡಿಸಿದ ವಿಧಾನವು ಈ ಮೂಲವನ್ನು ಸ್ಪರ್ಶಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚು ಸುಗಮಗೊಳಿಸುತ್ತದೆ ಎಂದು ಸಂಶೋಧಕರ ತಂಡ ಹೇಳಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ