Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಸ್ತ್ರೀಯರ ಜೊತೆ ಕಲಹ ಮಾಡಬೇಡಿ, ಸಮಸ್ಯೆ ಬರಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 13 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದಶಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಸೌಭಾಗ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 03:46 ರಿಂದ 05:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:09ರ ವರೆಗೆ.
ಸಿಂಹ: ನಿಮ್ಮ ಆರೋಗ್ಯ ಸಮಸ್ಯೆಗೆ ಕಾಳಜಿ ಅತ್ಯವಶ್ಯಕ. ಅನಗತ್ಯ ವಾದಗಳು ಹಾಗೂ ಟೀಕೆಗಳನ್ನು ನಿಲ್ಲಿಸಿ. ಹಳೆಯ ಹೂಡಿಕೆಯಿಂದ ನಷ್ಟ ಉಂಟಾಗಬಹುದು. ಆದಾಯವು ಸಾಮಾನ್ಯವಾಗಿಯೇ ಇರಲಿದ್ದು ಹೆಚ್ಚು ಯಶಸ್ಸನ್ನು ನೀವು ಗಳಿಸುವಿರಿ. ನಿಮ್ಮ ಸ್ವಂತ ಪ್ರತಿಭೆಯನ್ನು ಪ್ರಕಟಪಡಿಸಲು ನಿಮಗೆ ಹಲವು ಅವಕಾಶಗಳು ಸಿಗಲಿವೆ. ಸಹೋದ್ಯೋಗಿಯ ಸಲಹೆಯು ವಿರುದ್ಧ ಫಲವನ್ನು ನೀಡಬಹುದು. ಇನ್ನೊಬ್ಬರಿಗೆ ತೊಂದರೆಯಾಗುವಂತಹ ನಿರ್ಧಾರಗಳನ್ನು ಕೈಬಿಡುವುದು ಯೋಗ್ಯ. ವೃತ್ತಿಜೀವನದಲ್ಲಿ ಸವಾಲುಗಳು ಬರಬಹುದು.
ಕನ್ಯಾ: ಉತ್ತಮ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲಿದ್ದೀರಿ. ನಿಮ್ಮ ಅಡಿಯಲ್ಲಿ ಬರುವ ನೌಕರರ ನಡವಳಿಕೆಯನ್ನು ಪ್ರಶ್ನಿಸಬೇಕಾದ ಸಂದರ್ಭವು ಬರಬಹುದು. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಪ್ರೇಮದಲ್ಲಿ ಗೊಂದಲ ಉಂಟಾಗಬಹುದು. ಸಹೋದರನ ಪ್ರಗತಿಯಿಂದ ನಿಮಗೆ ಸಂತೋಷವಾಗಲಿದೆ. ಆರೋಗ್ಯವು ಸಾಮಾನ್ಯವಾಘಿ ಇರಲಿದೆ. ವ್ಯವಹಾರದಲ್ಲಿ ಎಂದಿಗಿಂತ ಅಧಿಕಲಾಭವನ್ನು ನೀವು ಗಳಿಸುವಿರಿ. ಆರ್ಥಿಕ ವ್ಯವಹಾರದಲ್ಲಿ ನಿಮ್ಮ ಜಾಗರೂಕತೆ ಸಾಕಾಗದು, ನಷ್ಟವು ಉಂಟಾಗಬಹುದು. ಸಂಗಾತಿಯು ನಿಮ್ಮ ಮೇಲೆ ಅನುಮಾನಗೊಳ್ಳಬಹುದು. ತಾಯಿಯ ಸಂಬಂಧಿಕರಿಂದ ಉದ್ಯೋಗದ ನಿಮಿತ್ತ ಒತ್ತಡ ಬರಬಹುದು.
ತುಲಾ: ಇಂದು ಜಾಣ್ಮೆಯಿಂದ ಮಾಡಿದ ಕೆಲಸಕ್ಕೆ ನಿಮಗೆ ಮೆಚ್ಚುಗೆ ಸಿಗುವುದು. ವೃತ್ತಿಜೀವನದಿಂದ ಗೌರವ ಬರಲಿದೆ. ನಿಮ್ಮ ಹೊಸ ಉದ್ಯಮವು ಅಭಿವೃದ್ಧಿಯನ್ನು ಕಾಣುತ್ತದೆ. ಕುಟುಂಬದಲ್ಲಿ ಸಂತೋಷವಿರಲಿದೆ. ಪ್ರಭಾವಿ ಜನರ ಜೊತೆ ಸಂಬಂಧಗಳು ಏರ್ಪಡಬಹುದು. ಆಪ್ತರ ವರ್ತನೆಯಿಂದ ಕೋಪ ಉಂಟಾಗಬಹುದು. ಇಂದು ನೀವು ಭೋಗವಸ್ತುಗಳ ಜೊತೆ ಹೆಚ್ಚು ಕಾಲ ಕಳೆಯುವಿರಿ. ಅಲ್ಪ ಪ್ರಯತ್ನದಿಂದ ನೀವು ದೊಡ್ಡ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಪತ್ನಿಯಿಂದ ನೀವು ಶುಭವಾರ್ತೆಯನ್ನು ಕೇಳುವಿರಿ.
ವೃಶ್ಚಿಕ: ಈ ದಿನ ನಿಮ್ಮ ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗಲಿದೆ. ಅತಿಯಾದ ಆಲೋಚನೆಯಿಂದ ತಲೆನೋವು ಉಂಟಾಗಬಹುದು. ಸಹೋದರರ ನಡುವೆ ಕಲಹವಾಗುವ ಸಾಧ್ಯತೆ ಇದೆ. ತಂದೆಯ ಒರಟು ಸ್ವಭಾವವು ನಿಮಗೆ ಮುಜುಗರ ಉಂಟುಮಾಡಬಹುದು. ಹೊಸ ಆದಾಯದ ಮೂಲಗಳನ್ನು ಇಂದು ಕಂಡುಕೊಳ್ಳುವಿರಿ. ರಾಜಕಾರಣಿಗಳಿಗೆ ಉತ್ತಮ ಸಮಯವು ಇದಾಗಿದೆ. ದುರಾಸೆಯಲ್ಲಿ ಸಿಕ್ಕಿಕೊಂಡು ನಷ್ಟವನ್ನು ಅನುಭವಿಸುವಿರಿ. ಸ್ತ್ರೀಯರ ಜೊತೆ ಕಲಹ ಬೇಡ. ಸಮಸ್ಯೆಗಳು ಉಂಂಟಾದಾವು. ಸಂಬಂಧಿಕರ ಜೊತೆ ಮನಸ್ತಾಪ ಏಳಬಹುದು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.
-ಲೋಹಿತಶರ್ಮಾ ಇಡುವಾಣಿ