Horoscope: ರಾಶಿಭವಿಷ್ಯ, ಈ ರಾಶಿಯವರ ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯು ಕಷ್ಟವಾಗುವುದು

| Updated By: Rakesh Nayak Manchi

Updated on: Aug 19, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರ ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯು ಕಷ್ಟವಾಗುವುದು
ಇಂದಿನ ರಾಶಿಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಿದ್ಧ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03:44ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:20 ರಿಂದ 07:54ರ ವರೆಗೆ.

ಸಿಂಹ ರಾಶಿ: ಆಲಸ್ಯದಿಂದಾಗಿ ನಿಮಗೆ ಸಿಗುವ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಅಲಂಕಾರಿಕ ವಸ್ತುಗಳನ್ನು ಹೆಚ್ಚು ಬಳಕೆ ಮಾಡುವಿರಿ. ನಿಮ್ಮ ಮಾತುಗಳು ಅಸ್ಪಷ್ಟವಾಗಿರುವುದು. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು.‌ ಆರ್ಥಿಕತೆಯನ್ನು ಸದೃಢ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಸಂಪತ್ತನ್ನು ಪಡೆದುಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಹಳೆಯ ಸ್ನೇಹಿತರ ಬಗ್ಗೆ ನಿಮಗೆ ಅಸಮಾಧಾನವಿರುವುದು. ಪುಣ್ಯಕ್ಷೇತ್ರಕ್ಕೆ ಕುಟುಂಬದ ಜೊತೆ ಹೋಗುವಿರಿ. ಸಾಹಿತ್ಯಾಸಕ್ತರಿಗೆ ಪ್ರಶಂಸೆಯು ಸಿಗುವುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯು ಕಷ್ಟವಾಗುವುದು.

ಕನ್ಯಾ ರಾಶಿ: ವೃತ್ತಿಯ ಸ್ಥಳದಲ್ಲಿ ನಿಮಗೆ ಕಿರಿಕಿರಿಯಾಗಲಿದೆ. ಸಹೋದ್ಯೋಗಿಗಳಿಂದ ನಿಮಗೆ ಅಸಹಕಾರವು ಸಿಗುವುದು. ಸಣ್ಣ ತಪ್ಪನ್ನೂ ಅಪಹಾಸ್ಯ ಮಾಡುವರು. ನೀವು ಹೋಗುತ್ತಿರುವ ಮಾರ್ಗದ ಬಗ್ಗೆ ನಿಮಗೆ ಸಂದೇಹವು ಬರಬಹುದು. ಉಸಿರಾಟಕ್ಕೆ ಸಂಬಂಧಿಸಿದಂತೆ ತೊಂದರೆಯಾಗಲಿದೆ. ವಿವಾಹಕ್ಕಾಗಿ ಹೆಚ್ಚು ತಿರುಗಾಟವಿರಲಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ನಿಮಗೆ ಆಗದು. ನಿಮ್ಮ ತಿಳಿವಳಿಕೆಯ ಮಟ್ಟಾವು ನಿಮಗೆ ಗೊತ್ತಾಗಲಿದೆ. ನಿಮ್ಮ ಮಾತನಲ್ಲೂ ಇಂದು ವ್ಯಂಗ್ಯ ಇರಲುದೆ. ದೂರವಿದ್ದ ಸಂಗಾತಿಯನ್ನು ನೀವು ಭೇಟಿ ಮಾಡುವಿರಿ. ಅನಗತ್ಯ ಖರ್ಚಿಗೆ ಅವಕಾಶವನ್ನು ಕೊಟ್ಟು ಸಂಕಟಪಡುವಿರಿ.

ತುಲಾ ರಾಶಿ: ಸ್ಥಿರಾಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ಯಾವುದೇ ಸಂದರ್ಭವು ಬಂದರೂ ಅದನ್ನು ಧೈರ್ಯದಿಂದ ಎದುರಿಸುವಿರಿ. ನಿಮಗೆ ಅಭದ್ರತೆಯು ಕಾಡಬಹುದು. ಸ್ನೇಹಿತರ ಸಹವಾಸದಿಂದ ನಿಮಗೆ ಅಪವಾದಗಳು ಬರಬಹುದು. ಮಕ್ಕಳಿಂದ ಸಂತೋಷವು ಸಿಗಲಿದೆ. ನಿಮ್ಮ ರಹಸ್ಯವನ್ನು ತಿಳಿದು ನಿಮಗೆ ತೊಂದರೆಕೊಡುವರು. ಆಪ್ತರು ನಿಮ್ಮ ಮಾತನ್ನು ಕಡಿಮೆ ಮಾಡುವರು. ನಿಮ್ಮ ಸಮಯವು ಬೇರೆಯವರ ಕಾರಣಕ್ಕೆ ದುರಪಯೋಗವಾಗಬಹುದು. ತೊಂದರೆಯಾಗುತ್ತದೆ ಎಂದು ಏನನ್ನೂ ಮಾಡದೇ ಇರುವುದು ಬೇಡ. ಹೊಸ ವಸ್ತುವನ್ನು ಖರೀದಿಸುವಾಗ ಪರೀಕ್ಷಿಸಿ. ನಿಮ್ಮ ನಿಲುವು ಸ್ಪಷ್ಟವಾಗಿರಿ.

ವೃಶ್ಚಿಕ ರಾಶಿ: ಹಳೆಯ ನೋವು ಮತ್ತೆ ಬರಬಹುದು. ಸಂಗಾತಿಯ ನಡುವೆ ಅತಿಯಾದ ಕಲಹವು ಆಗಬಹುದು. ಆಸ್ತಿಯ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಉದ್ಯೋಗವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಯಾರದೋ ಮನಸ್ಸಿಗೂ ನೋವಾಗುವಂತೆ ಮಾತನಾಡುವಿರಿ‌. ನಿಮ್ಮ ಆರೋಗ್ಯದ ರಕ್ಷಣೆಯ ಬಗ್ಗೆ ನಿಮಗೇ ನಂಬಿಕೆ ಸಾಲದು. ನಿರ್ಲಕ್ಷ್ಯದಿಂದ ನೀವು ಹಣವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳೂ ಹಿನ್ನಡೆಯನ್ನು ಸಾಧಿಸುವರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆಯು ಕಾಣಿಸುವುದು. ಕಣ್ಣಿನ ತೊಂದರೆಯು ಹೆಚ್ಚಾಗಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ