ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 12ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಯಶಸ್ಸು, ಪ್ರಯತ್ನ, ಶ್ರಮ ಮೇಲಧಿಕಾರಿಗಳ ಅಥವಾ ಸಂಬಂಧಪಟ್ಟವರ ಗಮನಕ್ಕೆ ಬರಲಿದೆ. ಮನೆ ಕಟ್ಟುತ್ತಿರುವವರಿಗೆ ಹಣಕಾಸಿನ ಅನುಕೂಲ ಆಗಲಿದೆ. ಆಪ್ತರ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ. ಹೊಸ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಅಥವಾ ಉದ್ಯೋಗ, ವೃತ್ತಿ ಅಥವಾ ಶಿಕ್ಷಣಕ್ಕೆ ಅಗತ್ಯ ಇರುವಂಥ ಸಲಕರಣೆಗಳನ್ನು ಖರೀದಿಸುವ ಯೋಗ ಇದೆ.
ಇತರರು ಹಂಗಿಸುವ, ಛೇಡಿಸುವ, ಮೂದಲಿಸುವ ಮಾತುಗಳನ್ನು ಆಡಿದಲ್ಲಿ ತೀರಾ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಇದನ್ನು ಹೇಳುತ್ತಿರುವವರಿಗೆ ನಿಮ್ಮ ಬಗ್ಗೆ ಪ್ರಾಮಾಣಿಕವಾದ ಕಾಳಜಿ, ಸ್ನೇಹವೋ ಅಥವಾ ಪ್ರೀತಿ ಇದೆಯೇ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಆ ನಂತರ ಹೇಗೆ ಪ್ರತಿಕ್ರಿಯೇ ನೀಡಬೇಕು ಎಂದು ತೀರ್ಮಾನಿಸಿ. ಸ್ವಂತ ಉದ್ಯಮ, ವ್ಯವಹಾರವನ್ನು ನಡೆಸುತ್ತಿದ್ದಲ್ಲಿ ವಿಸ್ತರಣೆ ಬಗ್ಗೆ ಆಲೋಚನೆ ಬರಲಿದೆ.
ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಸೂಕ್ತ ವೈದ್ಯೋಪಚಾರಗಳಿಗೆ ಮಾರ್ಗದರ್ಶನ ದೊರೆಯಲಿದೆ. ಶತ್ರುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ವಾಹನ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಅನುಕೂಲವಿದೆ. ಹೊಸದಾಗಿ ಆಗುವ ಸ್ನೇಹಿತೆಯರು- ಸ್ನೇಹಿತರಿಂದ ನಿಮ್ಮ ಉದ್ಯೋಗ, ವೃತ್ತಿಗೆ ಸಹಾಯ. ಮನೆಗೆ ಗೃಹಾಲಂಕಾರ ವಸ್ತುಗಳನ್ನು ತರುವ ಯೋಗ ಇದೆ.
ಏಕಾಂಗಿತನ ನಿಮ್ಮನ್ನು ಈ ದಿನ ಕಾಡಬಹುದು. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಮನೆಯಿಂದ ದೂರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳನ್ನು ಸೇವನೆ ಮಾಡದಿರಿ.
ಒಂದು ಕೆಲಸ ಮುಗಿಸಿದರೆ ಮತ್ತೊಂದು, ಅದು ಮುಗಿದರೆ ಇನ್ನೊಂದು ಹೀಗೆ ದಿನವಿಡೀ ಒಂದಲ್ಲ ಒಂದು ಕೆಲಸ ಬರುತ್ತಲೇ ಇರುತ್ತದೆ. ವೈಯಕ್ತಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳ ಬೇಡಿ. ಹೋಟೆಲ್ ಉದ್ಯಮಿಗಳಿಗೆ ಲೆಕ್ಕಾಚಾರದಲ್ಲಿ ಏನೋ ಹೆಚ್ಚು- ಕಡಿಮೆ ಆಗಿದೆ ಎಂಬ ಅನುಮಾನ ಮೂಡಬಹುದು. ಇದರಿಂದ ಜೋರು ಧ್ವನಿಯ ಮಾತುಕತೆ ಕೂಡ ಆಗಬಹುದು. ಸಾಯಿ ಬಾಬ ಮಂದಿರಕ್ಕೆ ಭೇಟಿ ನೀಡಿ, ದರ್ಶನ ಪಡೆಯಿರಿ.
ಣದ ದೃಷ್ಟಿಯಿಂದ, ಜವಾಬ್ದಾರಿ ಕಾರಣದಿಂದ ಈಗಿರುವುದಕ್ಕಿಂತ ಭಾರೀ ಏರಿಕೆ ಆಗುವಂಥ ಕೆಲಸ ನಿಮಗೆ ಸ್ನೇಹಿತರು ಅಥವಾ ಗುರು ಸಮಾನರಾದವರು ಹೇಳುವ ಸಾಧ್ಯತೆ ಇದೆ. ಒಪ್ಪಿಕೊಳ್ಳುವ ಮುನ್ನ ನಿಮ್ಮ ವೈಯಕ್ತಿಕ ಜವಾಬ್ದಾರಿ ಹಾಗೂ ಸವಾಲುಗಳನ್ನು ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಸಂಗಾತಿಯ ಜತೆಗೆ ಮಾತುಕತೆ ಆಡುವಾಗ ಹೊಳೆಯುವ ಹೊಸ ಆಲೋಚನೆಗಳನ್ನು ಜಾರಿಗೆ ತರುವುದಕ್ಕೆ ಯತ್ನಿಸಿದರೆ ಭವಿಷ್ಯದಲ್ಲಿ ಅನುಕೂಲ ಇದೆ.
ಖರ್ಚು ಕೈ ಮೀರಿ ಹೋಗುತ್ತಿದೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಇತರರಿಗ ಇಷ್ಟು ಸಮಯ ಸಹಾಯ ಮಾಡುತ್ತಿದ್ದಲ್ಲಿ ಇನ್ನು ಮುಂದೆ ನಿಲ್ಲಿಸಿ ಬಿಡಬೇಕು ಎಂದು ಎನಿಸುತ್ತದೆ. ಸೋದರ ಸಂಬಂಧಿಗಳು ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದು. ಇದು ನಿಮ್ಮೆದುರು ಆಗಬಹುದು ಅಥವಾ ಬಂಧುಗಳ ಎದುರಲ್ಲಿ ಆಗಬಹುದು. ಮನೆಗೆ ಎಲೆಕ್ಟ್ರಿಕ್ ಉಪಕರಣಗಳನ್ನು ತರುವಂಥ ಯೋಗ ಇದೆ.
ನಿಮ್ಮ ಕೆಲಸಗಳನ್ನು ಗಡುವಿನೊಳಗೆ ಮುಗಿಸುವ ಬಗ್ಗೆ ಗಮನವನ್ನು ನೀಡಿ. ಸೌಂದರ್ಯ ಪ್ರಜ್ಞೆ ಹೆಚ್ಚಾಗಲಿದೆ. ಬ್ರ್ಯಾಂಡೆಡ್ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸ ಬದಲಾವಣೆ ಮಾಡುವ ಬಗ್ಗೆ ಬಲವಾದ ಆಲೋಚನೆ ಮೂಡಲಿದೆ. ಸ್ನೇಹಿತರ ನೇರಾನೇರ ಮಾತುಗಳಿಂದ ಮನಸ್ಸಿಗೆ ಬೇಸರ ಆಗುವಂಥ ಸಾಧ್ಯತೆ ಇದೆ. ವಿಮರ್ಶೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದಲ್ಲಿ ಭವಿಷ್ಯದಲ್ಲಿ ನಿಮಗೇ ಅನುಕೂಲ.
ನಿಮ್ಮ ಧೈರ್ಯದ ನಿರ್ಧಾರಗಳ ಮೇಲೆ ಯಶಸ್ಸು ಅವಲಂಬಿಸಿರುತ್ತದೆ. ಸಾಮರ್ಥ್ಯದ ಬಗ್ಗೆ ನಿಮಗೆ ಸಂದೇಹಗಳು ಬೇಡ. ದೊಡ್ಡ ಆರ್ಡರ್ ಗಳು ಬಂದಲ್ಲಿ, ದೀರ್ಘ ಕಾಲದ ಕೆಲಸಗಳು ಬಂದಲ್ಲಿ ಅದನ್ನು ಒಪ್ಪಿಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಿ. ಕಟ್ಟಡ ಕಾಂಟ್ರಾಕ್ಟ್ ಒಪ್ಪಿಕೊಳ್ಳುವಂಥವರಿಗೆ ಹಣಕಾಸಿನ ಅಗತ್ಯ ಹೆಚ್ಚಿಗೆ ಕಂಡುಬರುತ್ತದೆ. ಹೊಸ ವಸ್ತ್ರಾಭರಣ ಖರೀದಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ.