Horoscope: ದಿನಭವಿಷ್ಯ, ಹಣಕಾಸಿನ‌ ವಿಚಾರದಲ್ಲಿ ಈ ರಾಶಿಯವರು ಯಾವ ಮುಲಾಜನ್ನು ಇಟ್ಟುಕೊಳ್ಳುವುದು ಬೇಡ

| Updated By: Rakesh Nayak Manchi

Updated on: Jul 15, 2023 | 12:30 AM

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಹಣಕಾಸಿನ‌ ವಿಚಾರದಲ್ಲಿ ಈ ರಾಶಿಯವರು ಯಾವ ಮುಲಾಜನ್ನು ಇಟ್ಟುಕೊಳ್ಳುವುದು ಬೇಡ
ಇಂದಿನ ರಾಶಿಭವಿಷ್ಯ
Image Credit source: Getty Images
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀಮ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:25 ರಿಂದ 11:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:12 ರಿಂದ 07:49ರ ವರೆಗೆ.

ತುಲಾ: ವಾಹನ ಖರೀದಿಯನ್ನು ಸಾಲ‌ಮಾಡಿ ಮಾಡುವಿರಿ.‌ ಇದು ನಿಮ್ಮ ಹೊಸ ಉದ್ಯಮಕ್ಕೆ ನಾಂದಿಯನ್ನು ಹಾಡಲಿದೆ. ವಿದ್ಯಾರ್ಥಿಗಳು ಓದುವ ವಿಚಾರದಲ್ಲಿ ಹಿಂಜರಿದರೂ ಪ್ರೋತ್ಸಾಹದಿಂದ ಅಭ್ಯಾಸವನ್ನು ಮಾಡುವರು. ಪ್ರೇಮದಲ್ಲಿ ಬಿದ್ದು ಸಿಕ್ಕಿಕೊಂಡು ಕಷ್ಟಪಡುವಿರಿ. ನಿಮ್ಮ ತೀರ್ಮಾನವನ್ನು ಒಪ್ಪು ಇಷ್ಟವಾದೀತು. ಮಕ್ಕಳಿಂದ ನಿಮಗೆ ದೂರು ಬರಲಿ. ಹಣಕಾಸಿನ ವಿಚಾರದಲ್ಲಿ ನೀವು ಸುಳ್ಳು ಹೇಳುವಿರಿ. ನೀವು ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶುಭಸಮಾಚಾರದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸ್ವಂತ ಕೆಲಸಕ್ಕೆ ಉದ್ಯೋಗಿಗಳನ್ನು ಬಳಸಿಕೊಳ್ಳುವಿರಿ.

ವೃಶ್ಚಿಕ: ಮಕ್ಕಳು ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಅನಿರೀಕ್ಷಿತವಾದ ಮಿತ್ರನ ಭೇಟಿಯು ಸಂತೋಷವನ್ನು ಕೊಡಲಿದೆ. ಮಕ್ಕಳ ವಿವಾಹದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಬರಲಿದೆ. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡುವುದು. ಉದ್ಯೋಗದ ಅನ್ವೇಷಣೆಯು ತೀವ್ರಗತಿಯಲ್ಲಿ ಸಾಗಲಿದೆ. ಇಂದು ಮನೋರಂಜನೆಯ ಜೊತೆ ಕಾಲ ಕಳೆಯುವಿರಿ. ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ. ಇಂದಿನ‌ ಅನುಭವವು ನಿಮಗೆ ಅನೇಕ‌ ಪಾಠವನ್ನು ಕಲಿಸುವುದು.

ಧನುಸ್ಸು: ನಿರೋದ್ಯೋಗದಿಂದ ಬೇಸರಗೊಂಡ ನಿಮಗೆ ದೂರದ ಊರಿನಲ್ಲಿ ಕೆಲಸವು ಸಿಗಲಿದೆ. ಸಂದರ್ಭವನ್ನು ನೋಡಿಕೊಂಡು ಮಾತನಾಡುವುದು ಉಚಿತ. ಇಂದು ನಿಮ್ಮ ಕೆಲಸವನ್ನು ಬದಲಾಯಿಸಿಕೊಳ್ಳುವಿರಿ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚಾಗಲಿದೆ. ಶ್ರಮವು ಅಧಿಕ ಫಲವು ಅಲ್ಪವಾಗಲಿದೆ. ನಿಯಮಗಳನ್ನು ನೀವೇ ಮುರಿದುಕೊಂಡು ನಗೆಪಾಟಲಿಗೆ ಒಳಗಾಗುವಿರಿ. ರಾಜಕೀಯ ಜೀವನವು ನಿಮಗೆ ಹಿಡಿದುಕೊಳ್ಳಲಾಗದ, ಬಿಡಲಾಗದ ಸ್ಥಿತಿಯನ್ನು ತಂದುಕೊಡುವುದು. ಹಣಕಾಸಿನ ಕೊರತೆಯನ್ನು ನೀವು ಮನೆಯವರಿಗೆ ಗೊತ್ತಾಗದಂತೆ ನಿಭಾಯಿಸುವಿರಿ.

ಮಕರ: ಉದ್ಯೋಗದಲ್ಲಿ ಉಂಟಾದ ಒತ್ತಡದಿಂದ ಕೆಲಸವನ್ನು ಬದಲಿಸಲು ಇಚ್ಛಿಸುವಿರಿ. ವಿದ್ಯುತ್ ಉಪಕರಣವನ್ನು ವ್ಯಾಪಾರ ಮಾಡುವವರಿಗೆ ಅಧಿಕ ಲಾಭವು ಆಗಬಹುದು. ಮನೆತನದ ವಿಷಯಕ್ಕೆ ನಿಮಗೆ ಗೌರವವು ಸಿಗಬಹುದು. ಸಿಕ್ಕ ಮೊದಲ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಶ್ರದ್ಧೆಯಿಂದ ಕೆಲಸವನ್ನು ಮಾಡುವಿರಿ. ಇಂದು ಪ್ರಶಾಂತವಾಗಿ ಇರಬೇಕು ಎಂದುಕೊಂಡರೂ ಅಸಾಧ್ಯವಾದೀತು. ಉನ್ನತ ಹುದ್ದೆಯನ್ನು ನೀವು ಅಪೇಕ್ಷಿಸುವಿರಿ. ಹಣಕಾಸಿನ‌ ವಿಚಾರದಲ್ಲಿ ನೀವು ಯಾವ ಮುಲಾಜನ್ನು ಇಟ್ಟುಕೊಳ್ಳುವುದು ಬೇಡ. ಇಂದು ಬಹಳ ಆತುರದಲ್ಲಿ ಇರಲಿರುವಿರಿ.

ಕುಂಭ: ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ಆಲೋಚನೆಯನ್ನು ಮಾಡುವಿರಿ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಅಸಫಲರಾಗುವಿರಿ. ಏಕಪಕ್ಷೀಯ ನಿರ್ಧಾರವು ನಿಮ್ಮ ವಿರೋಧಿಗಳನ್ನು ಸೃಷ್ಟಿಸಿಕೊಳ್ಳಲು ಸಹಾಯವಾಗಲಿದೆ. ನಿಮ್ಮ ಪ್ರತಿಷ್ಠೆಯನ್ನು ಬಿಟ್ಟು ಎಲ್ಲರ ಜೊತೆ ಒಂದಾಗುವುದು ಮುಖ್ಯವಾಗಲಿದೆ. ಸಂಗಾತಿಯಿಂದ ಪ್ರೀತಿಯು ಇಂದು ಹೆಚ್ಚು ಸಿಗಲಿದೆ. ವಿದೇಶಪ್ರಯಾಣದ ನಿರೀಕ್ಷೆಯಲ್ಲಿ ಇರುವಿರಿ‌. ಕುಟುಂಬದಲ್ಲಿ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವಿರಿ. ಆಲಸ್ಯದಿಂದ ಮನೆಯಲ್ಲಿ ಬೈಯಿಸಿಕೊಳ್ಳುವಿರಿ.

ಮೀನ: ಬಂಧುಗಳ ಕಾರಣದಿಂದ ನಿಮ್ಮ ಹಣವು ಖರ್ಚಾಗಬಹುದು. ನಿಮ್ಮ ಸ್ಥಿರಾಸ್ತಿಯ ದಾಖಲೆಗಳನ್ನು ಸರಿ ಮಾಡಿಕೊಳ್ಳಿ. ಬೆನ್ನು ನೋವು ಕಾಣಿಸಿಕೊಳ್ಳಬಹುದು. ನಿಮಗೆ ಇಂದು ಆಯ್ಕೆಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ಶತ್ರುಗಳನ್ನು ಸೋಲಿಸುವ ಸಂಚು ಸಫಲವಾಗಬಹುದು. ಕಾರ್ಯವನ್ನು ಸಂಕೀರ್ಣಗೊಳಿಸದೇ ಸರಿಯಾದ ವಿಭಾಗವನ್ನು ಮಾಡಿಕೊಳ್ಳುವುದು ಉತ್ತಮ. ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಕಷ್ಟಪಡುವಿರಿ. ವೈಯಕ್ತಿಕ ಕೆಲಸವು ಹಾಗೇ ಇರಲಿದ್ದು ನಿಮಗೆ ಆತಂಕವಾದೀತು.