ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 22ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಟ್ಟಿಂಗ್ ಅಥವಾ ಪಂಥದಲ್ಲಿ ಹಣ ಕಳೆದುಕೊಳ್ಳುವಂಥ ಸಾಧ್ಯತೆ ಇದೆ. ಸ್ನೇಹಿತರು ಅಥವಾ ಸಂಬಂಧಿಕರ ಮನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಥವಾ ಓಡಾಟ ನಡೆಸಬೇಕಾದ ಯೋಗ ಕಂಡುಬರುತ್ತಿದೆ. ಕುಟುಂಬ ಸದಸ್ಯರ ಜತೆಗೆ ಸಣ್ಣ- ಪುಟ್ಟ ನಿರ್ಧಾರಗಳಿಗೆ ಅಭಿಪ್ರಾಯ ಭೇದಗಳು ಉದ್ಭವಿಸಬಹುದು. ಈ ದಿನ ಸ್ನೇಹಿತರಿಂದ ಉತ್ತಮವಾದ ನೆರವು ಸಿಗುವಂಥ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರು ಹೊಸ ವಾಹನಗಳ ಖರೀದಿಗೆ ಅಡ್ವಾನ್ಸ್ ನೀಡಲಿದ್ದೀರಿ ಅಥವಾ ಖರೀದಿಯನ್ನೇ ಮಾಡಲಿದ್ದೀರಿ.
ಹಣಕಾಸಿನ ವಿಚಾರವು ನಿಮ್ಮ ಮೇಲೆ ಒತ್ತಡ ತರಲಿದೆ. ವಾಹನಗಳ ದುರಸ್ತಿಗೆ ಅಥವಾ ಮಾಮೂಲಿ ಸರ್ವೀಸ್ ಗೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಬ್ರ್ಯಾಂಡೆಡ್ ವಸ್ತುಗಳಿಗಾಗಿ ಹಣ ಖರ್ಚು ಮಾಡುವಾಗ ಹಿಡಿತ ಇರಲಿ. ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಿ, ಅವರು ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಂಡು, ಪಾಲಿಸಿ. ಮನೆಯ ನಿರ್ಮಾಣ ಮಾಡಬೇಕು ಎಂದುಕೊಳ್ಳುತ್ತಾ ಇರುವವರಿಗೆ ಹಣ ಕಾಸಿನ ಅನುಕೂಲದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗುವ ಸಾಧ್ಯತೆಗಳಿವೆ.
ನಿಮ್ಮ ಪ್ರತಿಸ್ಪರ್ಧಿಗಳಿಗೆ ಅಚ್ಚರಿ ಆಗುವಂತೆ ಅಥವಾ ಬೆರಗು ಮೂಡಿಸುವಂತೆ ನಿಮ್ಮ ಬುದ್ಧಿ, ಸಾಮರ್ಥ್ಯದ ಪ್ರದರ್ಶನ ಆಗಲಿದೆ. ಈ ದಿನ ನೀವು ಬಳಸುವಂತಹ ಶೌಚಾಲಯದ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಮೂತ್ರ ಸೋಂಕಿಗೆ ಪದೇಪದೇ ತುತ್ತಾಗುವಂಥವರು ಅಂಥದ್ದೇ ಸಮಸ್ಯೆಗೆ ಗುರಿ ಆಗುವಂಥ ಸಾಧ್ಯತೆ ಇದೆ. ನಿಮ್ಮ ಮಾತಿನ ಧಾಟಿ ಅಥವಾ ಧೋರಣೆ ಬಗ್ಗೆ ಮೇಲಧಿಕಾರಿಗಳಿಗೆ ಯಾರಾದರೂ ದೂರು ನೀಡುವಂಥ ಸನ್ನಿವೇಶಗಳು ಉದ್ಭವಿಸಲಿವೆ. ತಾಳ್ಮೆ- ಸಂಯಮವನ್ನು ಕಾಯ್ದಕೊಳ್ಳಿ.
ಇತರರು ನಿಮಗೆ ವಹಿಸಿದ ಕೆಲಸವನ್ನು ನೀವೇನೋ ಬಹಳ ಆಸ್ಥೆ, ಆಸಕ್ತಿಯಿಂದ ಮಾಡುತ್ತೀರಿ. ಆದರೆ ಅದನ್ನು ವಹಿಸಿದವರಿಗೇ ಅದರ ಬಗ್ಗೆ ಗಾಂಭೀರ್ಯ ಇಲ್ಲ ಎಂಬುದು ಗಮನಕ್ಕೆ ಬರಲಿದೆ. ಮಧುಮೇಹ, ಪ್ಯಾಂಕ್ರಿಯಾಸ್ ನಲ್ಲಿ ಸಮಸ್ಯೆ ಇರುವಂಥವರು ಪಥ್ಯದ ಕಡೆಗೆ ಹೆಚ್ಚು ಲಕ್ಷ್ಯ ನೀಡಿ. ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ, ಏನೂ ಸಮಸ್ಯೆಯಿಲ್ಲ ಎಂದುಕೊಂಡಿರೋ ಅನಾರೋಗ್ಯ ಉಲ್ಬಣವಾದೀತು. ಹೊಸ ಕೋರ್ಸ್ ಸೇರ್ಪಡೆ ಆಗಬೇಕೆಂದಿರುವವರು ಮಾಹಿತಿಯನ್ನು ಪೂರ್ತಿಯಾಗಿ ಪಡೆದುಕೊಳ್ಳಿ.
ನವವಿವಾಹಿತರು, ಪ್ರೇಮಿಗಳಿಗೆ ಬಹಳ ಸಂತಸವಾದ ದಿನ ಇದಾಗಿರುತ್ತದೆ. ಇನ್ನು ಪ್ರೇಮ ನಿವೇದನೆ ಮಾಡಬೇಕು ಎಂದುಕೊಂಡರೂ ಅದಕ್ಕೆ ಸೂಕ್ತವಾದ ದಿನ ಇದಾಗಲಿದೆ. ಆಸ್ತಿ, ಆಭರಣ ಇಂಥದ್ದರ ಬಗ್ಗೆ ಹೆಚ್ಚು ಚರ್ಚೆ ಆಗಲಿದೆ. ನಿಮ್ಮ ಬಳಿ ಇರುವ ಹಳೇ ಒಡವೆ ಅಥವಾ ಬೆಳ್ಳಿ ವಸ್ತುಗಳನ್ನು ಹಾಕಿ, ಹೊಸದನ್ನು ಖರೀದಿಸುವಂಥ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವವರು ಆತುರದ ತೀರ್ಮಾನಗಳಿಂದ ಲಾಭದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲಿದ್ದೀರಿ.
ನನ್ನಷ್ಟಕ್ಕೆ ನಾನಿರಬೇಕು, ಊರ ಉಸಾಬರಿ ಯಾಕೆ ಬೇಕು ಎಂದು ಬಲವಾಗಿ ಅನಿಸಲಿದೆ. ಬಾಯಿ ಚಪಲದ ಕಾರಣಕ್ಕೆ ಹೊಟ್ಟೆ ಸಮಸ್ಯೆ ಮಾಡಿಕೊಳ್ಳಲಿದ್ದೀರಿ. ಮಾಂಸಾಹಾರಿಗಳಾಗಿದ್ದಲ್ಲಿ ಆಹಾರ ಸರಿಯಾದ ಬೆಂದಿದೆಯಾ ಅಥವಾ ತಾಜಾ ಆಗಿದೆಯೇ ಎಂಬುದನ್ನು ಪರೀಕ್ಷಿಸಿ, ಆ ನಂತರ ಸೇವಿಸುವುದು ಉತ್ತಮ. ಈ ದಿನ ಧನ್ವಂತರಿ ನಾರಾಯಣನ ಸ್ಮರಣೆಯನ್ನು ಮನಸ್ಸಿನಲ್ಲಿ ಮಾಡಿ. ಏಕಾಗ್ರತೆ ಸಾಧ್ಯವಾಗುತ್ತಿಲ್ಲ ಎಂದಾದರೆ ಮುಖ್ಯವಾದ ಕೆಲಸಗಳನ್ನು ಮುಂದೂಡಬಹುದು ಎಂದಾದರೆ ಮುಂದೂಡಿ.
ನಿಮ್ಮ ಪ್ರಯತ್ನಗಳು ಫಲ ನೀಡುತ್ತಿಲ್ಲ, ನಿಮ್ಮಿಂದ ಉಪಯೋಗ ಪಡೆಯುತ್ತಿದ್ದಾರೆ, ಆದರೆ ಪ್ರತಿಫಲ ನೀಡುತ್ತಿಲ್ಲ ಎಂದೆಲ್ಲ ಮಾನಸಿಕವಾಗಿ ಚಿಂತೆಗೆ ಕಾರಣವಾಗುತ್ತದೆ. ಆಸ್ತಿ ಮಾರಾಟಕ್ಕೆ ಇಟ್ಟವರಿಗೆ ಹಿನ್ನಡೆ ಆಗಲಿದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಇತರರ ಜತೆಗೋ ಅಥವಾ ಇತರರ ಸಲುವಾಗಿಯೋ ಏನನ್ನಾದರೂ ಖರೀದಿ ಮಾಡಬೇಕು ಎಂದು ಹೋದಲ್ಲಿ ನಿಮಗೂ ಯಾವುದಾದರೂ ವಸ್ತುಗಳನ್ನು ಖರೀದಿಸಬೇಕೆಂಬ ಬಯಕೆ ಮೂಡಿ, ಕೈಯಿಂದ ಹಣ ಹೋಗುವ ಯೋಗ ಇದೆ.
ನಿಮ್ಮ ವೈಯಕ್ತಿಕ ಏಳ್ಗೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ವೃತ್ತಿನಿರತರಿಗೆ ಹೊಸ ಅವಕಾಶಗಳು ಹಾಗೂ ಅದು ದೊಡ್ಡ ಮಟ್ಟದ್ದು ಬರುವಂಥ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವುದು ಸರಿಯಲ್ಲ. ನೀವು ಬಹಳ ಸಮಯದಿಂದ ಹುಡುಕುತ್ತಿದ್ದ ಮುಖ್ಯ ದಾಖಲೆಗಳು ದೊರೆಯುವಂಥ ಅವಕಾಶಗಳಿವೆ. ಹೊಸ ವ್ಯವಹಾರ ಅಥವಾ ಈ ಹಿಂದೆ ನೀವು ಪ್ರಯತ್ನವೇ ಪಟ್ಟಿರದ ಕೆಲಸವನ್ನು ಶುರು ಮಾಡುವ ಯೋಗ ಇದೆ. ಇದರಿಂದ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಆಗಲಿದೆ.
ಇತರರಿಗೆ ನೀವು ನೀಡಿದ ಪ್ರಾಶಸ್ತ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೇನೋ ಎಂದು ಬಲವಾಗಿ ಅನಿಸುತ್ತದೆ. ಮುಖ್ಯವಾದ ಹುದ್ದೆಗಳಲ್ಲಿ ಇರುವವರು ಕೈಕೆಳಗೆ ಕೆಲಸ ಮಾಡುವವರ ಬಗ್ಗೆ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ‌್ಯತೆ ಇದೆ. ಆದ್ದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಫಲಿತಾಂಶ -ಪರಿಣಾಮಗಳ ಬಗ್ಗೆಯೂ ಆಲೋಚಿಸುವುದು ಉತ್ತಮ. ವಿನಾಕಾರಣವಾಗಿ ಶತ್ರುತ್ವವನ್ನು ಬೆಳೆಸಿಕೊಂಡು, ಆ ನಂತರ ಪರಿತಪಿಸುವಂತೆ ಆಗಲಿದೆ.
ಲೇಖನ- ಸ್ವಾತಿ