Daily Horoscope: ಇಂದಿನ ರಾಶಿ ಭವಿಷ್ಯ, ಈ ರಾಶಿಯವರ ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ಕಲಹವಾಗುವ ಸಾಧ್ಯತೆ ಇದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 21 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಸಂಜೆ 05:17 ಗಂಟೆ 06:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:17ರ ವರೆಗೆ.
ಮೇಷ: ಮಾಡುವ ಕೆಲಸದಲ್ಲಿ ಉತ್ಸಾಹವು ಅಧಿಕವಾಗಿರಲಿದೆ. ಅಪೂರ್ಣವಾದ ವ್ಯವಹಾರಗಳನ್ನು ಶೀಘ್ರವಾಗಿ ಮುಗಿಸಿಕೊಳ್ಳುವಿರಿ. ಎಲ್ಲವನ್ನೂ ಗೊತ್ತಿದ್ದರೂ ಬೇಕೆಂದೇ ವಾದದಲ್ಲಿ ಸೋಲುವಿರಿ. ತಂದೆಯ ಆರೋಗ್ಯದ ಬಗ್ಗೆ ವಿಚಾರಿಸುವುದು ಉತ್ತಮ. ಸಾಲದ ಮೊತ್ತವನ್ನು ಆದಷ್ಟು ಬೇಗ ತೀರಿಸುವ ಚಿಂತನೆ ಮಾಡುವಿರಿ. ಹಣಕಾಸಿನ ವಿಷಯವಾಗಿ ಮನೆಯಲ್ಲಿ ಕಲಹವೂ ಆಗಬಹುದು. ನಿಮ್ಮ ಸಹನೆಯನ್ನು ಕೆಡಿಸಿಕೊಳ್ಳುವುದು ಬೇಡ. ಮನೆಗೆ ಬಂದವರಿಗೆ ಪ್ರೀತಿಯಿಂದ ಆತಿಥ್ಯವನ್ನು ಮಾಡಿ. ಬಂದವರು ನಿಮಗೆ ಶ್ರೇಯಸ್ಸನ್ನು ಹಾರೈಸುವರು.
ವೃಷಭ: ಕೆಟ್ಟ ಕನಸುಗಳು ಬೀಳಬಹುದು. ಬೆಳಗ್ಗೆ ದೇವರಿಗೆ ದೀಪ ಬೆಳಗಿ. ಮೇಲಧಿಕಾರಿಗಳ ಮಾತು ನಿಮ್ಮ ಉತ್ಸಾಹವನ್ನು ತಗ್ಗಿಸೀತು. ಮಕ್ಕಳಿಗಾಗಿ ನೀವು ಸಂಪತ್ತನ್ನು ಕೂಡಿಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಅಲಂಕಾರಿಕ ಸಾಮಗ್ರಿಗಳಿಂದ ಅಧಿಕ ನಷ್ಟ ಎನಿಸಬಹುದು. ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ನಿಮ್ಮವರಿಗೆ ತಿಳಿಸಲು ಪ್ರಯತ್ನಿಸಿ. ಆದುದರ ಬಗ್ಗೆ ಅತಿಯಾದ ಚಿಂತೆ ಬೇಡ. ಆಗುವುದನ್ನು ಸರಿಯಾಗಿ ಮಾಡಿಕೊಳ್ಳಲು ಆಲೋಚಿಸಿ.
ಮಿಥುನ: ಸ್ನೇಹಿತರ ಜೊತೆ ದಿನವನ್ನು ಕಳೆಯಲು ಹೊರಗೆ ಸುತ್ತಾಡಲು ಹೋಗುವಿರಿ. ಅಪರಿಚಿತರು ನಿಮಗೆ ಸಹಾಯವನ್ನು ಮಾಡುವರು. ಹಣವನ್ನು ಅಧಿಕವಾಗಿ ವ್ಯಯಮಾಡಬೇಕಾಗಬಹುದು. ಸ್ವಂತ ಉದ್ಯಮವನ್ನು ನಡೆಸಲು ಸ್ನೇಹಿತರ ಜೊತೆ ಚರ್ಚಿಸಬಹುದು. ಅವಿವಾಹಿತರು ವಿವಾಹದ ಉತ್ಸಾಹದಲ್ಲಿ ಇರುವರು. ಆರೋಗ್ಯವು ಉತ್ತಮವಾಗಿರುವುದು. ಪ್ರೀತಿಪಾತ್ರರ ಜೊತೆ ಹೆಚ್ಚು ಮಾತನಾಡುವಿರಿ. ಮಕ್ಕಳನ್ನು ಮನೆಯಿಂದ ಆಚೆಗೆ ಕರೆದುಕೊಂಡು ಹೋಗಿ ಖುಷಿ ಪಡಿಸುವಿರಿ. ಸಹವಾಸದ ಬಗ್ಗೆ ಗಮನವಿರಲಿ.
ಕಟಕ: ಇಷ್ಟವಾದರ ಮಾತುಗಳು ನಿಮಗೆ ಬೇರೆ ರೀತಿಯಲ್ಲಿ ಅನ್ನಿಸಬಹುದು. ಯಾರನ್ನೂ ಅಳೆಯುವ ಕೆಲಸ ಮಾಡುವುದು ಬೇಡ. ನಿಮಗೆ ಅವರ ಅಳತೆಯ ಅಂದಾಜೂ ಸಿಗದು. ಭವಿಷ್ಯವು ನಿಮಗೆ ಕತ್ತಲೆಯಂತೆ ಕಂಡೀತು. ಅನುಭವಿಗಳ, ಬಲ್ಲವರ ಮಾರ್ಗದರ್ಶನ ಪಡೆಯಿರಿ. ಅನಗತ್ಯವಾದ ಖರ್ಚುಗಳಿಗೆ ತಡೆ ಹಾಕಿರಿ. ಮಕ್ಕಳ ವಿವಾಹದ ಚಿಂತೆ ನಿಮಗೆ ಕಾಡಬಹುದು. ದಾಂಪತ್ಯದಲ್ಲಿ ಖುಷಿಯಿಂದ ಇರಲು ಬೇಕಾದ ಅಂಶಗಳನ್ನು ಗುರತಿಸಿಕೊಂಡು ಬದುಕಿ. ಸಂಗಾತಿಯಿಂದ ನಿರಾಸೆಯು ಉಂಟಾಗಬಹುದು. ಅನಗತ್ಯ ಹರಟೆಯನ್ನು ಬಿಡಿ.
-ಲೋಹಿತಶರ್ಮಾ ಇಡವಾಣಿ