ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 12ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಕ್ಲಿಷ್ಟಕರ ಸಮಸ್ಯೆಗಳನ್ನು ಈ ದಿನ ಬಗೆಹರಿಸಲಿದ್ದೀರಿ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಶುಭ ಸುದ್ದಿ ಇದೆ. ಮನೆಯಲ್ಲಿ ನಿಮ್ಮ ಮೇಲೆ ಅವಲಂಬನೆ ಜಾಸ್ತಿ ಆಗಲಿದೆ. ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಎಲ್ಲ ಭಾರವೂ ನಿಮ್ಮ ಮೇಲೆ ಬೀಳಲಿದೆ ಎಂಬುದರ ಅರಿವು ನಿಮಗಿರಲಿ. ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಸ್ನೇಹಿತರು ಜತೆಗೆ ತೆರಳುವಂಥ ಯೋಗ ಇದೆ.
ಹೊಸ ಪ್ರಾಜೆಕ್ಟ್‌ವೊಂದರಲ್ಲಿ ಬಹಳ ಮುಖ್ಯವಾದ ಜವಾಬ್ದಾರಿಯನ್ನು ನೀವು ವಹಿಸಬೇಕಾಗುತ್ತದೆ. ಮೇಲು ನೋಟಕ್ಕೆ ಇದು ಹೆಚ್ಚು ಸಮಯ ತೆಗೆದುಕೊಳ್ಳಲ್ಲ ಅನಿಸಬಹುದು. ಆದರೆ ಮುಂದೆ ಇದಕ್ಕಾಗಿಯೇ ಜಾಸ್ತಿ ತೊಡಗಿಸಿಕೊಳ್ಳುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಆದ್ದರಿಂದ ಮೊದಲಿಗೆ ಸ್ಪಷ್ಟ ಚಿತ್ರಣ ತೆಗೆದುಕೊಳ್ಳಿ. ನಿಮ್ಮ ಅಭಿಪ್ರಾಯ, ನಿರ್ಧಾರಗಳಿಗೆ ಪ್ರಾಮುಖ್ಯ ಇರುತ್ತದೆ. ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗೆ ಪ್ರಯತ್ನ ಪಡುತ್ತಿದ್ದರೆ ಸೂಕ್ತ ಸಂಬಂಧವೊಂದು ಹುಡುಕಿಕೊಂಡು ಬರುವಂಥ ಯೋಗ ಇದೆ.
ಕುಟುಂಬದವರ ಸಲುವಾಗಿ ಖರ್ಚು ಮಾಡಲಿದ್ದೀರಿ. ಮಕ್ಕಳ ಬೆಳವಣಿಗೆಯಿಂದ ಮನಸ್ಸಿಗೆ ನೆಮ್ಮದಿ, ಉಲ್ಲಾಸ ಇರಲಿದೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಈ ದಿನ ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಶೀತ, ಕಫದ ಸಮಸ್ಯೆ ಕಾಡಬಹುದು. ತಂಪಾದ ಪದಾರ್ಥಗಳ ಸೇವನೆಯಿಂದ ದೂರ ಇರಿ. ಮಹಿಳೆಯರು ಅಡುಗೆ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುವ ವೇಳೆ ಎಚ್ಚರಿಕೆಯಿಂದ ಇರಬೇಕು.
ಒಂದು ರೀತಿಯ ನೆಮ್ಮದಿ ನೆಲೆಸಲಿದೆ. ಅಂದುಕೊಂಡಿದ್ದನ್ನು ಮಾಡಿದ, ಹೇಳಬೇಕೆಂದಿದ್ದನ್ನು ಹೇಳಿದ ಸಮಾಧಾನ ನಿಮಗೆ ದೊರೆಯಲಿದೆ. ದೂರದ ಬಂಧುಗಳು ಹೊಸ ಸಂಗತಿಯೊಂದು ತಿಳಿಸಲಿದ್ದಾರೆ. ಇದು ನಿಮಗೆ ಭವಿಷ್ಯದಲ್ಲಿ ಹೇಗಾದರೂ ನೆರವಿಗೆ ಬರಲಿದೆ. ಇಂದು ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಅದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಮೊದಲ ಬಾರಿಗೆ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದಾದರೆ ಆನ್ ಲೈನ್, ವಾಟ್ಸಾಪ್ ಇಂಥವುಗಳ ಮೂಲಕ ಬರುವ ಸಲಹೆಗಳನ್ನು ನಂಬಿಕೊಂಡು ಹಣ ಹೂಡದಿರಿ.
ನಾಲಗೆ ಮೇಲೆ ಈ ದಿನ ಹಿಡಿತ ಬಹಳ ಮುಖ್ಯ. ಒಂದೋ ಮಾತಾದರೂ ಸರಿ ಅಥವಾ ಆಹಾರವಾದರೂ ಸರಿಯೇ ಮಿತಿಯಲ್ಲಿ ಇರಲಿ. ಯಾರದೋ ಪ್ರೋತ್ಸಾಹಕ್ಕೆ ನೀವು ಉಬ್ಬಿ ಹೋಗದಿರಿ. ಕಾಲು ನೆಲದ ಮೇಲಿರಲಿ. ರಾಜಕಾರಣದಲ್ಲಿ ಇರುವವರಿಗೆ ವಿವಾದಗಳಿಗೆ ಸಿಲುಕಿಕೊಳ್ಳುವಂತಹ ದಿನ ಇದಾಗಿರಲಿದೆ. ಆದರೆ ನೀವು ನಿರೀಕ್ಷೆಯೇ ಮಾಡಿರದಂತೆ ಇತರರ ನೆರವು- ಮಾರ್ಗದರ್ಶನ ದೊರೆಯಲಿದೆ.
ನೀವು ಬಹಳ ನಿರೀಕ್ಷೆ ಮಾಡುತ್ತಿರುವಂಥ ಸುದ್ದಿಯೊಂದು ಬರಲಿದೆ. ಅನಿರೀಕ್ಷಿತವಾಗಿ ಕೆಲವು ಜವಾಬ್ದಾರಿಗಳು ಹೆಚ್ಚಾಗಬಹುದು. ಆದರೆ ಇದರಿಂದ ನಿಮ್ಮ ಪ್ರಾಮುಖ್ಯ ಹೆಚ್ಚಾಗಲಿದೆ. ಎಲ್ಲರೂ ತಮ್ಮಿಂದ ಆಗದು ಎಂದು ಕೈ ಬಿಟ್ಟ ಕೆಲಸವನ್ನು ನೀವು ಪೂರ್ಣಗೊಳಿಸಿ, ಮೆಚ್ಚುಗೆಯನ್ನು ಪಡೆದುಕೊಳ್ಳಲಿದ್ದೀರಿ. ಹಳೇ ಪರಿಚಯ ಎಂದು ಹೇಳಿಕೊಂಡು ಕೆಲ ವ್ಯಕ್ತಿಗಳು ನಿಮ್ಮ ಬಳಿ ಅಲ್ಪಾವಧಿಗೆ ಸಾಲ ಕೇಳಿಕೊಂಡು ಬರಬಹುದು.
ನಿಮಗೆ ಬರಬೇಕಾದ ಹಣವಿದ್ದಲ್ಲಿ ಒಂದೋ ತಡೆ ಆಗಬಹುದು ಅಥವಾ ಪೂರ್ಣ ಮೊತ್ತ ಬಾರದಿರಬಹುದು. ಯಾವುದೇ ವಿಚಾರವನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಡಿ. ಕಲಿಕೆಗೆ ಸಹಾಯ ಆಗುವಂಥ ವ್ಯಕ್ತಿಯೊಬ್ಬರ ಪರಿಚಯ ಆಗುವಂಥ ಯೋಗ ನಿಮ್ಮ ಪಾಲಿಗಿದೆ. ಸೈಟು ಖರೀದಿ ಮಾಡಬೇಕು ಅಂತಿದ್ದಲ್ಲಿ ಇಷ್ಟ ಆಗುವಂಥ ಜಾಗ ಸಿಗಲಿದೆ.
ಮೊಬೈಲ್ ಫೋನ್, ಟ್ಯಾಬ್‌ಲೆಟ್‌ನಂಥ ಗ್ಯಾಜೆಟ್‌ಗಳನ್ನು ಖರೀದಿಸುವ ಮನಸ್ಸು ಮಾಡಲಿದ್ದೀರಿ. ಈ ವಿಷಯದಲ್ಲಿ ಯಾವುದೇ ಪ್ರಯೋಗಕ್ಕೆ ಇಳಿಯಬೇಡಿ. ಎಲ್ಲ ಸಂದರ್ಭದಲ್ಲೂ ಸಲಹೆಗಳು ಉತ್ತಮವಾಗಿ ಫಲಿತಾಂಶ ಕೊಡುತ್ತವೆ ಎನ್ನುವುದಕ್ಕೆ ಸಾಧ್ಯವಿಲ್ಲ. ಪ್ರಯಾಣದಿಂದ ಲಾಭ ಇದೆ. ನೀವು ಕೆಲವು ಕೆಲಸಗಳನ್ನು ಬೇರೆಯವರಿಗೆ ವಹಿಸುವುದೇ ಲಾಭದಾಯಕ ಎಂದೆನಿಸುತ್ತದೆ. ಕ್ಷಣ ಕಾಲದ ಮೋಹಕ್ಕೆ ಸಿಲುಕಿ, ತಪ್ಪಾದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಯಾವ ತೀರ್ಮಾನವನ್ನೇ ಆದರೂ ಕೂತು, ಸಮಾಧಾನವಾಗಿ ಆಲೋಚಿಸಿ ಆ ನಂತರ ತೆಗೆದುಕೊಳ್ಳಿ.
ಬಂಡೆಗೆ ತಲೆ ಚಚ್ಚಿಕೊಳ್ಳುವುದು ಬುದ್ಧಿವಂತಿಕೆಯಲ್ಲ, ಹುಂಬತನ. ನಿಮ್ಮ ಮೂಲ ಸ್ವಭಾವದಿಂದ ಹೊರಗೆ ಬಂದು ಆಲೋಚಿಸುವ ಸಮಯ ಇದು. ವೃತ್ತಿ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳನ್ನು ನಾಜೂಕಾಗಿ ನಿರ್ವಹಣೆ ಮಾಡಿ. ವೈಯಕ್ತಿಕವಾಗಿ ತೆಗೆದುಕೊಂಡು, ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಎದುರಾಳಿಯ ಸಾಮರ್ಥ್ಯವನ್ನು ಗುರುತಿಸಿ, ಮುಂದುವರಿಯಿರಿ. ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತೀರೋ ಅದೇ ಉದ್ದೇಶಕ್ಕಾಗಿ ಬಳಸುವ ಕಡೆಗೆ ಗಮನ ನೀಡಿ. ಇತರರು ಹೊಗಳಿದರು ಎಂಬ ಕಾರಣಕ್ಕೆ ನಿಮ್ಮ ಸಾಮರ್ಥ್ಯದ ನಿಜವಾದ ತಾಕತ್ತನ್ನು ಮೀರಿ ಆಲೋಚಿಸಬೇಡಿ.