Kannada News Horoscope Daily horoscope based on numerology predictions of July 31 according to number of birth dates as per numerology in Kannada
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 31ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 31ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 31ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ಹಿಂದೆ ನೀವು ಕೆಲಸ ಮಾಡಿದ್ದ ಸಂಸ್ಥೆಯಿಂದಲೋ ಅಥವಾ ನಿಮಗೆ ಮೇಲಧಿಕಾರಿಯಾಗಿ ಇದ್ದಂಥವರಿಂದಲೋ ಉದ್ಯೋಗ ಅವಕಾಶಗಳ ಬಗ್ಗೆ ಆಹ್ವಾನ ದೊರೆಯುವಂಥ ಸಾಧ್ಯತೆ ಇದೆ. ನಿಮ್ಮ ಫೋನ್ ಅನ್ನು ಸರಿಯಾಗಿ ಇರಿಸಿಕೊಳ್ಳುವ ಬಗ್ಗೆ ಲಕ್ಷ್ಯ ನೀಡಿ. ಇಲ್ಲದಿದ್ದಲ್ಲಿ ಉತ್ತಮವಾದ ಅವಕಾಶವೊಂದು ಕೈ ಜಾರಿ ಹೋಗುವ ಸಾಧ್ಯತೆಗಳಿವೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೊಸ ಪ್ರಾಜೆಕ್ಟ್ ಹುಡುಕಿಕೊಂಡು ಬರುವಂಥ ಯೋಗ ಇದೆ. ಈ ದಿನ ನಿಮ್ಮ ಸೌಂದರ್ಯ ಕಾಳಜಿ ಹೆಚ್ಚಾಗಲಿದ್ದು, ಇದರ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ನೀರಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳುವಂಥ ದಾರಿಗಳು ಗೋಚರ ಆಗಲಿವೆ.
ಇನ್ನೇನು ಎಲ್ಲವೂ ಮುಗಿಯಿತು ಎಂದುಕೊಂಡ ಕೆಲಸ ಇನ್ನೂ ಸ್ವಲ್ಪ ಬಾಕಿ ಉಳಿದು, ಇನ್ನಷ್ಟು ದಿನಗಳಿಗೆ ಎಳೆದುಕೊಂಡು ಹೋಗುವಂಥ ಸೂಚನೆ ನಿಮಗೆ ದೊರೆಯುತ್ತದೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಗುಂಪುಗೂಡಿರುವ ಕಡೆ ಮಾತನಾಡುವುದಕ್ಕೆ ಹೋಗದಿರಿ. ಶಾಲೆ- ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಸಹೋದ್ಯೋಗಿಗಳ ಜತೆಗೆ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ನನ್ನದೇ ಸರಿ ಎಂದು ವಾದಿಸುತ್ತಾ ಮುಂದುವರಿಸುವುದು ಒಳ್ಳೆಯದಲ್ಲ. ಬಹಳ ಸಮಯದಿಂದ ನೀವು ಹುಡುಕಾಡುತ್ತಿದ್ದ ವ್ಯಕ್ತಿಯೋ ಅಥವಾ ವಸ್ತುವೋ ಈ ದಿನ ದೊರೆಯುವಂಥ ಅವಕಾಶಗಳು ಜಾಸ್ತಿ ಇವೆ. ಸಂಯಮ, ತಾಳ್ಮೆಯಿಂದ ಇದ್ದಷ್ಟೂ ಯಶಸ್ಸಿನ ಪ್ರಮಾಣ ಹೆಚ್ಚಾಗಲಿದೆ.
ಅಧ್ಯಾತ್ಮ ವಿಚಾರಗಳಲ್ಲಿ ಈ ದಿನ ನಿಮ್ಮ ಮನಸ್ಸು ಹೆಚ್ಚು ತೊಡಗಿಕೊಳ್ಳಲಿದೆ. ತೀರ್ಥಯಾತ್ರೆಗಳನ್ನು ಕೈಗೊಳ್ಳುವ ಅಥವಾ ದೇವತಾ ಅನುಷ್ಠಾನಗಳಲ್ಲಿ ಭಾಗೀ ಆಗುವಂಥ ಯೋಗ ನಿಮ್ಮ ಪಾಲಿಗಿದೆ. ಅತ್ತೆ- ಮಾವ ಅಥವಾ ತಂದೆ- ತಾಯಿಯ ಕನ್ನಡಕದ ಫ್ರೇಮ್, ಶ್ರವಣ ಸಾಧನ, ಪಾದರಕ್ಷೆಗಳಿಗೆ ಹೆಚ್ಚು ವೆಚ್ಚವಾಗುವಂಥ ಸಾಧ್ಯತೆ ಇದೆ. ಈ ದಿನ ಯಾವುದೇ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ವಾರಂಟಿ ಅವಧಿಯ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳುವುದು ಮುಖ್ಯ. ದ್ವಿಚಕ್ರ ವಾಹನ ಸವಾರರು ಸಾಧ್ಯವಾದಷ್ಟೂ ನಿಧಾನವಾಗಿ ಚಲಾಯಿಸುವುದು ಕ್ಷೇಮ. ಪ್ರೊಟೀನ್ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಪ್ರಮಾಣವನ್ನು ಸರಿಯಾಗಿ ಅನುಸರಿಸಿ.
ನಾನು ನಿರ್ಧರಿಸಿದ ಮೇಲೆ ಇತರರು ಒಪ್ಪಿಯೇ ಒಪ್ಪುತ್ತಾರೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ಯಾವುದಾದರೂ ಕೆಲಸದ ನಿಮಿತ್ತವೋ ಅಥವಾ ವಸ್ತುಗಳಿಗೋ ಅಥವಾ ಕಾರ್ಯಕ್ರಮಕ್ಕೋ ನೀವೇ ತೀರ್ಮಾನ ಕೈಗೊಂಡು, ಅಂತಿಮಗೊಳಿಸದಿರುವುದು ಕ್ಷೇಮ. ಮಸಾಲೆಯುಕ್ತ ಪದಾರ್ಥಗಳನ್ನೋ, ಕರಿದ ಪದಾರ್ಥಗಳನ್ನೋ ಈ ದಿನ ಸೇವನೆ ಮಾಡುವುದರಿಂದ ಕಡ್ಡಾಯವಾಗಿ ದೂರ ಇದ್ದುಬಿಡಿ. ಸಬ್ ರಿಜಿಸ್ಸ್ರಾರ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕಣ್ತಪ್ಪಿನಿಂದ ಆದ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾದೀತು. ಆದ್ದರಿಂದ ಮಾಮೂಲಿ ದಿನಗಳಿಗಿಂತ ಹೆಚ್ಚಿನ ಶ್ರದ್ಧೆ ವಹಿಸಿ ಕೆಲಸ ಮಾಡಿ.
ಕ್ಲಿಷ್ಟಕರ ಸಮಸ್ಯೆಗಳನ್ನು ಈ ದಿನ ಬಗೆಹರಿಸಲಿದ್ದೀರಿ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಶುಭ ಸುದ್ದಿ ಇದೆ. ಮನೆಯಲ್ಲಿ ನಿಮ್ಮ ಮೇಲೆ ಅವಲಂಬನೆ ಜಾಸ್ತಿ ಆಗಲಿದೆ. ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಎಲ್ಲ ಭಾರವೂ ನಿಮ್ಮ ಮೇಲೆ ಬೀಳಲಿದೆ ಎಂಬುದರ ಅರಿವು ನಿಮಗಿರಲಿ. ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಸ್ನೇಹಿತರು ಜತೆಗೆ ತೆರಳುವಂಥ ಯೋಗ ಇದೆ.
ಸಣ್ಣ- ಪುಟ್ಟ ಸಂಗತಿಗಳಿಗೂ ಈ ದಿನ ಸಿಕ್ಕಾಪಟ್ಟೆ ಮಹತ್ವ ಬಂದುಬಿಡುತ್ತದೆ. ಆದ್ದರಿಂದ ಆಮೇಲೆ ಮಾಡಿದರಾಯಿತು ಅಥವಾ ಇಷ್ಟು ಸಣ್ಣ ಕೆಲಸವನ್ನು ಬೇರೆಯವರಿಗೆ ಹೇಳಿ ಮಾಡಿಸೋಣ ಅಂತೆಲ್ಲ ಯೋಚನೆ ಮಾಡದಿರಿ. ಏಕೆಂದರೆ ಇದರಿಂದ ನಿಮ್ಮ ವರ್ಚಸ್ಸಿಗೆ ಪೆಟ್ಟು ಬೀಳುವಂಥ ಸಾಧ್ಯತೆಗಳು ಹೆಚ್ಚಿವೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುತ್ತೀರಿ ಎಂದಾದಲ್ಲಿ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ವಿಜ್ಞಾನಿಗಳಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಕ್ಕಳ ಶಿಕ್ಷಣ ಅಥವಾ ಮದುವೆ ವಿಚಾರವಾಗಿ ಬಹಳ ಒತ್ತಡದ ಸನ್ನಿವೇಶಗಳು ಎದುರಿಸಬೇಕಾದೀತು.
ಇದೇ ಮೊದಲ ಬಾರಿಗೆ ಎಂಬಂತೆ ನೀವು ಆರಂಭಿಸಿದ ಕೆಲಸಗಳ ಬೆಳವಣಿಗೆಗಳ ಬಗ್ಗೆ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡಲಿದೆ. ಕುಟುಂಬದವರಿಗೆ ಹೆಚ್ಚಿನ ಸಮಯ ನೀಡಲಾಗುತ್ತಿಲ್ಲ ಎಂಬ ಬಗ್ಗೆ ನಿಮಗೆ ಬೇಸರ ಉಂಟಾಗಲಿದೆ. ಲೇವಾದೇವಿ ವ್ಯವಹಾರ ಮಾಡುತ್ತಿರುವವರಿಗೆ ಬಿಡುವೇ ಇಲ್ಲದಷ್ಟು ಕೆಲಸಗಳು ಮೈ ಮೇಲೆ ಬರಲಿವೆ. ಇತರರ ನಿರೀಕ್ಷೆಗೆ ತಕ್ಕಂತೆ ಬದುಕುವುದಕ್ಕೆ ಪ್ರಯತ್ನ ಮಾಡುವುದಿರಲಿ, ಹಾಗೆ ಯೋಚಿಸುವುದು ಕೂಡ ತಪ್ಪು, ಈ ಬಗ್ಗೆ ನಿಮ್ಮ ಗಮನ ಇರಲಿ. ತಾತ್ಕಾಲಿಕವಾಗಿಯೋ ಅಥವಾ ಶಾಶ್ವತವಾಗಿಯೋ ಒಟ್ಟಿನಲ್ಲಿ ಕಾಡಂಚಿನ ಸ್ಥಳಗಳಲ್ಲಿ ವಾಸಿಸುತ್ತಿದ್ದೀರಿ ಅಂತಾದಲ್ಲಿ ಒಬ್ಬಂಟಿಯಾಗಿ ಓಡಾಡದಿರುವುದಂತೆ ಜಾಗ್ರತಿಯನ್ನು ವಹಿಸಿ.
ನೀವು ಏನೂ ಅಂದುಕೊಳ್ಳದೆಯೇ ಕೆಲವು ಗ್ಯಾಜೆಟ್ ಗಳನ್ನು ಖರೀದಿಸುವಂಥ ಯೋಗ ಈ ದಿನ ಇದೆ. ಈ ನಿರ್ಧಾರದಿಂದ ನಿಮ್ಮ ಭವಿಷ್ಯಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ. ಕಚೇರಿಯಲ್ಲಿ ಉದ್ಯೋಗ ಮಾಡಬೇಕಾದವರಿಗೆ ವಾತಾವರಣ ಒಂದಿಷ್ಟು ಕಿರಿಕಿರಿ ಉಂಟು ಮಾಡಲಿದೆ. ಸರ್ಕಾರಿ ಟೆಂಡರ್ ಗಳನ್ನು ತೆಗೆದುಕೊಂಡು ಕೆಲಸ ಮಾಡಿಸುವಂಥವರಿಗೆ ಒತ್ತಡದ ಸನ್ನಿವೇಶ ಎದುರಾಗಲಿದೆ. ಇತರರು ಬಂದು ತಾವಾಗಿಯೇ ಸಲಹೆ ಕೇಳದ ಹೊರತು ನೀವಾಗಿಯೇ ಏನನ್ನೂ ಹೇಳದಿರುವುದು ಉತ್ತಮ. ದೂರ ಪ್ರಯಾಣಕ್ಕೆ ತೆರಳುತ್ತಿದ್ದಲ್ಲಿ ಮುಖ್ಯವಾದ ವಸ್ತುಗಳು ಎಲ್ಲವನ್ನೂ ಇಟ್ಟುಕೊಂಡಿದ್ದೀರಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಪರೀಕ್ಷಿಸಿಕೊಳ್ಳಿ.
ನೀವು ಯಾವ ಕೆಲಸಗಳನ್ನು ಬಹಳ ಸಲೀಸಾಗಿ ಮಾಡಿ ಮುಗಿಸಬಲ್ಲಿರೋ ಅವು ಇತರರಿಗೆ ವಿಪರೀತ ಕಷ್ಟ ಆಗಲಿದೆ. ಮೇಲಧಿಕಾರಿಗಳಿಂದ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೇಳುವಂಥ ಯೋಗ ಇದೆ. ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಬಹಳ ಹಿಂದೆ ನೀವು ಪ್ರಯತ್ನಿಸಿದ್ದ ಉದ್ಯೋಗವೋ, ಸೈಟೋ ಅಥವಾ ಇಂಥದ್ದು ಯಾವುದಾದರೂ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ನೀವಾಗಿಯೇ ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಡುವ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ. ನಿಮ್ಮ ವೈಯಕ್ತಿಕ ವಿಚಾರಗಳನ್ನೋ ಅಥವಾ ವ್ಯಾಪಾರ- ವ್ಯವಹಾರದ ರಹಸ್ಯಗಳನ್ನೋ ಹೊಸದಾಗಿ ಪರಿಚಿತರಾದವರ ಜತೆಗೆ ಹಂಚಿಕೊಳ್ಳದಿರಿ.