Daily Horoscope 13 June: ಈ ರಾಶಿಯವರು ಹೊಸ ಆದಾಯ ಮೂಲಗಳನ್ನು ಇಂದು ಕಂಡುಕೊಳ್ಳಲಿದ್ದಾರೆ

ಇಂದಿನ (2023 ಜೂನ್​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope 13 June: ಈ ರಾಶಿಯವರು ಹೊಸ ಆದಾಯ ಮೂಲಗಳನ್ನು ಇಂದು ಕಂಡುಕೊಳ್ಳಲಿದ್ದಾರೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 13, 2023 | 12:02 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದಶಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಸೌಭಾಗ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 03:46 ರಿಂದ 05:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:09ರ ವರೆಗೆ.

ಮೇಷ: ನೀವು ಇಂದು ವೃತ್ತಿಯನ್ನು ಬದಲಿಸುವ ನಿರ್ಧಾರ ಮಾಡಲಿದ್ದೀರಿ. ನಿಮ್ಮ ವೃತ್ತಿಕ್ಷೇತ್ರದಲ್ಲಿ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ. ಅಧಿಕಾರದಲ್ಲಿರುವ ಜನರಿಗೆ ಸಾಮಾಜಿಕ ಗೌರವವು ಸಿಗುವುದು. ಯಾವುದೇ ಚರ್ಚೆಯನ್ನು ಮಾಡಲು ಇಂದು ನಿರಾಸಕ್ತಿಯನ್ನು ತೋರಿಸುವಿರಿ. ಸ್ನೇಹಿತರ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಳೆಯ ಹೂಡಿಕೆಯಿಂದ ನಿಮಗೆ ಲಾಭವಾಗಲಿದೆ. ಕಷ್ಟಕ್ಕೆ ಇಂದು ಫಲವು ಸಿಗಲಿದೆ. ನಿಮ್ಮ ಆತಂಕವೂ ದೂರವಾಗಬಹುದು. ತಂದೆಯ ಪ್ರೀತಿಯು ನಿಮಗೆ ಸಿಗಲಿದೆ.

ವೃಷಭ: ನಿಮ್ಮ ನಿರ್ಧಾರಗಳು ಇಂದು ಈಡೇರಬಹುದು. ನಿಮಗೆ ಪರಿಚಯವಿರುವವರಿಂದ ಅಧಿಕ ಪ್ರಯೋಜನವನ್ನು ಪಡೆಯುವಿರಿ. ನಿಮ್ಮ ಶತ್ರುಗಳು ನಿಮ್ಮಿಂದ ಇಂದು ಅಪ್ರತ್ಯಕ್ಷವಾಗಿ ಪ್ರಯೋಜನ ಪಡೆಯುವರು. ವೃತ್ತಿಜೀವನದಲ್ಲಿ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು. ಅಧಿಕ ಲಾಭವನ್ನು ಗಳಿಸಲು ಹೋಗಿ ಇರುವುದನ್ನು ಕಳೆದುಕೊಳ್ಳಬಹುದು. ನಿಮ್ಮ ಅಹಂಕಾರದಿಂದ ಇತರರಿಗೆ ಅಗೌರವವನ್ನು ಕೊಡುವುದು ಬೇಡ. ಸಂಗಾತಿಯ ಮಾತನ್ನು ವಿರೋಧಿಸುವಿರಿ. ನಿರೀಕ್ಷಿತ ಕೆಲಸವು ಆಗಿಲ್ಲವೆಂದು ನಿಮಗೆ ಕೋಪ ಬರಬಹುದು. ನೂತನ ಅಧಿಕಾರಿಯ ಜೊತೆ ಕಲಹವಾಗಬಹುದು.

ಮಿಥುನ: ಇಂದು ನಿಮ್ಮ ಕುಟುಂಬದಲ್ಲಿ ನೆಮ್ಮದಿ ಇರಲಿದೆ. ವೆಚ್ಚವನ್ನು ನಿಯಂತ್ರಿಸಿ, ಆರ್ಥಿಕ ಲಾಭವನ್ನು ಪಡೆಯುವಿರಿ. ನಿಮ್ಮ ಒಂದು ತಪ್ಪು ನಿರ್ಧಾರವು ನಿಮ್ಮ ಆರ್ಥಿಕತೆಯನ್ನು ಸಡಿಲಿಸಬಹುದು. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ಇಂದು ನಿಲ್ಲುವರು. ಸರ್ಕಾರಿ ಉದ್ಯೋಗದಲ್ಲಿ ನೀವು ಇಂದು ಉನ್ನತ ಅಧಿಕಾರಿಗಳ ಸಹಕಾರವನ್ನು ಕೇಳುವಿರಿ. ನಿಮಗೆ ಸಿಗಬೇಕಾದುದನ್ನು ಧೈರ್ಯದಿಂದ ಕೇಳಿ ಪಡೆದುಕೊಳ್ಳುವಿರಿ. ನಿಮ್ಮ ಉದ್ವೇಗದ ಮಾತು ಅಪಹಾಸ್ಯಕ್ಕೆ ತುತ್ತಾಗಬಹುದು. ಅನ್ನಿಸಿದ್ದನ್ನು ಅರೆಕ್ಷಣದಲ್ಲಿ ಹೇಳುವಿರಿ.

ಕಟಕ: ವಿದ್ಯಾರ್ಥಿಗಳು ತಮ್ಮ ಓದಿನ ಉತ್ಸಾಹವನ್ನು ಕಳೆದುಕೊಳ್ಳುವರು. ಸಾಮಾಜಿಕ ಗೌರವವು ಸಿಗುವಂತಹ ಕೆಲಸವನ್ನು ನೀವು ಮಾಡುವಿರಿ. ಉದ್ಯೋಗವು ವಿದೇಶವನ್ನೂ ವ್ಯಾಪಿಸಬಹುದು. ಬುದ್ಧಿಯ ಕಸರತ್ತಿನಿಂದ ಇಂದು ಕಛೇರಿಯಲ್ಲಿ ಎದುರಾದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಹೊಸ ನಿರೀಕ್ಷೆಗಳು ನಿಮಗೆ ಸಂತೋಷವನ್ನು ತರುತ್ತವೆ. ಎದುರಾಳಿಯನ್ನು ಸೋಲಿಸಲು ನೀವು ಯೋಜನೆಗಳನ್ನು ಮಾಡುವಿರಿ. ಸಂತೋಷವನ್ನು ಹಂಚಿಕೊಳ್ಳಲು ಹೋಗಿ ದುಃಖಿಸಬೇಕಾಗುತ್ತದೆ. ಇಂದು ನೀವು ಅನಾದರಕ್ಕೆ ಒಳಗಾಗಬಹುದು. ಇದು ನಿಮ್ಮನ್ನೆ ಚಿಂತೆಗೆ ತಳ್ಳುವುದು.

ಸಿಂಹ: ನಿಮ್ಮ ಆರೋಗ್ಯ ಸಮಸ್ಯೆಗೆ ಕಾಳಜಿ ಅತ್ಯವಶ್ಯಕ. ಅನಗತ್ಯ ವಾದಗಳು ಹಾಗೂ ಟೀಕೆಗಳನ್ನು ನಿಲ್ಲಿಸಿ. ಹಳೆಯ ಹೂಡಿಕೆಯಿಂದ ನಷ್ಟ ಉಂಟಾಗಬಹುದು. ಆದಾಯವು ಸಾಮಾನ್ಯವಾಗಿಯೇ ಇರಲಿದ್ದು ಹೆಚ್ಚು ಯಶಸ್ಸನ್ನು ನೀವು ಗಳಿಸುವಿರಿ. ನಿಮ್ಮ ಸ್ವಂತ ಪ್ರತಿಭೆಯನ್ನು ಪ್ರಕಟಪಡಿಸಲು ನಿಮಗೆ ಹಲವು ಅವಕಾಶಗಳು ಸಿಗಲಿವೆ. ಸಹೋದ್ಯೋಗಿಯ ಸಲಹೆಯು ವಿರುದ್ಧ ಫಲವನ್ನು ನೀಡಬಹುದು. ಇನ್ನೊಬ್ಬರಿಗೆ ತೊಂದರೆಯಾಗುವಂತಹ ನಿರ್ಧಾರಗಳನ್ನು ಕೈಬಿಡುವುದು ಯೋಗ್ಯ. ವೃತ್ತಿಜೀವನದಲ್ಲಿ ಸವಾಲುಗಳು ಬರಬಹುದು.

ಕನ್ಯಾ: ಉತ್ತಮ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲಿದ್ದೀರಿ. ನಿಮ್ಮ ಅಡಿಯಲ್ಲಿ ಬರುವ ನೌಕರರ ನಡವಳಿಕೆಯನ್ನು ಪ್ರಶ್ನಿಸಬೇಕಾದ ಸಂದರ್ಭವು ಬರಬಹುದು. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಪ್ರೇಮದಲ್ಲಿ ಗೊಂದಲ ಉಂಟಾಗಬಹುದು. ಸಹೋದರನ ಪ್ರಗತಿಯಿಂದ ನಿಮಗೆ ಸಂತೋಷವಾಗಲಿದೆ. ಆರೋಗ್ಯವು ಸಾಮಾನ್ಯವಾಘಿ ಇರಲಿದೆ. ವ್ಯವಹಾರದಲ್ಲಿ ಎಂದಿಗಿಂತ ಅಧಿಕಲಾಭವನ್ನು ನೀವು ಗಳಿಸುವಿರಿ. ಆರ್ಥಿಕ ವ್ಯವಹಾರದಲ್ಲಿ ನಿಮ್ಮ ಜಾಗರೂಕತೆ ಸಾಕಾಗದು, ನಷ್ಟವು ಉಂಟಾಗಬಹುದು. ಸಂಗಾತಿಯು ನಿಮ್ಮ ಮೇಲೆ ಅನುಮಾನಗೊಳ್ಳಬಹುದು. ತಾಯಿಯ ಸಂಬಂಧಿಕರಿಂದ ಉದ್ಯೋಗದ ನಿಮಿತ್ತ ಒತ್ತಡ ಬರಬಹುದು.

ತುಲಾ: ಇಂದು ಜಾಣ್ಮೆಯಿಂದ ಮಾಡಿದ ಕೆಲಸಕ್ಕೆ ನಿಮಗೆ ಮೆಚ್ಚುಗೆ ಸಿಗುವುದು. ವೃತ್ತಿಜೀವನದಿಂದ ಗೌರವ ಬರಲಿದೆ. ನಿಮ್ಮ ಹೊಸ ಉದ್ಯಮವು ಅಭಿವೃದ್ಧಿಯನ್ನು ಕಾಣುತ್ತದೆ. ಕುಟುಂಬದಲ್ಲಿ ಸಂತೋಷವಿರಲಿದೆ. ಪ್ರಭಾವಿ ಜನರ ಜೊತೆ ಸಂಬಂಧಗಳು ಏರ್ಪಡಬಹುದು. ಆಪ್ತರ ವರ್ತನೆಯಿಂದ ಕೋಪ ಉಂಟಾಗಬಹುದು. ಇಂದು ನೀವು ಭೋಗವಸ್ತುಗಳ ಜೊತೆ ಹೆಚ್ಚು ಕಾಲ ಕಳೆಯುವಿರಿ. ಅಲ್ಪ ಪ್ರಯತ್ನದಿಂದ ನೀವು ದೊಡ್ಡ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಪತ್ನಿಯಿಂದ ನೀವು ಶುಭವಾರ್ತೆಯನ್ನು ಕೇಳುವಿರಿ.

ವೃಶ್ಚಿಕ: ಈ ದಿನ ನಿಮ್ಮ ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗಲಿದೆ. ಅತಿಯಾದ ಆಲೋಚನೆಯಿಂದ ತಲೆನೋವು ಉಂಟಾಗಬಹುದು. ಸಹೋದರರ ನಡುವೆ ಕಲಹವಾಗುವ ಸಾಧ್ಯತೆ ಇದೆ. ತಂದೆಯ ಒರಟು ಸ್ವಭಾವವು ನಿಮಗೆ ಮುಜುಗರ ಉಂಟುಮಾಡಬಹುದು. ಹೊಸ ಆದಾಯದ ಮೂಲಗಳನ್ನು ಇಂದು ಕಂಡುಕೊಳ್ಳುವಿರಿ. ರಾಜಕಾರಣಿಗಳಿಗೆ ಉತ್ತಮ ಸಮಯವು ಇದಾಗಿದೆ. ದುರಾಸೆಯಲ್ಲಿ ಸಿಕ್ಕಿಕೊಂಡು ನಷ್ಟವನ್ನು ಅನುಭವಿಸುವಿರಿ. ಸ್ತ್ರೀಯರ ಜೊತೆ ಕಲಹ ಬೇಡ. ಸಮಸ್ಯೆಗಳು ಉಂಂಟಾದಾವು. ಸಂಬಂಧಿಕರ ಜೊತೆ ಮನಸ್ತಾಪ ಏಳಬಹುದು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.

ಧನುಸ್ಸು: ಈ ದಿನ ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗಬಹುದು. ಆನಾರೋಗ್ಯವೂ ಒತ್ತಡವೂ ನಿಮ್ಮ ಮಾನಸಿಕ ಸ್ಥಿತಿಯನ್ನು ಕುಗ್ಗಿಸಬಹುದು. ಕುಟುಂಬ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರ ಜೊತೆ ನಿಮ್ಮ ವ್ಯವಹಾರವನ್ನು ಇಟ್ಟುಕೊಳ್ಳಿ. ಮನೆಯ ಹಿರಿಯ ಆರೋಗ್ಯವು ದುರ್ಬಲವಾಗಿದ್ದು ನಿಮಗೆ ಚಿಂತೆಯುಂಟುಮಾಡಬಹುದು. ತಪ್ಪು ಲೆಕ್ಕಾಚಾರದಿಂದ ನಷ್ಟವಾಗಬಹುದು. ಅನಗತ್ಯ ಟೀಕೆಗಳನ್ನು ಯಾರ ಮೇಲೂ ಮಾಡಲು ಹೋಗಬೇಡಿ. ಅಹಂಕಾರವನ್ನು ತಗ್ಗಿಸಿಕೊಂಡು ಎಲ್ಲರ ಜೊತೆ ಇಂದು ಬೆರೆಯಿರಿ.

ಮಕರ: ರಾಜಕೀಯದಲ್ಲಿ ಸಕ್ರಿಯರಾಗಿದ್ದರೆ ನಿಮ್ಮ ವರ್ಚಸ್ಸು ಅಧಿಕವಾಗುವುದು. ಅಸಹಜವಾಗಿ ಎದ್ದ ವೈಮನಸ್ಯವನ್ನು ನೀವು ಶಾಂತಗೊಳಿಸಲು ಬಹಳ ಶ್ರಮಪಡಬೇಕಾದೀತು. ಕಚೇರಿಯಲ್ಲಿ ಕೆಲಸದ ಒತ್ತಡ ಇಂದು ಅಧಿಕವಾಗಿರಲಿದೆ. ಅಧಿಕ ಲಾಭವನ್ನು ಪಡೆದುಕೊಳ್ಳುವ ಕೆಲವನ್ನು ಅನ್ವೇಷಣೆ ಮಾಡುವಿರಿ. ನೂತನ ಗೃಹದ ನಿರ್ಮಾಣದ ಬಗ್ಗೆ ನಿಮಗೆ ಅತ್ಯಂತ ಬಲವಾದ ಬಯಕೆ ಇರಲಿದೆ. ಬಹುನಿರೀಕ್ಷಿತ ಕೆಲಸದ ಯೋಗದಿಂದ ಯಶಸ್ಸಿದೆ. ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮಿತ್ರರ ಬೆಂಬಲವನ್ನು ಪಡೆಯುವಿರಿ. ಮಾತಿನಲ್ಲಿ ಕಠಿಣ್ಯವನ್ನು ನೀವು ಬೆಳೆಸಿಕೊಳ್ಳುವಿರಿ. ವಿವೇಚನೆಯಿಂದ ನಿಮಗೆ ಬರುವ ಆಪತ್ತಿನಿಂದ ಹೊರ ಬನ್ನಿ.

ಕುಂಭ: ಈ ದಿನವನ್ನು ನೀವು ಆರಾಮವಾಗಿ ಕಳೆಯುವುರಿ. ವೃತ್ತಿಜೀವನದಲ್ಲಿ ನಿಮ್ಮ ಪ್ರಯತ್ನವು ಫಲಕೊಡುವುದು. ನಿಮ್ಮ ನಾಯಕನಿಂದ ನಿಮಗೆ ಬೇಕಾದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸ ಮಾಡುವ ವಿಧಾನವು ಸರಿ ಇದೆಯೇ ಎಂದು ತಿಳಿದುಕೊಳ್ಳಿ. ಅಮೂಲ್ಯವಾದ ವಸ್ತುವನ್ನು ಪಡೆದು ನೀವು ಸಂತೋಷಿಸುವಿರಿ. ವೃತ್ತಿಜೀವನದಲ್ಲಿ ಪ್ರಭಾವ ಎಷ್ಟಿದೆ ಎಂದು ಇಂದು ತಿಳಿಯುವುದು. ನೀವು ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಇಂದು ತೆಗೆದುಕೊಳ್ಳುವ ಸೂಕ್ತ ನಿರ್ಧಾರವು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ದೈನಂದಿನ ಚಟುವಟಿಕೆಗಳ ಬಗ್ಗೆ ನಿಮಗೆ ನಿರಾಸಕ್ತಿ ಇರಲಿದೆ. ಏಕಾಂತವನ್ನು ಇಂದು ಹೆಚ್ಚು ಇಷ್ಟಪಡುವಿರಿ.

ಮೀನ: ಅನುಭವಿ ಜನರಿಂದ ನೀವು ಸಹಕಾರ ಪಡೆಯುವಿರಿ. ವೃತ್ತಿಜೀವನದಲ್ಲಿ ಪರಿಣಾಮ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಮಧ್ಯಮವಾಗಿರುತ್ತದೆ. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಬಹುದು. ವೃತ್ತಿಕ್ಷೇತ್ರದಲ್ಲಿ ಇಂದು ಅತಿಯಾದ ಉತ್ಸಾಹ ಬೇಡ. ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ನಡೆಯಬಹುದು. ಹೆಚ್ಚು ಕುತೂಹಲ ಬೇಡ. ಪ್ರಯಾಣದಲ್ಲಿ ಜಾಗರೂಕರಾಗಿರಿ. ಅವಘಡಗಳು ಸಂಭವಿಸಬಹುದು. ಆರ್ಥಿಕ ಅಪಾಯವನ್ನು ತೆಗೆದುಕೊಳ್ಳಬೇಡಿ. ಮೃದು ಮಾತು ನಿಮಗೆ ಪ್ರಯೋಜನವನ್ನು ನೀಡುವುದು. ಕುಟುಂಬದಲ್ಲಿನ ಕಿರಿಕಿರಿ ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಶುದ್ಧ ಮನಸ್ಸಿನಿಂದ ಇಷ್ಟದೇವರನ್ನು ಧ್ಯಾನಿಸಿ.

ಲೋಹಿತಶರ್ಮಾ – 8762924271 (what’s app only)

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!