ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 17ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಹಳೇ ಘಟನೆಗಳನ್ನು, ಸನ್ನಿವೇಶಗಳು, ಈ ಹಿಂದೆ ಆಗಿದ್ದ ಅವಮಾನಗಳು ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ನೆನಪಿಸಿಕೊಳ್ಳದಿರುವುದು ಉತ್ತಮ. ಏಕೆಂದರೆ ದ್ವೇಷ ಸಾಧನೆ ಎಂಬುದು ಈ ದಿನ ನಿಮಗೆ ಬಹಳ ಕಾಡಲಿದೆ. ಆದ್ದರಿಂದ ಮನಸ್ಸನ್ನು ಪ್ರಶಾಂತವಾಗಿ ಇರಿಸಿಕೊಳ್ಳಿ. ಏನೇನೋ ನೆನಪುಗಳು ಕಾಡುತ್ತಿದ್ದಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಪಾದಕ್ಕೆ ಅಥವಾ ಹಿಮ್ಮಡಿಗೆ ಸಂಬಂಧಿಸಿದಂತೆ ಸಣ್ಣ- ಪುಟ್ಟ ಸಮಸ್ಯೆಯಾದರೂ ನಿಮ್ಮನ್ನು ಕಾಡುವಂಥ ಸಾಧ್ಯತೆಗಳಿವೆ.
ನೀವು ಏನು ಹೇಳಿದರೂ ಕೇಳಿಸಿಕೊಳ್ಳುತ್ತೀರಿ, ಕೇಳುತ್ತೀರಿ ಮತ್ತು ಕೆಲಸ ಮಾಡಿಕೊಡುತ್ತೀರಿ ಎಂಬ ಆಲೋಚನೆಯಿಂದ ಕೆಲವರು ಬಳಿಗೆ ಬರಲಿದ್ದಾರೆ. ಅವರ ಮಾತು, ಧ್ವನಿ, ಬಾಡಿ ಲ್ಯಾಂಗ್ವೇಜ್ ಸರಿಯಾಗಿ ಗಮನಿಸಿ. ಹಣಕಾಸು ವಿಚಾರಕ್ಕೆ ಸಂಬಂಧಿಗಳು, ಸ್ನೇಹಿತರು ತೀರಾ ನಿಮ್ಮ ಮೇಲೆ ಒತ್ತಡ ಹೇರುವಂಥ ಅವಕಾಶಗಳಿವೆ. ಆಗುವುದಿಲ್ಲ ಎಂದು ನಯವಾಗಿ ಹೇಳುವುದನ್ನು ರೂಢಿಸಿಕೊಳ್ಳಿ. ದಿಢೀರ್ ಪ್ರಯಾಣಗಳು ಬಂದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ತೀರ್ಮಾನ ಕೈಗೊಳ್ಳಿ.
ನಿಮ್ಮ ಇನ್ ಟ್ಯೂಷನ್ ಈ ದಿನ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಅದನ್ನು ನೀವು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ನಿಮಗಿಂತ ತುಂಬ ದೊಡ್ಡ ಹುದ್ದೆಯಲ್ಲಿ ಇರುವವರು, ಜ್ಞಾನಿಗಳು, ನಿಧಾನಸ್ಥರು ಏನಾದರೂ ಸಲಹೆ ನೀಡಿದಲ್ಲಿ ಕಡ್ಡಾಯವಾಗಿ ಅದನ್ನು ಕೇಳಿಸಿಕೊಳ್ಳಿ ಮತ್ತು ಅನುಸರಿಸಿ. ಸ್ತ್ರೀಯರು ಮೆಟ್ಟಿಲು ಹತ್ತುವಾಗ ಅಥವಾ ಇಳಿಯುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಬೇಸರದ ದಿನ ಇದಾಗಿರುತ್ತದೆ.
ಈಗ ಇರುವ ಮನೆ ಅಥವಾ ಊರು ಅಥವಾ ಕನಿಷ್ಠ ಆ ಬೀದಿಯನ್ನಾದರೂ ಬದಲಾಯಿಸಬೇಕು ಎಂದು ನಿಮ್ಮನ್ನು ಬಲವಾಗಿ ಕಾಡಲಿದೆ. ಈ ಬಗ್ಗೆ ನಿಮ್ಮ ಆಪ್ತೇಷ್ಠರ ಜತೆಗೆ ಚರ್ಚೆ ಮಾಡುವ ಸಾಧ್ಯತೆಗಳು ಸಹ ಇವೆ. ನಿಮಗೆ ಇತರರ ಬಗ್ಗೆ ಏನಾದರೂ ಹೇಳಿಕೊಳ್ಳಬೇಕು ಎಂಬ ಭಾವನೆ ಇದ್ದಲ್ಲಿ ಒಂದೇ ಸಲಕ್ಕೆ ಹೇಳಿಕೊಂಡು ಬಿಡಬೇಡಿ. ಏಕೆಂದರೆ ಮೊದಲಿಗೆ ಅವರಿಗೆ ನಿಮ್ಮ ಬಗ್ಗೆ ಆ ನಿರ್ದಿಷ್ಟ ವಿಚಾರದ ಬಗ್ಗೆ ಎಂಥ ಅಭಿಪ್ರಾಯ ಇದೆ ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸಿ.
ಎಲ್ಲ ಅನುಕೂಲ ಇದೆ, ಪರಿಸ್ಥಿತಿಯೂ ನಿಮ್ಮ ಪರವಾಗಿದೆ ಎಂಬುದು ಖಾತ್ರಿ ಆದ ಮೇಲೆ ಸ್ವಲ್ಪ ಮಟ್ಟಿಗಾದರೂ ರಿಸ್ಕ್ ತೆಗೆದುಕೊಂಡು ಮುನ್ನುಗ್ಗ ಬೇಕಾಗುತ್ತದೆ. ಈ ದಿನ ಅಂಥ ಅವಕಾಶಗಳು ನಿಮ್ಮ ಪಾಲಿಗೆ ಬರಲಿವೆ. ಅದನ್ನು ಹೇಗೆ ಸ್ವೀಕರಿಸಬೇಕು ಎಂಬುದು ನಿಮಗೆ ಬಿಟ್ಟಂಥ ವಿಚಾರವಾಗಿರುತ್ತದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಲ್ಪ ಸಮಯಕ್ಕಾದರೂ ವಿದೇಶಕ್ಕೆ ಪ್ರವಾಸ ತೆರಳಬೇಕಾದಂಥ ಸುಳಿವು ಸಿಗಬಹುದು.
ಅಂದುಕೊಂಡಂತೆಯೇ ಈ ದಿನ ಕೆಲಸ- ಕಾರ್ಯಗಳು, ಉದ್ಯಮ, ವ್ಯಾಪಾರ- ವ್ಯವಹಾರಗಳು ನಡೆಯಲಿವೆ. ಒಂದು ಬಗೆಯಲ್ಲಿ ಮಾನಸಿಕವಾಗಿಯೂ ಸಮಾಧಾನದ ದೊರೆಯಲಿದೆ. ನಿಮ್ಮ ಸಾಮರ್ಥ್ಯ, ಆಲೋಚನೆ, ವಿಚಾರಧಾರೆಗೆ ಪ್ರಾಮುಖ್ಯ ದೊರೆಯಲಿದೆ. ಇಷ್ಟು ಸಮಯ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ವಿಷಯವನ್ನು ಹೇಳುವುದಕ್ಕೆ ಸಹ ವೇದಿಕೆ ದೊರೆಯಲಿದ್ದು, ಅದರ ಸದುಪಯೋಗ ಹೇಗೆ ಮಾಡಿಕೊಳ್ಳುವುದು ಎಂಬ ಬಗ್ಗೆ ಯೋಜನೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.
ನೀವು ಈ ಕೂಡಲೇ ತೀರ್ಮಾನವನ್ನು ಹೇಳಿಬಿಡಬೇಕು ಎನ್ನುವಂಥ ಯಾವ ವಿಚಾರಕ್ಕೂ ನಿರ್ಧಾರವನ್ನು ಹೇಳದಿರುವುದು ಉತ್ತಮ. ಇದರಿಂದ ಲಾಭ ಸಿಕ್ಕೀತು ಎಂದು ಮೇಲ್ನೋಟಕ್ಕೆ ಕಾಣುವ ವಿಚಾರಗಳನ್ನೇ ನೆಚ್ಚಿಕೊಂಡರೆ ಸಮಸ್ಯೆಗೆ ಸಿಕ್ಕಿ ಬೀಳುತ್ತೀರಿ. ಇನ್ನು ಲೋಕಾಭಿರಾಮದ ಮಾತುಗಳನ್ನೇ ಆಡುವಾಗಲೂ ಈ ಹಿಂದಿನ ಇತರರ ತಪ್ಪು- ಅಪಸವ್ಯಗಳನ್ನು ಎತ್ತಾಡಬೇಡಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ಯಾವುದೇ ಕಾರಣಕ್ಕೂ ಸಲುಗೆ ಬೇಡ.
ತೀರ್ಥ ಕ್ಷೇತ್ರಗಳಿಗೆ ತೆರಳಬೇಕು ಎಂದೇನಾದರೂ ಪ್ರೇರಣೆ ಬಂತೆಂದರೆ ಆಮೇಲೆ ಆಲೋಚಿಸಿದರಾಯಿತು ಎಂದುಕೊಳ್ಳಬೇಡಿ. ಏಕೆಂದರೆ ನಿಮಗೆ ಅನಿಸಿದ್ದು ಮಾಡುವುದಕ್ಕೆ ಆರ್ಥಿಕವಾಗಿಯೂ ಸಾಧ್ಯವಿದೆ ಎಂದಾದಲ್ಲಿ ಮಾಡಿಬಿಡಿ. ಡೇರಿ ವ್ಯವಹಾರ ಮಾಡುತ್ತಿರುವವರು, ಪಶು ಸಾಕಣೆ ಮಾಡುತ್ತಿರುವವರಿಗೆ ದೀರ್ಘಾವಧಿಯ ಯೋಜನೆಯೊಂದು ಹುಡುಕಿಕೊಂಡು ಬರಬಹುದು. ಅದನ್ನು ಯಶಸ್ವಿ ಪೂರೈಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ.
ಉದ್ಯೋಗ ಬದಲಾಯಿಸೋಣ, ಅದಕ್ಕಾಗಿ ಒಂದಿಷ್ಟು ಸ್ನೇಹಿತರ ಪಟ್ಟಿಯನ್ನು ಮಾಡಿಕೊಂಡು ಅವರೆಲ್ಲರಿಗೂ ರೆಸ್ಯೂಮೆ ಕಳಿಸೋಣ ಅಂತ ಏನಾದರೂ ಅನಿಸಿದ್ದಲ್ಲಿ ಆದ್ಯತೆಯ ಮೇಲೆ ಆ ಕೆಲಸವನ್ನು ಮಾಡಿ. ನಾಳೆ ಮಾಡಿದರಾಯಿತು ಎಂಬ ಉಡಾಫೆ ಯಾವ ಕಾರಣಕ್ಕೂ ಬೇಡ. ಸಣ್ಣ ಸಂಗತಿಗಳು ಎಂದು ಯಾವುದನ್ನೂ ಉಪೇಕ್ಷೆ ಮಾಡಬೇಡಿ. ಏಕೆಂದರೆ ಅದು ತೀರಾ ಕುತ್ತಿಗೆಗೆ ಬರುವಂಥ ಸಾಧ್ಯತೆ ಹೆಚ್ಚಿರುತ್ತದೆ.