ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 21ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಸ್ವಂತ ವ್ಯವಹಾರ ಮಾಡುವಂಥವರಿಗೆ ಆದಾಯದ ಹರಿವು, ಆದಾಯದ ಮೂಲ ಎರಡೂ ಜಾಸ್ತಿ ಆಗಲಿದೆ. ಯಾರದೋ ಸ್ವಂತ ಲಾಭಕ್ಕಾಗಿ ನಿಮ್ಮ ಹೆಸರನ್ನು ಬಳಸಿಕೊಳ್ಳುವಂಥ ಅವಕಾಶಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಕ್ವಾರಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ತಾತ್ಕಾಲಿಕ ಅಡೆತಡೆಗಳು ಎದುರಾಗಬಹುದು. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮವಾದ ಸುದ್ದಿ ಹಾಗೂ ಬೆಳವಣಿಗೆ ಇದೆ. ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ ಇದೆ.
ಸಂಗಾತಿಯ ಜವಾಬ್ದಾರಿಗಳ ಪೈಕಿ ಕೆಲವನ್ನು ನೀವು ಹಂಚಿಕೊಳ್ಳಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ನಡೆಸುತ್ತಿರುವವರಿಗೆ ಅಲ್ಪಪ್ರಗತಿ ಇದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಅನಿರೀಕ್ಷಿತವಾಗಿ ಧನಾಗಮದ ಯೋಗ ಇದ್ದು, ಅದು ಹಾಗೇ ಖರ್ಚು ಕೂಡ ಆಗಬಹುದು. ಮೈಗ್ರೇನ್ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗುವ ಸಾಧ್ಯತೆಗಳಿವೆ. ಪ್ರವಚನಕಾರರು, ಸಂಶೋಧನೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಬೆಳವಣಿಗೆ ಇದೆ.
ಗೃಹ ಬಳಕೆ ವಸ್ತು ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂತೆ ಇದ್ದರೆ ಖರ್ಚಿನ ಮೇಲೆ ನಿಗಾ ಇರಲಿದೆ. ಪ್ರತಿಷ್ಠೆಗಾಗಿ ಯಾವ ವಿಷಯವನ್ನೂ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಕೃಷಿಕರಿಗೆ ಸಾಲದ ಬಾಕಿ ಬರಬೇಕಿದ್ದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ಕ್ರಿಯೇಟಿವ್ ರಂಗದಲ್ಲಿ ಇರುವವರಿಗೆ ಹೊಸ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಆಹಾರ- ನೀರು ಸೇವನೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದಲ್ಲಿ ಅಲರ್ಜಿ ಇತ್ಯಾದಿ ಅನಾರೋಗ್ಯ ಸಮಸ್ಯೆ ಆಗಬಹುದು.
ಈ ದಿನ ಬಜೆಟ್ ಲೆಕ್ಕಾಚಾರ ಮುಖ್ಯ ಆಗಲಿದೆ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದಿಂದ ಬಹಳ ಚಿಂತೆ ಮಾಡುವಂತಾಗುತ್ತದೆ. ಮಹಿಳೆಯರಿಗೆ ಕಾಲು- ಸೊಂಟದ ನೋವು ಕಾಡಲಿದೆ. ದೂರದ ಸ್ಥಳಗಳಿಗೆ ದ್ವಿಚಕ್ರ ವಾಹನ ಓಡಿಸುವಂಥವರು ಈ ದಿನ ಸಾಧ್ಯವಾದಷ್ಟೂ ಸಾರ್ವಜನಿಕ ಸಾರಿಗೆಯನ್ನು ಬಳಸಿ. ಒಂದು ವೇಳೆ ನೀವೇ ದ್ವಿಚಕ್ರ ವಾಹನ ಚಲಾಯಿಸುವುದು ಅಂತಾದರೆ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಇತರರ ವಸ್ತುಗಳಿಗೆ ಆಸೆ ಪಡಬೇಡಿ. ನಿಮ್ಮ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಕ್ಕೇಸಿಗುತ್ತದೆ.
ಯಾವುದನ್ನೂ ಸಣ್ಣ- ಪುಟ್ಟ ಕೆಲಸಗಳು ಎಂದು ನಿರ್ಲಕ್ಷ್ಯ ಮಾಡದಿರಿ. ಮನೆ, ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ಸಿಗುವ ಅವಕಾಶಗಳು ಹೆಚ್ಚಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಮನೆಗೆ ಲ್ಯಾಪ್ ಟಾಪ್, ಗ್ಯಾಜೆಟ್, ಮೊಬೈಲ್ ಫೋನ್ ಅನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ರಾಜಕಾರಣದಲ್ಲಿ ಇರುವವರಿಗೆ ಬಹಳ ಹತ್ತಿರದವರು ಎಂದುಕೊಂಡಿರುವವರಿಂದಲೇ ವಿರೋಧಗಳು ಎದುರಾಗಬಹುದು.
ಗುರಿಯಿಟ್ಟು ಹೊಡೆದರೆ ಬೀಳದೆ ಇರುವುದು ಯಾವುದೂ ಇಲ್ಲ. ನಿಮ್ಮ ಏಕಾಗ್ರತೆ ಬಹಳ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಭವಿಷ್ಯದಲ್ಲಿ ನಡೆಯಲಿರುವ ಅತಿದೊಡ್ಡ ಘಟನೆಯೊಂದರ ಸುಳಿವು ನಿಮಗೆ ಸಿಗಲಿದೆ. ಯಾರೂ ಊಹಿಸದ ರೀತಿಯಲ್ಲಿ ನಿಮ್ಮ ಕೆಲವು ನಡೆಗಳು ಈ ದಿನ ಇರಲಿವೆ. ದಿನದ ದ್ವಿತೀಯಾರ್ಧದಲ್ಲಿ ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಸ್ನೇಹಿತರು ಜತೆಗೆ ತೆರಳುವಂಥ ಯೋಗ ಇದೆ. ಹೊಸ ಮೊಬೈಲ್ ಫೋನ್, ಗ್ಯಾಜೆಟ್ ಖರೀದಿಸುವುದಕ್ಕೆ ಖರ್ಚು ಮಾಡಲಿದ್ದೀರಿ.
ಕಮಿಷನ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಈ ದಿನ ಉತ್ತಮವಾದ ಆದಾಯ ಇದೆ. ಅತಿಯಾದ ಆಲೋಚನೆಯಿಂದ ನಿಮಗೆ ಬರಬೇಕಾದ ಲಾಭದ ಪ್ರಮಾಣದಲ್ಲಿ ಕಡಿಮೆ ಆಗಬಹುದು. ಈ ದಿನದ ಒಂದಿಷ್ಟು ಸಮಯ ಇತರರ ಸಲುವಾಗಿ ಮೀಸಲಿಡುವಂಥ ಸ್ಥಿತಿ ನಿರ್ಮಾಣ ಆಗುತ್ತದೆ. ಹಳೇ ಪರಿಚಯ ಎಂದು ಹೇಳಿಕೊಂಡು ಕೆಲ ವ್ಯಕ್ತಿಗಳು ನಿಮ್ಮ ಬಳಿ ಅಲ್ಪಾವಧಿಗೆ ಸಾಲ ಕೇಳಿಕೊಂಡು ಬರಬಹುದು. ಈ ಸನ್ನಿವೇಶ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ.
ಸಂಬಂಧಿಕರ ಮನೆಗಳಿಗೆ ಭೇಟಿ ನೀಡುವ ಯೋಗ ಇದೆ. ಹಿಂದೆ ನಿಮಗಾಗಿದ್ದ ಅವಮಾನಕ್ಕೆ ಸರಿಯಾದ ಉತ್ತರವನ್ನು ನೀಡಲಿದ್ದೀರಿ. ಕೂದಲು ಉದುರುವಂಥ ಸಮಸ್ಯೆ ಈಗಾಗಲೇ ಕಾಡುತ್ತಿದ್ದಲ್ಲಿ ಅದು ಹೆಚ್ಚಾಗಲಿದೆ. ಮೊಡವೆ, ಚರ್ಮ ಕಾಯಿಲೆಗಳು ಕೂಡ ಜಾಸ್ತಿ ಆಗಬಹುದು. ಕುಡಿಯುವ ನೀರು ಶುದ್ಧತೆ ಕಡೆಗೆ ನಿಗಾ ಮಾಡಿ. ಯಾರದೋ ಮೇಲಿನ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳದಿರಿ.
ಸ್ವಂತ ವ್ಯವಹಾರ ಮಾಡುವವರಿಗೆ, ಉದ್ಯಮಗಳನ್ನು ನಡೆಸುವವರಿಗೆ ಆದಾಯದಲ್ಲಿನ ಇಳಿಕೆ ಚಿಂತೆಗೆ ಕಾರಣ ಆಗಬಹುದು. ಹೆಣ್ಣುಮಕ್ಕಳ ಸಲುವಾಗಿಯೇ ಸಾಲ ಮಾಡಬೇಕಾಗಬಹುದು. ತಂದೆ- ತಾಯಿಗಳ ಮಾತಿಗೆ ಗೌರವ ನೀಡಿ. ಕಫ, ಶೀತ, ಜ್ವರದಂಥ ಆರೋಗ್ಯ ಸಮಸ್ಯೆಗಳು ಕಾಡಬಹುದು. ಒಲ್ಲದ ಮನಸಿನಿಂದಲೇ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ನಿಮಗೆ ಸಂಬಂಧಪಡದ ವಿಷಯಗಳನ್ನು ತಲೆಗೆ ಹಾಕಿಕೊಂಡು ಚಿಂತೆ ಮಾಡದಿರಿ. ಹೊಸ ವಾಹನಗಳ ಖರೀದಿಗೆ ಹಣ ಹೊಂದಾಣಿಕೆಗೆ ಹೆಚ್ಚಿನ ಪ್ರಯತ್ನ ಮಾಡಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ