ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 1ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಹೊಸದಾಗಿ ಮಾಡಿದ ಹೂಡಿಕೆಗಳು ಅಥವಾ ಹೊಸದಾಗಿ ಆರಂಭಿಸಿದ ಉದ್ಯಮ ಅಥವಾ ವ್ಯಾಪಾರಗಳು ತಕ್ಷಣದಿಂದಲೇ ಒಳ್ಳೆಯ ರಿಟರ್ನ್ ನೀಡಲು ಆರಂಭಿಸುತ್ತವೆ. ನೀವೇನು ಲೆಕ್ಕಾಚಾರ ಹಾಕಿಕೊಂಡಿರುತ್ತೀರೋ ಹಣಕಾಸಿನ ವ್ಯವಹಾರಗಳು ಅದೇ ದಿಕ್ಕಿನಲ್ಲಿ ಸಾಗುತ್ತವೆ. ನಿಮ್ಮನ್ನು ಅವಮಾನ ಮಾಡುವುದಕ್ಕೆ ಪ್ರಯತ್ನಿಸಿದ ವಿರೋಧಿಗಳೇ ಸ್ವತಃ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಕಡ್ಡಿ ತುಂಡು ಮಾಡಿದಂತೆ ಆಡುವ ನಿಮ್ಮ ಮಾತುಗಳಿಂದ ಲಾಭವಾಗುತ್ತದೆ. ಖಾಸಗಿ ಕಂಪನಿಗಳಲ್ಲಿ ಯಾರು ಕಾರ್ಯನಿರ್ವಹಿಸುತ್ತಿದ್ದೀರೋ ಅಂತಹವರಿಗೆ ಮಹತ್ತರ ಜವಾಬ್ದಾರಿಗಳು ಹೆಗಲೇರಲಿವೆ. ಇದನ್ನು ಒಪ್ಪಿಕೊಂಡಲ್ಲಿ ಭವಿಷ್ಯದಲ್ಲಿ ಅನುಕೂಲವಾಗಲಿದೆ.
ಆದಾಯ ಅಥವಾ ಹಣಕಾಸಿನ ಮೂಲವನ್ನು ಜಾಸ್ತಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಕ್ಕು ಬೀಳುತ್ತೀರಿ. ನೀವು ಸರಿಯಾದ ಬಡ್ಡಿಯನ್ನೇ ಕಟ್ಟುತ್ತಿದ್ದರೂ ಹಾಗೂ ತಿಂಗಳ ತಿಂಗಳು ಹಣವನ್ನು ಸರಿಯಾಗಿ ಕಟ್ಟುತ್ತಿದ್ದರೂ ಈಗಿಂದೀಗಲೇ ಸಾಲವನ್ನು ಹಿಂತಿರುಗಿಸುವಂತೆ ಕೇಳಲಿದ್ದಾರೆ. ನಿಮ್ಮಲ್ಲಿ ಕೆಲವರು ಚಿನ್ನವನ್ನು ಅಡಮಾನ ಮಾಡಿ ಸಾಲ ಪಡೆಯಲೇಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಯಾವ ವಿಚಾರವನ್ನು ಸಣ್ಣದು ಎಂದು ಭಾವಿಸಿರುತ್ತೀರಾ ಅಂಥದ್ದು ಕುತ್ತಿಗೆಗೆ ಬರುವಂತಹ ಸಾಧ್ಯತೆ ಇದೆ. ಯಾರದೋ ಮೇಲಿನ ಪ್ರತಿಷ್ಠೆಗೆ ಬಿದ್ದು ಒಡವೆ, ವಸ್ತ್ರಗಳನ್ನು ಖರೀದಿಸಲು ಹೋಗಬೇಡಿ. ಈ ದಿನ ದುರ್ಗಾ ದೇವಿಯ ಆರಾಧನೆಯನ್ನು ಮಾಡಿ.
ನಿಮಗೆ ಸಂಬಂಧಪಡದ ವಿಚಾರಗಳ ಕಡೆಗೆ ತಲೆ ಹಾಕಿಯೂ ಮಲಗಬೇಡಿ. ಲೋಕಾರೂಢಿಗೆ ಆಡಿದ ಮಾತು ಅಥವಾ ಆ ಸಂದರ್ಭದಲ್ಲಿ ನನ್ನದು ಒಂದು ಅಭಿಪ್ರಾಯ ಇರಲಿ ಎಂದು ನೀವು ಹೇಳಿದ ವಿಚಾರ ದೊಡ್ಡ ಮಟ್ಟದಲ್ಲಿ ನಿಮಗೆ ಸಮಸ್ಯೆ ಮಾಡಬಹುದು. ಜೀರ್ಣಾಂಗಕ್ಕೆ ಸಂಬಂಧಪಟ್ಟಂತೆ ಅನಾರೋಗ್ಯದ ಏನಾದರೂ ಕಾಡಿದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಏನಾದರೂ ಆಗಬೇಕಿದ್ದಲ್ಲಿ ಒಂದೇ ಕೆಲಸಕ್ಕೆ ಹಲವು ಬಾರಿ ಅಲೆದಾಟ ಮಾಡಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಮಾಡುತ್ತಿದ್ದೀರಿ ಎಂಬಂತಹ ಕೆಲಸಗಳಿದ್ದಲ್ಲಿ ಯಾವುದೇ ಡೆಡ್ ಲೈನ್ ನೀವಾಗಿಯೇ ಹೇಳಿ, ಸಿಕ್ಕಿ ಹಾಕಿಕೊಳ್ಳದಿರಿ.
ನೀವು ಈ ಹಿಂದೆ ಪಟ್ಟ ಶ್ರಮಕ್ಕೆ ಈ ದಿನ ಫಲ ಸಿಗಲಿದೆ. ನಿಮ್ಮಲ್ಲಿ ಕೆಲವರು ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಬಹಳ ಒಳ್ಳೆಯ ಸಂಸ್ಥೆಯಿಂದ ಅವಕಾಶ ದೊರೆಯುವಂತಹ ಸಾಧ್ಯತೆ ಹೆಚ್ಚಿದೆ. ಮಹಿಳೆಯರು ಒಂದು ವೇಳೆ ದೀರ್ಘಾವಧಿಯ ಬಿಡುವು ತೆಗೆದುಕೊಂಡು, ಮತ್ತೆ ಕೆಲಸಕ್ಕೆ ತೆರಳಬೇಕು ಎಂದುಕೊಳ್ಳುತ್ತಿರುವವರಿಗೆ ಈ ದಿನ ಪ್ರಯತ್ನ ಪಟ್ಟಲ್ಲಿ ಬಹಳ ಒಳ್ಳೆಯ ಫಲ ಸಿಗಲಿದೆ. ಆದಾಯ ಮೂಲವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ನಾನಾ ಮಾರ್ಗಗಳು ಗೋಚರವಾಗಲಿವೆ. ಜ್ಯೋತಿಷಿಗಳು, ಪ್ರವಚನಕಾರರು ಧಾರ್ಮಿಕ ಪ್ರವೃತ್ತಿಯಲ್ಲಿರುವವರಿಗೆ ಈ ದಿನ ನಾನಾ ಬಗೆಯಲ್ಲಿ ಶುಭಫಲಗಳನ್ನು ಕಾಣುವ ಯೋಗ ಇದೆ.
ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಈ ದಿನ ಶುಭ ಸುದ್ದಿ ಕೇಳಿ ಬರುವ ಯೋಗ ಇದೆ. ನೀವಾಗಿಯೇ ಸವಾಲಾಗಿ ತೆಗೆದುಕೊಂಡ ಕೆಲಸ ಕಾರ್ಯಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿ ಮುಗಿಸಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರು ಪದೋನ್ನತಿ ಅಥವಾ ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು. ಇಷ್ಟು ಸಮಯ ಹವ್ಯಾಸವಾಗಿ ಇದ್ದಂಥದ್ದು ಇನ್ನು ಮುಂದೆ ದೊಡ್ಡಮಟ್ಟದ ಆದಾಯ ತರುವಂತಹ ವೃತ್ತಿಯಾಗಿ ಮಾರ್ಪಡುವ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ. ಮಾರಾಟ ಅಥವಾ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ನಿಮ್ಮಲ್ಲಿ ಕೆಲವರು ಖರ್ಚಿನ ಮೇಲೆ ಹಿಡಿತವನ್ನು ಸಾಧಿಸಲು ಹೆಚ್ಚಿನ ಪ್ರಯತ್ನವನ್ನು ಹಾಕಲಿದ್ದೀರಿ.
ಈ ದಿನ ವೃಥಾ ಪ್ರಯಾಣಗಳು ಹೆಚ್ಚಾಗಲಿವೆ. ಎಲ್ಲಿಗೆ ತೆರಳುವುದಕ್ಕೆ ನಿರ್ಧರಿಸುವ ಮುಂಚೆ ಅಲ್ಲಿಗೆ ಹೋದರೆ ಕೆಲಸ ಆಗುತ್ತದೆಯೇ ಎಂಬುದನ್ನು ಖಾತ್ರಿ ಮಾಡಿಕೊಂಡು ಆ ನಂತರ ತೆರಳುವುದು ಉತ್ತಮ. ಇದಕ್ಕೂ ಮುನ್ನ ಒಂದು ವೇಳೆ ಮಾತಿನ ಭರದಲ್ಲಿಯೂ ಅಥವಾ ಉದ್ದೇಶಪೂರ್ವಕವಾಗಿಯೋ ಯಾರಿಗಾದರೂ ಅವಮಾನ ಮಾಡಿದ್ದಲ್ಲಿ ಈ ದಿನ ಅವರು ನಿಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳಲಿದ್ದಾರೆ. ಸರ್ಕಾರಿ ಕೆಲಸಗಳಲ್ಲಿ ಇರುವಂತಹವರು ತಾವು ಮಾಡಿದ ಕೆಲಸವನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿದ ನಂತರವೇ ಸಹಿ ಮಾಡುವುದು ಉತ್ತಮ. ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರಬೇಕಾದಂಥ ಸನ್ನಿವೇಶಗಳನ್ನು ನೀವೇ ಸೃಷ್ಟಿ ಮಾಡಿಕೊಳ್ಳಲಿದ್ದೀರಿ ಜಾಗ್ರತೆ.
ನಿಮಗೆ ಬರಬೇಕಾದ ಹಣ ಇದ್ದಲ್ಲಿ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ. ಸರಿಯಾದ ಶಬ್ದಗಳನ್ನು ಬಳಸುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ರಾಜಕಾರಣದಲ್ಲಿ ಇರುವಂತಹವರಿಗೆ ಬಹು ದಿನಗಳ ಕನಸು ಇಂದು ನನಸಾಗುವ ಸಾಧ್ಯತೆಗಳಿವೆ. ಈ ದಿನದ ಯಾವುದೇ ಕೆಲಸವನ್ನು ಮುಂದಕ್ಕೆ ಹಾಕುವುದಕ್ಕೆ ಹೋಗಬೇಡಿ. ಕುಟುಂಬ ಸದಸ್ಯರು, ಸಂಗಾತಿ ನೀಡುವಂತಹ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ವಿದೇಶದಲ್ಲಿ ಉದ್ಯೋಗಕ್ಕಾಗಿಯೋ ಅಥವಾ ವ್ಯಾಸಂಗಕ್ಕಾಗಿಯೋ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಇಂಟರ್ ವ್ಯೂನಲ್ಲಿ ಭಾಗವಹಿಸುವಂಥವರು ಈ ದಿನ ಬಿಳಿ ಬಟ್ಟೆಯನ್ನು ಧರಿಸಿ. ವರಾಹ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ಯಾವುದೇ ಮುಖ್ಯ ಕೆಲಸದಲ್ಲಿ ತೊಡಗಿಕೊಳ್ಳಿ.
ನಿಮ್ಮ ಖರ್ಚಿನ ಮೇಲೆ ಹಿಡಿತವೇ ಸಿಗದಷ್ಟು ವೆಚ್ಚವಾಗಲಿದೆ. ಈ ದಿನ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಲಿದ್ದೀರಿ. ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬಾರದು ಎಂದೆನಿಸಿದಲ್ಲಿ ಕಡ್ಡಾಯವಾಗಿ ನಿಮ್ಮ ಮನಸ್ಸಿನ ಮಾತನ್ನು ಕೇಳಿ. ನಾನು ಹೇಳಿದ್ದೇ ಸರಿ ಎಂಬ ಧೋರಣೆ ಈ ದಿನ ಬೇಡ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮುಖ್ಯವಾದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದೀರಿ ಎಂದಾದಲ್ಲಿ ಸರಿಯಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನೀವು ಯಾರನ್ನೋ ಕುರಿತು ಆಡಿದ ಮಾತನ್ನು ಮತ್ಯಾರೋ ತಮ್ಮನ್ನು ಕುರಿತೇ ಮಾತನಾಡುತ್ತಿದ್ದೀರಿ ಎಂದುಕೊಂಡು, ನಿಮ್ಮ ಬಗ್ಗೆ ಕೋಪ ಮಾಡಿಕೊಳ್ಳುವಂತಹ ಸಾಧ್ಯತೆ ಇದೆ.
ಬೇರೆಯವರು ಆಡಿದ ಮಾತುಗಳೆಲ್ಲವೂ ನಿಮ್ಮನ್ನು ಹಂಗಿಸುತ್ತಿರುವಂತೆ ಭಾಸವಾಗುತ್ತದೆ. ಈ ದಿನ ಸ್ನೇಹಿತರು, ಸಂಬಂಧಿಕರು ಮಾಡಿದ ಹಳೆಯ ತಪ್ಪುಗಳೆಲ್ಲ ಪದೇಪದೇ ಕಾಡುತ್ತವೆ. ಒಂದು ವೇಳೆ ಸಾಲದ ಅನಿವಾರ್ಯ ಇದ್ದರೂ ಕೂಡ ಈ ದಿನ ಯಾರೆಂದರೆ ಅವರ ಬಳಿ ಕೇಳುವುದಕ್ಕೆ ಹೋಗಬೇಡಿ, ಏಕೆಂದರೆ ಅವಮಾನದ ಪಾಲಾಗುತ್ತೀರಿ. ಯಾರು ಬಾಡಿಗೆ ಮನೆಯಲ್ಲಿ ವಾಸವಿದ್ದೀರೋ ಅಂತಹವರಿಗೆ ನೆರೆಹೊರೆಯವರೊಂದಿಗೆ ಸಣ್ಣಪುಟ್ಟ ವಿಚಾರಕ್ಕಾದರೂ ಜಗಳಗಳಾಗುವ ಸಾಧ್ಯತೆಗಳಿವೆ. ವಾಹನಗಳನ್ನು ನಿಲ್ಲಿಸುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಿ. ಚಾಲನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು ರಾತ್ರಿ ಪ್ರಯಾಣ ಮಾಡದಿರುವುದು ಉತ್ತಮ.