ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 15ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಸಮಚಿತ್ತದಿಂದ ನಿರ್ಧಾರ ತೆಗೆದುಕೊಳ್ಳುವುದು ಈ ದಿನ ಮುಖ್ಯವಾಗುತ್ತದೆ. ಹಣಕಾಸಿನ ಹರಿವು ಸರಾಗವಾಯಿತು ಅಂದರೆ ಭಾವನಾತ್ಮಕ ಕಾರಣಗಳಿಗೆ ಅಥವಾ ಸನ್ನಿವೇಶಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ಕ್ಷೇಮ. ಉದ್ಯೋಗ ಸ್ಥಳದಲ್ಲಿ ನಿಮ್ಮ ಪ್ರಾಮುಖ್ಯ ಹೆಚ್ಚಾಗುತ್ತಿರುವುದು ಅನುಭವಕ್ಕೆ ಬರುತ್ತದೆ. ಹೊಸ ವಸ್ತ್ರಾಭರಣಗಳನ್ನು ಖರೀದಿ ಮಾಡುವುದರ ಸಲುವಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ರಾಜಕಾರಣದಲ್ಲಿ ಇರುವವರಿಗೆ ಪ್ರಯಾಣ, ಒತ್ತಡ ಹಾಗೂ ಉದ್ವೇಗದ ಸನ್ನಿವೇಶಗಳು ಎದುರಾಗುತ್ತವೆ.
ನೀವಾಗಿಯೇ ಹೇಳಿದ ವಿಚಾರವೊಂದು ಕೊರಳಿಗೆ ಉರುಳಾಗಿ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಮೊದಲಿಗೆ ನಿಮ್ಮ ಜತೆಗೆ ಬಹಳ ಚೆನ್ನಾಗಿ, ಗೌರವಯುತವಾಗಿ ಮಾತನಾಡುತ್ತಿದ್ದವರು ಏಕಾಏಕಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಆಸ್ತಿ- ಹಣಕಾಸಿನ ವಿಚಾರವು ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ. ನಿರ್ಭಯವಾಗಿ ಯಾವುದಾದರೂ ಕೆಲಸ ಒಪ್ಪಿಕೊಳ್ಳುವುದಕ್ಕೆ ಧೈರ್ಯ ಸಾಕಾಗುವುದಿಲ್ಲ. ವಿಟಮಿನ್ -ಡಿ ಕೊರತೆಯನ್ನು ಅನುಭವಿಸಲಿದ್ದೀರಿ.
ಪ್ರೀತಿ- ಪ್ರೇಮದಲ್ಲಿ ಬೀಳುವಂಥ ಯೋಗ ಇದೆ. ದುಬಾರಿ ಉಡುಗೊರೆಗಳನ್ನು ಪ್ರೀತಿಪಾತ್ರರಿಗೆ ನೀಡಲಿದ್ದೀರಿ. ದಿನದ ವರಮಾನವನ್ನು ಆಯಾ ದಿನಕ್ಕೆ ಎಂಬಂತೆ ಸಂಪಾದನೆ ಮಾಡುತ್ತಿರುವವರು ಒಂದಿಷ್ಟು ಆದಾಯ ಇಳಿಕೆ ಆಯಿತು ಎಂಬುದು ಅನುಭವಕ್ಕೆ ಬರುತ್ತದೆ. ನಿರ್ದಾಕ್ಷಿಣ್ಯವಾಗಿ ಈ ಕೆಲಸ ಆಗುವುದಿಲ್ಲ ಎಂದು ನಿಮ್ಮ ಕೈ ಕೆಳಗೆ ಇರುವವರೇ ಹೇಳುವುದರಿಂದ ಮನಸ್ಸಿಗೆ ಒಂದಿಷ್ಟು ಬೇಸರ ಆಗಬಹುದು. ಕಣ್ಣಾರೆ ಕಂಡ ಸತ್ಯವೆನಿಸಿದರೂ ಪರಾಮರ್ಶೆ ಮಾಡಿ, ತೀರ್ಮಾನ ಕೈಗೊಳ್ಳಿ.
ಯಾರದೋ ಅಗತ್ಯಕ್ಕೆ ಈ ದಿನ ನೆರವು ನೀಡಲಿದ್ದೀರಿ. ಈ ಘಟನೆಯಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲ ಒದಗಿಬರಲಿದೆ. ಆತ್ಮವಿಶ್ವಾಸ ಹೆಚ್ಚಾಗುವಂಥ ಕೆಲವು ಬೆಳವಣಿಗೆಗಳು ಆಗಲಿವೆ. ಸ್ವಂತ ಉದ್ಯಮ, ವ್ಯವಹಾರ ನಡೆಸುತ್ತಿರುವವರು ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಆಗಲಿದೆ. ಮಧ್ಯಾಹ್ನದ ನಂತರದಲ್ಲಿ ಕೆಲವು ಹಳೇ ಘಟನೆಗಳು ನೆನಪಾಗಿ, ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಬೇಸರ ಆಗುವ ಸಾಧ್ಯತೆ ಇದೆ. ಆದರೆ ಈ ಭಾವ ಕ್ರಮೇಣ ಕರಗಲಿದೆ.
ಯಾರು ಏನಾದರೂ ಅಂದುಕೊಳ್ಳಲಿ, ನನಗೆ ಬೇಕಾದಂತೆ ಬದುಕುತ್ತೇನೆ ಎಂಬ ಮನೋಭಾವ ಈ ದಿನ ನಿಮ್ಮನ್ನು ಪ್ರಬಲವಾಗಿ ಆವರಿಸಲಿದೆ. ಸಣ್ಣ- ಸಣ್ಣ ಸಂಗತಿಗಳಿಗೂ ಹೆಚ್ಚಿನ ಗಮನ ಕೊಟ್ಟು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ವ್ಯಾಖ್ಯಾನಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಒಂದು ಸಲಕ್ಕೆ ಬಾಕಿ ಉಳಿದಿರುವ ಕೆಲಸಗಳನ್ನೆಲ್ಲ ಪೂರ್ಣಗೊಳಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ದೇವತಾ ಕಾರ್ಯಗಳಿಗೆ ದೇಣಿಗೆ ನೀಡುವಂಥ ಯೋಗ ಇದೆ.
ಮನೆ ದೇವರ ಸ್ಮರಣೆಯನ್ನು ಮಾಡಿ, ಮುಖ್ಯವಾದ ಕೆಲಸಗಳಲ್ಲಿ ತೊಡಗಿಕೊಳ್ಳಿ. ಎಲ್ಲರನ್ನೂ ಒಪ್ಪಿಸಿಯೇ ಕೆಲಸ ಮಾಡುವುದಕ್ಕೆ ತೊಡಗುತ್ತೇನೆ ಎಂಬ ನಿರ್ಧಾರ ಮಾಡಿದರೆ ನಿಮಗೇ ಸಮಸ್ಯೆ ಆದೀತು. ಹಣಕಾಸಿನ ಅಗತ್ಯ ತುರ್ತಾಗಿ ಬೇಕು ಅಂತಾಗಿ ಸಾಲ ಮಾಡಬೇಕಾಗಬಹುದು. ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೂಲಕ ಮದುವೆಗಾಗಿ ಪ್ರಯತ್ನ ಪಡುತ್ತಿರುವವರಿಗೆ ಮನಸ್ಸಿಗೆ ಮೆಚ್ಚುವಂಥ ಸಂಬಂಧಗಳು ದೊರೆಯುವ ಸಾಧ್ಯತೆ ಇದೆ.
ಆದಾಯ ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಗಳಿಗೆ ಫಲ ದೊರೆಯಲಿದೆ. ನವ ವಿವಾಹಿತರಿಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸ್ನೇಹಿತರ ಮೂಲಕ ಅವಕಾಶಗಳು ಹುಡುಕಿಕೊಂಡು ಬರಲಿವೆ. ದೂರ ಪ್ರಯಾಣ ಮಾಡುವುದರ ಸಂಬಂಧವಾಗಿ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ಸಂಗಾತಿಯ ಮಾತಿಗೆ ಗೌರವ, ಪ್ರಾಶಸ್ತ್ಯ ನೀಡುವುದು ಮುಖ್ಯ,
ಇತರರು ಹಂಗಿಸುವ, ಛೇಡಿಸುವ, ಮೂದಲಿಸುವ ಮಾತುಗಳನ್ನು ಆಡಿದಲ್ಲಿ ತೀರಾ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಇದನ್ನು ಹೇಳುತ್ತಿರುವವರಿಗೆ ನಿಮ್ಮ ಬಗ್ಗೆ ಪ್ರಾಮಾಣಿಕವಾದ ಕಾಳಜಿ, ಸ್ನೇಹವೋ ಅಥವಾ ಪ್ರೀತಿ ಇದೆಯೇ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಆ ನಂತರ ಹೇಗೆ ಪ್ರತಿಕ್ರಿಯೇ ನೀಡಬೇಕು ಎಂದು ತೀರ್ಮಾನಿಸಿ. ಸ್ವಂತ ಉದ್ಯಮ, ವ್ಯವಹಾರವನ್ನು ನಡೆಸುತ್ತಿದ್ದಲ್ಲಿ ವಿಸ್ತರಣೆ ಬಗ್ಗೆ ಆಲೋಚನೆ ಬರಲಿದೆ. ಅಥವಾ ಈ ಸಂಬಂಧವಾಗಿ ಕೆಲವರ ಜತೆಗೆ ಚರ್ಚೆ ಕೂಡ ನಡೆಸಬಹುದು.
ನಿಮ್ಮ ಯಶಸ್ಸು, ಪ್ರಯತ್ನ, ಶ್ರಮ ಮೇಲಧಿಕಾರಿಗಳ ಅಥವಾ ಸಂಬಂಧಪಟ್ಟವರ ಗಮನಕ್ಕೆ ಬರಲಿದೆ. ಮನೆ ಕಟ್ಟುತ್ತಿರುವವರಿಗೆ ಹಣಕಾಸಿನ ಅನುಕೂಲ ಆಗಲಿದೆ. ಆಪ್ತರ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ. ಹೊಸ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಅಥವಾ ಉದ್ಯೋಗ, ವೃತ್ತಿ ಅಥವಾ ಶಿಕ್ಷಣಕ್ಕೆ ಅಗತ್ಯ ಇರುವಂಥ ಸಲಕರಣೆಗಳನ್ನು ಖರೀದಿಸುವ ಯೋಗ ಇದೆ. ಪ್ರಭಾವಿಗಳ ಪರಿಚಯ ಆಗಲಿದೆ. ಇದರಿಂದ ಭವಿಷ್ಯದಲ್ಲಿ ಅನುಕೂಲ ಇದೆ.
ಲೇಖನ- ಎನ್.ಕೆ.ಸ್ವಾತಿ