ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 8ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಕುಟುಂಬದೊಂದಿಗೆ ಸಮಯ ಕಳೆಯಲಿದ್ದೀರಿ. ನಾಟಕ, ಸಂಗೀತ ಕಛೇರಿ, ರೆಸ್ಟೋರೆಂಟ್, ಕಿರು ಪ್ರವಾಸ ಹೀಗೆ ಯಾವುದಾದರೂ ರೀತಿಯಿಂದ ಒಟ್ಟಿಗೆ ಸಮಯ ಕಳೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ಸ್ವಂತ ವಿಚಾರಗಳ ಕಡೆಗೆ ಗಮನಕ್ಕೆ ನೀಡುವುದಕ್ಕೆ ಸಮಯ ಇಲ್ಲದ ಕಾರಣಕ್ಕೆ ಕೆಲವು ಕೆಲಸಗಳನ್ನು ಮುಂದೂಡುವಂಥ ಸಾಧ್ಯತೆ ಇದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಹಣಕಾಸಿನ ಹರಿವಿನಲ್ಲಿ ಇಳಿಕೆ ಆಗುತ್ತಿದೆಯೇನೋ ಎಂಬ ಭಾವ ಮೂಡಲಿದೆ.
ಎಲ್ಲ ಕಾಲಕ್ಕೂ ಒಂದೇ ಸೂತ್ರ ಕೆಲಸಕ್ಕೆ ಬಾರದು ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಪ್ರಭಾವಿಗಳ ಸಹಾಯ ಬೇಕಾಗಬಹುದು ಎಂಬುದು ಮನಸ್ಸಿಗೆ ಬರಲಿದೆ. ನೀವಾಗಿಯೇ ಕೊಂಡು ತಂದ ವಸ್ತುವೊಂದರ ಗುಣಮಟ್ಟ ಕಳಪೆ ಆಗಿದೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಕೆಲವು ಕಠಿಣವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ಹವ್ಯಾಸದಂತೆ ನೀವು ಇಷ್ಟು ಸಮಯ ಮಾಡಿಕೊಂಡು ಬಂದಿದ್ದ ವಿಚಾರವೊಂದು ನಿಮ್ಮ ಆದಾಯಕ್ಕೆ ದಾರಿ ಆಗಬಹುದಲ್ಲ ಎಂದು ಮನಸ್ಸಿಗೆ ಬರುತ್ತದೆ.
ರಾಜಕಾರಣದಲ್ಲಿ ಇರುವವರ ಮೇಲೆ ಆರೋಪಗಳು ಕೇಳಿಬರಲಿವೆ. ಯಾರು ನಿಮ್ಮ ವಿರುದ್ಧ ಎಂದಿಗೂ ಮಾತನಾಡಲಾರರು ಎಂದು ಅಂದುಕೊಂಡಿರುತ್ತೀರೋ ಅಂಥವರೇ ತಿರುಗಿ ಬೀಳುವ ಸಾಧ್ಯತೆ ಇದೆ. ಸಾರ್ವಜನಿಕ ವೇದಿಕೆಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಅಥವಾ ಯಾವುದೇ ಮಾಧ್ಯಮಗಳ ಎದುರು ನಿಮ್ಮ ಅಭಿಪ್ರಾಯ ಹೇಳುವಾಗ ಬಳಕೆ ಮಾಡುವ ಪದಗಳ ವಿಚಾರದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ, ಆ ನಂತರ ಮಾತನಾಡಿ.
ಇದ್ಯಾವುದೋ ನಮ್ಮ ಅಭಿರುಚಿಯ ಕೆಲಸ ಅಥವಾ ವ್ಯಕ್ತಿ ಅಲ್ಲ ಎಂದು ಬಲವಾಗಿ ಮನಸ್ಸಿಗೆ ಅನಿಸುವುದಕ್ಕೆ ಶುರುವಾಗುತ್ತದೆ. ಮೊದಲ ಸಲ ಕೈಗೆತ್ತಿಕೊಂಡ ಕೆಲವು ಕೆಲಸಗಳಲ್ಲಿ ಹಿನ್ನಡೆ ಆಗಬಹುದು ಹಾಗೂ ಸ್ವಲ್ಪ ಮಟ್ಟಿಗೆ ಹಣ ನಷ್ಟ ಆಗುವ ಸೂಚನೆ ಸಹ ದೊರೆಯಬಹುದು. ಇತರರ ಕಷ್ಟಗಳಿಗೆ ಸ್ಪಂದಿಸುವ ಅವಕಾಶ ಸಿಕ್ಕಲ್ಲಿ ಹಾಗೂ ನಿಮಗೆ ಸಹಾಯ ಮಾಡುವುದಕ್ಕೆ ಸಾಧ್ಯವಿದ್ದಲ್ಲಿ ನೆರವಾಗಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲ ಒದಗಿ ಬರಲಿದೆ.
ಚೌಕಟ್ಟು ಹಾಕಿಕೊಂಡಂತೆ ಕೆಲಸ- ಕಾರ್ಯಗಳು, ಮಾತು, ನಿರ್ಧಾರ ಮಾಡುವುದು ಈ ದಿನ ಬಹಳ ಮುಖ್ಯವಾಗುತ್ತದೆ. ಯಾವುದೋ ಒಂದು ಕ್ಷಣದಲ್ಲಿ ಬರುವ ಉದ್ವೇಗ ಅಥವಾ ಆಲೋಚನೆಯ ಕೈಗೆ ಬುದ್ದಿ ನೀಡದಿರಿ. ಬಹಳ ಕಾಲದಿಂದ ಅನುಷ್ಠಾನಕ್ಕೆ ತರಬೇಕು ಎಂದಿದ್ದ ವಿಚಾರ ಈ ದಿನ ಜಾರಿಗೆ ತರುವುದಕ್ಕೆ ಅವಕಾಶ ಇದೆ. ಸಂಗಾತಿಗೆ ಆರ್ಥಿಕ ಸ್ಥಿತಿ ಕೈ ಕೊಡುತ್ತಿದೆಯೇನೋ ಎಂದು ಮನಸ್ಸಿಗೆ ಬರಲಿದೆ. ಆದರೆ ಈ ಬಗ್ಗೆ ಚರ್ಚೆ ಮಾಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ.
ನಿಮ್ಮ ವಸ್ತು, ವಾಹನ, ಕೆಲಸ ಇಂಥವುಗಳ ಮೇಲೆ ಮಾತ್ರ ಅಧಿಕಾರ ಚಲಾಯಿಸಬಹುದು. ಅದನ್ನು ಬಿಟ್ಟು ಆಪ್ತರು, ಬಹಳ ಹತ್ತಿರದ ಸ್ನೇಹಿತರು ಅಂದುಕೊಂಡು ಅಧಿಕಾರ ಚಲಾಯಿಸುವುದಕ್ಕೆ ಮುಂದಾದರೆ ಅವಮಾನಕ್ಕೆ ಗುರಿ ಆಗಬೇಕಾದೀತು. ಹೊಸ ಬಟ್ಟೆ ಅಥವಾ ಆಭರಣಗಳು, ವಾಚ್ ಇಂಥವನ್ನು ಖರೀದಿ ಮಾಡಬೇಕು ಎಂದೆನಿಸದರೆ ದಿನದ ಮಟ್ಟಿಗೆ ಮುಂದಕ್ಕೆ ಹಾಕುವುದು ಒಳ್ಳೆಯ ನಿರ್ಧಾರ ಎನಿಸುತ್ತದೆ.
ಸಂಬಂಧಿಕರು ಅಥವಾ ಸ್ನೇಹಿತರ ಮನೆಗೆ ತೆರಳಬೇಕಾಗಬಹುದು. ಈ ದಿನ ಒಳ್ಳೆ ಭೋಜನ, ತಿಂಡಿ ಸವಿಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಕೆಲವು ಸಲಹೆ, ಸೂಚನೆಗಳು ಕೇಳಿಬರಲಿದೆ. ವಿಲಾಸಿ ವಸ್ತುಗಳನ್ನು ಖರೀದಿಸಬೇಕು ಎಂದು ಕ್ರೆಡಿಟ್ ಕಾರ್ಡ್ ಬಳಸುವುದಕ್ಕೆ ಮುನ್ನ ಅಥವಾ ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದಂತೆ ಸಾಲ ದೊರೆಯುತ್ತದೆ ಎಂದು ಕೊಳ್ಳುವ ಮುನ್ನ ಆ ವಸ್ತುವಿನ ಅಗತ್ಯ ನಿಮಗಿದೆಯೇ ಎಂದು ಸಾವಿರ ಬಾರಿ ಆಲೋಚನೆ ಮಾಡಿ.
ಯಾರೋ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರು, ನಿಮ್ಮ ಕುಟುಂಬದ ಕುರಿತು ಹಗುರವಾಗಿ ಮಾತನಾಡಿದರು ಎಂದು ಚಾಡಿ ಹೇಳಿದರೆ ಅಂಥ ಮಾತುಗಳನ್ನು ಈ ದಿನ ನಿರ್ಲಕ್ಷ್ಯ ಮಾಡುವುದು ಬಹಳ ಮುಖ್ಯ. ಸೋದರರ ಮಧ್ಯೆ ಮನಸ್ತಾಪ, ಭಿನ್ನಾಭಿಪ್ರಾಯಗಳು ಉದ್ಭವಿಸುವ ಸಾಧ್ಯತೆಗಳು ಸಹ ಇವೆ. ನೀವು ಊಹೆ ಮಾಡಿದ್ದಕ್ಕಿಂತ ಕೆಲವು ಸಂಬಂಧಗಳು ಸರಿಪಡಿಸಲಾಗದಷ್ಟು ಹಾಳಾಗಿವೆ ಎಂಬುದು ಅರಿವಿಗೆ ಬರುತ್ತದೆ.
ಕೆಲವು ಕೆಲಸಗಳನ್ನು ದೇವರ ಮೇಲೆ ಭಾರ ಹಾಕಿ, ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಈಗಾಗಲೇ ಆರಂಭಿಸಿದ ಹಾಗೂ ಬಹುತೇಕ ಮುಕ್ತಾಯ ಹಂತದಲ್ಲಿ ಇರುವಂಥದ್ದು ಇದೇ ಹಂತದಲ್ಲಿ ನಿಂತುಬಿಡುವಂಥ ಆತಂಕ ಎದುರಾಗಲಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಂಗಾತಿ ಜತೆಗೆ ಜೋರು ಮಾತಿನ ವಾಗ್ವಾದಗಳು ನಡೆಯುವಂತಹ ಅವಕಾಶಗಳಿವೆ. ಅನ್ಯಮನಸ್ಕರಾಗಿ ವಾಹನ ಚಲಾಯಿಸಬೇಡಿ, ಸಣ್ಣ ಮಟ್ಟದ್ದಾದರೂ ಅಪಘಾತ, ಗಾಯಗಳಾಗುವಂತಹ ಯೋಗ ಇದೆ.