ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 25ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಒಂದೇ ಆದಾಯ ಮೂಲವನ್ನು ನೆಚ್ಚಿಕೊಂಡಿದ್ದರೆ ಆಗಲ್ಲ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಉದ್ಯಮಿಗಳು, ವ್ಯವಹಾರಸ್ಥರು ಸದ್ಯಕ್ಕೆ ಟ್ರೆಂಡ್ ನಲ್ಲಿರುವಂಥ ಸಂಗತಿಗಳ ಬಗ್ಗೆ ಚರ್ಚೆ, ಅಧ್ಯಯನ ಮಾಡುವುದಕ್ಕೆ ಆರಂಭಿಸಲಿದ್ದೀರಿ. ಇತರರ ಮೂಲಕ ಹಣದ ಹೂಡಿಕೆ ಮಾಡಿಸುವ ಸಲುವಾಗಿ ಬಲವಾದ ಪ್ರಯತ್ನಗಳನ್ನು ಹಾಕಲಿದ್ದೀರಿ. ಯಾವುದೇ ಕೆಲಸಕ್ಕೂ ನೀವೇ ಮಾತುಕತೆಗೆ ಮುಂದಾಗಿ. ಇತರರನ್ನು ನೆಚ್ಚಿಕೊಂಡು ಏನೂ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಯೋಜನೆಗಳನ್ನು ಯಾರ ಜತೆಗೆ ಚರ್ಚೆ ಮಾಡುವುದಕ್ಕೆ ಹೋಗದಿರಿ.
ಎಲ್ಲವೂ ಆರಾಮವಾಗಿ ಸಾಗುತ್ತಿದೆ ಎಂಬ ಭಾವ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಜತೆಯಲ್ಲಿ ಕೆಲಸ ಮಾಡುವವರು ಅಥವಾ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಹಣಕಾಸಿನ ನೆರವು ಕೇಳುವಂಥ ಸಾಧ್ಯತೆಗಳಿವೆ. ಸೈಟು, ಮನೆ ಅಥವಾ ಕೃಷಿ ಜಮೀನು ಖರೀದಿ ಮಾಡಬೇಕು ಎಂದಿರುವವರು ಗೊಂದಲಕ್ಕೆ ಬೀಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಕಾನೂನು ವ್ಯಾಜ್ಯಗಳು ಇರುವ ಬಗ್ಗೆ ಮಾಹಿತಿ ಕೂಡ ಲಭ್ಯ ಆಗಬಹುದು. ಇತರರು ನೀಡುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.
ನಿಮ್ಮ ಬೆನ್ನ ಹಿಂದೆ ದೊಡ್ಡ ಬದಲಾವಣೆ ಕಂಡುಬರಲಿದೆ. ಬಹಳ ನಂಬಿದಂಥ ವ್ಯಕ್ತಿಗೇ ನಿಮ್ಮ ಏಳ್ಗೆ ಸಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ಗಮನಕ್ಕೆ ಬರುತ್ತದೆ. ಈ ಹಿಂದೆ ನಿಮ್ಮಿಂದ ವ್ಯಕ್ತಿಯೊಬ್ಬರು ಪಡೆದಿದ್ದ ಸಾಲವೊಂದು ಬರುವುದಿಲ್ಲ ಎಂಬುದು ಖಚಿತವಾಗಬಹುದು. ತಮಾಷೆಯೋ ಅಥವಾ ಸಿಟ್ಟೋ ಎಲ್ಲಿ ನಿಂತು ಮಾತನಾಡುತ್ತಿದ್ದೀರಿ ಎಂಬ ಬಗ್ಗೆ ನಿಗಾ ಇರಲಿ. ಇದೊಂದು ಘಟನೆಯಿಂದಲೇ ನಿಮ್ಮನ್ನು ಅಳೆದುಬಿಡುವಂಥ ಸಾಧ್ಯತೆಗಳಿವೆ.
ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಅವಕಾಶಗಳು ದೊರೆಯಲಿವೆ. ಈ ಹಿಂದೆ ಅರ್ಜಿ ಹಾಕಿಕೊಂಡಿದ್ದಿರಿ ಎಂದಾದಲ್ಲಿ ಇಂಟರ್ ವ್ಯೂಗೆ ಕರೆ ಬರಬಹುದು. ಮೊದಲ ಬಾರಿಗೆ ಎಂದು ಪ್ರಯತ್ನ ಮಾಡಿದ್ದ ಕೆಲಸಗಳು ಯಶಸ್ವಿ ಆಗಲಿವೆ. ಕುಟುಂಬಸ್ಥರು ಹೆಮ್ಮೆ ಪಡುವಂಥ ಸಹಾಯವನ್ನು ಇತರರಿಗೆ ಮಾಡಲಿದ್ದೀರಿ. ಅಂಗಾಲಿಗೆ ಸಂಬಂಧಿಸಿದಂತೆ ಸಮಸ್ಯೆಗಳಾಗಬಹುದು. ಬರಿಗಾಲಿನಲ್ಲಿ ಓಡಾಡುವಾಗ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ.
ಮಾತನಾಡುವಾಗ ಎದುರಿಗಿನ ವ್ಯಕ್ತಿಯ ಉದ್ದೇಶವೇನು ಎಂಬುದನ್ನು ಅರಿಯುವುದಕ್ಕೆ ಪ್ರಯತ್ನಿಸಿ. ಕೆಲವು ಸಂಗತಿಗಳು ಮೇಲುನೋಟಕ್ಕೆ ಕಾಣಿಸುವಷ್ಟು ಸಲೀಸಾಗಿರುವುದಿಲ್ಲ. ರಹಸ್ಯವಾಗಿ ಮಾಡಬೇಕಾದ ಕೆಲಸಗಳು ಯಾವುವು ಎಂಬುದಕ್ಕೆ ವಿವೇಚನೆಯನ್ನು ಬಳಸಿ. ಇತರರು ನಿಮ್ಮ ಬಳಿ ಹೇಳಿದ ಸಂಗತಿಯನ್ನು ಇನ್ನೊಬ್ಬರಿಗೆ ಹೇಳದಂತೆ ಜಾಗ್ರತೆಯನ್ನು ವಹಿಸಿ. ಬಾಯಿ ಹುಣ್ಣಿನಂಥ ಸಮಸ್ಯೆಗಳು ಕಾಡಬಹುದು. ಉಷ್ಣ ಪದಾರ್ಥಗಳ ಸೇವನೆಯಿಂದ ದೂರ ಇರಿ.
ವರ್ಗಾವಣೆಯೋ ಬಡ್ತಿಯೋ ಅಥವಾ ವೇತನ ಹೆಚ್ಚಳವೋ ಅಥವಾ ಈ ಎಲ್ಲವೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಆಗುವಂಥ ಯೋಗ ಇದೆ. ಕುಟುಂಬ ಸದಸ್ಯರ ಸಲುವಾಗಿ ವಸ್ತ್ರಾಭರಣಗಳನ್ನು ಖರೀದಿಸುವ ಸಾಧ್ಯತೆ ಇದೆ. ಸಂಬಂಧಿಕರು ಮನೆಗೆ ಭೇಟಿ ನೀಡಲಿದ್ದಾರೆ. ಹಣಕಾಸು ವಿಚಾರದ ಬಗ್ಗೆ ಚರ್ಚೆ ಮಾಡುವಾಗ ನಿಮಗೆ ಅನುಕೂಲ ಆಗುವಂಥ ವಿಷಯಗಳನ್ನು ತಿಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ದುಡ್ಡ- ಆಭರಣಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ಒಂದೇ ಸಲಕ್ಕೆ ನಾಲ್ಕೈದು ಕೆಲಸಗಳನ್ನು ಮಾಡುವುದಕ್ಕೆ ಹೊರಟು ಒತ್ತಡಕ್ಕೆ ಬೀಳದಿರಿ. ನೀವು ಒಪ್ಪಿಕೊಂಡಾಗಿದೆ ಎಂಬ ಕಾರಣಕ್ಕೆ ಇತರರು ಒಪ್ಪಿಕೊಂಡು ಬಿಡುತ್ತಾರೆ ಎಂದು ಯಾವ ವಿಷಯದಲ್ಲೂ ಅಂದುಕೊಳ್ಳಬೇಡಿ. ಕಾರು ಓಡಿಸುವಂಥವರು ಸಾಧ್ಯವಾದಲ್ಲಿ ಈ ದಿನ ಓಡಿಸದೇ ಇರುವುದು ಉತ್ತಮ. ಒಂದು ವೇಳೆ ಇದೇ ವೃತ್ತಿಯಾಗಿ ಇರುವಂಥವರು ಮಾಮೂಲಿ ದಿನಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ.
ನಿಮ್ಮ ಸಂಪಾದನೆ, ದುಡಿಮೆ ಮೇಲೆ ಹಿಡಿತ ಸಾಧಿಸುವುದಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಸರಿಯಾಗಿ ಉತ್ತರವನ್ನು ನೀಡಲಿದ್ದೀರಿ. ಬಹಳ ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ವಿಚಾರವೊಂದು ಈ ದಿನ ನಿಮ್ಮನ್ನು ತಲುಪಬಹುದು. ಮನೆಗೆ ಟೀವಿ, ಮೈಕ್ರೋವೇವ್ ಓವನ್, ಲ್ಯಾಪ್ ಟಾಪ್ ಇಂಥದ್ದನ್ನು ತರುವಂಥ ಯೋಗ ಇದೆ. ತೀರಾ ಆತ್ಮೀಯರಾದವರು ಕಡಿಮೆ ಮೊತ್ತಕ್ಕೆ ಇವುಗಳನ್ನು ಕೊಡಿಸುವುದಾಗಿ ಹೇಳಿ, ನಿಮಗೆ ಸಹಾಯಕ್ಕೆ ಬರಬಹುದು.
ನೀವು ಅಂದುಕೊಂಡ ವೇಗದಲ್ಲಿ ಈ ದಿನ ಕೆಲಸಗಳು ಸಾಗುವುದಿಲ್ಲ. ಮೊದಲ ಬಾರಿಗೆ ಭೇಟಿ ಆದವರು ಮನಸ್ಸಿಗೆ ಬಹಳ ಇಷ್ಟವಾಗುವಂತಹ ಸಾಧ್ಯತೆಗಳಿವೆ. ಸೈಟು ಈಗಾಗಲೇ ಇದೆ ಎಂದಿದ್ದವರು ಮನೆ ಕಟ್ಟುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಇದಕ್ಕೆ ಕುಟುಂಬಸ್ಥರು ಬೆಂಬಲ- ಸಹಕಾರ ನೀಡಲಿದ್ದಾರೆ. ನಿಮ್ಮ ಕಣ್ಣಳತೆಯಲ್ಲೇ ಇರುವಂಥ ಸಂಗತಿಗಳ ಕಡೆಗೆ ಹೆಚ್ಚಿನ ಲಕ್ಷ್ಯ ನೀಡುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಸಣ್ಣ- ಪುಟ್ಟ ನಷ್ಟ ಅನುಭವಿಸಬೇಕಾಗುತ್ತದೆ.