ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಮಘಾ, ಯೋಗ : ವಜ್ರ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:57 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:49 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:43 ರಿಂದ 09:20ರ ವರೆಗೆ.
ಧನು: ಆರ್ಥಿಕತೆಯು ಸ್ವಲ್ಪ ಸುಧಾರಿಸಿದಂತೆ ಕಂಡರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಸಂಗಾತಿಯ ಮಾತು ನಿಮಗೆ ಕೋಪವನ್ನು ತರುವ ಸಾಧ್ಯತೆ ಇದೆ. ಬಂಧುಗಳು ನಿಮ್ಮ ಸಂಪತ್ತನ್ನು ಬಯಸುವರು. ಕೃಷಿಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಯೋಜನೆಯನ್ನು ಸಿದ್ಧಪಡಿಸುವಿರಿ. ಮಕ್ಕಳ ಜೊತೆಗೆ ಇಂದು ಕಳೆದು ಸಂತೋಷವನ್ನು ಪಡೆಯುವಿರಿ. ಇಂದು ನೀವು ಶುಭಸಮಾಚಾರದ ನಿರೀಕ್ಷೆಯಲ್ಲಿ ಇರುವಿರಿ. ಕಲಾವಿದರು ಹೆಚ್ಚಿನ ಪ್ರಸಿದ್ಧಿಗೆ ಶ್ರಮಿಸುವರು. ಆರ್ಥಿಕತೆಯು ವೃದ್ಧಿಯಾಗಲು ಲಕ್ಷ್ಮಿಯ ಸ್ತೋತ್ರವನ್ನು ನೀವು ಮಾಡಿ.
ಮಕರ: ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು. ಹಣವನ್ನು ವಿನಾಕಾರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಬಟ್ಟೆಯ ವ್ಯಾಪರವು ನಿಮಗೆ ಲಾಭಾಂಶವನ್ನು ತರಲಿದೆ. ಮಾತುಕತೆಯಲ್ಲಿ ಇಂದಿನ ಕಾಲಹರಣವಾಗಲಿದೆ. ನಿಮಗೆ ಸಿಗಬೇಕಾದ ಸಂಪತ್ತು ಸರಿಯಾದ ಸಮಯಕ್ಕೆ ಸಿಗದೇ ಸ್ನೇಹಿತರ ಬಳಿ ಸಾಲಮಾಡಬೇಕಾದೀತು. ಕಛೇರಿಯಲ್ಲಿ ನೀವು ಯಾರನ್ನೋ ಮೆಚ್ಚಿಸಲು ಹೋಗಿ ಅಪಹಾಸ್ಯಕ್ಕೆ ಸಿಕ್ಕಿಕೊಳ್ಳಬಹುದು. ಹನುಮಾನ್ ಚಾಲೀಸ್ ಪಠಣವು ನಿಮಗೆ ಒಂದಿಷ್ಟು ಧೈರ್ಯವನ್ನು ತಂದುಕೊಡಬಹುದು.
ಕುಂಭ: ನಿಮಗೆ ಖರೀದಿಯಲ್ಲಿ ಇಂದು ಮೋಸವಾಗಬಹುದು. ಕುಲದೇವರ ಸ್ಮರಣೆಯನ್ನು ಮಾಡಿ ಇಂದಿನ ಕಾರ್ಯವನ್ನು ಆರಂಭಿಸಿ. ಉದ್ಯೋಗಕ್ಕೆ ಸೇರಲು ಬೇಕಾದ ತಯಾರಿಯಲ್ಲಿ ನೀವು ಇರುವಿರಿ. ಏಕಾಂತವನ್ನು ಬಯಸಿದರೂ ಇರಲು ನಿಮಗೆ ಅಸಾಧ್ಯವಾದೀತು. ತಂದೆಯಿಂದ ನಿಮಗೆ ಬೇಕಾದ ಸಹಾಯವು ಸಿಗಬಹುದು. ಯಾರದೋ ಮಾತನ್ನು ನಂಬಿ ಬಂಧುಗಳನ್ನು ದೂರ ಮಾಡಿಕೊಳ್ಳಬೇಕಾಗುವುದು. ಕಫದೋಷದಿಂದ ಅನಾರೋಗ್ಯ ಉಂಟಾಗಬಹುದು. ಯಾರ ಜೊತೆಗಾದರೂ ಸುಮ್ಮನೇ ಚರ್ಚೆಗಿಳಿದು ಸೋಲಬೇಕಾದೀತು.
ಮೀನ: ನಿಮಗೆ ಮರಣಭೀತಿ ಕಾಡುವ ಸಾಧ್ಯತೆ ಇದೆ. ಇದ್ದಕಿದ್ದಂತೇ ಏನನ್ನಾದರೂ ಆಲೋಚಿಸಲಿದ್ದೀರಿ. ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಿಮ್ಮ ನಡೆ ಇರಲಿದೆ. ಒಳ್ಳೆಯ ವಿಚಾರಕ್ಕೆ ನೀವು ಹೆಚ್ಚಿನ ಒತ್ತುಕೊಡಲಿದ್ದೀರಿ. ಸ್ನೇಹಿತರನ್ನು ಉಳಿಸಿಕೊಳ್ಳಲು ನೀವು ಅನೇಕ ರೀತಿಯಲ್ಲಿ ಮಾತುಗಳನ್ನು ಆಡಿಕೊಳ್ಳುವಿರಿ. ನೌಕರರ ನಡವೆ ವಿವಾದಗಳು ಆಗಬಹುದು. ಸಂಗಾತಿಯನ್ನು ನೀವು ಇಷ್ಟಪಡಲು ಕಾರಣವನ್ನು ಹುಡುಕಬಹುದು. ಸರಳವಾಗಿರಲು ನೀವು ಇಚ್ಛಿಸುವಿರಿ. ಯಾರಿಗಾದೂ ಸಾಲವನ್ನು ಕೊಡಲು ಮುಂದಾಗುವಿರಿ. ಮಂದಗತಿಯಲ್ಲಿ ನಿಮ್ಮ ಇಂದಿನ ಕೆಲಸಗಳು ಸಾಗಬಹುದು.
-ಲೋಹಿತಶರ್ಮಾ ಇಡುವಾಣಿ