Horoscope: ದಿನಭವಿಷ್ಯ, ಈ ರಾಶಿಯವರಿಗೆ ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸ ಈಗ ಆಗುತ್ತೆ

| Updated By: ಆಯೇಷಾ ಬಾನು

Updated on: Aug 26, 2023 | 5:32 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸ ಈಗ ಆಗುತ್ತೆ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹುಕಾಲ ಬೆಳಿಗ್ಗೆ  09:08 ರಿಂದ 11:01ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:07 ರಿಂದ 03:41ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:21 ರಿಂದ 07:54ರ ವರೆಗೆ.

ಸಿಂಹ ರಾಶಿ: ಕೃಷಿಯಲ್ಲಿ ನೀವು ಬಹಳ‌ ಆಯ್ಕೆ ಸ್ವಭಾವವುಳ್ಳವರು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಸದಾ ಯಾವುದೋ ಆಲೋಚನೆಯಲ್ಲಿ ಇರುವಿರಿ. ಹುಂಬುತನದಿಂದ ಮುನ್ನುಗ್ಗುವ ಸ್ವಭಾವವನ್ನು ಕಡಿಮೆ‌ ಮಾಡಿಕೊಳ್ಳಬೇಕಾದೀತು. ನಿಶ್ಚಿತ ಕಾರ್ಯಗಳನ್ನು ಸರಿಯಾಗಿ ಮುಗಿಸುವಿರಿ. ಆರೋಗ್ಯದ ವಿಚಾರದಲ್ಲಿ ನೀವು ವೈದ್ಯರ ಸಲಹೆಯನ್ನು ಪಡೆಯುವಿರಿ. ಅಶುಭವಾರ್ತಯು ಬರಬಹುದು. ನಿಮ್ಮ ಮಾತನ್ನು ಸತ್ಯವಾಗಿಸುವ ಭರದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ.

ಕನ್ಯಾ ರಾಶಿ: ವಿದ್ಯಾರ್ಥಿಗಳು ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವಿರಿ. ಮಾನಸಿಕ‌ ನೋವನ್ನು ಯಾರ ಬಳಿಯಾದರೂ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳಿ. ಸಣ್ಣ ವಿಚಾರವೂ ದೊಡ್ಡದಾಗಬಹುದು. ಕ್ರೀಡೆಯಲ್ಲಿ ನೀವು ಭಾಗವಹಿಸುವಿರಿ. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ನಿಮ್ಮ‌ ಸಾಮಾಜಿಕ‌ ಕೆಲಸದಿಂದ‌‌ ಸಾಧಿಸಿ ಪ್ರಶಂಸೆಯನ್ನು ಗಳಿಸುವಿರಿ. ನಕಾರಾತ್ಮಕ ಆಲೋಚನೆಗಳು ಬಾರದಂತೆ ಯೋಗಾಭ್ಯಾಸವನ್ನು ಮಾಡಿ. ಮಕ್ಕಳ‌ ವಿವಾಹ ಚಿಂತೆಯಲ್ಲಿ ಇರುವಿರಿ. ನಿಮ್ಮ ಮನಸ್ಸಿಗೆ ಬಂದಿದ್ದನ್ನು ಮಾತ್ರ ಮಾಡುವಿರಿ. ಯಾರ ಮಾತನ್ನೂ ಕೇಳುವ ಸ್ಥಿತಿ ಇಂದು ಇರುವುದಿಲ್ಲ.

ತುಲಾ ರಾಶಿ: ಸಮಾಧಾನಚಿತ್ತವು ನಿಮಗೆ ಅನೇಕ ಸುಂದರ ಸಮಯವನ್ನು ಅನುಭವಿಸುವಿರಿ. ಇನ್ನೊಬ್ಬರಿಂದ ದೈಹಿಕ ಹಿಂಸೆಯನ್ನು ಅನುಭವಿಸಬೇಕಾದೀತು. ಭೂಮಿಯ ವ್ಯವಹಾರದಿಂದ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಮನೆಯ ವಾತಾವರಣವು ನಿಮಗೆ ಹಿತವೆನಿಸುವುದು. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸಾಗುವುದು. ಮಾನಸಿಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಅನ್ಯ ಮಾರ್ಗವನ್ನು ಆಶ್ರಯಿಸಿವಿರಿ. ಸ್ವಾಭಿಮಾನವು ನಿಮ್ಮ ಪ್ರತಿಷ್ಠೆಯಾಗಲಿದೆ. ಮೌನವಾಗಿರುವುದು ನಿಮಗೆ ಶೋಭೆ ತರದು.

ವೃಶ್ಚಿಕ ರಾಶಿ: ಎಲ್ಲರಿಂದ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಕ್ಕರೂ ನಿಮಗೆ ಕಾರ್ಯದಲ್ಲಿ ಸಮಾಧಾನ ಸಿಗದು. ಬಂದ ಹಣವು ಸಾಲವನ್ನು ತೀರಿಸಲಿಕ್ಕೇ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ವ್ಯರ್ಥ ಎಂದುಕೊಂಡ ವಿದ್ಯೆಯು ಇಂದು ಪ್ರಯೋಜನಕ್ಕೆ ಬರಲಿದೆ. ಮನೆಗೆ ಬೇಕಾದ ವಸ್ತುವನ್ನು ಯಾರಿಗೂ ಹೇಳದೇ ತರುವಿರಿ. ಉತ್ತಮ ಹವ್ಯಾಸದ ಆಪ್ತರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ‌ ಕೆಲವು ಕಾರ್ಯಗಳು ನಿಷ್ಪ್ರಯೋಜಕ ಎಂದು ಅನ್ನಿಸುವುದು. ಪೂರ್ವಾಗ್ರಹ ಬುದ್ಧಿಯಿಂದ ಸರಿ ತಪ್ಪುಗಳನ್ನು ನಿರ್ಣಯಿಸುವುದು ಸಾಧ್ಯವಾಗದು. ಮಹಾಗಣಪತಿಯ ಆರಾಧನೆಯನ್ನು ಮಾಡಿ.

ಲೋಹಿತಶರ್ಮಾ – 8762924271 (what’s app only)

Published On - 12:30 am, Sat, 26 August 23