Thyroid: ಥೈರಾಯ್ಡ್​ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು: ಯಾವೆಲ್ಲಾ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ? ಇಲ್ಲಿದೆ ಮಾಹಿತಿ

| Updated By: Pavitra Bhat Jigalemane

Updated on: Jan 18, 2022 | 4:54 PM

ಈ ಥೈರಾಯ್ಡ್ ನಿಂದ ಉತ್ಪತ್ತಿಯಾಗುವ ಹಾರ್ಮೋನುಗಳ ವ್ಯತ್ಯಾಸದಿಂದ ಹೈಪೋಥೈರಾಯ್ಡಿಸಮ್​​​ ಮತ್ತು ಹೈಪರ್​ ಥೈರಾಯ್ಡಿಸಮ್​ ಎನ್ನುವ​ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Thyroid: ಥೈರಾಯ್ಡ್​ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು: ಯಾವೆಲ್ಲಾ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us on

ದೇಹದ  ಆರೋಗ್ಯ ಕಾಪಾಡುವಲ್ಲಿ ಪ್ರತಿಯೊಂದು ಅಂಗವೂ ತನ್ನದೇ ಪಾತ್ರವಹಿಸುತ್ತದೆ. ಅವುಗಳಲ್ಲಿ ಥೈರಾಯ್ಡ್ (Thyroid )​ ಗ್ರಂಥಿ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್​ ಸಮಸ್ಯೆ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಗಂಟಲಿನಲ್ಲಿರುವ ಥೈರಾಯ್ಡ್​ ಗ್ರಂಥಿಯು ಉತ್ಪತ್ತಿ ಮಾಡುವ ಥೈರಾಯ್ಡ್​ ಹಾರ್ಮೋನ್​ಗಳು ದೇಹದ  ಚಯಾಪಯ ಕ್ರಿಯೆಯಿಂದ ಹಿಡಿದು ದೇಹದ ಎಲ್ಲಾ ಭಾಗಗಳನ್ನು ನಿಯಂತ್ರಿಸುತ್ತದೆ. ಈ ಥೈರಾಯ್ಡ್ ನಿಂದ ಉತ್ಪತ್ತಿಯಾಗುವ ಹಾರ್ಮೋನುಗಳ ವ್ಯತ್ಯಾಸದಿಂದ ಹೈಪೋಥಯರಾಯ್ಡಸಮ್​ ಮತ್ತು ಹೈಪರ್​ ಥೈರಾಯ್ಡಿಸಮ್​ ಎನ್ನುವ​ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ದೇಹದ ಹಾರ್ಮೋನ್​ಗಳಲ್ಲಿ ವ್ಯತ್ಯಾಸ, ಚರ್ಮದ ಸಮಸ್ಯೆ ಹೀಗೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ಥೈರಾಯ್ಡ್​ ಸಮಸ್ಯೆ (Thyroid Problems )ಯಿಂದ ಮಹಿಳೆಯರ ಆರೋಗ್ಯದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಲಿದೆ. ಥೈರಾಯ್ಡ್​ ಸಮಸ್ಯೆಯಿಂದ ಮಹಿಳೆಯರಲ್ಲಿ ಬಂಜೆತನ, ಮುಟ್ಟಿನ ಸಮಸ್ಯೆ, ತೂಕ ಹೆಚ್ಚುವುದು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೈಪೋಥಯರಾಯ್ಡಸಮ್ (Hypothyroidism)​ ಮತ್ತು ಹೈಪರ್​ ಥೈರಾಯ್ಡಿಸಮ್ (Hyperthyroidism)​ ನಿಂದ ಮಹಿಳೆಯರಲ್ಲಿ ಅಂಡೋತ್ಪತ್ತಿಯಲ್ಲಿ ವ್ಯತ್ಯಾಸವಾಗಿ ಮುಟ್ಟಿನ ದಿನಗಳಲ್ಲಿ ವ್ಯತ್ಯಾಸವಾಗುತ್ತದೆ. ಜತೆಗೆ ಅವಧಿ ಪೂರ್ವ ಮಗುವಿನ ಜನನ ಮತ್ತು ಗರ್ಭಪಾತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಹೀಗಾಗಿ ಥೈರಾಯ್ಡ್​ ಸಮಸ್ಯೆ ಆರಂಭವಾದಾಗಲೇ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎನ್ನುತ್ತಾರೆ ವೈದ್ಯರು. 

ಭಾರತದಲ್ಲಿ ಥೈರಾಯ್ಡ್​ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದಕ್ಕೆ ಥೈರಾಯ್ಡ್​ ಸಮಸ್ಯೆ ಬಗ್ಗೆ ಇರುವ ಅರಿವಿನ ಕೊರತೆಯಿರಬಹುದು. ಥೈರಾಯ್ಡ್​ ಗ್ರಂಥಿ ಸರಿಯಾದ ಪ್ರಮಾಣದಲ್ಲಿ ಹಾರ್ಮೋನ್​ಗಳನ್ನು ಉತ್ಪತ್ತಿ ಮಾಡದಿದ್ದರೆ ಹೈಪೋಥಯರಾಯ್ಡಸಮ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಇದನ್ನು ನಿಷ್ಕ್ರಿಯ ಥೈರಾಯ್ಡ್​  ಎಂದು ಕರೆಯುತ್ತಾರೆ. ಥೈರಾಯ್ಡ್​ ಅಗತ್ಯಕ್ಕಿಂತ ಹೆಚ್ಚಿನ ಹಾರ್ಮೋನ್​ಗಳನ್ನು ಉತ್ಪತ್ತಿ ಮಾಡುವುದನ್ನು ಹೈಪರ್​ ಥೈರಾಯ್ಡಿಸಮ್ ಎಂದು ಕರೆಯುತ್ತಾರೆ.

ಯಾವೆಲ್ಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?

ಈ ಕುರಿತು ಹೆರಿಗೆ ತಜ್ಞೆ ಸುರಭಿ ಸಿದ್ಧಾರ್ಥ ಎನ್ನುವವರು ಇಂಡಿಯಾ.ಕಾಮ್​ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ 10 ರಲ್ಲಿ ಒಬ್ಬ ಮಹಿಳೆ ಹೈಪೋಥಯರಾಯ್ಡಸಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಗರ್ಭಾಪಾತವಾಗುವುದನ್ನು ಕಾಣಬಹುದು. ಸಾಮಾನ್ಯವಾಗಿ 30-35 ವರ್ಷದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚೆಗೆ 25-30 ವರ್ಷದ ಮಹಿಳೆಯರಲ್ಲಿ  ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದು  ಥೈರಾಯ್ಡ್​ನಿಂದ ಉಂಟಾದ ಅನಿಯಮಿತ ಮುಟ್ಟಿನ ದಿನಗಳ ಪರಿಣಾಮ ಎನ್ನಬಹುದು. ಥೈರಾಯ್ಡ್​ ಮಾಸಿಕ ದಿನಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಇದನ್ನು ಮುಟ್ಟುತಡೆ ಎಂದು ಕರೆಯುತ್ತಾರೆ. ಅಷ್ಷೇ ಅಲ್ಲದೆ ಥೈರಾಯ್ಡ್​ ಕೂದಲು ಉದುರುವಿಕೆ, ಒಣಗಿದ ಚರ್ಮ, ಗಟ್ಟಿಯಾದ ಉಗುರುಗಳು, ಗಾಯ ನಿಧಾನವಾಗಿ ವಾಸಿಯಾಗುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಥೈರಾಯ್ಡ್​​ ದೇಹದ ಚಯಾಪಚಯ ಕ್ರಿಯೆಯಲ್ಲಿಯೂ ಬಹುಮುಖ್ಯ ಪಾತ್ರವಹಿಸುತ್ತದೆ. ಶ್ವಾಸಕೋಶದ ಆರೋಗ್ಯ, ದೇಹದ ತೂಕ,  ದೇಹದ ತಾಪಮಾನ ನಿರ್ವಹಣೆಯನ್ನೂ ನಿಯಂತ್ರಿಸುತ್ತದೆ. ಅಧ್ಯಯನದ ಪ್ರಕಾರ ಪುರುಷರಿಗಿಂತ ಶೇ11 ರಷ್ಟು ಹೆಚ್ಚು ಮಹಿಳೆಯರಲ್ಲಿಯೇ ಥೈರಾಯ್ಡ್​ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಅರಂಭದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಕ್ರಮೇಣ ದೇಹದ ತೂಕ ಹೆಚ್ಚಾಗುವಿಕೆ, ಅನಿಯಮಿತ ಮುಟ್ಟು, ಬೊಜ್ಜು, ಹೃದಯ ಸಂಬಂಧೀ ಕಾಯಿಲೆಗಳು, ಗರ್ಭಧರಿಸಲು ಸಾಧ್ಯವಾಗದೇ ಇರುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಣ್ಣ ಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣವೇ  ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು.

(ಇಲ್ಲಿರುವ ಮಾಹಿತಿಯು ಟಿವಿ9 ಕನ್ನಡ ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಇಂಡಿಯಾ.ಕಾಮ್​ಗೆ ಸುರಭಿ ಸಿದ್ದಾರ್ಥ್ ಎನ್ನುವ ವೈದ್ಯೆ ನೀಡಿದ ಮಾಹಿತಿಯನ್ನು ಆಧರಿಸಿದೆ)

ಇದನ್ನೂ ಓದಿ:

Weight Loss: ತೂಕ ಇಳಿಸಿಕೊಳ್ಳಲು ಜಿಮ್​ನಲ್ಲಿ ಗಂಟೆಗಟ್ಟಲೆ ವರ್ಕ್​ಔಟ್ ಮಾಡೋ ಬದಲು ಹೀಗೆ ಮಾಡಿ ನೋಡಿ

Published On - 4:52 pm, Tue, 18 January 22