Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 21ರ ದಿನಭವಿಷ್ಯ

| Updated By: Ganapathi Sharma

Updated on: Jul 21, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 21ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 21ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 21ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಳೇ ಪ್ರೀತಿ- ಪ್ರೇಮ ಪ್ರಕರಣಗಳು ನೆನಪಾಗಿ ಕಾಡಲಿವೆ. ಸ್ವಂತ ವಿಚಾರಗಳನ್ನು ಇತರ ಆಪ್ತರ ಜತೆಗೆ ಹಂಚಿಕೊಳ್ಳುವಾಗ ಆಲೋಚನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ, ವೇತನ ಹೆಚ್ಚಳದ ಅವಕಾಶಗಳು ದೊರೆಯಲಿವೆ. ಮಕ್ಕಳ ವಿವಾಹಕ್ಕೆ ಪ್ರಯತ್ನ ಮಾಡುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ. ದೂರದ ಊರುಗಳಿಂದ ಶುಭ ಸುದ್ದಿ ಕೇಳಿಬರಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಇನ್ನೊಬ್ಬರ ಪರವಾಗಿ ನಿರ್ಧಾರ ತೆಗೆದುಕೊಳ್ಳುವಂಥ ಸನ್ನಿವೇಶಗಳಲ್ಲಿ ಅತ್ಯುತ್ಸಾಹ ತೋರಿಸುವಂಥ ಅಗತ್ಯ ಇಲ್ಲ. ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವಂಥ ಸಾಧ್ಯತೆಗಳಿರುತ್ತವೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ವಿನಾಕಾರಣ ವಾಗ್ವಾದಗಳಿಗೆ ಕಾರಣ ಆಗಬಹುದು. ಮಂಡಿ ನೋವಿನ ಸಮಸ್ಯೆ ಕಾಡುತ್ತಿರುವವರು ಕಡ್ಡಾಯವಾಗಿ ವೈದ್ಯರಲ್ಲಿ ತೋರಿಸಿಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಂಗಾತಿಯ ನೆನಪು, ಪ್ರೀತಿಯಿಂದ ಕಳೆದಂಥ ಕ್ಷಣಗಳು ನೆನಪಾಗಿ ಮನಸ್ಸಿಗೆ ಸಂತೋಷ ನೀಡಲಿವೆ. ಆಧ್ಯಾತ್ಮಿಕ ವಿಚಾರಗಳ ಕಡೆಗೆ ಮನಸ್ಸು ವಾಲುತ್ತದೆ. ಮೃದುವಾದ ಅಥವಾ ಸುಲಭವಾಗಿ ಜೀರ್ಣವಾಗುವಂಥ ಆಹಾರ ಸೇವನೆ ಮಾಡುವುದು ಒಳಿತು. ಇಎಂಐನಲ್ಲಿ ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಂಥ ಯೋಗ ಇದೆ. ವಾಹನ ಸರ್ವೀಸ್ ಗೆ ಬಿಡುವಂಥ ಅವಧಿ ಇದಾಗಿದ್ದಲ್ಲಿ ಕೂಡಲೇ ಸರ್ವೀಸ್ ಗೆ ಬಿಡುವುದು ಉತ್ತಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಉದ್ಯಮ, ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳುವ ಅನಿವಾರ್ಯ ಸೃಷ್ಟಿಯಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಇರುವವರು ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಆಗುವಂಥ ಯೋಗ ಇದೆ. ತೀರ್ಥಕ್ಷೇತ್ರಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ವಾಹನ ಚಾಲಕರು ಹೊಸ ವಾಹನಗಳನ್ನು ಖರೀದಿಸಲು ಹಣಕಾಸಿನ ಸಾಲಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಒದಗಿ ಬರಲಿದೆ. ಕಣ್ಣಿನ ಸಮಸ್ಯೆ ಆಗಬಹುದು, ಜಾಗ್ರತೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಅನಿರೀಕ್ಷಿತವಾಗಿ ಪ್ರಯಾಣ ಮಾಡಬೇಕಾಗುತ್ತದೆ. ಹೊಸ ಸಂಗತಿಗಳನ್ನು ಕಲಿತುಕೊಳ್ಳಲಿದ್ದೀರಿ. ಸಂಭಾವಿತರ ಸಹವಾಸದಿಂದ ನಿಮ್ಮ ಗೌರವ ಹೆಚ್ಚಾಗುವಂಥ ಯೋಗ ಇದೆ. ರಾಜಕಾರಣದಲ್ಲಿ ಇರುವವರಿಗೆ ತಮ್ಮನ್ನು ನಂಬಿದಂಥ ಅನುಯಾಯಿಗಳಿಗೆ ಅನುಕೂಲ ಮಾಡಿಕೊಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಸೋದರತ್ತೆಯ ಅನಾರೋಗ್ಯ ಚಿಂತೆಗೆ ಗುರಿ ಮಾಡುವಂಥ ಸಾಧ್ಯತೆ ಇದೆ. ಹೂಡಿಕೆ ವಿಚಾರದಲ್ಲಿ ಪ್ರಮುಖವಾದ ನಿರ್ಧಾರ ಮಾಡಬೇಕಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮಕ್ಕಳ ಆರೋಗ್ಯ ವಿಚಾರ ಈ ದಿನ ಪ್ರಾಶಸ್ತ್ಯ ಪಡೆಯುತ್ತದೆ. ದೂರ ಪ್ರಯಾಣ ಮಾಡುವಂಥವರು ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಇರಬೇಕು. ಅತ್ತೆ- ಮಾವನವರಿಗೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಜಾಗ್ರತೆಯಿಂದ ನೋಡಿಕೊಳ್ಳಿ. ಸೈನ್ಯ, ಆರಕ್ಷಕ ವೃತ್ತಿಯಲ್ಲಿ ಇರುವಂಥವರಿಗೆ ಕಡಿಮೆ ಬಡ್ಡಿಗೆ ಸಾಲ ದೊರೆಯುವಂಥ ಸಾಧ್ಯತೆ ಇದೆ. ಮನೆ ಕಟ್ಟಬೇಕು, ವಾಹನ ಖರೀದಿಸಬೇಕು ಎಂದಿರುವವರಿಗೆ ಅನುಕೂಲ ಒದಗಿಬರಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕಣ್ಣಿಗೆ ಕಂಡಿದ್ದೆಲ್ಲ ಖರೀದಿಸಬೇಕು ಎಂಬಂಥ ಉಮ್ಮೇದಿ ಈ ದಿನ ಬರುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಸುವಂಥವರು ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಳ್ಳುವುದು ತುಂಬ ಮುಖ್ಯವಾಗುತ್ತದೆ. ನೀರಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವಂಥವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಇತರರಿಗೆ ಸಾಲ ನೀಡುವಂಥ ಸನ್ನಿವೇಶಗಳು ಎದುರಾದಲ್ಲಿ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಇತರರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ದಾಖಲೆ- ಪತ್ರಗಳ ವ್ಯವಹಾರಗಳಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಿಚ್ಚಳವಾಗಿ ಕಾಣುವಂಥ ವಿಚಾರಗಳ ಬಗ್ಗೆ ಅಭಿಪ್ರಾಯ ಹೇಳುವಾಗ ಕೂಡ ಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಳ್ಳುವುದು ಮುಖ್ಯವಾಗುತ್ತದೆ. ಹೊಸದಾಗಿ ಸ್ನೇಹಿತರಾದವರ ಜತೆಗೆ ಏಕಾಏಕಿ ವ್ಯವಹಾರ ನಡೆಸುವುದು ಒಳ್ಳೆಯದಲ್ಲ. ನಿಮ್ಮ ನೇರವಂತಿಕೆಯ ಮಾತುಗಳಿಂದಾಗಿ ಅಹಂಕಾರಿ ಎಂದು ಹಣೆಟ್ಟಿ ಕಟ್ಟುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹುದ್ದೆ, ಜವಾಬ್ದಾರಿಗಳು ಹೆಗಲೇರಲಿವೆ. ಹೊಸ ಪ್ರಾಜೆಕ್ಟ್ ಗಾಗಿ ಅಡ್ವಾನ್ಸ್ ನೀಡುವಂಥ ಸಾಧ್ಯತೆ ಇದೆ. ಇಷ್ಟು ಸಮಯ ನಿಮ್ಮ ಬಗ್ಗೆ ಅಭಿಮಾನ ತೋರುತ್ತಿದ್ದವರಿಂದ ಅನುಕೂಲಗಳು ಒದಗಿಬರಲಿವೆ. ವ್ಯವಹಾರ ವಿಸ್ತರಣೆ ಮಾಡಬೇಕು ಎಂದಿರುವವರಿಗೆ ಸ್ನೇಹಿತರು- ಸಂಬಂಧಿಕರಿಂದ ಸಹಾಯ ದೊರೆಯಲಿದೆ. ಅನಿರೀಕ್ಷಿತವಾಗಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ.