Nithya Bhavishya: ಇಂದಿನ ರಾಶಿಭವಿಷ್ಯ, ಹೊಗಳುವ ಸ್ವಭಾವದ ಜನರ ಸಹವಾಸದಿಂದ ಈ ರಾಶಿಯವರಿಗೆ ತೊಂದರೆ ಆಗಲಿದೆ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಆಯುಷ್ಮಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಬೆಳಗ್ಗೆ 07:41 ರಿಂದ 09:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:55 ರಿಂದ ಮಧ್ಯಾಹ್ನ 12:32ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:46ರ ವರೆಗೆ.
ಧನುಸ್ಸು: ದೈವದ ಮೇಲಿನ ನಂಬಿಕೆಯಿಂದ ನೀವು ಹೆಚ್ಚು ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಹಠದ ಸ್ವಭಾವವು ಪ್ರತಿಯೊಂದು ಸಮಸ್ಯೆಯನ್ನು ಸರಿಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಹಳೆಯ ಘಟನೆಗಳ ನೆನಪಿನಿಂದ ಮನಸ್ಸು ಭಾರವಾಗಬಹುದು. ಕುಟುಂಬದಲ್ಲಿ ಘನತೆಯನ್ನು ಕಾಪಾಡಿಕೊಳ್ಳಲು ನೀವು ತಾಳ್ಮೆಯನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಯಾವ ಬಂಧಗಳನ್ನೂ ಬಯಸದೇ ಮನಸ್ಸಿಗೆ ಒಂಟಿತನ ಬೇಕು ಎನಿಸಬಹುದು. ಕ್ರಿಯಾತ್ಮಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿರಲಿದೆ. ಆಕಸ್ಮಿಕವಾದ ಕೆಲವು ಸಂತೋಷಕರ ಸುದ್ದಿಗಳಿಂದ ಮನಸ್ಸು ಅರಳುವುದು.
ಮಕರ: ಹೊಸ ಕೆಲಸಗಳಲ್ಲಿ ತತ್ಪರತೆ ಹೆಚ್ಚಾಗಿ ಕಾಣಿಸುವುದು. ಮಕ್ಕಳ ವರ್ತನೆಗಳು ನಿಮಗೆ ಆಶ್ಚರ್ಯಕರ ಎನಿಸಬಹುದು. ಜೀವನ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಇಂದಿನ ಕರ್ತವ್ಯಗಳನ್ನು ನಿರ್ಲಕ್ಷಿಸದೇ ಮಾಡಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಒಳ್ಳೆಯ ಭಾವನೆಗಳು ಕಾರ್ಯದಲ್ಲಿ ಯಶಸ್ಸನ್ನು ತರುತ್ತವೆ. ಪ್ರಮುಖ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಕೆಟ್ಟ ಮತ್ತು ಎದುರು ಹೊಗಳುವ ಸ್ವಭಾವದ ಜನರ ಸಹವಾಸದಿಂದ ನಿಮಗೆ ತೊಂದರೆ ಆಗಲಿದೆ.
ಕುಂಭ: ಬೆರೆಯುವ ಮೂಲಕ ನಿಮ್ಮ ಸಂಬಂಧಗಳು ಗಟ್ಟಿಯಾಗುವುವು. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಮನಸ್ಸನಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ಹಳೆಯ ಮನಸ್ತಾಪಗಳನ್ನು ಬಿಟ್ಟು ಸಂಬಂಧವನ್ನು ಮಧುರವಾಗಿಸಿ. ದಾಂಪತ್ಯದ ಸುಖವು ಇಂದು ಸ್ವಲ್ಪ ಮಾತ್ರ ಸಿಗಬಹುದು. ಆತುರದ ಕಾರ್ಯಗಳಿಂದ ನಷ್ಟವಾಗುವ ಸಾಧ್ಯತೆ. ರಾಜಕಾರಣಿಗಳ ಜೊತೆ ಆತ್ಮೀಯತೆ ಹೆಚ್ಚಾಗಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಯ ವರ್ತನೆಯಿಂದ ತೊಂದರೆ ಉಂಟಾಗಬಹುದು.
ಮೀನ: ಹಿಂದಿನದನ್ನು ಮರೆತು ವರ್ತಮಾನದಲ್ಲಿ ಬದುಕಲು ಪ್ರಯತ್ನಿಸಿ, ಆನಂದವು ಅಧಿಕವಾಗುವುದು. ಹೊಸ ಕ್ರಮಗಳ ಮೂಲಕ ಉದ್ಯೋಗದಲ್ಲಿ ಲಾಭವನ್ನು ಗಳಿಸುವಿರಿ. ಚಂಚಲವಾದ ಮನಸ್ಸಿನಿಂದ ನೀವು ಗುರಿಯನ್ನು ಸಾಧಿಸಲು ಕಷ್ಟಪಡುವಿರಿ. ನಿಮ್ಮಂತಹ ಮಾನಸಿಕವಾಗಿ ಬಲವುಳ್ಳವರು ಹೃದಯಶೂನ್ಯ ಆಗಬಾರದು. ಇಡೀ ಕುಟುಂಬದ ಹೊರೆ ನಿಮ್ಮ ಮೇಲೆ ಇಂದು ಬರಬಹುದು. ಮನಸ್ಸಿನಲ್ಲಿ ಭವಿಷ್ಯದ ಬಗ್ಗೆ ಹೆಚ್ಚು ಯೋಚನೆಗಳು ಸುಳಿದಾಡಬಹುದು. ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ನೀವು ಉತ್ಸಾಹದಿಂದ ಸಿದ್ಧರಾಗಿರುವಿರಿ.
-ಲೋಹಿತಶರ್ಮಾ ಇಡುವಾಣಿ