Daily Horoscope: ಇಂದಿನ ರಾಶಿ ಭವಿಷ್ಯ, ಈ ರಾಶಿಯ ಅವಿವಾಹಿತರು ವಿವಾಹದ ಉತ್ಸಾಹದಲ್ಲಿ ಇರಲಿದ್ದಾರೆ
ಇಂದಿನ (2023 ಮೇ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಸಂಜೆ 05:17 ಗಂಟೆ 06:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:17ರ ವರೆಗೆ.
ಮೇಷ: ಮಾಡುವ ಕೆಲಸದಲ್ಲಿ ಉತ್ಸಾಹವು ಅಧಿಕವಾಗಿರಲಿದೆ. ಅಪೂರ್ಣವಾದ ವ್ಯವಹಾರಗಳನ್ನು ಶೀಘ್ರವಾಗಿ ಮುಗಿಸಿಕೊಳ್ಳುವಿರಿ. ಎಲ್ಲವನ್ನೂ ಗೊತ್ತಿದ್ದರೂ ಬೇಕೆಂದೇ ವಾದದಲ್ಲಿ ಸೋಲುವಿರಿ. ತಂದೆಯ ಆರೋಗ್ಯದ ಬಗ್ಗೆ ವಿಚಾರಿಸುವುದು ಉತ್ತಮ. ಸಾಲದ ಮೊತ್ತವನ್ನು ಆದಷ್ಟು ಬೇಗ ತೀರಿಸುವ ಚಿಂತನೆ ಮಾಡುವಿರಿ. ಹಣಕಾಸಿನ ವಿಷಯವಾಗಿ ಮನೆಯಲ್ಲಿ ಕಲಹವೂ ಆಗಬಹುದು. ನಿಮ್ಮ ಸಹನೆಯನ್ನು ಕೆಡಿಸಿಕೊಳ್ಳುವುದು ಬೇಡ. ಮನೆಗೆ ಬಂದವರಿಗೆ ಪ್ರೀತಿಯಿಂದ ಆತಿಥ್ಯವನ್ನು ಮಾಡಿ. ಬಂದವರು ನಿಮಗೆ ಶ್ರೇಯಸ್ಸನ್ನು ಹಾರೈಸುವರು.
ವೃಷಭ: ಕೆಟ್ಟ ಕನಸುಗಳು ಬೀಳಬಹುದು. ಬೆಳಗ್ಗೆ ದೇವರಿಗೆ ದೀಪ ಬೆಳಗಿ. ಮೇಲಧಿಕಾರಿಗಳ ಮಾತು ನಿಮ್ಮ ಉತ್ಸಾಹವನ್ನು ತಗ್ಗಿಸೀತು. ಮಕ್ಕಳಿಗಾಗಿ ನೀವು ಸಂಪತ್ತನ್ನು ಕೂಡಿಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಅಲಂಕಾರಿಕ ಸಾಮಗ್ರಿಗಳಿಂದ ಅಧಿಕ ನಷ್ಟ ಎನಿಸಬಹುದು. ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ನಿಮ್ಮವರಿಗೆ ತಿಳಿಸಲು ಪ್ರಯತ್ನಿಸಿ. ಆದುದರ ಬಗ್ಗೆ ಅತಿಯಾದ ಚಿಂತೆ ಬೇಡ. ಆಗುವುದನ್ನು ಸರಿಯಾಗಿ ಮಾಡಿಕೊಳ್ಳಲು ಆಲೋಚಿಸಿ.
ಮಿಥುನ: ಸ್ನೇಹಿತರ ಜೊತೆ ದಿನವನ್ನು ಕಳೆಯಲು ಹೊರಗೆ ಸುತ್ತಾಡಲು ಹೋಗುವಿರಿ. ಅಪರಿಚಿತರು ನಿಮಗೆ ಸಹಾಯವನ್ನು ಮಾಡುವರು. ಹಣವನ್ನು ಅಧಿಕವಾಗಿ ವ್ಯಯಮಾಡಬೇಕಾಗಬಹುದು. ಸ್ವಂತ ಉದ್ಯಮವನ್ನು ನಡೆಸಲು ಸ್ನೇಹಿತರ ಜೊತೆ ಚರ್ಚಿಸಬಹುದು. ಅವಿವಾಹಿತರು ವಿವಾಹದ ಉತ್ಸಾಹದಲ್ಲಿ ಇರುವರು. ಆರೋಗ್ಯವು ಉತ್ತಮವಾಗಿರುವುದು. ಪ್ರೀತಿಪಾತ್ರರ ಜೊತೆ ಹೆಚ್ಚು ಮಾತನಾಡುವಿರಿ. ಮಕ್ಕಳನ್ನು ಮನೆಯಿಂದ ಆಚೆಗೆ ಕರೆದುಕೊಂಡು ಹೋಗಿ ಖುಷಿ ಪಡಿಸುವಿರಿ. ಸಹವಾಸದ ಬಗ್ಗೆ ಗಮನವಿರಲಿ.
ಕಟಕ: ಇಷ್ಟವಾದರ ಮಾತುಗಳು ನಿಮಗೆ ಬೇರೆ ರೀತಿಯಲ್ಲಿ ಅನ್ನಿಸಬಹುದು. ಯಾರನ್ನೂ ಅಳೆಯುವ ಕೆಲಸ ಮಾಡುವುದು ಬೇಡ. ನಿಮಗೆ ಅವರ ಅಳತೆಯ ಅಂದಾಜೂ ಸಿಗದು. ಭವಿಷ್ಯವು ನಿಮಗೆ ಕತ್ತಲೆಯಂತೆ ಕಂಡೀತು. ಅನುಭವಿಗಳ, ಬಲ್ಲವರ ಮಾರ್ಗದರ್ಶನ ಪಡೆಯಿರಿ. ಅನಗತ್ಯವಾದ ಖರ್ಚುಗಳಿಗೆ ತಡೆ ಹಾಕಿರಿ. ಮಕ್ಕಳ ವಿವಾಹದ ಚಿಂತೆ ನಿಮಗೆ ಕಾಡಬಹುದು. ದಾಂಪತ್ಯದಲ್ಲಿ ಖುಷಿಯಿಂದ ಇರಲು ಬೇಕಾದ ಅಂಶಗಳನ್ನು ಗುರತಿಸಿಕೊಂಡು ಬದುಕಿ. ಸಂಗಾತಿಯಿಂದ ನಿರಾಸೆಯು ಉಂಟಾಗಬಹುದು. ಅನಗತ್ಯ ಹರಟೆಯನ್ನು ಬಿಡಿ.
ಸಿಂಹ: ಅಸಾಧ್ಯವನ್ನು ಸಾಧಿಸುವ ಛಲವನ್ನು ಬಿಟ್ಟು ಸರಿಯಾದುದರ ಕಡೆಗೆ ಹೋಗುವುದು ಒಳ್ಳೆಯದು. ಸಮಯ ಹಾಗೂ ಹಣ ಎರಡನ್ನೂ ಜೋಪಾನ ಮಾಡಿಕೊಳ್ಳಿ. ಬೆನ್ನು ನೋವಿನಿಂದಾಗಿ ಸಂಕಟಪಡಬೇಕಾದೀತು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ದೂರದ ಪ್ರದೇಶಕ್ಕೆ ಕಳುಹಿಸಿಕೊಡುವಿರಿ. ಮನಸ್ಸು ಬಹಳ ಜಾಡ್ಯವಾಗಿದ್ದು ಸರಿಯಾದ ಕೆಲಸವನ್ನು ಮನಸ್ಸಿಗೆ ಕೊಡಿ. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು. ಸಮಯೋಚಿತ ಉತ್ತರಗಳು ನಿಮಗೆ ಧನಾತ್ಮಕ ಅಂಕಗಳನ್ನು ತಂದುಕೊಡುವುದು. ಎಲ್ಲರದ ವ್ಯಕ್ತಿತ್ವವಾದರೂ ಸಾಮನ್ಯರಂತೆ ವರ್ತಿಸುವಿರಿ.
ಕನ್ಯಾ: ನಿಮ್ಮ ಉತ್ತಮವಾದ ಹವ್ಯಾಸಕ್ಕೆ ಗೌರವ ಸಿಗಬಹುದು. ಅನವರತ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯು ಇಂದು ಸಿಗಲಿದೆ. ನೂತನ ಗೃಹ ನಿರ್ಮಾಣದ ಬಗ್ಗೆ ಯೋಜನೆಯನ್ನು ಕುಟುಂಬದ ಜೊತೆ ಕುಳಿತು ರೂಪಿಸುವಿರಿ. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಾತುಕತೆಗಳು ನಡೆಯಬಹುದು. ಸುಂದರವಾದ ಸಂಬಂಧಗಳು ಅಪನಂಬಿಕೆಯಿಂದ ಹಾಳಾಗುವ ಸಾಧ್ಯತೆ ಇದೆ. ಸಮಯವನ್ನು ಬಹಳ ಗೌರವಿಸುವಿರಿ. ಸಮಯಕ್ಕೆ ಸರಿಯಾಗಿ ಎಲ್ಲವೂ ನಡೆಯಬೇಕು ಎಂಬುದು ನಿಮ್ಮ ದೃಢವಾದ ಸಂಕಲ್ಪ. ಯೋಗ್ಯವಾದ ಸ್ಥಾನಮಾನಗಳನ್ನು ಪಡೆಯಲು ಹಾತೊರೆಯುವಿರಿ. ನಿಮ್ಮ ಸ್ವಾತಂತ್ರ್ಯದ ಹರಣವಾದಂತೆ ನಿಮಗೆ ಅನ್ನಿಸಬಹುದು.
ತುಲಾ: ಸಹನೆಯನ್ನೇ ನಿಮ್ಮ ಆಯುಧವನ್ನಾಗಿ ಮಾಡಿಕೊಳ್ಳಿ. ದ್ವೇಷವನ್ನು ಇಟ್ಟುಕೊಂಡು ನಿಮ್ಮ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿಕೊಳ್ಳುವುದು ಬೇಡ. ವೃತ್ತಿಯನ್ನು ಆನಂದಿಸಿ, ಖುಷಿಯಿಂದ ಕೆಲಸಮಾಡಿ. ಕೆಲಸವೂ ಚೆನ್ನಾಗಿ ಆಗುವುದು, ಉತ್ಸಾಹವೂ ಇದ್ದೀತು. ಸಂಗಾತಿಯ ಕಾರಣದಿಂದ ಮನೆಯಲ್ಲಿ ನಿಮ್ಮ ಸಂತೋಷವು ಇಮ್ಮಡಿಸಬಹುದು. ದುಷ್ಟರ ಸಹವಾಸವು ಆಗಬಹುದು. ಆದಷ್ಟು ಅವರಿಂದ ದೂರವಿರುವುದು ಒಳ್ಳೆಯದು. ಇಲ್ಲವಾದರೆ ಅಪವಾದಗಳೂ ಬರಬಹುದು. ಹೊಸ ವಸ್ತ್ರಗಳನ್ನು ಧರಿಸುವ ಮನಸ್ಸಾಗಲಿದೆ. ನಿಮ್ಮ ವರ್ತನೆಗಳನ್ನು ನಿಮ್ಮ ಸುತ್ತಲಿನವರು ಗಮನಿಸುವರು.
ವೃಶ್ಚಿಕ: ಅಪರೂಪದ ಆಹಾರವನ್ನು ಅತಿಯಾಗಿ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಶೋಧನೆಯನ್ನು ಮಾಡುತ್ತಿದ್ದರೆ ನಿಮಗೆ ಹೆಚ್ಚಿನ ಬೆಂಬಲ, ಪ್ರೋತ್ಸಾಹಗಳು ಸಿಗಬಹುದು. ಇಷ್ಟದವರು ಸಿಕ್ಕಾಗ ನಿಮಗೆ ಮಾತನಾಡಲು ಸಂತೋಷವನ್ನು ಹೇಳಿ ಕೊಳ್ಳಲು ಕಷ್ಟಪಡುವಿರಿ. ದೂರದ ಊರಿಗೆ ನಿಮ್ಮ ವಾಹನದಲ್ಲಿ ಸವಾರಿ ಮಾಡುವುದು ಬೇಡ. ಅಪರಿಚಿತರ ಮಾತುಗಳು ನಮಗೆ ಇಷ್ಟವಾಗಿ ಅವರ ಗೆಳೆತನ ಮಾಡಬಹುದು. ಸಮಸ್ಯೆಗಳನ್ನು ಬೇಗ ಪರಿಹರಿಸಿಕೊಳ್ಳಲು ಆಲೋಚಿಸಿ. ಸಂಕೀರ್ಣ ಮಾಡಿಕೊಳ್ಳುವುದು ಬೇಡ. ಸೊಂಟ ಭಾಗದಲ್ಲಿ ನೋವುಗಳು ಕಾಣಿಕೊಂಡೀತು.
ಧನುಸ್ಸು: ಕೆಲಸದಿಂದ ನಿಮಗೆ ಅತಿಯಾದ ಮಾನಸಿಕ ಹಾಗೂ ದೈಹಿಕ ಆಯಾಸವಾಗಬಹುದು. ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ಕುಟುಂಬದವರ ಮೇಲೆ ಕೋಪವನ್ನು ಮಾಡಿಕೊಳ್ಳುವಿರಿ. ನಿಮಗೆ ಪ್ರಿಯವಾದದ್ದನ್ನು ಸ್ನೇಹಿತರು ತಂದುಕೊಟ್ಟಾರು. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಹಳೆಯ ಘಟನೆಗಳು ನಿಮಗೆ ಸಂತೋಷವನ್ನು ಕೊಡುವುದು. ಅದನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಉನ್ನತ ಹುದ್ದೆಗೆ ಏರವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಇಲ್ಲದಿರಲಿದೆ.
ಮಕರ: ಮನಸ್ಸಿನ ನಿಗ್ರಹವನ್ನು ಮಾಡಲು ನೀವು ಬಹಳ ಪ್ರಯತ್ನಿಸುವಿರಿ. ಅಸಮತೋಲನ ಆಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಸಾಮರ್ಥ್ಯವನ್ನು ಓರೆಗಲ್ಲಿ ಹಚ್ಚುವ ಕೆಲಸವಾಗಬಹುದು. ಸಂಗಾತಿಯ ವರ್ತನೆಗಳು ನಿಮಗೆ ಸರಿಯಾಗಿ ಅರ್ಥವಾಗದೇ ಇದ್ದೀತು. ನಿಮ್ಮ ಮಾತುಗಳು ಸರಿಯಾಗಿ ಸಂವಹವಾಗದೇ ಇದ್ದೀತು. ಮನೆಯವರ ಜೊತೆ ಪ್ರಯಾಣವನ್ನು ಮಾಡುವಿರಿ. ಆಹಾರದ ಉದ್ಯಮವು ನಿಮಗೆ ಲಾಭವನ್ನು ತಂದುಕೊಡಬಹುದು. ಮಕ್ಕಳ ಅಭ್ಯಾಸದ ವಿಚಾರದಲ್ಲಿ ನಿಮಗೆ ಅಷ್ಟು ಸಂತೋಷವಿರಲಾರದು.
ಕುಂಭ: ನಿಮ್ಮ ಸೌದರ್ಯದ ಬಗ್ಗೆ ನಿಮಗೆ ಹಮ್ಮು ಇರಬಹುದು. ಹಳೆಯ ಪರಿಚಿತರ ಭೇಟಿಯಾಗಲಿದೆ. ಇದು ಆತ್ಮೀಯವಾಗುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಬಂದೀತು. ವಿದ್ಯಾರ್ಥಿಗಳು ಕಲಿಕೆಯಲ್ಲಿ ನೀವು ಹಿಂದೆ ಬೀಳುವ ಸಾಧ್ಯತೆ ಇದೆ. ಸಹೋದರರಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಬಹುದು. ಪ್ರಧಾನ ವಿಷಯವು ಗೌಣವಾಗಿ, ಅಪ್ರಧಾನವೇ ಮುಖ್ಯ ನೆಲೆಗೆ ಬರಬಹುದು. ಶಿಸ್ತಿಗೆ ಸಂಬಂಧಿಸಿದಂತೆ ನಿಮಗೆ ಕಿರಿಕಿರಿಯಾಗಬಹುದು. ಸ್ವಾಭಿಮಾನದಿಂದ ಇರಲು ನೀವು ಇಷ್ಟಪಡುವಿರಿ. ಆರ್ಥಿಕವಾಗಿ ಲಾಭವನ್ನು ಪಡೆಯಲು ಬಯಸುವಿರಿ.
ಮೀನ: ದೀರ್ಘ ಸಮಯದಿಂದ ಅನಾರೋಗ್ಯವು ಕಾಡುತ್ತಿದ್ದರೆ, ಇಂದು ಮುಕ್ತಿಪಡೆಯಬಹುದಾಗಿದೆ. ನಿಮಗೆ ಎದುರಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಿರಿ. ಸ್ನೇಹಿತರಲ್ಲಿ ಕೇಳಿಕೊಂಡರೆ ನಿಮಗೆ ಬೇಕಾದ ಸಹಾಯ ಸಿಗಬಹುದು. ಹೊಸ ಕೆಲಸಗಳಿಗೆ ಕಛೇರಿಯಲ್ಲಿ ನಿಮ್ಮನ್ನು ಜೋಡಿಸಬಹುದು. ಅನಿರೀಕ್ಷಿತ ತಿರುವು ನಿಮಗೆ ಗೊಂದಲವನ್ನು ಉಂಟುಮಾಡುವುದು. ದೈವಾನುಗ್ರಹವನ್ನು ಪ್ರಾರ್ಥಿಸಿ ಇಂದಿನ ಕೆಲಸವನ್ನು ಮಾಡಿ. ಅನಿರೀತವಾಗಿ ಕುಟುಂಬದ ಸಂಪೂರ್ಣ ಬೆಂಬಲವೂ ಸಿಗಲಿದೆ. ಕಲಹವಾಡಬೇಕೆನ್ನುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ. ಎಲ್ಲರನ್ನೂ ಸಮಭಾವದಿಂದ ನೋಡಿ.
-ಲೋಹಿತಶರ್ಮಾ ಇಡವಾಣಿ (ವಾಟ್ಸ್ಆ್ಯಪ್- 8762924271)